ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚೊಚ್ಚಲ ಕೃತಿ ಪ್ರಕಟಣೆಗೆ ಅರ್ಜಿ ಆಹ್ವಾನ - ಕನ್ನಡ ಪುಸ್ತಕ ಪ್ರಾಧಿಕಾರ

          (ವಿಷಯ ಕೃಪೆ : ಕನ್ನಡ ಪುಸ್ತಕ ಪ್ರಾಧಿಕಾರ) ಚೊಚ್ಚಲ ಕೃತಿಗೆ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2021ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಹಸ್ತಪ್ರತಿಗಳ ಪ್ರಕಟಣೆಗೆ ರೂ.15,000-00 ಗಳ ಪ್ರೋತ್ಸಾಹಧನ ನೀಡಲಾಗುವುದು. ಅರ್ಜಿದಾರರು 18 ರಿಂದ 40 ವರ್ಷ ವಯೋಮಿತಿಯವರಾಗಿರಬೇಕು. ಸ್ವ-ವಿವರವುಳ್ಳ ಮನವಿಯೊಂದಿಗೆ ದೃಢೀಕೃತ ಎಸ್.ಎಸ್.ಎಲ್.ಸಿ. ಪ್ರಮಾಣ ಪತ್ರದ ಪ್ರತಿ ಅಥವಾ ಅಧಿಕೃತವಾದ, ದೃಢೀಕರಿಸಲ್ಪಟ್ಟ ಜನ್ಮದಾಖಲಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು. ಅಲ್ಲದೆ ಪ್ರಸ್ತುತ ಸಲ್ಲಿಸಲ್ಪಡುತ್ತಿರುವ ಕೃತಿಯು ತಮ್ಮ ಚೊಚ್ಚಲ ಕೃತಿಯಾಗಿದ್ದು, ಎಲ್ಲಿಯೂ ಪ್ರಕಟವಾಗಿಲ್ಲವೆಂದು ಸ್ವಯಂ ದೃಢೀಕರಣ ಪತ್ರ ನೀಡಬೇಕು. ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯು ಡಿ.ಟಿ.ಪಿ. ಮಾಡಿಸಿದಾಗ 1/8 ಡೆಮ್ಮಿ ಅಳತೆಯಲ್ಲಿ ಕನಿಷ್ಟ 60 ಪುಟಗಳಿರಬೇಕು. ಅನುವಾದ, ಪಠ್ಯಪುಸ್ತಕ ಹಾಗೂ ಬೇರಾವುದೇ ಪದವಿ / ಸ್ನಾತಕೋತ್ತರ ಪದವಿ(PHD)ಗೆ ಸಿದ್ಧಪಡಿಸಿದ ಸಂಶೋಧನಾ ಪ್ರಬಂಧಗಳನ್ನು ಹೊರತುಪಡಿಸಿ, ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಮುಂತಾದ ಕನ್ನಡ ಸಾಹಿತ್ಯ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಸ್ತಪ್ರತಿ ಇರಬೇಕು. ಕೃತಿಯ ಪಠ್ಯದಲ್ಲಿ ಯಾವುದೇ ಧರ್ಮ, ದೇವರು, ಜಾತ...

