ಬದುಕು ಮಾಯೆಯ ಆಟ ಅಂದು ಸೋಮವಾರ. ಹಿರಿಮಗನ ಲಗ್ನ ನಿಶ್ಚಯದ ಮಾತುಕತೆಯ ಸಂಭ್ರಮ ಮನೆಯಲ್ಲಿ. ಬಂಧು ಬಾಂಧವರು ಸೇರಿದ್ದಾರೆ. ಹೆಣ್ಣಿನ ಕಡೆಯವರು ಬಂದಿದ್ದಾರೆ. ಮಾತುಕತೆ ನಡೆದು ಎಲ್ಲರೂ ಒಪ್ಪಿ ಮದುವೆ ನಿಶ್ಚಯವಾಗಿ ಲಗ್ನ ಪತ್ರಿಕೆಯೂ ಬರೆಸಿಬಿಡುತ್ತಾರೆ. ಮನೆಯಲ್ಲಿ ಖುಷಿಯ ವಾತಾವರಣದ ಅನುರಣನ. ಇದಾದ ಸರಿಯಾಗಿ ಒಂದುವಾರಕ್ಕೆ (ಅಂದೂ ಸೋಮವಾರ) ಕಿರಿಮಗ ಇದ್ದಕ್ಕಿದ್ದಂತೆ ಹುಷಾರು ತಪ್ಪುತ್ತಾನೆ. ಹಿರಿಮಗ ಮನೆಯಲ್ಲಿರುವುದಿಲ್ಲ, ಪ್ರವಾಸಕ್ಕೆ ಹೋಗಿದ್ದಾನೆ . ಮನೆಯಲ್ಲಿದ್ದ ತಂದೆ ತಾಯಿ ಮಾಮುಲಿ ಜ್ವರ ಇರಬೇಕೆಂದು ಮೊದಲಿಗೆ ಮಗನೆಡೆಗೆ ಅಷ್ಟು ಗಮನ ಹರಿಸುವುದಿಲ್ಲ. ಎರಡು ದಿನಗಳ ಬಳಿಕ ಮಗನಿಗೆ ವಾಂತಿಯಾದಾಗ ತಂದೆ ತಾಯಿಗೆ ಗಾಬರಿಯಾಗುತ್ತದೆ. ತತ್‍ಕ್ಷಣ ತಂದೆ ಡಾಕ್ಟರನ್ನು ಕರೆತರುತ್ತಾರೆ. ಅವರು ಔಷಧಿ ಕೊಟ್ಟು ಹೋಗುತ್ತಾರೆ. ಆದರೆ ವಾಂತಿ ನಿಲ್ಲುವುದಿಲ್ಲ. ತಂದೆ-ತಾಯಿಗೆ ಗಾಬರಿ. ಸಾಮಾನ್ಯವಾಗಿ, ಜ್ವರ ಬಂದಾಗಲೆಲ್ಲ ಹುಡುಗನ್ನ ಪರೀಕ್ಷಿಸುತ್ತಿದ್ದ ಪರಿಚಯದ ಡಾಕ್ಟರು ಸಹ ಆಗ ಊರಲ್ಲಿರುವುದಿಲ್ಲ. ಬಹುಶಃ ಈ ಡಾಕ್ಟರ್ ಕೊಟ್ಟ ಔಷಧಿ ಒಗ್ಗಲಿಲ್ಲ ಅನಿಸತ್ತೆ. ಪರಿಚಯದ ಡಾಕ್ಟರು ಬಂದ ಮೇಲೆ ತೋರಿ ಇನ್ನೊಮ್ಮೆ ಔಷಧಿ ಪಡೆದರಾಯಿತು ಅಷ್ಟರಲ್ಲಿ ಜ್ವರ ಕಡಿಮೆಯಾಗಬಹುದು ಎಂದು ತಂದೆ-ಮಗ ವಿಚಾರ ಮಾಡಿ, ತೀರ್ಮಾನಕ್ಕೆ ಬಂದು ಸುಮ್ಮನಾಗುತ್ತಾರೆ. ಪರಿಚಯದ ಡಾಕ್ಟರ್ ಬಂದ ಮೇಲೆ ಅವರ ಬಳಿ ಪರೀಕ್ಷಿಸಿಕೊಳ್ಳಲು ಹೋಗುತ್ತಾರೆ. ಡಾಕ್ಟರ್ ಪರೀಕ್ಷಿಸಿ...
"ಓದುಗರಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸಲು ರೂಪುಗೊಂಡ ಡಿಜಿಟಲ್ ಲೈಬ್ರರಿ"