ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕೊರೋನ ಕಿರುಪ್ರಬಂಧ ಸ್ಪರ್ಧೆ

ಅವ್ವ ಪುಸ್ತಕಾಲಯ, ಕೆಂಚನಹಳ್ಳಿ ಇವರ ವತಿಯಿಂದ 'ಕೊರೋನ ಕಿರುಪ್ರಬಂಧ ಸ್ಪರ್ಧೆ' "ಕೊರೋನ 2ನೆ ಅಲೆಯ ಲಾಕ್ಡೌನ್ ಸಮಯದಲ್ಲಿ ಸರ್ಕಾರ ಹಾಗು ಜನಸಾಮಾನ್ಯರ ಸಾಮಾಜಿಕ ಜವಾಬ್ದಾರಿಗಳು" * ಈ ಮೇಲಿನ ವಿಷಯದ ಕುರಿತಾಗಿ 200-250 ಪದಮಿತಿಯ ಕಿರುಪ್ರಬಂಧ ರಚಿಸಿ(ಮೊಬೈಲ್ ನಲ್ಲಿ ಟೈಪ್ ಮಾಡಿ) ದಿ: 10-05-21 ರ ಸಂಜೆ 09:00 ಗಂಟೆಯ ಒಳಗೆ avvapustakaalaya@gmail.com  ಗೆ ಕಳಿಸಿಕೊಡಬೇಕು. ಪ್ರಬಂಧ ಬರಹವನ್ನು ಸ್ಪರ್ಧೆಗೆ ನಿಗದಿಪಡಿಸಿದ ದಿನದಂದೇ ಕಳಿಸಬೇಕು. * ಪ್ರಬಂಧದ ಜೊತೆಗೆ ನಿಮ್ಮ ಇತ್ತೀಚಿನ ಫೋಟೋ ಅಟ್ಯಾಚ್ ಮಾಡಿರಬೇಕು ಮತ್ತು ಪೂರ್ತಿ ಅಂಚೆ ವಿಳಾಸವನ್ನು ಬರಹದ ಕೊನೆಯಲ್ಲಿ ಬರೆದಿರಬೇಕು. ಒಬ್ಬರು ಒಂದು ಪ್ರಬಂಧವನ್ನು ಮಾತ್ರ ಸಲ್ಲಿಸತಕ್ಕದ್ದು. * ಪದಮಿತಿಗೆ ಒಳಪಡದ, ಸಮಯ ಮೀರಿ ಬಂದ ಹಾಗು ಪಿಡಿಎಫ್/ಫೋಟೋ/ಡಾಕ್ಯುಮೆಂಟ್ ರೂಪದ ಪ್ರಬಂಧಗಳನ್ನು ಸ್ವೀಕರಿಸುವುದಿಲ್ಲ. * ನಿರ್ಣಾಯಕರ ತೀರ್ಮಾನವೇ ಅಂತಿಮ. ವಿಜೇತ ಮೂರು ಪ್ರಬಂಧಗಳಿಗೆ ಪುಸ್ತಕ ಬಹುಮಾನ ಹಾಗು ಸ್ಪರ್ಧೆಗೆ ಮಾನ್ಯವಾದ ಎಲ್ಲ ಪ್ರಬಂಧಗಳಿಗು ಇ-ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಗುವುದು . ಭಾಗವಹಿಸುವ ಎಲ್ಲರೂ ಹೆಚ್ಚಿನ ಮಾಹಿತಿಗಾಗಿ ನಮ್ಮ ತಂಡಗಳನ್ನು ಸೇರಿ.  https://chat.whatsapp.com/FiSAuGPN2VHG6K7Vguq431 https://www.facebook.com/groups/3344469948953030/?ref=share - ನಾರಾಯಣ್ ಕೆ ಎನ್ ಪ್ರಕಾಶಕರು,...