ಸಂಕ್ರಾಂತಿ; ಭರವಸೆಯ ಬೆಳಕು - ಕವಿತೆ - ಅನಂತ ಕುಣಿಗಲ್

(ಚಿತ್ರಕೃಪೆ : ಗಾಯತ್ರಿ ಹೆಚ್ ಎನ್) ಸಂಕ್ರಾಂತಿ; ಭರವಸೆಯ ಬೆಳಕು ಭರವಸೆಯ ಬೆಳಕನ್ನು ಹೊತ್ತು ತರುವ ಸುಗ್ಗಿಗೆ ಅರಳಿಕಟ್ಟೆ ಮೇಲೆ ಕೂತ ರೈತರೆಲ್ಲ ಹಿಗ್ಗಿ ಹೆಗಲ ಚೌಕವನ್ನು ತಲೆಗೆ ಕಟ್ಟಿ ಸಾಲಾಗಿ ತುಂಬುತ್ತಾರೆ ಕೆರೆಯನ್ನು ರಾಸುಗಳ ಬೆನ್ನ ಹತ್ತಿ.. ಕೋಡುಗಳಿಗೆ ಬಣ್ಣ ಬಾಲಗಳಿಗೆ ಬಣ್ಣ ಮುಖ-ಬಾಯಿ, ಕಣ್ಣು-ಕಿವಿಯೆಲ್ಲಾ ಬಣ್ಣ ಬಣ್ಣ ಬಳಿದ ಕೈಗಳಿಗೂ ಬಣ್ಣ ಎಲ್ಲೆಲ್ಲೂ ಬಣ್ಣ.. ಬಣ್ಣ ಬಣ್ಣ ಬಣ್ಣ! ಜಾನುವಾರುಗಳಿಗೆ ಹೊಸಾವತಾರ! ರೂಪ ರೂಪಗಳನ್ನೂ ಮೀರಿ ನೋಟ ನೋಟಗಳನ್ನು ಕೆಣಕಿ ಕಿಚ್ಚಿಗೆ ನಿಂತವು ಸರದಿಯಲ್ಲಿ ಅಬ್ಬರಿಸಿದೊಡೆ  ಕಾಲು ಕೆರೆದು ಜಿಗಿಯುತಾ ಉರಿವ ಜ್ವಾಲೆಯ ಹಾರಲು ಪೈಪೋಟಿ ನಡೆಸುವವು ಇನ್ನೊಂದೆಡೆ ಮೆದೆಗಳಿಗೆ ಅಲಂಕಾರ! ರಾಗಿ, ಭತ್ತ, ಗೋಧಿ, ನವಣೆಗಳ ರಾಶಿಗೆ ಕಣಗಳ ಮೇಟಿ ನಾಯ್ಕನಿಗೆ ಹಸಿರು ಪತ್ರೆಯ ಸ್ಪರ್ಶ ತೆನೆತೆನೆಗಳ ತುದಿಯಲ್ಲಿ ನಗೆಯ ಚಿಗುರು ಉಸಿರು ಬತ್ತಿದ ಒಡಲಲ್ಲಿ ಹೊಂಬೆಳಕ ಬೆರಗು ಗೆಣಸು, ಕಡಲೆ, ಕಬ್ಬು ಎಳ್ಳು-ಬೆಲ್ಲ, ಬಾಳೆ ಬಾಡು-ಬಳ್ಳೆ, ಮೂಳೆ ಎಲ್ಲವನ್ನೂ ಹೊತ್ತು ತರುವ ಹಬ್ಬ ವರುಷದ ಮೊದಲ ಹಬ್ಬ ರಾಸುಗಳು ರಂಜಿಸುವ ಹಬ್ಬ ಸೊಬಗಿನ ಸಂಕ್ರಾಂತಿ ನಮ್ಮೆಲ್ಲರ ಹಬ್ಬ                          # ಅನಂತ ಕುಣಿಗಲ್

ಹೊಸ ವರುಷ : ಅದೇ ಹರುಷ - ಸಾಹಿತ್ಯ ಸ್ಪರ್ಧೆಯ ಫಲಿತಾಂಶ - ಅವ್ವ ಪುಸ್ತಕಾಲಯ

ಅವ್ವ ಪುಸ್ತಕಾಲಯ ಅರ್ಪಿಸುವ ಹೊಸ ವರುಷ - ಅದೇ ಹರುಷ ಸಾಹಿತ್ಯ ಸ್ಪರ್ಧೆ - ಜನವರಿ/2022 ಸ್ಪರ್ಧೆಯ ವಿಜೇತರ ಪಟ್ಟಿ ಕೆಳಗಿನಂತಿದೆ. ಪ್ರಥಮ - ಮಂಜುಳಾ ಜಿ ತೆಕ್ಕಟ್ಟೆ ದ್ವಿತೀಯ - ಸಂತೋಷ್ ಕುಮಾರ್ ಸಿ ತೃತೀಯ - ವೈಷ್ಣವಿ ಪುರಾಣಿಕ್ ಎಲ್ಲರಿಗೂ ಅಭಿನಂದನೆಗಳು. ವಿಜೇತರು ಈ ಕೂಡಲೆ ತಮ್ಮ ಪೂರ್ತಿ ಅಂಚೆ ವಿಳಾಸವನ್ನು avvapustakaalaya@gmail.com ಮೇಲ್ ಗೆ ಕಳಿಸಬೇಕು. ಕೋವಿಡ್ ಕಾರಣದಿಂದ ಬಹುಮಾನ ತಲುಪುವುದು ತಡವಾಗಬಹುದು. ಸಹಕರಿಸಬೇಕಾಗಿ ವಿನಂತಿ. ಇನ್ನಷ್ಟು ಸಾಹಿತ್ಯ ಸ್ಪರ್ಧೆಗಳಿಗಾಗಿ ನಮ್ಮ ಫೇಸ್ಬುಕ್ ತಂಡವನ್ನು ಸೇರಲು ಇಲ್ಲಿ ಕ್ಲಿಕ್ ಮಾಡಿ.. https://www.facebook.com/groups/3344469948953030/?ref=share - ಅವ್ವ ಪುಸ್ತಕಾಲಯ

