ವಿಷಯಕ್ಕೆ ಹೋಗಿ

ಕನ್ನಡ ಕಲರವ - ವಾರ್ಷಿಕೋತ್ಸವ ಉಚಿತ ಸಾಹಿತ್ಯ ಸ್ಪರ್ಧೆಗಳ ವಿಜೇತ ಹಾಗೂ ಟಾಪ್ 25 ಸ್ಪರ್ಧಿಗಳ ಪಟ್ಟಿ ಬಿಡುಗಡೆ

ಕನ್ನಡ ಕಲರವ - ಆನ್ಲೈನ್ ಸಾಹಿತ್ಯಕೂಟ
"ನಿಮ್ಮ ಹೆಜ್ಜೆ ನಿಮ್ಮದೇ ಹೆಜ್ಜೆ - ಇದು ಸಾಹಿತ್ಯಾಸಕ್ತರ ಜೀವಾಳ"


ಕನ್ನಡ ಕಲರವ ತಂಡವು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದಿನಾಂಕ 20-04-21 ರಿಂದ 22-04-21ರ ವರೆಗೆ ಉಚಿತ ಆನ್ಲೈನ್ ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಿತ್ತು. ಸ್ಪರ್ಧೆಯಲ್ಲಿ ಹಲವಾರು ಜನ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೀರಿ. ಎಲ್ಲರಿಗೂ ಧನ್ಯವಾದಗಳು ಹಾಗೂ ಅಭಿನಂದನೆಗಳು.



ಸ್ಪರ್ಧೆಯ ನಿಯಮಾನುಸಾರ, ತೀರ್ಪುಗಾರರ ನುಡಿಗಳು ಹಾಗೂ ವಿಜೇತರ ಪಟ್ಟಿ ಈ ಕೆಳಗಿನಂತಿರುತ್ತದೆ.

ನ್ಯಾನೋ ಕಥೆ ಸ್ಪರ್ಧೆ
ತೀರ್ಪುಗಾರರು : ಶ್ರೀಮತಿ ಪರಿಮಳ ಸಿ

ಯುವ ಬರಹಗಾರ್ತಿ
ಅವರ ಬರಹಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ :
https://kannada.pratilipi.com/user/qppd4j54nu?utm_source=android&utm_campaign=authorprofile_share

ತೀರ್ಪುಗಾರರ ಮಾತು : ಕನ್ನಡ ಕಲರವ ವಾರ್ಷಿಕೋತ್ಸವದ ಪ್ರಯುಕ್ತ ನ್ಯಾನೋ ಕಥೆ ಸ್ಪರ್ಧೆ ಏರ್ಪಡಿಸಲಾಗಿತ್ತು.. ನನ್ನನ್ನು ತೀರ್ಪುಗಾರಳಾಗಿ ಆಯ್ಕೆ ಮಾಡಿದ ಶ್ರೀ ಅನಂತರವರಿಗೆ ಮೊದಲಿಗೆ ಧನ್ಯವಾದಗಳನ್ನ ಸಮರ್ಪಿಸುವೆ.

ನ್ಯಾನೋ ಕಥೆ ಒಂದಕ್ಕೊಂದು ವಿಭಿನ್ನವಾಗಿತ್ತು ಒಟ್ಟು 37ಕ್ಕೂ ಅಧಿಕ ಕಥೆಗಳು ವಿವಿಧ ರೀತಿಯಲ್ಲಿ ಲೇಖಕರಿಂದ ರಚಿಸಲ್ಪಟ್ಟಿದ್ದವು, ಎಲ್ಲಾವನ್ನೂ ಓದಿ ಆನಂದಿಸಿದ ಖುಷಿ ನನ್ನದಾಗಿತ್ತು. ಒಂದು ಮೆಚ್ಚುಗೆ ಚಿಕ್ಕ ವಯಸ್ಸಿಗೆ ಆರನೇ ತರಗತಿ ವಿದ್ಯಾರ್ಥಿನಿಯೊಬ್ಬರು ಭಾಗವಹಿಸಿದ್ದು ತುಂಬಾ ಖುಷಿ ನೀಡಿತು. ಅಷ್ಟು ಕಥೆಗಳಲ್ಲಿ ಕೆಲವು ಮನಮುಟ್ಟಿದವು ಜೊತೆಗೆ ಪ್ರಸ್ತುತ ವರ್ತಮಾನಕ್ಕೆ ಹೊಂದಾಣಿಕೆಯಾಗುವಂತ ಬರಹಗಳು. ಸ್ಪರ್ಧೆಗೆ ಭಾಗವಹಿಸಿದ ಎಲ್ಲ ಉದಯೋನ್ಮುಖ ಬರಹಗಾರರಿಗೆ ಆತ್ಮೀಯ ವಂದನೆಗಳು ಹಾಗೂ ನಿಮ್ಮ ಮುಂಬರುವ ಭವಿಷ್ಯಕ್ಕೆ ಶುಭಾಶಯಗಳು. ಸಾಹಿತ್ಯದೊಲವು ಇನ್ನೂ ಹೆಚ್ಚಲೆಂದು, ಇನ್ನಷ್ಟು ಬರಹಗಳು ನಿಮ್ಮೆಲ್ಲರಿಂದ ರಚಿಸಲ್ಪಡಲಿ ಎಂದು ಆಶಿಸುತ್ತೇನೆ..
ಧನ್ಯವಾದಗಳು ಕನ್ನಡ ಕಲರವ ತಂಡಕ್ಕೆ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ..

