ವಿಷಯಕ್ಕೆ ಹೋಗಿ

ಪುಸ್ತಕ ಮಾಡಿಸುವವರಿಗೆ ಮಾರ್ಗಸೂಚಿ - ಸೋನು ಸೌಮ್ಯ, ಯುವ ಕಾದಂಬರಿಗಾರ್ತಿ


ಪುಸ್ತಕ ಪ್ರಕಟಿಸುವ ಮುನ್ನ ಈ ಅಂಶಗಳನ್ನು ತಿಳಿಯಿರಿ

ನೀವು ಪುಸ್ತಕ ಹೊರತರಬೇಕೆಂದಿದ್ದೀರೆ? ಹಾಗಾದರೆ ಈ ವಿವರಗಳನ್ನು ನೋಡಿ..

ಪುಸ್ತಕವೆಂಬುದು ಕೇವಲ ಕಾಗದಗಳಿಂದ ಕೂಡಿದ್ದಲ್ಲ. ಬದಲಿಗೆ ಪ್ರತಿಯೊಬ್ಬ ಬರಹಗಾರರ ಭಾವನೆಯ ಸಮಾಗಮವೇ ಈ ಪುಸ್ತಕ. ಆ ಪುಸ್ತಕ ಮತ್ತೊಬ್ಬರ ಮಸ್ತಕಕ್ಕೆ ಸೇರಿ ಒಂದೊಳ್ಳೆ ಅನಿಸಿಕೆ, ಅಭಿಪ್ರಾಯ ಬಂದಾಗ ಪ್ರತಿಯೊಬ್ಬ ಬರಹಗಾರನಿಗೂ ಆಗುವ ಸಂತೋಷವಿದೆಯಲ್ಲಾ.. ಅದನ್ನು ಬರಹದಲ್ಲಿ ಹೇಳಿ ವ್ಯಕ್ತ ಪಡಿಸಲಾಗದು. ಹಾಗೆಯೇ ಒಂದು ಪುಸ್ತಕ ಹೊರತರುವುದು ಸುಲಭವೇ ಎಂದು ನೋಡಿದಾಗ ಅದೆಷ್ಟೋ ಬರಹಗಾರರು ಹೇಳುವುದು "ಇಲ್ಲ ರೀ ತುಂಬಾ ಕಷ್ಟ, ಆಗಲ್ಲ.. ಹಾಕಿರೋ ಬಂಡವಾಳವೂ ಕೈಗೆ ಸಿಗಲ್ಲ. ಪುಸ್ತಕ ಮಾರಾಟವೂ ಆಗಲ್ಲ" ಅಂತ. 

ಪುಸ್ತಕ ಮಾರಾಟ ಯಾಕಾಗಲ್ಲ? ಎಂಬುವ ಪ್ರಶ್ನೆಯನ್ನು ಸಧ್ಯಕ್ಕೆ ಪಕ್ಕಕ್ಕಿಟ್ಟು ನಿಮ್ಮ ಹಣ ಯಾಕೆ ವಾಪಸ್ ಬರಲ್ಲ ಎಂದು ನೋಡೋಣ. ಅದಕ್ಕೂ ಮುಂಚೆ ಯಾರ ಬಳಿಯಾದರೂ ನೀವು ಹೋಗಿ ಪುಸ್ತಕ ಮಾಡ್ದೆ ಮಾರಾಟವೇ ಆಗಿಲ್ಲ ಲಾಸ್ ಆಯಿತು ಗುರು ಅಂದ್ರೆ.. "ನೀನು ಆತ್ಮತೃಪ್ತಿಗಾಗಿ ಬರೆದ್ಯ? ಅಥವಾ ಹಣಕ್ಕಾಗಿ ಬರೆದ್ಯ? ನೀನು ಸಾಹಿತ್ಯ ಮಾರಾಟ ಮಾಡ್ತೀಯ? " ಎಂದು ಕೇಳಿ ತರಾಟೆಗೆ ಎಳೆಯುವವರೂ ಇದ್ದಾರೆ ಅಲ್ಲವೇ? 

