ಪಟ್ಟುಹಿಡಿದು ಓದಿಸಿಕೊಳ್ಳುವ ರೋಚಕ ಕಾದಂಬರಿ ರೌದ್ರಾವರಣಂ ಆಪ್ತ ಗೆಳೆಯ ಅನಂತನ ಮೊದಲ ಕಾದಂಬರಿ “ರೌದ್ರವರಣಂ” ಕೃತಿಯು ಬಹಳ ಬೇಗ ಓದಿಸಿಕೊಳ್ಳುತ್ತದೆ. ಏಕೆಂದರೆ ಪ್ರತೀ ಅಧ್ಯಾಯಗಳಲ್ಲಿಯೂ ಕುತೂಹಲ ಮತ್ತು ರೋಚಕಭರಿತ ಪ್ರೇರಣೆಗಳು ಭರ್ಜರಿಯಾಗಿ ಇರುವುದರಿಂದ. ಸುನೀತವಾದ ಸ್ವಚ್ಛ, ಹಳ್ಳಿ ಸೊಗಡಿನ ಭಾಷೆ ಸುಲಲಿತವಾಗಿ ಆಸ್ವಾದಿಸಲಿಕ್ಕೆ ಸಹಾಯ ಮಾಡುತ್ತದೆ. ರೌದ್ರದ ಆವರಣ ಎಲ್ಲ ಪಾತ್ರಗಳಲ್ಲಿಯೂ ಬಹಳ ಆಚ್ಚುಕಟ್ಟಾಗಿ ಆಗಿದೆ. ಕೆಲವೊಮ್ಮೆ, ಕೌತುಕದ ಪತ್ತೇದಾರಿಯಲ್ಲಿ ಸಾಗುತ್ತಿರುವಂತೆ ಅನಿಸುತ್ತದೆ. ಅದನ್ನ ಪೋಷಿಸುವಂತೆ ತಕ್ಕ ಪ್ರೆಶ್ನೆಗಳು, ಗೊಂದಲಗಳು, ವಿಭಿನ್ನವಾದ ತಿರುವುಗಳು ಕೂಡ ಅಡಗಿವೆ. ಚಂದ್ರ(ನಾಯಿ)ನೆಂಬ ಭಾವ ಜೀವಿಯ ಸುತ್ತ ಭಾವನೆಗಳನ್ನು ಸೂಕ್ಷ್ಮವಾಗಿ ವ್ಯಕ್ತಪಡಿಸಬಲ್ಲ ಮನುಜ ಪಾತ್ರಗಳ ಚಿತ್ರಣ ಸಹಜವಾಗಿವೆ. ಸಹಜವಾಗಿ ಮನುಷ್ಯರನ್ನು ಆಕ್ರಮಿಸುವ ಅರಿಷಡ್ವರ್ಗಗಳು ಪಾತ್ರಗಳಲ್ಲಿ ನೈಜವಾಗಿ ತುಂಬಿದ್ದಾರೆ ಕಾದಂಬರಿಕಾರರು. ಅವಾಸ್ತವಿಕತೆಯನ್ನೇ ಹೆಚ್ಚು ನೆಚ್ಚಿಕೊಂಡಿರುವ ಮತ್ತು ಒಪ್ಪಿಕೊಂಡಿರುವ ಈ ಸಮಾಜದಲ್ಲಿ ವಾಸ್ತವ ಜೀವನವನ್ನು ಬಿಚ್ಚಿಡಲು ಹೆಚ್ಚಿಗೆ ಯಾರೂ ಇಷ್ಟಪಡುವುದಿಲ್ಲ. ಅವರವರ ಹವ್ಯಾಸ, ಯೋಚನೆಗಳು, ವ್ಯಕ್ತಿತ್ವಗಳದೂ ಅದೇ ಕಥೆ. ಇರುವುದೊಂದು, ಮಾಡುವುದೊಂದು, ಹೇಳುವುದೊಂದು, ತೋರ್ಪಡಿಸಿಕೊಳ್ಳುವುದು ಮತ್ತೊಂದು. ಬಾಬಣ್ಣನ ಹೊಟ್ಟೆಪಾಡಿಗೊಂದು ಕೆಲಸ (...
"ಓದುಗರಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸಲು ರೂಪುಗೊಂಡ ಡಿಜಿಟಲ್ ಲೈಬ್ರರಿ"