ವಿಷಯಕ್ಕೆ ಹೋಗಿ

ಯಾಂತ್ರೀಕೃತ ಬದುಕು - ಕವಿತೆ - ರೋಹಿತ್ ಜಿ


ಯಾಂತ್ರೀಕೃತ ಬದುಕು

ರಸ್ತೆ-ರಸ್ತೆಗಳೆಲ್ಲಾ ಕಿಕ್ಕಿರಿದು ನಿಂತಿವೆ ಲೋಹದ ವಾಹಕಗಳು
ಅಷ್ಟೇ ಸಾಕೇ ನೀರಲ್ಲೂ, ಗಾಳಿಯಲ್ಲೂ, ಎಲ್ಲೆಲ್ಲೂ!
ಈಗಷ್ಟೇ ನಿರ್ವಾತದಲ್ಲೂ ಸಂಚರಿಸಲು ಸಿದ್ಧವಾಗಿದ್ದೆವೆ
ವಿಚಿತ್ರ ಬಂಗಿಗಳ ನೃತ್ಯ ನಮ್ಮೀ ಪಾಡಾಗಿದೆ
ಎಲ್ಲರೂ ಓಡುತ್ತಿದ್ದಾರೆ, ಎಲ್ಲಿಗೆಂದು ತಿಳಿಯುತ್ತಿಲ್ಲ!
ಕೆಲವರು ಮೊಬೈಲ್ ಹಿಡಿದು, ಮತ್ತೂ ಹಲವಾರು ಸಿಕ್ಕ ಸಿಕ್ಕ ಹಾದಿಗಳ ಬಡಿದು
ಇಲ್ಲಿ ವಾಕಿಂಗ್ಗೆ ಬರುವುದು ಯಂತ್ರದಲ್ಲೆ..
ಮೂತ್ರ ವಿಸರ್ಜನೆಗೆ ಸಾಗುವುದು ಯಂತ್ರದ ತಂತ್ರದಲ್ಲೆ..
ಕೆಲಸವಿಲ್ಲದೇ ನಮ್ಮದೇ ದೇಹದ ಒಂದೊಂದೇ ಅಂಗಗಳು ನಶಿಸುತಿಲ್ಲವೆ??
ಮೂಳೆಗಳು ಸವೆಯುತ್ತಾ..
ಕರುಳುಗಳು ನೆಲವನ್ನೆ ಅಪ್ಪುವಂತೆ ಬೊಜ್ಜು ಬೆಳೆಸುತ್ತಾ.. ಕಿಡ್ನಿ-ಲಿವರುಗಳು ತಮ್ಮ ಕಾಯಕದಲ್ಲೆ ದ್ವಂದ್ವವಾಗುತಿಲ್ಲವೆ?
ಹೃದಯ ಯಾವಾಗ ನಿಲ್ಲುವುದೊ ಬಡಿಯಲು..
ಅಯ್ಯೋ ಅದನ್ನು ಬಡಿಸಲು ಇಂದು ಯಂತ್ರಗಳು ಬಂದಿವೆ ಬಿಡಿ!
ಆ ಯಂತ್ರ ಕೆಟ್ಟರೆ ಎತ್ತ ಸಾಗಬೆಕಿದೆ ನಾವು?
ಸ್ಮಶಾನದ ಹಾದಿಯ ಬಿಟ್ಟು!!
ನಮ್ಮದೇ ಹಿರಿಯ ತಲೆಗಳು ಬಿತ್ತಿ ಬೆಳೆಸಿದ ಯೋಗಗಳ ಮರೆತುಬಿಟ್ಟೆವಾ ನಾವು?
ಸೈಕಲಿನಲ್ಲೆ ಸಾವಿರ ಮೈಲಿ ಹೊಡೆದ ಆ ರಮ್ಯತೆಯ
ಇತಿಹಾಸ ಮುಚ್ಚಿಹಾಕುತಿರುವೆವಾ ನಾವು??
ತಿರುಗಿ ಒಮ್ಮೆ ನೋಡಿ..
ದೇಹದ ಒಂದೊಂದು ಅಂಗ ಬದುಕಲು
ಒಂದೊಂದು ಯಂತ್ರ ಬರುವ ಮುನ್ನ,
ಓಡೋಣ ಬನ್ನಿ ಪ್ರತಿದಿನವೂ..
ಕಾಲುಗಳು ತತ್ತರಿಸುವವರೆಗೂ..
ಯೋಗ-ಯಾಗಗಳ ಸಿದ್ಧಿಯ ಪಡೆದು
ಹಾರೋಣ, ಈಜೋಣ, ಧ್ಯಾನ ಚಿತ್ತದಿ ಅಲೋಚಿಸೊಣ
ಮತ್ತೊಬ್ಬ ಬುದ್ಧ ಹುಟ್ಟಿ ಬರಲಾರ
ನಮ್ಮೆಲ್ಲರ ಒಳಗೆ ಅವನನ್ನ ಸಾಕಿ ಬೆಳೆಸೋಣ.