ಕನ್ನಡ ಕಲರವ - ವಾರ್ಷಿಕೋತ್ಸವ ಸಾಹಿತ್ಯ ಸ್ಪರ್ಧೆಯ ವಿಜೇತ ಸ್ವರಚಿತ ಕವನಗಳು ಓದುಗರಿಗಾಗಿ

'ಕನ್ನಡ ಕಲರವ'  ಸಾಹಿತ್ಯ ತಂಡವು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಉಚಿತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅವುಗಳಲ್ಲಿ ವಿಜೇತ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದುಕೊಂಡ ಕವನ ವಾಚನ ಸ್ಪರ್ಧೆಯ ಕವನಗಳು ಓದುಗರಿಗಾಗಿ..  ಪ್ರಥಮ ಬಹುಮಾನಿತ ಕವನ : ಕಣ್ಣಾಮುಚ್ಚೆ ಕಾಡೇಗೂಡೇ.. ಲೇಖಕರು :  ವಿಕ್ರಮ್ ಬಿ ಕೆ "ಒಮ್ಮೆ ಗರ್ಭಗುಡಿಯ ಸುತ್ತ ಮತ್ತೆ ಗೋರಿಗಳ ಸುತ್ತ ಮನೆಯವರ ಸುತ್ತ ಎರಡು ಮನಸ್ಸುಗಳ ಮಧ್ಯ ಕಟ್ಟುವೆವು ನಾವು ಗೋಡೆಗಳು!  ಹಾರಿಬಂದ ಕಳ್ಳರೆಷ್ಟೋ, ದೀಪವಚ್ಚಿ ಮಾತಾಡಿದವರೆಷ್ಟೋ, ಕದ್ದು ಕದ್ದು ಕೇಳಿದವರಿನ್ನೆಷ್ಟೋ, ಏಕಾಂತ ಬಯಸಿ ಬಂದವರ, ಏಕಾಂಗಿಯಾಗಿಸಿದ  ಆ ನಾಲ್ಕು ಗೋಡೆಗಳು!  ಅವಳು ನರಳುವ, ಬೆಳಕಿನ ರಾತ್ರಿಗಳು ಅವನು ಕಾಯುವ  ಅಧಿಕಾರದ ಕ್ಷಣಗಳು ನಗ್ನತೆಯನ್ನ - ಮುಚ್ಚಿಡುವ ಸಂಪ್ರದಾಯದ ಗಟ್ಟಿ ಗೋಡೆಗಳು!  ಸಾಲಗಳಿಗೆ ಸಾಕ್ಷಿಯಾಗಿ ನೆನಪಿನ ಚಿತ್ರಗಳ ಹೊತ್ತಿಕೊಂಡು ಬಣ್ಣ ಬದಲಿಸಿಕೊಳ್ಳುವ, ಒಂಟಿ ಗಡಿಯಾರದ ಒಳ್ಳೆ ಗೆಳೆಯನಾಗಿ ಉಳಿದು - ಬೆಳೆದು - ಕಳೆದು ಹೋಗುವ ಗೋಡೆಗಳು !" ವಾಚನದ ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ : https://www.facebook.com/groups/3344469948953030/permalink/4151234064943277/ ದ್ವಿತೀಯ ಬಹುಮಾನಿತ ಕವನ : ವಿವಾಹ ವಿಚ್ಚೇದನವೆಂಬ ಗೆರೆ ಲೇಖಕರು : ಸಂಗೀತ ಹೆಚ್ ಆರ್ "ನ್...

ಕನ್ನಡ ಕಲರವ - ವಾರ್ಷಿಕೋತ್ಸವ ಉಚಿತ ಸಾಹಿತ್ಯ ಸ್ಪರ್ಧೆಗಳ ವಿಜೇತ ಹಾಗೂ ಟಾಪ್ 25 ಸ್ಪರ್ಧಿಗಳ ಪಟ್ಟಿ ಬಿಡುಗಡೆ