ವಿಜೇತರು :
1) ಪರಿಸ್ಥಿತಿ - ರಾಘವೇಂದ್ರ ಈ ಹೊರಬೈಲು
2) ಆಡಂಬರವಲ್ಲ ಜೀವನ - ಹಿತೇಶ್ ಕುಮಾರ್ ಎ
3) ಇದಕ್ಯಾರೂ ಹೊಣೆ - ಸಂಗೀತ ಹೆಚ್ ಆರ್



ಕವನ ವಾಚನ ಸ್ಪರ್ಧೆ
ತೀರ್ಪುಗಾರರು : ಶ್ರೀಮತಿ ಮಾನಸಿ ಸುಧೀರ್

ರಂಗ ಕಲಾವಿದರು
ಅವರ ವಾಚನದ ವೀಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ :
https://youtube.com/channel/UCFs-ZBUBJwAgUr3aswnnj9Q

ತೀರ್ಪುಗಾರರ ಮಾತು : ಕೋರೋನ ಕಾಲದಲ್ಲಿ ಕಂಗೆಟ್ಟು ಕುಳಿತುಕೊಳ್ಳದೆ, ಬದಲಾದ ಸನ್ನಿವೇಶವನ್ನು ಸದುಪಯೋಗಗೊಳಿಸಿ, ಹಲವು ಸಾಹಿತ್ಯಾಸಕ್ತರ "ರುಚಿ ಶುದ್ಧಿ" ಮಾಡಿ, ಅವರನ್ನು ಪ್ರೋತ್ಸಾಹಿಸುತ್ತಿರುವ ಹಲವು ಸಂಸ್ಥೆಗಳಲ್ಲಿ ಒಂದು ಅನಂತ ಅವರ "ಕನ್ನಡ ಕಲರವ" .
ಆನ್ಲೈನ್ ಮೂಲಕ ಹಲವು ರೀತಿಯ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಾ ಬಂದ ಈ ತಂಡ, ಇದೀಗ ತನ್ನ ಮೊದಲ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಂಡದ್ದು ನಿಜಕ್ಕೂ ಅಭಿನಂದನೀಯ. ಅದರಲ್ಲಿ ಸ್ವರಚಿತ ಕವನ ವಾಚನ ಸ್ಪರ್ಧೆಗೆ ತೀರ್ಪುಗಾರರಾಗಿ ನನ್ನನ್ನು ಆರಿಸಿಕೊಂಡದ್ದಕ್ಕೆ ಶ್ರೀಯುತ ಅನಂತ ಕುಣಿಗಲ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.

ತುಂಬಾ ಕಾವ್ಯ ಕುತೂಹಲದಿಂದ ಪ್ರೀತಿಯಿಂದ ಎಲ್ಲಾ ಕವನ ವಾಚನಗಳ ವಿಡಿಯೋಗಳನ್ನು ನೋಡಿದೆ. ಇದರಲ್ಲಿ ಬೇರೆ ಬೇರೆ ವೃತ್ತಿಯ ಹಿನ್ನೆಲೆಯವರಿದ್ದರು. ಬೇರೆಬೇರೆ ವಯೋಮಾನದವರಿದ್ದರು (ನಾಲ್ಕನೇ ತರಗತಿಯ ವಿದ್ಯಾರ್ಥಿನಿಯಿಂದ ಹಿಡಿದು ನಿವೃತ್ತಿಯ ವಯಸ್ಸಿನವರವರೆಗೂ) ರಾಜ್ಯದ ಬೇರೆ ಬೇರೆ ಜಿಲ್ಲೆಯವರಿದ್ದರು. ಈ ರೀತಿ ವೈವಿಧ್ಯಪೂರ್ಣ ಹಿನ್ನೆಲೆಯವರು ಭಾಗವಹಿಸಿದ್ದು ಈ ಸ್ಪರ್ಧೆಯ ಯಶಸ್ಸನ್ನು ಸೂಚಿಸುತ್ತದೆ.

