ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನೀಲಿ ಚುಕ್ಕಿಯ ನೆರಳು - ಪುಸ್ತಕ ಪರಿಚಯ - ಮಧುರಾಣಿ ಎಚ್ ಎಸ್ | ಅನಂತ ಕುಣಿಗಲ್

" ಗುರುತಿರದ ಸುಳಿಯಲ್ಲಿ ಪ್ರೇಮವನ್ನು ಧ್ಯಾನಿಸುವ ಕವಿತೆಗಳು " ನನ್ನಮ್ಮನೇ ಆಗಿಹೋಗಿರುವ ಮಧುರಾಣಿ ಎಚ್ ಎಸ್ ಅವರ ಎರಡನೇ ಕವನ ಸಂಕಲನ ' ನೀಲಿ ಚುಕ್ಕಿಯ ನೆರಳು '. ಈ ಕೃತಿಯು ಆಯ್ದ ನಲವತ್ತು ಪದ್ಯಗಳ ಗುಚ್ಚ. ಇಲ್ಲಿನ ಹೆಚ್ಚು ಕವಿತೆಗಳು ಸ್ತ್ರೀಯ ಒಳಧ್ವನಿಯಿಂದ ರಚನವಾಗಿವೆ. ಕೃತಿಗೆ ' ಈ ಹೊತ್ತಿಗೆ ಮೊದಲ ಕಾವ್ಯ ಪ್ರಶಸ್ತಿ ' ಸಿಕ್ಕಿರುವುದು ಮತ್ತೊಂದು ಶ್ಲಾಘನೀಯ ಸಂಗತಿ. ಸ್ತ್ರೀಸಂವೇದನೆಗಳನ್ನೊಳಗೊಂಡ ಕವಿತೆಗಳನ್ನು ನಾವು ಹಿಂದಿನಿಂದಲೂ ಓದುತ್ತಾ ಬಂದಿದ್ದೇವೆ. ಅಂತಹದೇ ಒಂದು ವಿಭಿನ್ನ ಪ್ರಯತ್ನ ಈ 'ನೀಲಿ ಚುಕ್ಕಿಯ ನೆರಳು'. ಪ್ರತೀ ಪದ್ಯಗಳು ವೈವಿಧ್ಯಮಯ ದೃಷ್ಟಿಕೋನದಿಂದ ಕೂಡಿದ್ದು, ಅವುಗಳ ಆಳದೊಳಗೆ ಬಿದ್ದವರು ಮೇಲೇಳುವುದು ಕೊಂಚ ಕಷ್ಟವೇ! ರಚ್ಚೆ ಹಿಡಿಸುವಷ್ಟು ಚಮತ್ಕಾರಿಕೆ ಇಲ್ಲಿನ ಸಾಲುಗಳಲ್ಲಿ ಅಡಕವಾಗಿವೆ. ಮತ್ತು ಅಷ್ಟೇ ಆರ್ದ್ರತೆಯಿಂದ ಕೂಡಿವೆ. " ಕತ್ತಿಗಳು ಮೊಂಡುಬಿದ್ದು ನೆಲಕಚ್ಛಿದ ಇತಿಹಾಸವಿದೆ ಹೂವುಗಳು ಅನವರತ ಹುಟ್ಟುತ್ತಲೇ ಇವೆ " ಪ್ರಸ್ತುತ ಧೃತಿಕೆಟ್ಟ ಸಮಾಜಕ್ಕೆ ಇಂಥಾ ಧೈರ್ಯ ತುಂಬುವ ಸಾಲುಗಳು ಅತ್ಯಗತ್ಯ. ಶತಮಾನಗಳಿಂದ ಯುದ್ಧಗಳು ನಡೆದು, ರಕ್ತದ ಹೊಳೆ ಹರಿದ ಕುರುಹುಗಳು ಮಾಸಿದರೂ.. ಹೂವುಗಳು ಅರಳುವುದನ್ನು ನಿಲ್ಲಿಸಿಲ್ಲ. ಯುದ್ಧ ಏರ್ಪಡಲು ವೈಷಮ್ಯ ಬೇಕು. ಹೂವು ಅರಳಲು ಸೂರ್ಯನ ಕಿರಣಗಳ ಸ್ಪರ್ಶಪ್ರೀತಿ ಸಾಕು. ಬೆಳ...

