ವಿಷಯಕ್ಕೆ ಹೋಗಿ

ಯುವಬರಹಗಾರ ಗಮನಕ್ಕೆ.. - ಅನಂತ ಕುಣಿಗಲ್


"ಜ್ಞಾನ ಸಂಪಾದಿಸಿಕೊಳ್ಳದ ಹೊರತು
ನಿಮ್ಮಿಂದ ಸೃಜನಶೀಲತೆ ಹರಹೊಮ್ಮಲು ಸಾಧ್ಯವೇ ಇಲ್ಲ!!"


ಇತ್ತೀಚಿನ ಯುವಬರಹಗಾರರು ಹಾದಿ ತಪ್ಪುವ ವಿಷಯವಾಗಿ ಈ ಸಾಲುಗಳನ್ನು ಹೇಳಬೇಕಾಯ್ತು.

ಯಾವುದೋ ಒಂದು ಘಟನೆಯಿಂದಲೇ ಪ್ರೇರೇಪಿತರಾಗಿ ಬರೆದ ಎಲ್ಲವನ್ನೂ ಪುಸ್ತಕ ಮಾಡಿಸಬೇಕು. ಫೇಸ್ಬುಕ್, ವಾಟ್ಸಪ್ ಗೆಳೆಯರು ಕೊಂಡು ಓದುತ್ತಾರೆ. ಎಂಬ ಜೊಳ್ಳು ನಿರೀಕ್ಷೆಯಿಂದ ಮೌಲ್ಯಯುತವಲ್ಲದ ಬರಹಗಳನ್ನು ಕೂಡಿಸಿಕೊಂಡು ಪ್ರಕಾಶಕರ ಬಳಿ ಹೋಗುತ್ತಾರೆ. ಅಲ್ಲಿ ಮುಖಭಂಗ ನಡೆದ ನಂತರ ವಾಪಾಸ್ಸಾಗಿ ಸಾಹಿತ್ಯದ ಘಮಲಿನಿಂದ ದೂರವೇ ಉಳಿದುಬಿಡುತ್ತಾರೆ.

ಪ್ರಕಾಶಕರು ನಿಮ್ಮ ಪುಸ್ತಕ ಪ್ರಕಟಿಸಬೇಕೆಂದರೆ, ನಿಮ್ಮ ಬರಹಗಳಲ್ಲಿ ಮೌಲ್ಯಯುತ ಅಂಶಗಳಿರಬೇಕು. ಭಾಷಾಶುದ್ಧಿ ಇರುಬೇಕು. ಮತ್ತು ನೀವು ಕೆಲವರಿಗಾದರೂ ಪರಿಚಯವಿರಬೇಕು (ಅಂದರೆ, ನಿಮ್ಮ ಪುಸ್ತಕಗಳನ್ನು ಕೊಳ್ಳುವ ಜನರಿರಬೇಕು).
ಅಥವಾ, ಪ್ರಕಟ ಮಾಡಲು ಹಣ ಕೊಟ್ಟು, ಪ್ರಕಟಿಸಿದ ಪುಸ್ತಕಗಳನ್ನು ನೀವೇ ಕೊಂಡುಕೊಳ್ಳಬೇಕು.