ಕವನಗಳ ವಸ್ತುಗಳೂ ಹಲವು ಬಗೆಯವು :
ಅವ್ವ, ನಲ್ಲ , ಪ್ರೀತಿಯ ಹುಡುಗಿ, ವಿವಾಹ ವಿಚ್ಛೇದನ ,ಆಕಾಲ, ಈ ಕಾಲದ, ಬಾಲ್ಯ , ಕರ್ಣ
ಭಾಗೀರಥಿ, ಅಂಬೇಡ್ಕರ್, ಸ್ನೇಹ, ಅತ್ಯಾಚಾರ, ಪ್ರಕೃತಿ ಮುಂತಾದವುಗಳು . ಒಂದು ಒಳ್ಳೆಯ ಕವನವನ್ನು ಸರಿಯಾದ ರೀತಿಯಲ್ಲಿ ವಾಚಿಸಿದರೆ ಮಾತ್ರ ಅದು ಸಹೃದಯರನ್ನು ಮುಟ್ಟುತ್ತದೆ ಎಂದು ನಂಬಿದವಳು ನಾನು. ಹಾಗಾಗಿ ಬರೆದ ಕವನ ಮತ್ತು ಅದರ ವಾಚನ ಶೈಲಿ ಎರಡನ್ನೂ ಪರಿಗಣಿಸಿ ನನ್ನ ತೀರ್ಪನ್ನು ನೀಡಿದ್ದೇನೆ.

ಕೊರೋನಾ ವೆಂಬ ಈ ಸಂಕಷ್ಟದ ಕಾಲದಲ್ಲಿ ತಮ್ಮ ಅಭಿರುಚಿಯನ್ನು ಪೋಷಿಸುತ್ತಾ ಸ್ಪರ್ಧೆಯಲ್ಲಿ
ಸಕ್ರಿಯವಾಗಿ ಭಾಗವಹಿಸಿದ ಎಲ್ಲಾ ಉದಯೋನ್ಮುಖ ಕವಿಗಳಿಗೆ ನನ್ನ ಅಭಿನಂದನೆಗಳು . ಶ್ರೀಯುತ ಅನಂತ ಕುಣಿಗಲ್ ಅವರು ತನ್ನ ಪ್ರೀತಿಯ ಕೂಸಾದ "ಕನ್ನಡ ಕಲರವ"ದ ಮೂಲಕ ತಾನೂ ಬೆಳೆಯುತ್ತಾ ಇತರರನ್ನು ಬೆಳೆಸುತ್ತಾ, ಇನ್ನು ಮುಂದೆಯೂ ಇಂತಹ ಸಾಹಿತ್ಯಕೃಷಿಯನ್ನು ಮಾಡುತ್ತಿರಲಿ ಎಂದು ಆಶಿಸುತ್ತೇನೆ.

ವಿಜೇತರು :
1) ಕಣ್ಣಾಮುಚ್ಚೆ ಕಾಡೇಗೂಡೇ - ವಿಕ್ರಮ್ ಬಿ ಕೆ
2) ವಿವಾಹ ವಿಚ್ಚೇದನವೆಂಬ ಗೆರೆ - ಸಂಗೀತ ಹೆಚ್ ಆರ್
3) ವ್ಯಾಘ್ರಗಳ ನಡುವೆ ಕುರಿ - ರಾಘವೇಂದ್ರ ಈ ಹೊರಬೈಲು



ರಸಪ್ರಶ್ನೆ ಸ್ಪರ್ಧೆ
ಹದಿನೈದು ಪ್ರಶ್ನೆಗಳು ಕನ್ನಡ ನಾಡು, ನುಡಿ ಹಾಗೂ ಸಾಮಾನ್ಯ ಜ್ಞಾನದ ಬಗ್ಗೆ ಇದ್ದವು. ಗೂಗಲ್ ಫಾರ್ಮ್ ಅನ್ನು ಸಮಯದ ಒಳಗೆ ಮೊದಲು ಸಬ್ಮಿಟ್ ಮಾಡಿದವರ ಅನುಕ್ರಮೇಣ ಹಾಗೂ ಹೆಚ್ಚಿಗೆ ಅಂಕಗಳನ್ನು ಪಡೆದವರ ಆಧಾರದ ಮೇಲೆ ವಿಜೇತರ ಪಟ್ಟಿ ಅವಲಂಭಿತವಾಗಿದೆ. 15 ಕ್ಕೆ 11 ಅಂಕಗಳು ಈ ಸ್ಪರ್ಧೆಯಲ್ಲಿ ಹೆಚ್ಚಿಗೆ ಪಡೆದ ಅಂಕಗಳಾಗಿದ್ದವು.