ಕನ್ನಡ ಕಲರವ - ಆನ್ಲೈನ್ ಸಾಹಿತ್ಯಕೂಟ "ನಿಮ್ಮ ಹೆಜ್ಜೆ ನಿಮ್ಮದೇ ಹೆಜ್ಜೆ - ಇದು ಸಾಹಿತ್ಯಾಸಕ್ತರ ಜೀವಾಳ" ಕನ್ನಡ ಕಲರವ ತಂಡವು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದಿನಾಂಕ 20-04-21 ರಿಂದ 22-04-21ರ ವರೆಗೆ ಉಚಿತ ಆನ್ಲೈನ್ ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಿತ್ತು . ಸ್ಪರ್ಧೆಯಲ್ಲಿ ಹಲವಾರು ಜನ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೀರಿ. ಎಲ್ಲರಿಗೂ ಧನ್ಯವಾದಗಳು ಹಾಗೂ ಅಭಿನಂದನೆಗಳು. ಸ್ಪರ್ಧೆಯ ನಿಯಮಾನುಸಾರ, ತೀರ್ಪುಗಾರರ ನುಡಿಗಳು ಹಾಗೂ ವಿಜೇತರ ಪಟ್ಟಿ ಈ ಕೆಳಗಿನಂತಿರುತ್ತದೆ. ನ್ಯಾನೋ ಕಥೆ ಸ್ಪರ್ಧೆ ತೀರ್ಪುಗಾರರು : ಶ್ರೀಮತಿ ಪರಿಮಳ ಸಿ ಯುವ ಬರಹಗಾರ್ತಿ ಅವರ ಬರಹಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://kannada.pratilipi.com/user/qppd4j54nu?utm_source=android&utm_campaign=authorprofile_share ತೀರ್ಪುಗಾರರ ಮಾತು : ಕನ್ನಡ ಕಲರವ ವಾರ್ಷಿಕೋತ್ಸವದ ಪ್ರಯುಕ್ತ ನ್ಯಾನೋ ಕಥೆ ಸ್ಪರ್ಧೆ ಏರ್ಪಡಿಸಲಾಗಿತ್ತು.. ನನ್ನನ್ನು ತೀರ್ಪುಗಾರಳಾಗಿ ಆಯ್ಕೆ ಮಾಡಿದ ಶ್ರೀ ಅನಂತರವರಿಗೆ ಮೊದಲಿಗೆ ಧನ್ಯವಾದಗಳನ್ನ ಸಮರ್ಪಿಸುವೆ. ನ್ಯಾನೋ ಕಥೆ ಒಂದಕ್ಕೊಂದು ವಿಭಿನ್ನವಾಗಿತ್ತು ಒಟ್ಟು 37ಕ್ಕೂ ಅಧಿಕ ಕಥೆಗಳು ವಿವಿಧ ರೀತಿಯಲ್ಲಿ ಲೇಖಕರಿಂದ ರಚಿಸಲ್ಪಟ್ಟಿದ್ದವು, ಎಲ್ಲಾವನ್ನ...

ದಢೂತಿ ಹೊಟ್ಟೆಯವಳು!! - ಕವಿತೆ - ಅನಂತ ಕುಣಿಗಲ್

" ದಢೂತಿ ಹೊಟ್ಟೆಯವಳು " ದುಂಡು ದುಂಡಾಗಿ ಕಬ್ಬಿನಂತೆ ಕೊಬ್ಬಿದ ಹುಡುಗಿ ವಯಸ್ಸು ಹತ್ತೊಂಬತ್ತು ಹೊಟ್ಟೆಯ ತೂಕ ನಲವತ್ತೊಂಬತ್ತು ' ಹೀಗಾಗಬಾರದಿತ್ತು ' ಅಂತ ಎಷ್ಟೋ ಸಲ ಅಂದುಕೊಂಡಿದ್ದಳು ಆ ದಢೂತಿ ಹೊಟ್ಟೆಯವಳು ನೋಡುಗರ ಕಣ್ಣಿಗೆ ಮಾತನಾಡುವವರ ಬಾಯಿಗೆ ಪಕ್ಕಕ್ಕೆ ಸರಿಯುವವರ ದುರ್ನಡತೆಗೆ ' ಲಕ್ವಾ ಹೊಡೆಯಲಿ '  ಅಂತ ಅದೆಷ್ಟೋ ಬಾರಿ ದೇವರಲ್ಲಿ ಪ್ರಾರ್ಥಿಸಿದ್ದಳು ಆ ಹುಡುಗಿ ' ಸಣ್ಣಗಾಗುತ್ತೇನೆ '  ಎಂದು ಗೆಳೆಯರಲ್ಲಿ ಪಂಥ ಕಟ್ಟಿ ಸೋತಿದ್ದಳು ತನ್ನ ವಯಸ್ಸಿಗೆ ಒಬ್ಬ ಹುಡುಗನಾದರೂ ತಿರುಗಿ - - ನೋಡಲೆಂದು ದಿನವೂ ಬಟ್ಟೆ ಬದಲಿಸುತ್ತಿದ್ದಳು ಯಾರ್ಯಾರೋ ಹೇಳಿದ ಕ್ರೀಮುಗಳನ್ನು ಹುಡುಕಿ ತಂದು ಬಳಿದುಕೊಳ್ಳುತ್ತಿದ್ದಳು ಆದರೂ ಆಕೆ ದಢೂತಿಯವಳೆಂದು ಯಾರೂ ಮನಸ್ಸು ಮಾಡುತ್ತಿರಲಿಲ್ಲ ಪಾಠ ಮಾಡುವ ಟೀಚರುಗಳು ಪೆಟ್ಟಿಗೆ ಅಂಗಡಿ ಶೆಟ್ಟರು ಕುರಿ ಕಾಯುವ ಹುಡುಗರು ಸಾಲದೆಂದು ಆಕೆ ಸಾಕಿದ ನಾಯಿಮರಿಯೂ ಕೂಡ ತನ್ನವಳು, ತನ್ನೂರಿನವಳೆಂದು ಒಪ್ಪಿಕೊಳ್ಳಲು ಸಿದ್ಧರಿಲ್ಲದೆ ಕಂಡು-ಕಂಡಾಗೆಲ್ಲಾ.. ಸುಮ್ಮನೆ ಬೊಗಳುತ್ತಿದ್ದರು ತೊಗಲಿನಡಿಯ ಕೊಬ್ಬು ಕರಗಲೆಂದು ನಾಲ್ಕೈದು ರಗ್ಗು ಹೊದ್ದುಕೊಂಡು ಬೆವರುವಳು ದಿನವೂ ಉರಿಯುವ ಒಲೆಯ ಮುಂದೆ ಕೂರುವಳು ಚಾಕು ಕಂಡಾಗೆಲ್ಲಾ.. ಚೂರ್ ಚೂರು ಮಾಂಸವನ್ನೇ.. ಕೂಯ್ದು ನಾಯಿಗೆ ಹಾಕಬೇಕೆನಿಸುತ್ತಿತ್ತು ಕೊಬ್...

