'ಕನ್ನಡ ಕಲರವ' ಸಾಹಿತ್ಯ ತಂಡವು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಉಚಿತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅವುಗಳಲ್ಲಿ ವಿಜೇತ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದುಕೊಂಡ ಕವನ ವಾಚನ ಸ್ಪರ್ಧೆಯ ಕವನಗಳು ಓದುಗರಿಗಾಗಿ..
ಪ್ರಥಮ ಬಹುಮಾನಿತ ಕವನ : ಕಣ್ಣಾಮುಚ್ಚೆ ಕಾಡೇಗೂಡೇ..
ಲೇಖಕರು : ವಿಕ್ರಮ್ ಬಿ ಕೆ
"ಒಮ್ಮೆ ಗರ್ಭಗುಡಿಯ ಸುತ್ತ
ಮತ್ತೆ ಗೋರಿಗಳ ಸುತ್ತ
ಮನೆಯವರ ಸುತ್ತ
ಎರಡು ಮನಸ್ಸುಗಳ ಮಧ್ಯ
ಕಟ್ಟುವೆವು ನಾವು ಗೋಡೆಗಳು!
ಹಾರಿಬಂದ ಕಳ್ಳರೆಷ್ಟೋ,
ದೀಪವಚ್ಚಿ ಮಾತಾಡಿದವರೆಷ್ಟೋ,
ಕದ್ದು ಕದ್ದು ಕೇಳಿದವರಿನ್ನೆಷ್ಟೋ,
ಏಕಾಂತ ಬಯಸಿ ಬಂದವರ,
ಏಕಾಂಗಿಯಾಗಿಸಿದ
ಆ ನಾಲ್ಕು ಗೋಡೆಗಳು!
ಅವಳು ನರಳುವ,
ಬೆಳಕಿನ ರಾತ್ರಿಗಳು
ಅವನು ಕಾಯುವ
ಅಧಿಕಾರದ ಕ್ಷಣಗಳು
ನಗ್ನತೆಯನ್ನ - ಮುಚ್ಚಿಡುವ
ಸಂಪ್ರದಾಯದ ಗಟ್ಟಿ ಗೋಡೆಗಳು!
ಸಾಲಗಳಿಗೆ ಸಾಕ್ಷಿಯಾಗಿ
ನೆನಪಿನ ಚಿತ್ರಗಳ ಹೊತ್ತಿಕೊಂಡು
ಬಣ್ಣ ಬದಲಿಸಿಕೊಳ್ಳುವ,
ಒಂಟಿ ಗಡಿಯಾರದ ಒಳ್ಳೆ ಗೆಳೆಯನಾಗಿ
ಉಳಿದು - ಬೆಳೆದು - ಕಳೆದು ಹೋಗುವ ಗೋಡೆಗಳು !"
ವಾಚನದ ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ :
ದ್ವಿತೀಯ ಬಹುಮಾನಿತ ಕವನ : ವಿವಾಹ ವಿಚ್ಚೇದನವೆಂಬ ಗೆರೆ
ಲೇಖಕರು : ಸಂಗೀತ ಹೆಚ್ ಆರ್
"ನ್ಯಾಯ ದೇವತೆಯ ಕಣ್ಪಟ್ಟಿ ಒದ್ದೆಯಾಗಿದೆ
ಕರುಳು ಚುರುಕ್ ಎನಿಸುವ ಕಂದನ ಕೂಗಿಗೆ
ನನಗಿಬ್ಬರೂ ಬೇಕೆಂಬ ಆಕ್ರಂದನ ಬಡಿದು ಗೋಡೆಗೆ
ಅಲ್ಲಿದ್ದವರ ಕಂಗಳಲಿ ನೀರಾಗಿ ಹರಿದಿದೆ
ಹಾಸ್ಟೆಲ್ ನಲ್ಲಿ ಆಟ, ಪಾಠ, ಊಟ ಬಗೆ ಬಗೆ
ಮೂಲೆಯಲಿ ಕೂತು ಬಿಕ್ಕಳಿಸುತಿದೆ ಮನಸು ಯಾವುದಕ್ಕೂ ಸಹಕರಿಸಿದೆ
ಪ್ರಿಯ ನಾಯಿಗಿಂದಿನಿಂದ ಊಟವಿಲ್ಲವೆಂಬ ಬೇಸರದ ಜೊತೆಗೆ
ಪುಟ್ಟ ತಮ್ಮ ಯಾರೊಂದಿಗಿಹನೋ ಎಂಬ ಆತಂಕವೂ ಇದೆ
ಸ್ನೇಹಿತರ, ಶಿಕ್ಷಕರ ಯಾವುದೇ ಮಾತಿಗೆ
ಕಣ್ಣೀರಲ್ಲದೆ ಬೇರೆ ಉತ್ತರವೆಲ್ಲಿದೆ
ಮರುಗುತಿವೆ ಪ್ರತಿ ಮನಸುಗಳು ಕಂದನ ನೋವಿಗೆ
ಕರಗದವರು ಅವರಿಬ್ಬರೇ, ಪ್ರೀತಿಯ ತಾಯಿ - ತಂದೆ
ಸ್ವಾರ್ಥವೆಂಬ ಚಾಕುವಿನಿಂದ ಇರಿದು ಮುದ್ದು ಕಂದನಿಗೆ
