CAPF ಪರೀಕ್ಷೆ ಫಲಿತಾಂಶ ; ಕರ್ನಾಟಕದಿಂದ ಇಬ್ಬರು ಆಯ್ಕೆ
ಕೇಂದ್ರ ಲೋಕ ಸೇವಾ ಆಯೋಗ (UPSC) ನಡೆಸುವ ಎರಡನೇ ಅತಿ ದೊಡ್ಡ ಮತ್ತು ಉನ್ನತ ಪರೀಕ್ಷೆಯಾದ ಕೇಂದ್ರೀಯ ಸಶಸ್ತ್ರ ಫೋಲೀಸ್ ಪಡೆಯ (CAPF) ಸಹಾಯಕ ಕಮಾಂಡೆಂಟ್ (AC) 2020 ರ ಪರೀಕ್ಷೆಯಲ್ಲಿ, ಅಖಿಲ ಭಾರತ ಶ್ರೇಣಿ 119 ರೊಂದಿಗೆ ಬೆಂಗಳೂರಿನ ಯಲಹಂಕ ನಿವಾಸಿ ಹಾಗೂ ನಿವೃತ್ತ ಶಿಕ್ಷಕರಾದ ಗೋವಿಂದರಾಜಪ್ಪ ಮತ್ತು ಶಾರದಮ್ಮ ದಂಪತಿಯ ದ್ವಿತೀಯ ಪುತ್ರ ರೋಹಿತ್ ಜಿ ತೇರ್ಗಡೆ ಹೊಂದಿ, ಕರ್ನಾಟಕಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ. ಈ ಹುದ್ಧೆಗೆ ಪರೀಕ್ಷೆ ಬರೆದವರಲ್ಲಿ ಭಾರತದಾದ್ಯಂತ ಒಟ್ಟು 187 ಜನರನ್ನು ಆಯ್ಕೆಮಾಡಿಕೊಳ್ಳಲಾಗಿದೆ. ಕರ್ನಾಟಕದಿಂದ ಇಬ್ಬರು ಮಾತ್ರವೇ ಆಯ್ಕೆಯಾಗಿದ್ದು, ರೋಹಿತ್ ಜಿ ಅವರು ಮೊದಲಿಗರಾಗಿದ್ದಾರೆ. 160 ನೇ ಶ್ರೇಣಿಯೊಂದಿಗೆ ಪುನೀತ್ ಕುಮಾರ್ ಗಂಗಪ್ಪ ನಾಯ್ಕರ್ ಅವರು ಆಯ್ಕೆಯಾಗಿದ್ದಾರೆ.

CAPF ಸರ್ಕಾರದ ಗೆಜೆಟೆಡ್ ಗ್ರೂಪ್ 'ಎ' ವೃಂದದ ಹುದ್ಧೆಯಾಗಿದ್ದು, ರಾಜ್ಯ ಮಟ್ಟದ IPS ಹುದ್ಧೆಗೆ ಸಮಾನಾಂತರದ ಹುದ್ಧೆಯಾಗಿದೆ. ಕಳೆದ ವರ್ಷ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನ ವಿಧ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದರು. ಕರ್ನಾಟಕದಿಂದ ಮೂವತ್ತು ಜನರು ಈ ಪರೀಕ್ಷೆಯ ಎರಡನೇ ಹಂತವಾದ ದೈಹಿಕ ಆರೋಗ್ಯ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಅದರಲ್ಲಿ ಒಂಬತ್ತು ವಿಧ್ಯಾರ್ಥಿಗಳು ಅಂತಿಮ ಸಂದರ್ಶನಕ್ಕೆ ಆಯ್ಕೆಯಾಗಿ, ಇಬ್ಬರು ಮಾತ್ರ ಹುದ್ಧೆಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದ ಜನತೆಗೆ ಹೊಸ ವರ್ಷಕ್ಕೆ ಹೊಸ ಸುದ್ಧಿ ತಂದಿರುವ ಇಬ್ಬರಿಗೂ ಶುಭಾಷಯಗಳು.
ರೋಹಿತ್ ಜಿ ಅವರು ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ (ಸ್ವಾಯತ್ತ) ತಮ್ಮ ಪದವಿ ಶಿಕ್ಷಣ ಮುಗಿಸಿ, ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಎಂ.ಎಸ್ಸಿ ವ್ಯಾಸಂಗ ಮಾಡುತ್ತಿದ್ದು, ಪಿ.ಯು.ಸಿ ಓದುವಾಗಿನಿಂದಲೇ ಐ.ಎ.ಎಸ್ ಕನಸು ಕಂಡವರು. ಅಂದಿನಿಂದಲೇ ಪೂರ್ವ ತಯಾರಿಮಾಡಿಕೊಂಡು ಬಂದ ರೋಹಿತ್ ಅವರು ಇದೀಗ ಕರ್ನಾಟಕದ ಹೆಮ್ಮೆ. NET, SLET ಪರೀಕ್ಷೆಗಳಲ್ಲೂ ಉತ್ತಮ ಅಂಕಗಳನ್ನು ಪಡೆದುಕೊಂಡು, 2017 ರಲ್ಲಿ ನಡೆದ ಕರ್ನಾಟಕದ ಅತಿದೊಡ್ಡ ಚರ್ಚಾಸ್ಪರ್ಧೆ 'SPEAK FOR INDIA' ದಲ್ಲಿ 'MOST POPULAR SPEAKER' ಪುರಸ್ಕಾರಕ್ಕೆ ಭಾಜನರಾಗಿದ್ದರು. ಸಂತಸ ವ್ಯಕ್ತಪಡಿಸಿದ ಅವರು ಹೀಗೆ ಮಾತನಾಡಿದ್ದಾರೆ.
"ನನ್ನ ಗುರಿ ಸಿವಿಲ್ ಸರ್ವೀಸ್. ಅದಕ್ಕಾಗಿಯೇ ಮೂರು ವರ್ಷಗಳಿಂದ ಅಭ್ಯಾಸ ಮಾಡುತ್ತಾ ಬಂದಿದ್ದೇನೆ. ಐ.ಎ.ಎಸ್ ಭಾರತದ ಉನ್ನತ ಹುದ್ಧೆಯಾದ್ದರಿಂದ ಅದಕ್ಕೆ ಮಾಡಿಕೊಂಡ ತಯಾರಿಗಳು CAPF ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಸಹಕರಿಸಿದೆ. ನನ್ನ ಭವಿಷ್ಯವನ್ನೇ ಎದುರುನೋಡುತ್ತಿದ್ದ ನನ್ನ ತಂದೆ-ತಾಯಿಗಳಿಗೆ, ಗುರು ವೃಂದದವರಿಗೆ, ಸ್ನೇಹಿತರಿಗೆ ನನ್ನ ಬೆಳವಣಿಗೆ ಖುಷಿ ತಂದಿದೆ. ನನ್ನ ದಾರಿ ಇಲ್ಲಿಗೆ ನಿಲ್ಲುವುದಿಲ್ಲ. ಇದರಿಂದ ನನ್ನ ಸಾಮರ್ಥ್ಯದ ಬಗ್ಗೆ, ಮುಂದಿನ ಹೆಜ್ಜೆಗಳ ಬಗ್ಗೆ ನನಗೆ ಭರವಸೆ ಮೂಡಿದೆ. ಐ.ಎ.ಎಸ್ ಮಾಡುವವರೆಗೂ ನನ್ನ ಅಭ್ಯಾಸ ಹೀಗೇ ಇರುತ್ತದೆ"
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
- ಅನಂತ ಕುಣಿಗಲ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