" ಆಕೆಗೆ ಅದು ಮೊದಲ ರಾತ್ರಿಯಲ್ಲ! "
ಆಕೆಗೆ ಅದು ಮೊದಲ ರಾತ್ರಿಯಲ್ಲ
ಯಾಕೆಂದರೆ, ಅವಳು ಮದುವೆಯೇ ಆಗಿರಲಿಲ್ಲ!!
ಇಪ್ಪತ್ತೆರೆಡು ವರ್ಷದ ಆ ಬಾಲಕಿ
ಹೆಚ್ಚು ಓದಲಾಗಲಿಲ್ಲ, ಕಾರಣ ನೂರಾರು
ಅಪ್ಪ ಕುಡಿದು ಕುಡಿದು ಸತ್ತ
ಇಲ್ಲ, ಮಗನಿಂದಲೇ ಕೊಲೆಯಾದ
ಅಪರಾಧಿ ತಮ್ಮ ಜೈಲಿಗೆ ಹೋದ
ಅಮ್ಮ ಒಬ್ಬಳೇ ಹಾಸಿಗೆ ಮೇಲೆ ದಿನ ಎಣಿಸುತ್ತಿದ್ದಾಳೆ
ಹಾಳಾದ ಕ್ಯಾನ್ಸರ್ ರೋಗ
ಆರು ವರ್ಷಗಳಿಂದ ಅವಳ ನಗು ಕಿತ್ತುಕೊಂಡಿದೆ
ಈಗಲೂ ಅವಳು ಸ್ವಾರ್ಥಿಯಾದರೆ..?
ಆ ಬದುಕಿಗೆ ಅರ್ಥವುಂಟೆ?!
ಓದಿಗೆ ತಕ್ಕನಾದ ಕೆಲಸವಿಲ್ಲ
ತನ್ನವರು ಅಂತ ಯಾರೂ ಇಲ್ಲ
ಒಬ್ಬಳಿಗೊಬ್ಬಳೇ.. ಒನಕೆ ಓಬವ್ವನೂ ಅಲ್ಲ
ಮದುವೆಯಾದರೆ ಸರಿಯಾಗುವುದೇ ಎಲ್ಲ?
ನಂತರವೂ ಎಲ್ಲ ಹೀಗೆ ಇದ್ದರೆ.. ಮದುವೆ ಅನರ್ಥ
ಹೀಗೇ ಇದ್ದುಬಿಡೋಣ.. ಅದೊಂದು ಗಟ್ಟಿ ನಿರ್ಧಾರ
ಎಷ್ಟು ದುಡಿಯಬಹುದು?
ಎರಡೇ ಎರಡು ಕೈಗಳು?!
ಪಾಪ ಪುಟ್ಟ ಕೈಗಳು
ಸೂರ್ಯನಿಗೂ ಸಮಯದ ಅರಿವಿಲ್ಲ
ಬೇಗ ಬಂದು ಬೇಗ ಹೋಗುತ್ತಾನೆ
ಸಿಗುವುದು ಚಿಲ್ಲರೆ ರೂಪಾಯಿಗಳಷ್ಟೇ
ಅದರಿಂದ ಅವಳ ಹೊಟ್ಟೆ ತುಂಬೀತೇ??
ಹೆತ್ತಾಕೆಯ ರೋಗ ಹೋದೀತೇ??
ಮತ್ತೆ ಎಲ್ಲವೂ.. ಹಾಗೇ!!
ಇನ್ನೊಂದು ನಿರ್ಧಾರವಾಗಬೇಕಿದೆ
ಹಳ್ಳಿ ಬಿಟ್ಟು ಪಟ್ಟಣ ಸೇರುವುದು
ಅದೂ ಆಯ್ತು..
ಕೆಲಸಕ್ಕಾಗಿ ಅಲೆದಲೆದು ಸಾಕಾಯ್ತು
ಕಣ್ಣಿನಲ್ಲಡಗಿರುವ ನೋವು ನೋಡಿದವರಿಗಿಂತ
ಅವಳೆದೆಯ ಉಬ್ಬು ಸವಿದವರೇ ಹೆಚ್ಚು
ಅವರ ಕಣ್ಣಿನ ದಾಹಕ್ಕೆ ಎದೆಯೇ ಹಿಂಗುತ್ತಿವೆ
ದಿನವೂ ಶೃಂಗಾರ ಮಾಡಲಿಕ್ಕೆ ಹಣ ಬೇಕಲ್ಲ!!