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

Avva Pustakalaya

ಅವ್ವ ಪುಸ್ತಕಾಲಯ ಸಾಹಿತ್ಯ ಬಳಗವು 2020 ರ ಏಪ್ರಿಲ್ 04 ರಂದು ಶ್ರೀಮಾನ್ ಲೇಟ್ ನಾರಸಯ್ಯ ಅವರ ಸ್ಮರಣಾರ್ಥವಾಗಿ ರೂಪುಗೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಓದುಗರ ಬಳಗವನ್ನು ಹೊಂದಿದೆ. ಇದು ಡಿಜಿಠಲ್ ಗ್ರಂಥಾಲಯವಾಗಿದ್ದು, ಓದಿನ ಅಭಿರುಚಿ ಹಬ್ಬಿಸಲು ಬಹಳಷ್ಟು ಸಾಹಿತ್ಯ ಚಟುವಟಿಕೆಗಳು ಮತ್ತು ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಪ್ರತೀ ವರ್ಷ ಜುಲೈ ತಿಂಗಳಲ್ಲಿ ಪ್ರಕಟಿತ ಕೃತಿಗಳನ್ನು ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಗೆ ಆಹ್ವಾನಿಸಲಾಗುವುದು. ಆಯ್ಕೆಯಾದ ಕೃತಿಗಳಿಗೆ ಪ್ರಶಸ್ತಿಯ ಜೊತೆಗೆ ಐದು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಹಂಚಿ, ಅವರ ಪುಸ್ತಕಗಳನ್ನು ಅವ್ವ ಪುಸ್ತಕಾಲಯ ವೇದಿಕೆಯ ಮುಖೇನ ಓದುಗರಿಗೆ ಮುಟ್ಟಿಸಲಾಗುವುದು . ಈಗಾಗಲೇ ಅವ್ವ ಪುಸ್ತಕಾಲಯದಿಂದ ಪ್ರಧಾನ ಕಾರ್ಯದರ್ಶಿಗಳಾದ  ಯುವಲೇಖಕ ಅನಂತ ಅವರ ಮೂರು ಕೃತಿಗಳು ಪ್ರಕಟವಾಗಿದ್ದು ಅವುಗಳು ಓದುಗರಿಗೆ ರಿಯಾಯಿತಿ ದರದಲ್ಲಿ ಸಿಗುತ್ತಿವೆ. ಓದುಗರು ನಮ್ಮನ್ನು ಸಂಪರ್ಕಿಸುವ ಮೂಲಕ ಪುಸ್ತಕಗಳನ್ನು ಕೊಂಡು ಓದಬಹುದು. ಮತ್ತು ನಮ್ಮ ಸಾಹಿತ್ಯ ಚಟುವಟಿಕೆಗಳು ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. 1). ಅವ್ವ ಪುಸ್ತಕಾಲಯ #189, ಕೆಂಚನಹಳ್ಳಿ ಅಂಚೆ ಹುಲಿಯೂರುದುರ್ಗ ಹೋಬಳಿ ಕುಣಿಗಲ್ ತಾಲ್ಲೂಕು ತುಮಕೂರು - 572123 ಮೊ : 8548948660 Mail :  avvapustakaalaya@gmail.com 2).  Facebook....