ಕನ್ನಡ ಕಲರವ - ವಾರ್ಷಿಕೋತ್ಸವ ಸಾಹಿತ್ಯ ಸ್ಪರ್ಧೆಗ ವಿವರ

ಕನ್ನಡ ಕಲರವ - ಆನ್ಲೈನ್ ಸಾಹಿತ್ಯಕೂಟ "ಇದು ಕನ್ನಡ ಸಾಹಿತ್ಯಾಸಕ್ತರ ಜೀವಾಳ" 23 ಏಪ್ರಿಲ್‍ 2020 ರಲ್ಲಿ ರಚಿತವಾದ ಈ ತಂಡವು ಈವರೆಗೆ ಯಶಸ್ವಿಯಾಗಿ ಸಾಹಿತ್ಯ ಸೇವೆಯಲ್ಲಿ ಒಂದು ವರ್ಷವನ್ನು ಪೂರೈಸಲಿದೆ . ಆ ನಿಟ್ಟಿನಲ್ಲಿ ಮೂರು ದಿನಗಳ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. 20-ಏಪ್ರಿಲ್-2021 : ನ್ಯಾನೋ ಕಥಾ ಸ್ಪರ್ಧೆ *) 150 ಪದಮಿತಿಯ ಸ್ವತಂತ್ರ ವಿಷಯದ ಮೇಲೆ ಕಥೆ ರಚಿಸಿ (mobileನಲ್ಲಿ unicode fontನಲ್ಲಿ ಟೈಪ್ ಮಾಡಿದ ಕಥೆ) ಏಪ್ರಿಲ್ 20 ರಂದು avvapustakaalaya@gmail.com ಗೆ ಕಳಿಸಿಕೊಡಬೇಕು. 21-ಏಪ್ರಿಲ್-2021 : ಸ್ವರಚಿತ ಕವನ ವಾಚನ ಸ್ಪರ್ಧೆ *) ನಿಮ್ಮ ಪರಿಚಯ ಸೇರಿಸಿ, 03 ನಿಮಿಷದ ಒಳಗಿನ ಸ್ವರಚಿತ ಕವನ ವಾಚನದ ವೀಡಿಯೋ ಅನ್ನು 9742029908 ನಂಬರಿನ ವಾಟ್ಸಾಪ್ ಗೆ ಏಪ್ರಿಲ್ 21 ರಂದು ಕಳಿಸಿಕೊಡಬೇಕು. ವೀಡಿಯೋ landscape (16:9 ratio) ನಲ್ಲಿ ಚಿತ್ರೀಕರಿಸಿರಬೇಕು. 22-ಏಪ್ರಿಲ್-2021 : ಆಶುಭಾಷಣ ಸ್ಪರ್ಧೆ *) ಕೊಡುವ ಎರಡು ವಿಷಯಗಳಲ್ಲಿ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು, 3 ನಿಮಿಷ ಮೀರದಂತೆ zoom ಅಥವಾ google meet ನಲ್ಲಿ ಮಾತನಾಡಬೇಕು. *) ಈ ಸ್ಪರ್ಧೆಯು ಸಂಜೆ 7.30 ಕ್ಕೆ zoom ಅಥವಾ google meet ನಲ್ಲಿ ಶುರುವಾಗುತ್ತದೆ. ಹಾಗೂ ಲಿಂಕ್ ಅನ್ನು 22 ರಂದು ಕೊಡಲಾಗುತ್ತದೆ. ಎಲ್ಲಾ ಸ್ಪರ್ಧೆಗಳು ನಿಗದಿತ ದಿನಾಂಕ ಹಾಗೂ ಸಮಯದಂದೇ ನಡೆಯುತ್ತವೆ. ...