ನಿಷ್ಕರುಣೆಯಿಂದ ಭಾವನೆಗಳ ಬಲಿ ತೆಗೆದುಕೊಂಡಾಗಿದೆ
ಧಿಕ್ಕಾರವಿರಲಿ ಸವಿ ಬಾಲ್ಯವನು ನರಕವಾಗಿಸಿದ ಅನೀತಿಗೆ
ಮುಗ್ಧ ಪ್ರೀತಿಯನು ನಿರಾಕರಿಸಿದ ವಿಚ್ಛೇದನವೆಂಬೀ ಕ್ರೂರತೆಗೆ"
ವಾಚನದ ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ :
ತೃತೀಯ ಬಹುಮಾನಿತ ಕವನ : ವ್ಯಾಘ್ರಗಳ ನಡುವೆ ಕುರಿ
ಲೇಖಕರು : ರಾಘವೇಂದ್ರ ಈ ಹೋರಬೈಲು
"ಅಮಲೇರಿದ ಜಗ
ಮಾರಿಕೊಂಡ ಮನಸು
ಕಳೆದುಹೋದ ಸೊಗಸು
ಮಾನವೀಯತೆ ಮರೀಚಿಕೆ
ಕುಂಕುಮದ ಬೆಲೆಗೆ ನೆತ್ತರು
ಬೆವರಿಗೆ ಶೂನ್ಯ ಬೆಲೆ
ಸುಳ್ಳಿಗೆ ಸಾವಿರ ಕಾಲು ಲಕ್ಷ ನೆಂಟರು
ಒಂಟಿ ಕಾಲಲಿ ಕುಂಟುತ್ತಿರುವ ಒಂಟಿ ಸತ್ಯ
ಗೆದ್ದಲು ಹುಳುಗಳ ನಡುವೆ ಮತಿ
ದ್ವೇಷದಿಂದ ದ್ವೇಷ ಗೆಲುವ ಹುಂಬತನ
ನೆತ್ತರು ನೆತ್ತರ ತೊಳೆದಂತೆ
ಮಿತ್ರತನದ ಮುಖವಾಡ ಹೊದ್ದು ತಿರುಗುವ ವ್ಯಾಘ್ರ
ಕುರಿತನದ ಕತ್ತು ಕೊಯ್ಯಲು
ಭಾರೀ ಕತ್ತಿಗಳ ಮಸೆತ
ವ್ಯಾಘ್ರದ ಸಹವಾಸ ಸಾಕು ಸಾಕು
ಕುರಿತನಕೆ ಉಳಿವಿಲ್ಲ
ವ್ಯಾಘ್ರ ಕಾದಿದೆ ಕುರಿ ಬಲಿಗೆ
ತಪ್ಪಿಸಿಕೊಳ್ಳೋ ಮಾರ್ಗವಾವುದೋ
ತಿಳಿಯದ ಕುರಿ ಕಂಗಾಲು
ಕುರಿಯೂ ಬದುಕಬೇಕು ದಾರಿಯಿಲ್ಲ"
ಮಾರಿಕೊಂಡ ಮನಸು
ಕಳೆದುಹೋದ ಸೊಗಸು
ಮಾನವೀಯತೆ ಮರೀಚಿಕೆ
ಕುಂಕುಮದ ಬೆಲೆಗೆ ನೆತ್ತರು
ಬೆವರಿಗೆ ಶೂನ್ಯ ಬೆಲೆ
ಸುಳ್ಳಿಗೆ ಸಾವಿರ ಕಾಲು ಲಕ್ಷ ನೆಂಟರು
ಒಂಟಿ ಕಾಲಲಿ ಕುಂಟುತ್ತಿರುವ ಒಂಟಿ ಸತ್ಯ
ಗೆದ್ದಲು ಹುಳುಗಳ ನಡುವೆ ಮತಿ
ದ್ವೇಷದಿಂದ ದ್ವೇಷ ಗೆಲುವ ಹುಂಬತನ
ನೆತ್ತರು ನೆತ್ತರ ತೊಳೆದಂತೆ
ಮಿತ್ರತನದ ಮುಖವಾಡ ಹೊದ್ದು ತಿರುಗುವ ವ್ಯಾಘ್ರ
ಕುರಿತನದ ಕತ್ತು ಕೊಯ್ಯಲು
ಭಾರೀ ಕತ್ತಿಗಳ ಮಸೆತ
ವ್ಯಾಘ್ರದ ಸಹವಾಸ ಸಾಕು ಸಾಕು
ಕುರಿತನಕೆ ಉಳಿವಿಲ್ಲ
ವ್ಯಾಘ್ರ ಕಾದಿದೆ ಕುರಿ ಬಲಿಗೆ
ತಪ್ಪಿಸಿಕೊಳ್ಳೋ ಮಾರ್ಗವಾವುದೋ
ತಿಳಿಯದ ಕುರಿ ಕಂಗಾಲು
ಕುರಿಯೂ ಬದುಕಬೇಕು ದಾರಿಯಿಲ್ಲ"
ವಾಚನದ ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ :
ಧನ್ಯವಾದಗಳು..💐
- ಅನಂತ ಕುಣಿಗಲ್
ಅಧ್ಯಕ್ಷರು, ಕನ್ನಡ ಕಲರವ
ನಮ್ಮ ತಂಡ ಸೇರಲು ಇಲ್ಲಿ ಕ್ಲಿಕ್ ಮಾಡಿ :
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