ಬಹುಮಾನಿತ ಸೃಜನಶೀಲ ಬರಹಗಳು - ಅವ್ವ ಪುಸ್ತಕಾಲಯ

ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದಿಂದ ಹಮ್ಮಿಕೊಂಡಿದ್ದ "ಸೃಜನಶೀಲ ಸಾಹಿತ್ಯ ಸ್ಪರ್ಧೆ - ಫೆಬ್ರುವರಿ/2022" ರ ವಿಜೇತ ಬರಹಗಳು ಆಸಕ್ತ ಓದುಗರಿಗಾಗಿ.. ಮೊದಲನೆ ಸ್ಥಾನ : " ನನ್ನೊಳಗೂ ಹಬ್ಬಗಳಿವೆ  " ಇಬ್ಬನಿಯ ದಿಬ್ಬಣವು ಮಬ್ಬಿನಲಿ ಹಬ್ಬಿಹವು ತಬ್ಬಿ ಅಂಗಳದ ಹಸಿರ ಬನವ ಹಬ್ಬವೆಂದವು ಬದುಕುಳಿದಷ್ಟು ಕ್ಷಣವ. ಬತ್ತಿಹೋಗುವೆನೆಂಬ ಬವಣೆ ಭೋರ್ಗರೆಯಲಿಲ್ಲ ಮುತ್ತಿದಾ ಮೈಗಳೆಡೆ ಮುನಿಸ ಒಸರಲಿಲ್ಲ ನಾನೇಕೆ ಕದಡಿದೆನೋ ಕಾರಣವ ಅರಿಯೆ, ನನ್ನೊಳಗು ಹಿತವಾದ ಹಬ್ಬಗಳಿವೆ ಆಚರಣೆ ಮರೆತೆನಲ್ಲ ಅದು ಸರಿಯೇ..... ಮೊಗ್ಗರಳಿ ಹೂವಾಗಿ,ಹಿಗ್ಗಿ ಹೊಸತನವ ತೂಗಿ ಹೆಗ್ಗುರುತ ಬಯಸದೆ,ಹಗುರವಾಗಿಯೆ ಸಾಗಿ ಸಂಜೆಗತ್ತಲ ವೇಳೆ ಬಾಡಿ ಬರಿದಾಗಿ ಬೇಸರವ ತೋರದೆ ಮುಗುಳು ನಕ್ಕಿರಲು ಅವಸರದಿ ಚಡಪಡಿಸದೆ ಭುವಿಯೊಡಲ ಹೊಕ್ಕಿರಲು ನಾನೇಕೆ ಕದಡಿದೆನೊ  ಕಾರಣವ ಅರಿಯೆ ನನ್ನೊಳಗು ಅರಳುವ  ಹಬ್ಬಗಳಿವೆ, ಆಚರಣೆ ಮರೆತೆನಲ್ಲ ಅದು ಸರಿಯೇ... ಎಳೆ ಬಿದಿರೊಂದು,ಉದರವ ಕೊಯ್ದರೆಂದು ಸೇಡಿನುರಗವಾಗದೆ ಸಂಭ್ರಮಿಸಿತು ಕೊಳಲಾಗಿ ಬಂದು ಸುರಿಸಿತು ಸುಶ್ರಾವ್ಯವ ಸ್ವರಗಳಲಿ ಮಿಂದು ಮುನಿಸ ಮರೆತು ನಗುತಿಹುದು ಆಹಾ..!!ಅದೆಂತಹ ಧ್ಯಾನ ಮಿಡಿಯದೇಕೆ ನನ್ನೊಳಗಂತಹ ಗಾನ..? ನಾನೇಕೆ ಕದಡಿದೆನೊ ಕಾರಣವ  ಅರಿಯೆ ನನ್ನೊಳಗು ಹಾಡಬಲ್ಲ ಹಬ್ಬಗಳಿವೆ, ಆಚರಣೆ ಮರೆತೆನಲ್ಲ ಅದು ಸರಿಯೇ... "ಇದ್ದದನುಭವಿಸಿ,ಅಂತರಂಗವ ನಗಿಸಿ ಬೆರೆಸಿ ಬಾಳಯಾತ್ರೆಯಲಿ ಸೊಗಸ ಪ್ರೀತಿ...