ಈಗ ನನ್ನ ಸ್ವಂತ ಅನುಭವ ನಿಮಗೆ ಹೇಳ್ತೀನಿ. ಇತ್ತೀಚೆಗಷ್ಟೇ ಅದೂ ಕೊರೋನ ಮೊದಲ ಲಾಕ್ಡೌನ್ ಮುಗಿದು ಜನ ಆಗಷ್ಟೆ ಮೊದಲಿಂದ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದ ಅದೇ ಸಂದರ್ಭದಲ್ಲಿ ಒಂದು ಕಾದಂಬರಿ ನನ್ನದೇ ಸ್ವಂತ ವೆಚ್ಛದಿಂದ ಮುದ್ರಿಸಿದೆ. 228 ಪುಟಗಳ ಕಾದಂಬರಿ ಡಿಟಿಪಿ, ಲೇಔಟ್ ಸೆಟ್ಟಿಂಗ್, ಕವರ್ ಪೇಜ್, ಐಎಸ್‌ಬಿ‌ಎನ್ ಕೋಡ್, ಎಲ್ಲವೂ ಸೇರಿಸಿ 500 ಪ್ರತಿಗಳಿಗೆ ನಾನು ಭರಿಸಿದ ವೆಚ್ಛ 32000₹. ಹೀಗೆ ಪುಸ್ತಕ ಕೈ ತಲುಪಿದ ಒಂದೇ ವಾರದಲ್ಲಿ 150 ಪುಸ್ತಕ ಮಾರಾಟ ಆಯ್ತು. ಕೆಲವೊಬ್ಬರು ಹಣ ಕೊಡ್ತಾರೆ ಕೆಲವೊಬ್ಬರು ಮೋಸ ಮಾಡ್ತಾರೆ. ಹಾಗೆ ಹೀಗೆ ನನಗೆ ಒಂದು ತಿಂಗಳಲ್ಲಿ 27000₹ ಪುಸ್ತಕದ ಹಣ ಬಂತು. ಈಗ 5000₹ ಅಷ್ಟೆ ನನಗೆ ಬೇಕಾಗಿರೋದು ಅಲ್ವೇ ನಾನು ಹೂಡಿದ ಬಂಡವಾಳ ನನ್ನ ಕೈ ಸೇರಲು. ಪುಸ್ತಕವನ್ನು ಸಾರ್ವಜನಿಕ ಗ್ರಂಥಾಲಯ ಸಾಮ್ಯದಡಿ ಕಾಪಿರೈಟ್ ಮಾಡಿಸಿ ಎಸ್.ಸಿ ಪಿ/ಟಿ.ಸಿ.ಪಿ  ಮತ್ತು ಏಕಗವಾಕ್ಷಿ  ಅಡಿ ನೀವು ಪುಸ್ತಕ ಆಯ್ಕೆಗೆ ಅರ್ಜಿ ಹಾಕಬಹುದು. 

ನಾನು ಈ ರೀತಿ ಅರ್ಜಿ ಹಾಕಿ ಈಗ ಎಸ್.ಸಿ.ಪಿ/ಟಿ.ಸಿ.ಪಿ ಅಡಿ ಆಯ್ಕೆ ಆಗಿ ಒಟ್ಅಟು 80 ಪುಸ್ತಕಗಳನ್ನು ಕೊಂಡರು. ರೂ 17,500₹ ಬಂತು. ಅಲ್ಲಿಗೆ ಮಾರಾಟ ಆಗಿ ಬಂದದ್ದು 27000₹ ಮತ್ತು ಸಾರ್ವಜನಿಕ ಲೈಬ್ರರಿ ಇಂದ ಈ ಮೊತ್ತ ಸೇರಿಸಿ ಅಸಲಿನ ಜೊತೆಜೊತೆಗೆ ಸ್ವಲ್ಪ ಲಾಭವೂ ಬಂದಿದೆ. ಈಗ ಹೇಳಿ ನಾವು ಹಾಕಿದ ಬಂಡವಾಳ ನಮಗೆ ವಾಪಸ್ ಬರುವುದಿಲ್ಲವೇ? 

ಈ ರೀತಿ ಇನ್ನುಳಿದ 250 ಪುಸ್ತಕಗಳನ್ನು ನಾನು ಕೆಲವು ಸಾಹಿತ್ಯ ಸಂಘ ಸಂಸ್ಥೆಗಳಿಗೆ ಕಾರ್ಯಕ್ರಮದಲ್ಲಿ ಹಂಚಲು ಉಚಿತವಾಗಿ ಪುಸ್ತಕವನ್ನು ಕೊಟ್ಟು, ಪರಿಚಿತರು ಮತ್ತು ಆತ್ಮೀಯರು ಹೀಗೆ ಎಲ್ಲರಿಗೂ ಪುಸ್ತಕ ಹಂಚಿ ನನ್ನ ಬಳಿ ಇನ್ನೊ ಐವತ್ತು ಪುಸ್ತಕ ಉಳಿಸಿಕೊಂಡಿದ್ದೇನೆ. 