ಗೊತ್ತಾಯಿತು! ಅವಳಿಗೆ
ತನ್ನ ಕೆಲಸಕ್ಕಿಂತ ಅವರಿಗೆ ತಾನೇ ಹೆಚ್ಚೆಂದು
ಅಲ್ಲ, ತನ್ನ ದೇಹವೇ ಹೆಚ್ಚು!!
ಅದರಲ್ಲೂ ಆ ಎದೆ, ಸೊಂಟ ಮತ್ತು ಅದು!
ಛೇ..!
ಮುಂಗುರುಳು, ಮೂಗುತಿ, ಜಡೆ ನೋಡಿ
ಪ್ರೀತಿ ಮಾಡುವವರು ಇಲ್ಲಿ ಇಲ್ಲವೇ ಇಲ್ಲ!!
ಪ್ರೀತಿ ಕೂಡ ಅನಾಥ
ಮತ್ತೊಂದು ದೃಢ ನಿರ್ಧಾರ
ಮಂಚಕ್ಕೂ ದುಡಿಮೆಯ ರುಚಿ ತೋರಿಸುವುದು
ಕಾಲುಗಳನ್ನು ಮತ್ತಷ್ಟು ಗಟ್ಟಿಯಾಗುವಂತೆ
ದಿನವೂ ಪೆವಿಕಾಲ್ ಹಚ್ಚುವುದು
ರೂಮು ಯಾವಾಗಲೂ ಘಮ್ಮೆನ್ನುವಂತೆ
ಮಲ್ಲಿಗೆ ಸಂಪಿಗೆ ಮುಡಿಯುವುದು
ಬೆಳಕನ್ನು ಸೀಳುವ ಕತ್ತಲೆಯನ್ನು ಆಹ್ವಾನಿಸಿ
ಶೃಂಗಾರಭರಿತ ನಗುವನ್ನು ರಾತ್ರಿ ಇಡೀ ನುಂಗಿಕೊಳ್ಳುವುದು
ಬಂಧಿಯಾದ ದೇಹವನ್ನು ಕಾಪಾಡಿಕೊಳ್ಳಲಾಗದ
ಅಸಹಾಯಕ ಕೈಗಳಲ್ಲಿನ ರೋಷವನ್ನು
ಸಮ್ಮನೆ ಹರಿಯಬಿಡುವುದು
ಬಂದವನು ಯಾರೋ..
ಹಣದ ವಾಸನೆ ಮಾತ್ರ ಒಂದೇ..
ಮೊದಲ ರಾತ್ರಿಯ ಉತ್ಸಾಹವಿಲ್ಲದಿದ್ದರೂ
ಹಾಸಿಗೆ ಮಾತ್ರ ಹಸಿಹಸಿಯಾಗಿತ್ತು
ಅವನು ಬಹಳ ಆತುರದಲ್ಲಿದ್ದ
ನಿರೀಕ್ಷೆಯಂತೆ ಏನೂ ಆಗಲಿಲ್ಲ
ನೋವು ಮಾತ್ರ ನಿರಂತರ
ಅದುವರೆಗೂ ಅನುಭವಿಸದ ನೋವು ಅದು
ನವೋಲ್ಲಾಸದಿಂದ ಸವಿಯಬೇಕಾಗಿದ್ದ ಆ ನೋವು
ಅವಳ ಪಾಲಿಗೆ ಬೇಗ ಒಲಿದಿತ್ತು
ಮೊದಲ ರಾತ್ರಿ ಎಂಬ ಸಂತೋಷ ಅಲ್ಲೇ ಮುಗಿದಿತ್ತು
ಕಳೆದು ಪಡೆದುಕೊಳ್ಳುವ ಆಸೆಯೂ ಬತ್ತಿತ್ತು
ಮಾರಿಕೊಂಡದ್ದು ಏನನ್ನಾ??
