(ಚಿತ್ರಕೃಪೆ : ಗಾಯತ್ರಿ ಹೆಚ್ ಎನ್)
ಸಂಕ್ರಾಂತಿ; ಭರವಸೆಯ ಬೆಳಕು
ಭರವಸೆಯ ಬೆಳಕನ್ನು
ಹೊತ್ತು ತರುವ ಸುಗ್ಗಿಗೆ
ಅರಳಿಕಟ್ಟೆ ಮೇಲೆ ಕೂತ ರೈತರೆಲ್ಲ ಹಿಗ್ಗಿ
ಹೆಗಲ ಚೌಕವನ್ನು ತಲೆಗೆ ಕಟ್ಟಿ
ಸಾಲಾಗಿ ತುಂಬುತ್ತಾರೆ ಕೆರೆಯನ್ನು
ರಾಸುಗಳ ಬೆನ್ನ ಹತ್ತಿ..
ಕೋಡುಗಳಿಗೆ ಬಣ್ಣ
ಬಾಲಗಳಿಗೆ ಬಣ್ಣ
ಮುಖ-ಬಾಯಿ, ಕಣ್ಣು-ಕಿವಿಯೆಲ್ಲಾ ಬಣ್ಣ
ಬಣ್ಣ ಬಳಿದ ಕೈಗಳಿಗೂ ಬಣ್ಣ
ಎಲ್ಲೆಲ್ಲೂ ಬಣ್ಣ.. ಬಣ್ಣ ಬಣ್ಣ ಬಣ್ಣ!
ಜಾನುವಾರುಗಳಿಗೆ ಹೊಸಾವತಾರ!
ರೂಪ ರೂಪಗಳನ್ನೂ ಮೀರಿ
ನೋಟ ನೋಟಗಳನ್ನು ಕೆಣಕಿ
ಕಿಚ್ಚಿಗೆ ನಿಂತವು ಸರದಿಯಲ್ಲಿ
ಅಬ್ಬರಿಸಿದೊಡೆ ಕಾಲು ಕೆರೆದು ಜಿಗಿಯುತಾ
ಉರಿವ ಜ್ವಾಲೆಯ ಹಾರಲು ಪೈಪೋಟಿ ನಡೆಸುವವು
ಇನ್ನೊಂದೆಡೆ ಮೆದೆಗಳಿಗೆ ಅಲಂಕಾರ!
ರಾಗಿ, ಭತ್ತ, ಗೋಧಿ, ನವಣೆಗಳ ರಾಶಿಗೆ
ಕಣಗಳ ಮೇಟಿ ನಾಯ್ಕನಿಗೆ
ಹಸಿರು ಪತ್ರೆಯ ಸ್ಪರ್ಶ
ತೆನೆತೆನೆಗಳ ತುದಿಯಲ್ಲಿ
ನಗೆಯ ಚಿಗುರು
ಉಸಿರು ಬತ್ತಿದ ಒಡಲಲ್ಲಿ
ಹೊಂಬೆಳಕ ಬೆರಗು
ಗೆಣಸು, ಕಡಲೆ, ಕಬ್ಬು
ಎಳ್ಳು-ಬೆಲ್ಲ, ಬಾಳೆ
ಬಾಡು-ಬಳ್ಳೆ, ಮೂಳೆ
ಎಲ್ಲವನ್ನೂ ಹೊತ್ತು ತರುವ ಹಬ್ಬ
ವರುಷದ ಮೊದಲ ಹಬ್ಬ
ರಾಸುಗಳು ರಂಜಿಸುವ ಹಬ್ಬ
ಸೊಬಗಿನ ಸಂಕ್ರಾಂತಿ ನಮ್ಮೆಲ್ಲರ ಹಬ್ಬ
# ಅನಂತ ಕುಣಿಗಲ್
ಭರವಸೆಯ ಬೆಳಕನ್ನು
ಹೊತ್ತು ತರುವ ಸುಗ್ಗಿಗೆ
ಅರಳಿಕಟ್ಟೆ ಮೇಲೆ ಕೂತ ರೈತರೆಲ್ಲ ಹಿಗ್ಗಿ
ಹೆಗಲ ಚೌಕವನ್ನು ತಲೆಗೆ ಕಟ್ಟಿ
ಸಾಲಾಗಿ ತುಂಬುತ್ತಾರೆ ಕೆರೆಯನ್ನು
ರಾಸುಗಳ ಬೆನ್ನ ಹತ್ತಿ..
ಕೋಡುಗಳಿಗೆ ಬಣ್ಣ
ಬಾಲಗಳಿಗೆ ಬಣ್ಣ
ಮುಖ-ಬಾಯಿ, ಕಣ್ಣು-ಕಿವಿಯೆಲ್ಲಾ ಬಣ್ಣ
ಬಣ್ಣ ಬಳಿದ ಕೈಗಳಿಗೂ ಬಣ್ಣ
ಎಲ್ಲೆಲ್ಲೂ ಬಣ್ಣ.. ಬಣ್ಣ ಬಣ್ಣ ಬಣ್ಣ!
ಜಾನುವಾರುಗಳಿಗೆ ಹೊಸಾವತಾರ!
ರೂಪ ರೂಪಗಳನ್ನೂ ಮೀರಿ
ನೋಟ ನೋಟಗಳನ್ನು ಕೆಣಕಿ
ಕಿಚ್ಚಿಗೆ ನಿಂತವು ಸರದಿಯಲ್ಲಿ
ಅಬ್ಬರಿಸಿದೊಡೆ ಕಾಲು ಕೆರೆದು ಜಿಗಿಯುತಾ
ಉರಿವ ಜ್ವಾಲೆಯ ಹಾರಲು ಪೈಪೋಟಿ ನಡೆಸುವವು
ಇನ್ನೊಂದೆಡೆ ಮೆದೆಗಳಿಗೆ ಅಲಂಕಾರ!
ರಾಗಿ, ಭತ್ತ, ಗೋಧಿ, ನವಣೆಗಳ ರಾಶಿಗೆ
ಕಣಗಳ ಮೇಟಿ ನಾಯ್ಕನಿಗೆ
ಹಸಿರು ಪತ್ರೆಯ ಸ್ಪರ್ಶ
ತೆನೆತೆನೆಗಳ ತುದಿಯಲ್ಲಿ
ನಗೆಯ ಚಿಗುರು
ಉಸಿರು ಬತ್ತಿದ ಒಡಲಲ್ಲಿ
ಹೊಂಬೆಳಕ ಬೆರಗು
ಗೆಣಸು, ಕಡಲೆ, ಕಬ್ಬು
ಎಳ್ಳು-ಬೆಲ್ಲ, ಬಾಳೆ
ಬಾಡು-ಬಳ್ಳೆ, ಮೂಳೆ
ಎಲ್ಲವನ್ನೂ ಹೊತ್ತು ತರುವ ಹಬ್ಬ
ವರುಷದ ಮೊದಲ ಹಬ್ಬ
ರಾಸುಗಳು ರಂಜಿಸುವ ಹಬ್ಬ
ಸೊಬಗಿನ ಸಂಕ್ರಾಂತಿ ನಮ್ಮೆಲ್ಲರ ಹಬ್ಬ
# ಅನಂತ ಕುಣಿಗಲ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