ಅನಂತ ಕುಣಿಗಲ್
ಯುವಲೇಖಕ ಹಾಗೂ ರಂಗಕರ್ಮಿ
https://www.facebook.com/writer.ananth

ವಿಜೇತರು
1) ಸಂಗೀತ ಹೆಚ್ ಆರ್
2) ಅಶಿಕ್ ಚಿಕ್ಕಮಗಳೂರು
3) ಸಿದ್ದೇಶ ಸಿ



ಎಲ್ಲಾ ಸ್ಪರ್ಧೆಗಳಿಂದ ಕನ್ನಡ ಕಲರವ ಬಳಗ ಹಾಗೂ ತೀರ್ಪುಗಾರರು ಮೆಚ್ಚಿದ ಟಾಪ್ 25 ಸ್ಪರ್ಧಿಗಳ ಪಟ್ಟಿ :
(ಯಾವುದೇ ಅನುಕ್ರಮಣಿಕೆ ಇರುವುದಿಲ್ಲ)

ರಾಜಶ್ರೀ ದ. ಕ
ಮಮತ ಸಿ ಬೆಂಗಳೂರು
ಶಿವಪ್ರಸಾದ್ ಪಿ ಮಂಡಿ
ಗಣೇಶ್ ಪಿ ಎಸ್
ವೀಣಾ ಪಿ ದಾವಣಗೆರೆ
ಚೇತನ ಸಿ ಎಸ್ ತುಮಕೂರು
ಅವಿನಾಶ್ ಕೆ
ಸುಹಾಸ್ ಚವ್ಹಾಣ
ಮೋಹನ ವಿ ಹೊಸೂರ
ದೀಕ್ಷಿತ್ ಕುಮಾರ್ ಕೆ ಎಂ
ಪ್ರದೀಪ್ ಕೇಶವ
ಫಕ್ಕೀರೇಶ ಜಾಡರ
ಚೈತ್ರ ಬಿ ಎನ್
ಮದನ್ ಕುಮಾರ ಮಂಡ್ಯ
ಪ್ರಸಾದ್ ನಿಡಸಾಲೆ
ಚಂದನ್ ಕೃಷ್ಣ
ಪ್ರೇಮಾವತಿ ಕೆ ಭಟ್
ಬಸವರಾಜು ಹೊನಗೌಡರ
ಡಾ. ಪ್ರಕಾಶ ಬಾರ್ಕಿ
ದೀಪಾ ಆರ್ ಎಂ
ಸುಜಲಾ ವಿನಾಯಕ ಹೆಗಡೆ
ಭಾಗ್ಯ ನಂಜುಂಡಸ್ವಾಮಿ
ಗಿರೀಶ್ ವೈ ಬೆಂಗಳೂರು
ಮಾನಸ ವಿಜಯ್ ಕೈಂತಜೆ
ಮೇಧಾ ಎಂ ಕೆ



ಈ ಮೇಲ್ಕಂಡ 25 ಜನಲಿಗೆ ದೃಢೀಕೃತ ಈ ಪ್ರಮಾಣ ಪತ್ರಗಳನ್ನು ಗೂಗಲ್ ಡ್ರೈವ್ ಮೂಲಕ ಹಾಗೂ ವಿಜೇತರಿಗೆ ಪುಸ್ತಕ ಬಹುಮಾನಗಳನ್ನು ಅಂಚೆ ಮೂಲಕ ಕಳಿಸಿಕೊಡಲಾಗುವುದು. ವಿಜೇತರು ಈ ಕೂಡಲೆ ತಮ್ಮ ಅಂಚೆ ವಿಳಾಸ ಹಾಗೂ ತಮ್ಮ ವಿಜೇತ ಸ್ವರಚಿತ ಕವನಗಳು (ಟೈಪ್ ಮಾಡಿ ಕಳಿಸಬೇಕು) ಮತ್ತು ನ್ಯಾನೋಕಥೆಗಳನ್ನು avvapustakaalaya@gmail.com ಗೆ ಈ ಕೂಡಲೆ ಕಳಿಸಿಕೊಡಿ.