ದೇಹ? ನಗು? ಶೃಂಗಾರ? ನೋವು? ಪ್ರಾಮಾಣಿಕತೆ?
ಬಹುಶಃ ಅವನನ್ನೇ ಹುಡುಕಿ ಮದುವೆಯಾದರೆ..
ಆ ರಾತ್ರಿ ಅವಳಿಗೆ ಮೊದಲ ರಾತ್ರಿಯೇ ಆಗಬಹುದು!
- ಅನಂತ ಕುಣಿಗಲ್
Super sir 👍
ಪ್ರತ್ಯುತ್ತರಅಳಿಸಿ😥ನೊಂದ ಹೆಣ್ಣಿನ ದಾರುಣ ಕಥೆ.. ಹೊಟ್ಟೆ ಪಾಡು ಬಡತನ ಅಸಾಹಾಯಕತೆ ಯಾವ ಸ್ಥಿತಿಗೆ ಬೇಕಾದರೂ ಕರೆದೊಯ್ಯಬಹುದು😒
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ ಅನಂತ
ಪ್ರತ್ಯುತ್ತರಅಳಿಸಿNice 1
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ
ಪ್ರತ್ಯುತ್ತರಅಳಿಸಿತುಂಬಾ ಬೇಸರವಾಗುತ್ತದೆ. ಎಷ್ಟೋ ಅಸಹಾಯಕ ಮುಗ್ಧ ಹೆಣ್ಣು ಮಕ್ಕಳ ವ್ಯಥೆ ಇದು.
ಪ್ರತ್ಯುತ್ತರಅಳಿಸಿಧನ್ಯವಾದಗಳು ತಮ್ಮ ಅಮೂಲ್ಯವಾದ ಸಮಯಕ್ಕೆ ಹಾಗೂ ಮಾನವೀಯತೆಯ ಮಿಡಿತಕ್ಕೆ 🤩🙏💐
ಅಳಿಸಿಕರುಳು ಹಿಂಡುವುದು
ಪ್ರತ್ಯುತ್ತರಅಳಿಸಿಹೃದಯ ಕದಡುವುದು
ಮನವು ಬಿರುಗಾಳಿಗೆ ಸಿಲುಕಿಹುದು
ರೋಷದೊಳು ಮುಷ್ಟಿ ಬಿಗಿಯಾಗಿಹುದು
ಅದೇಕೋ ಒಂದಷ್ಟು ದ್ವೇಷವು ಪುಟ್ಟಿಹುದು ಮನದಲಿ ಈ ಮನುಜರೆಡೆ ಈ ದುರುಳರೆಡೆ
ಅದೆಕೋ ಒಂದಷ್ಟು ಕೋಪವು ಪುಟ್ಟಿಹುದು
ಆ ದೈವದೆಡೆಗೆ ಆ ವಿಧಿಯೆಡೆಗೆ
ಅದೆಕೋ ಒಂದಷ್ಟು ಕೋಪವು ಪುಟ್ಟಿಹುದು
ಎನ್ನೆಡೆಗೆ ತನ್ನ ಅಸಹಾಯಕತೆಯೆಡೆಗೆ
ಎನ್ನ ದುರ್ವಿಧಿಯೆಡೆಗೆ
- 🔴 ಕವಿಚಂದಮ 🔴 -
[14/05, 11:22 pm] Dr.K.C.CHANDRA PRAKASH: ನಿಮ್ಮ ಕವನಗಳಲ್ಲಿ ವ್ಯಕ್ತವಾಗುವ ಮಹಿಳೆರೆಡೆಗಿನ ನಿಮ್ಮ ಕಾಳಜಿಗೆ ಎಷ್ಟು ವಂದಿಸಿದರು ಸಾಲದು.
ಪ್ರತ್ಯುತ್ತರಅಳಿಸಿನಿಮ್ಮ ಕವನಗಳಲ್ಲಿ ಈ ಸಮಾಜದ ಕೊಳೆಯನ್ನು ಎಳೆ ಎಳೆಯಾಗಿ ಬಿಡಿಸಿಡುವಿರಿ.