ಪುಸ್ತಕ ಮಾರಾಟವೂ ಆಯಿತು. ನನ್ನ ಹೂಡಿಕೆಯೂ ವಾಪಸ್ ಬಂತು. ಪುಸ್ತಕ ಓದುಗರ ಮನೆ ಮನವನ್ನೂ ತಲುಪಿತು. ಇದೇ ನೀವು ಪ್ರಕಾಶಕರಿಗೆ ಕೊಟ್ಟು ಮಾಡಿಸಿದ್ದರೇ ಖಂಡಿತ ನಿಮಗೆ ಲಾಭವಲ್ಲ ನೀವು ಹೂಡಿದ ಬಂಡವಾಳವೂ ಸಿಗುವುದು ಕಷ್ಟ. ಹಾಗಾಗಿ ಹಲವಾರು ಕಡೆ ವಿಚಾರಿಸಿ ಪುಸ್ತಕ ಮುದ್ರಣಕ್ಕೆ ಕೈ ಹಾಕಿ. 

ಅದೆಷ್ಟೋ ಪ್ರಕಾಶಕರು ಮುಗ್ಧರಿಗೆ ಮೋಸ ಮಾಡುವುದುಂಟು. ನಾಲ್ಕಾರು ಕಡೆ ವಿಚಾರಿಸಿ ಕಷ್ಟವಾದರೂ ಸರಿ ನೀವೆ ಪುಸ್ತಕ ಹೊರತರಲು ಪ್ರಯತ್ನಿಸಿ. ಖಂಡಿತ ನಿಮಗೆ ಅದರಿಂದ ನಷ್ಟವಂತೂ ಆಗುವುದಿಲ್ಲ. ನಿಧಾನವಾದರೂ ಸರಿಯೇ ಲಾಭವೇ ಆಗುತ್ತದೆ. 

ಪುಸ್ತಕ ಹೊರತಂದರೆ ಸಾಲದು ಅದಕ್ಕೆ ಓದುಗರನ್ನು ಬಹುಮುಖ್ಯವಾಗಿ ಶೇಖರಿಸಬೇಕು. ನೀವೆ ಪುಸ್ತಕ ಹೊರತರುವುದರಿಂದ ನಿಮಗೆ ಲಾಭವೇ ಹೆಚ್ಚು. ಪ್ರಕಾಶಕರ ಮೂಲಕ ಹೋದರೇ ನಿಮಗೆ ಖಂಡಿತ ಪ್ರಯೋಜನಾವಾಗುವುದಿಲ್ಲ. 

ನಿಮ್ಮ ಪುಸ್ತಕ ಗೆಲ್ಲಬೇಕ? ಅದಕ್ಕೆ ಉತ್ತಮ ಬರಹ, ಸ್ವಲ್ಪ ಕಠಿಣ ಶ್ರಮ ಮತ್ತು ತಾಳ್ಮೆ ನಿಮ್ಮ ಜೊತೆಯಾಗಿಸಿಕೊಂಡು ಬಿಡಿ.

ಪುಸ್ತಕ ಮಾಡಿಸಲಾಗದೆ, ಸೋತು ಬೇಸರದಿಂದ ಕುಳಿತಿರುವ ಆಕಾಂಕ್ಷಿಗಳಿಗೆ ಇಲ್ಲೊಂದು ಅವಕಾಶವಿದೆ. ಓದಿಕೊಳ್ಳಿ..

ಸೋನು ಸೌಮ್ಯ
ಕಾದಂಬರಿಗಾರ್ತಿ

ಕಾಮೆಂಟ್‌ಗಳು

  1. Namaskara soumya madam, nan hesaru vinayak, nanu tumba dinadinda nanna pustakavannu publish madokke kasta padutiddeni, nim ee vakyagalu nijaku dairya tumbidavu, nimage abhyantravillade hodre, nanu nimage kelvond doubts kelaboude, nim oppige iddalli nan whatsapp ge nim hesarinda msg madi madam, thank you sister.

    ಪ್ರತ್ಯುತ್ತರಅಳಿಸಿ
  2. ನನ್ನ ಮೊಬೈಲ್ ನಂಬರ್ 7353689407 ಮಾಹಿತಿ ಬೇಕಿತ್ತು ಮೇಡಂ ನಮಸ್ಕಾರಗಳು ತಮ್ಮ ನಂಬರ್ ಕಳಿಸಿ ಧನ್ಯವಾದಗಳು ನನ್ನ ಶಿವಾನಂದ್ ಮರಿಯಪ್ಪ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...