ಎಲ್ಲರಿಗೂ ಶುಭವಾಗಲಿ..💐
ಅನಂತ ಕುಣಿಗಲ್
ಸಂಸ್ಥಾಪಕ ಅಧ್ಯಕ್ಷ, ಕನ್ನಡ ಕಲರವ

ಹೆಚ್ಚಿನ ಕನ್ನಡ ಸಾಹಿತ್ಯ ಸ್ಪರ್ಧೆಗಳಿಗಾಗಿ ನಮ್ಮ ಫೇಸ್ಬುಕ್ ತಂಡ ಸೇರಲು ಇಲ್ಲಿ ಕ್ಲಿಕ್ ಮಾಡಿ.
https://www.facebook.com/groups/3344469948953030/?ref=share

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಯಾರ ಸ್ವಾತಂತ್ರ್ಯ? - ಕವಿತೆ - ಚಂದ್ರಪ್ಪ ಬೆಲವತ್ತ

ಯಾರ ಸ್ವಾತಂತ್ರ್ಯ ? ಬಂತಪ್ಪ ಸ್ವಾತಂತ್ರ್ಯ  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  47ರ  ಮಧ್ಯ ರಾತ್ರಿಯ ಸ್ವಾತಂತ್ರ್ಯ  ಭೂಮಿ ನುಂಗುವರ ಪಾಲಿಗೆ ಬಂತು ಅನುದಾನ ತಿನ್ನುವರ ನಾಲ್ಗೆಗೆ  ಬಂತು ಸುಳ್ಳು ಬುರುಕರ ಪಾಲಿಗೆ ಬಂತು  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  ಕಾಳ ಧನಿಕರ ಜೇಬಿಗೆ ಬಂತು  ಬಡವರ ಕೊರಳಿಗೆ ಉರುಳೆ ಆಯ್ತು  ಹೆಣ್ಣು ಮಕ್ಕಳ ಕಣ್ಣೀರಾಯ್ತು  47ರ ಸ್ವಾತಂತ್ರ್ಯ ಮಧ್ಯರಾತ್ರಿಯ ಸ್ವಾತಂತ್ರ್ಯ  ಧರ್ಮಗಳ ನಡುವಿನ ಕಂದರವಾಯ್ತು ಜಾತಿಯ ಆಳದ ಬೇರು ಬಿಟ್ಟಾಯ್ತು  ಮಾನವ ಧರ್ಮವ ಮರೆಯಿಸಿ ಬಿಟ್ಟಿತು  ಆಗಷ್ಟ್ 15ರ ಸ್ವಾತಂತ್ರ್ಯ  ಸಮಾನ ಆರೋಗ್ಯ ತರಲೇ ಇಲ್ಲ  ಸಮಾನ ಶಿಕ್ಷಣ ಕೊಡಿಸಲೇ ಇಲ್ಲ  ಸಮಾನ ಸಂಪತ್ತು ಹಂಚಲೇ ಇಲ್ಲ  47ರ ಮಧ್ಯರಾತ್ರಿಯ ಸ್ವಾತಂತ್ರ್ಯ  ಜಾತಿಯ ಸೋಂಕು ತೊಲಗಲೇ ಇಲ್ಲ  ಅಸಮಾನತೆಯ ನೀಗಿಸಲಿಲ್ಲ  ಹಸಿದವರತ್ತ ಸರಿಯಲೂ ಇಲ್ಲ  ಆಗಷ್ಟ್ 15ರ ಸ್ವಾತಂತ್ರ್ಯ  ಸುಳ್ಳು ಬುರುಕರ ಪಾಲಿಗೆ ಬಂತೆ  ಕೋಮುವಾದಿಗಳ ಬಾಯಿಗೆ ಬಂತೆ ರಿವಾಜು ದಿಕ್ಕರಿಸುವವರ ಜೊತೆಗೆ ಇತ್ತೇ  47ರ ಸ್ವಾತಂತ್ರ್ಯ  ಕಾಲಿನ ಕೋಳವು ಮುರಿಯಲು ಇಲ್ಲ ಜೀತದ ದುಡಿಮೆಯು ನಿಲ್ಲಲೇ ಇಲ್ಲ  ದಣಿಗಳ  ದನಿಯು ಕುಗ್ಗಲೇ ಇಲ್ಲ  ಬಡವನ ಬವಣೆ  ತಗ್ಗಿಸಲಿಲ್ಲ  47ರ ಸ್ವಾತ...