     ರೋಹಿತ್ ಜಿ
(ಐಎಎಸ್ ವಿಧ್ಯಾರ್ಥಿ)

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಆಕೆಗೆ ಅದು ಮೊದಲ ರಾತ್ರಿಯಲ್ಲ! - ಕವಿತೆ - ಅನಂತ ಕುಣಿಗಲ್

" ಆಕೆಗೆ ಅದು ಮೊದಲ ರಾತ್ರಿಯಲ್ಲ! " ಆಕೆಗೆ ಅದು ಮೊದಲ ರಾತ್ರಿಯಲ್ಲ ಯಾಕೆಂದರೆ, ಅವಳು ಮದುವೆಯೇ ಆಗಿರಲಿಲ್ಲ!! ಇಪ್ಪತ್ತೆರೆಡು ವರ್ಷದ ಆ ಬಾಲಕಿ ಹೆಚ್ಚು ಓದಲಾಗಲಿಲ್ಲ, ಕಾರಣ ನೂರಾರು  ಅಪ್ಪ ಕುಡಿದು ಕುಡಿದು ಸತ್ತ ಇಲ್ಲ, ಮಗನಿಂದಲೇ ಕೊಲೆಯಾದ ಅಪರಾಧಿ ತಮ್ಮ ಜೈಲಿಗೆ ಹೋದ ಅಮ್ಮ ಒಬ್ಬಳೇ ಹಾಸಿಗೆ ಮೇಲೆ ದಿನ ಎಣಿಸುತ್ತಿದ್ದಾಳೆ ಹಾಳಾದ ಕ್ಯಾನ್ಸರ್ ರೋಗ ಆರು ವರ್ಷಗಳಿಂದ ಅವಳ ನಗು ಕಿತ್ತುಕೊಂಡಿದೆ  ಈಗಲೂ ಅವಳು ಸ್ವಾರ್ಥಿಯಾದರೆ..? ಆ ಬದುಕಿಗೆ ಅರ್ಥವುಂಟೆ?! ಓದಿಗೆ ತಕ್ಕನಾದ ಕೆಲಸವಿಲ್ಲ ತನ್ನವರು ಅಂತ ಯಾರೂ ಇಲ್ಲ ಒಬ್ಬಳಿಗೊಬ್ಬಳೇ.. ಒನಕೆ ಓಬವ್ವನೂ ಅಲ್ಲ  ಮದುವೆಯಾದರೆ ಸರಿಯಾಗುವುದೇ ಎಲ್ಲ? ನಂತರವೂ ಎಲ್ಲ ಹೀಗೆ ಇದ್ದರೆ.. ಮದುವೆ ಅನರ್ಥ ಹೀಗೇ ಇದ್ದುಬಿಡೋಣ.. ಅದೊಂದು ಗಟ್ಟಿ ನಿರ್ಧಾರ  ಎಷ್ಟು ದುಡಿಯಬಹುದು? ಎರಡೇ ಎರಡು ಕೈಗಳು?! ಪಾಪ ಪುಟ್ಟ ಕೈಗಳು ಸೂರ್ಯನಿಗೂ ಸಮಯದ ಅರಿವಿಲ್ಲ ಬೇಗ ಬಂದು ಬೇಗ ಹೋಗುತ್ತಾನೆ ಸಿಗುವುದು ಚಿಲ್ಲರೆ ರೂಪಾಯಿಗಳಷ್ಟೇ ಅದರಿಂದ ಅವಳ ಹೊಟ್ಟೆ ತುಂಬೀತೇ?? ಹೆತ್ತಾಕೆಯ ರೋಗ ಹೋದೀತೇ?? ಮತ್ತೆ ಎಲ್ಲವೂ.. ಹಾಗೇ!!  ಇನ್ನೊಂದು ನಿರ್ಧಾರವಾಗಬೇಕಿದೆ ಹಳ್ಳಿ ಬಿಟ್ಟು ಪಟ್ಟಣ ಸೇರುವುದು ಅದೂ ಆಯ್ತು.. ಕೆಲಸಕ್ಕಾಗಿ ಅಲೆದಲೆದು ಸಾಕಾಯ್ತು ಕಣ್ಣಿನಲ್ಲಡಗಿರುವ ನೋವು ನೋಡಿದವರಿಗಿಂತ ಅವಳೆದೆಯ ಉಬ್ಬು ಸವಿದವರೇ ಹೆಚ್ಚು ಅವರ ಕಣ್ಣಿನ ದಾಹಕ್ಕೆ ಎದೆಯೇ ಹಿಂಗುತ್ತಿವೆ ದಿನವೂ ...