ಈ ಸಾಮಾಜಿಕ ಕಾಳಜಿ ಪ್ರತಿಯೊಬ್ಬರಲ್ಲೂ ಬಂದರೆ ನಮ್ಮ ಸಮಾಜ ಸುಧಾರಿಸಬಹುದೇನೋ.
[14/05, 11:23 pm] Dr.K.C.CHANDRA PRAKASH: ಎಲ್ಲಾ ನೊಂದ ಹೆಣ್ಣು ಮಕ್ಕಳ ಪರವಾಗಿ ನಿಮಗೆ ಹೃದಯಪೂರ್ವಕ ವಂದನೆಗಳು.
💐💐💐💐💐💐💐💐💐
ಶುಭರಾತ್ರಿ
🙏🙏🙏🙏🙏🙏🙏
ನಿಮ್ಮ ಕವನಗಳಲ್ಲಿ ವ್ಯಕ್ತವಾಗುವ ಮಹಿಳೆರೆಡೆಗಿನ ನಿಮ್ಮ ಕಾಳಜಿಗೆ ಎಷ್ಟು ವಂದಿಸಿದರು ಸಾಲದು.
ಪ್ರತ್ಯುತ್ತರಅಳಿಸಿನಿಮ್ಮ ಕವನಗಳಲ್ಲಿ ಈ ಸಮಾಜದ ಕೊಳೆಯನ್ನು ಎಳೆ ಎಳೆಯಾಗಿ ಬಿಡಿಸಿಡುವಿರಿ.
ಈ ಸಾಮಾಜಿಕ ಕಾಳಜಿ ಪ್ರತಿಯೊಬ್ಬರಲ್ಲೂ ಬಂದರೆ ನಮ್ಮ ಸಮಾಜ ಸುಧಾರಿಸಬಹುದೇನೋ.
ಎಲ್ಲಾ ನೊಂದ ಹೆಣ್ಣು ಮಕ್ಕಳ ಪರವಾಗಿ ನಿಮಗೆ ಹೃದಯಪೂರ್ವಕ ವಂದನೆಗಳು.
💐💐💐💐💐💐💐💐💐
ಶುಭರಾತ್ರಿ
🙏🙏🙏🙏🙏🙏🙏
ನೊಂದ ಹೆಣ್ಣಿನ ಬದುಕಿನ ಚಿತ್ರಣವನ್ನು ಒಂದು ಕವಿತೆಯ ಮೂಲಕ ಕಟ್ಟಿಕೊಟ್ಟಿದ್ದೀರಿ..ಬಹಳ ಭಾವನಾತ್ಮಕವಾದ ಕವಿತೆ...ಚೆನ್ನಾಗಿದೆ
ಪ್ರತ್ಯುತ್ತರಅಳಿಸಿಮಾರ್ಮಿಕವಾದ ಕವಿತೆ, ಎರಡು ಸಾಲಿನಲ್ಲಿ ಪ್ರತಿಕ್ರಿಯೆ ನೀಡಲಾಗದು. ಅಭಿನಂದನೆಗಳು ಅನಂತ💐
ಪ್ರತ್ಯುತ್ತರಅಳಿಸಿಅದ್ಭುತ ಸುಂದರ ಬರಹ
ಪ್ರತ್ಯುತ್ತರಅಳಿಸಿಹೊಟ್ಟೆ ಪಾಡಿಗಾಗಿ ದೇಹವನ್ನೇ ಅಡವಿಟ್ಟುಕೊಂಡು ಬಾಳುವುದರಿಂದ ಆಕೆಯನ್ನು ವೈಶ್ಯೆಯನ್ನಾಗಿಸುವ ಗಂಡು ಮನಸ್ಸುಗಳು ಬದಲಾಗಬೇಕು,ಹೊಟ್ಟೆಪಾಡಿಗೆ ಶ್ರಮವಿಟ್ಟು ದುಡಿದು ತಿನ್ನುವ ದಾರಿ ತೋರುವ ಮಹಾನುಬಾವ ಹುಟ್ಟಲಿ..ಹೆಣ್ಣು ದುಡಿದು ಬದುಕಬಲ್ಲಳು.
ಪ್ರತ್ಯುತ್ತರಅಳಿಸಿ