ಯುವಬರಹಗಾರ ಗಮನಕ್ಕೆ.. - ಅನಂತ ಕುಣಿಗಲ್

"ಜ್ಞಾನ ಸಂಪಾದಿಸಿಕೊಳ್ಳದ ಹೊರತು ನಿಮ್ಮಿಂದ ಸೃಜನಶೀಲತೆ ಹರಹೊಮ್ಮಲು ಸಾಧ್ಯವೇ ಇಲ್ಲ!!" ಇತ್ತೀಚಿನ ಯುವಬರಹಗಾರರು ಹಾದಿ ತಪ್ಪುವ ವಿಷಯವಾಗಿ ಈ ಸಾಲುಗಳನ್ನು ಹೇಳಬೇಕಾಯ್ತು. ಯಾವುದೋ ಒಂದು ಘಟನೆಯಿಂದಲೇ ಪ್ರೇರೇಪಿತರಾಗಿ ಬರೆದ ಎಲ್ಲವನ್ನೂ ಪುಸ್ತಕ ಮಾಡಿಸಬೇಕು. ಫೇಸ್ಬುಕ್, ವಾಟ್ಸಪ್ ಗೆಳೆಯರು ಕೊಂಡು ಓದುತ್ತಾರೆ. ಎಂಬ ಜೊಳ್ಳು ನಿರೀಕ್ಷೆಯಿಂದ ಮೌಲ್ಯಯುತವಲ್ಲದ ಬರಹಗಳನ್ನು ಕೂಡಿಸಿಕೊಂಡು ಪ್ರಕಾಶಕರ ಬಳಿ ಹೋಗುತ್ತಾರೆ. ಅಲ್ಲಿ ಮುಖಭಂಗ ನಡೆದ ನಂತರ ವಾಪಾಸ್ಸಾಗಿ ಸಾಹಿತ್ಯದ ಘಮಲಿನಿಂದ ದೂರವೇ ಉಳಿದುಬಿಡುತ್ತಾರೆ. ಪ್ರಕಾಶಕರು ನಿಮ್ಮ ಪುಸ್ತಕ ಪ್ರಕಟಿಸಬೇಕೆಂದರೆ, ನಿಮ್ಮ ಬರಹಗಳಲ್ಲಿ ಮೌಲ್ಯಯುತ ಅಂಶಗಳಿರಬೇಕು. ಭಾಷಾಶುದ್ಧಿ ಇರುಬೇಕು. ಮತ್ತು ನೀವು ಕೆಲವರಿಗಾದರೂ ಪರಿಚಯವಿರಬೇಕು (ಅಂದರೆ, ನಿಮ್ಮ ಪುಸ್ತಕಗಳನ್ನು ಕೊಳ್ಳುವ ಜನರಿರಬೇಕು). ಅಥವಾ, ಪ್ರಕಟ ಮಾಡಲು ಹಣ ಕೊಟ್ಟು, ಪ್ರಕಟಿಸಿದ ಪುಸ್ತಕಗಳನ್ನು ನೀವೇ ಕೊಂಡುಕೊಳ್ಳಬೇಕು. ಎರಡೂ ವಿಷಯಗಳು ನಿಮ್ಮ ನೆಮ್ಮದಿಗೆ ಪೂರಕವಾಗಿರುವುದಿಲ್ಲ. ಹಾಗಾಗಿ ಹೆಚ್ಚೆಚ್ಚು ಓದಿ, ನಿಮ್ಮ ಬರಹಗಳನ್ನು ಗೆಳೆಯರಿಂದಲೇ ತಿದ್ದುಪಡಿ ಮಾಡಿಸಿ, ನೀವೇ ಸ್ವಂತ ಪ್ರಕಟಿಸಿ. ಮೊದಲ ಪ್ರಕಟಣೆಯ ಫಲವೇ ನಿಮ್ಮ ಮುಂದಿನ ಪ್ರಯತ್ನಕ್ಕೆ ನಾಂದಿಯಾಗಬಹುದು. ಅಥವಾ ಆಗದೇ ಇರಬಹುದು. ಆಗದಿದ್ದರೆ ಇನ್ನಷ್ಟು ಓದಿ ನಂತರ ಬರೆಯಿರಿ.. ಈಗಾಗಲೇ ಬರೆದಿದ್ದನ್ನು ಬಿಟ್ಟು ಹೊಸತನ್ನು ಹುಡುಕಿ. ...