ಎರಡೂ ವಿಷಯಗಳು ನಿಮ್ಮ ನೆಮ್ಮದಿಗೆ ಪೂರಕವಾಗಿರುವುದಿಲ್ಲ. ಹಾಗಾಗಿ ಹೆಚ್ಚೆಚ್ಚು ಓದಿ, ನಿಮ್ಮ ಬರಹಗಳನ್ನು ಗೆಳೆಯರಿಂದಲೇ ತಿದ್ದುಪಡಿ ಮಾಡಿಸಿ, ನೀವೇ ಸ್ವಂತ ಪ್ರಕಟಿಸಿ. ಮೊದಲ ಪ್ರಕಟಣೆಯ ಫಲವೇ ನಿಮ್ಮ ಮುಂದಿನ ಪ್ರಯತ್ನಕ್ಕೆ ನಾಂದಿಯಾಗಬಹುದು. ಅಥವಾ ಆಗದೇ ಇರಬಹುದು. ಆಗದಿದ್ದರೆ ಇನ್ನಷ್ಟು ಓದಿ ನಂತರ ಬರೆಯಿರಿ..
ಈಗಾಗಲೇ ಬರೆದಿದ್ದನ್ನು ಬಿಟ್ಟು ಹೊಸತನ್ನು ಹುಡುಕಿ. ಹೊಸತು ಸಿಗುವವರೆಗೂ ಬರೆಯಲು ಮುಂದಾಗಬೇಡಿ. ಬರೆದಿದ್ದನ್ನು ಸ್ವಲ್ಪ ಸ್ವಲ್ಪವೇ ಸಾಮಾಜಿಕ ಜಾಲತಾಣಗಳಲ್ಲಿ, ಲೋಕಲ್ ಪತ್ರಿಕೆಗಳಲ್ಲಿ ಹಾಗೂ ಬ್ಲಾಗ್ ಗಳಲ್ಲಿ ಪ್ರಕಟಿಸಿ. ಪ್ರತ್ಯುತ್ತರವನ್ನು ಕಂಡುಕೊಂಡು ನಂತರ ಮುಂದುವರೆಯಿರಿ.

ಒಂದು ತಿಳಿಯಿರಿ, ಈ ಯೋಜನೆಯಲ್ಲಿ ಎಷ್ಟು ಉಷಾರಾಗಿರ್ತೀವೋ ಅಷ್ಟು ಒಳ್ಳೆಯದು. ನೀವೇ ಪ್ರಕಟಿಸುವುದರಿಂದ. ಅದರ ಏಳು-ಬೀಳುಗಳು ನಿಮ್ಮದೇ ಆಗಿರುತ್ತವೆ. ನಿಮ್ಮ ಬರಹಗಳ ಮೇಲೆ ನಿಮಗೆ ನಂಬಿಕೆ ಬರುವವರೆಗೂ ಯಾವುದಕ್ಕೂ ಹಾತೊರೆಯಬೇಡಿ. ಎಲ್ಲದರೊಳಗೆ ಆಳವಾಗಿ ಹೋಗಿ ಬನ್ನಿ.. ಸಾಹಿತ್ಯದೊಳಗೂ ಕೂಡ..

ಇದಿಷ್ಟು ನನ್ನ ಸ್ವ-ಅನುಭವಕ್ಕೆ ಬಂದದ್ದು. ಇದರಿಂದ ಯಾರೂ ನನ್ನ ಟಾರ್ಗೆಟ್ ಅಲ್ಲ. ವಿಷಯ ತಿಳಿಸುವುದಷ್ಟೇ ನನ್ನ ಕೆಲಸ. 'ನೀವು ಬೇರೆಯವರ ಪುಸ್ತಕಗಳನ್ನು ಕೊಂಡು ಓದದ ಹೊರತು, ನಿಮ್ಮ ಪುಸ್ತಕಗಳನ್ನು ಅದ್ಯಾರು ಓದುತ್ತಾರೋ ನನಗಂತೂ ತಿಳಿದಿಲ್ಲ.'

ನೀವು perfect ಆಗುವವರೆಗೂ..
"ಆ paperನವರ ನಂಬರ್ ಕೊಡಿ. ಪ್ರಕಾಶನ ಹೇಗೆ ಮಾಡುವುದು. ಸಾವಿರ ಕವನಗಳನ್ನು ಬರೆದಿದ್ದೇನೆ. ಪುಸ್ತಕ ಮಾಡಿಸ್ತೀನಿ ಮುನ್ನುಡಿ ಬರ್ಕೊಡಿ."
ಈ ಯಾವ ಕೊರಗುತನವೂ ನಿಮ್ಮ ಕೈ-ಹಿಡಿಯುವುದಿಲ್ಲ.

ಎಲ್ಲರಿಗೂ ಶುಭವಾಗಲಿ..
ನಮ್ಮ ತಂಡ ಸೇರಲು ಇಲ್ಲಿ ಕ್ಲಿಕ್ ಮಾಡಿ..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...