CAPF ಪರೀಕ್ಷೆ ಫಲಿತಾಂಶ ಪ್ರಕಟ ; ಕರ್ನಾಟಕದಿಂದ ಇಬ್ಬರು ಆಯ್ಕೆ

CAPF ಪರೀಕ್ಷೆ ಫಲಿತಾಂಶ ; ಕರ್ನಾಟಕದಿಂದ ಇಬ್ಬರು ಆಯ್ಕೆ ಕೇಂದ್ರ ಲೋಕ ಸೇವಾ ಆಯೋಗ (UPSC) ನಡೆಸುವ ಎರಡನೇ ಅತಿ ದೊಡ್ಡ ಮತ್ತು ಉನ್ನತ ಪರೀಕ್ಷೆಯಾದ ಕೇಂದ್ರೀಯ ಸಶಸ್ತ್ರ ಫೋಲೀಸ್ ಪಡೆಯ (CAPF) ಸಹಾಯಕ ಕಮಾಂಡೆಂಟ್ (AC) 2020 ರ ಪರೀಕ್ಷೆಯಲ್ಲಿ, ಅಖಿಲ ಭಾರತ ಶ್ರೇಣಿ 119 ರೊಂದಿಗೆ ಬೆಂಗಳೂರಿನ ಯಲಹಂಕ ನಿವಾಸಿ ಹಾಗೂ ನಿವೃತ್ತ ಶಿಕ್ಷಕರಾದ ಗೋವಿಂದರಾಜಪ್ಪ ಮತ್ತು ಶಾರದಮ್ಮ ದಂಪತಿಯ ದ್ವಿತೀಯ ಪುತ್ರ ರೋಹಿತ್ ಜಿ ತೇರ್ಗಡೆ ಹೊಂದಿ, ಕರ್ನಾಟಕಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ. ಈ ಹುದ್ಧೆಗೆ ಪರೀಕ್ಷೆ ಬರೆದವರಲ್ಲಿ ಭಾರತದಾದ್ಯಂತ ಒಟ್ಟು 187 ಜನರನ್ನು ಆಯ್ಕೆಮಾಡಿಕೊಳ್ಳಲಾಗಿದೆ. ಕರ್ನಾಟಕದಿಂದ ಇಬ್ಬರು ಮಾತ್ರವೇ ಆಯ್ಕೆಯಾಗಿದ್ದು, ರೋಹಿತ್ ಜಿ ಅವರು ಮೊದಲಿಗರಾಗಿದ್ದಾರೆ. 160 ನೇ ಶ್ರೇಣಿಯೊಂದಿಗೆ ಪುನೀತ್ ಕುಮಾರ್ ಗಂಗಪ್ಪ ನಾಯ್ಕರ್ ಅವರು ಆಯ್ಕೆಯಾಗಿದ್ದಾರೆ. CAPF ಸರ್ಕಾರದ ಗೆಜೆಟೆಡ್ ಗ್ರೂಪ್ 'ಎ' ವೃಂದದ ಹುದ್ಧೆಯಾಗಿದ್ದು, ರಾಜ್ಯ ಮಟ್ಟದ IPS ಹುದ್ಧೆಗೆ ಸಮಾನಾಂತರದ ಹುದ್ಧೆಯಾಗಿದೆ. ಕಳೆದ ವರ್ಷ ಸುಮಾರು ನಾಲ್ಕು ಲಕ್ಷಕ್ಕೂ  ಹೆಚ್ಚು ಜನ ವಿಧ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದರು. ಕರ್ನಾಟಕದಿಂದ ಮೂವತ್ತು ಜನರು ಈ ಪರೀಕ್ಷೆಯ ಎರಡನೇ ಹಂತವಾದ ದೈಹಿಕ ಆರೋಗ್ಯ ಸಂದರ್ಶನಕ್ಕೆ ಆಯ್ಕೆಯಾಗಿದ್ದರು.  ಅದರಲ್ಲಿ ಒಂಬತ್ತು ವಿಧ್ಯಾರ್ಥಿಗಳು ಅಂತಿಮ ಸಂದರ್ಶನಕ್ಕೆ ಆಯ್ಕೆಯಾಗಿ, ಇಬ್ಬರು...

ಬಿಡೆನಾ ನುಡಿಯ - ಕವಿತೆ - ಡಾ ಸುರೇಶ ನೆಗಳಗುಳಿ

ಬಿಡೆನಾ ನುಡಿಯ ಚಂದನದ ನಾಡಲ್ಲಿ ಚಂದದಾ ಬೀಡಲ್ಲಿ ಅಂದ ಕನ್ನಡ ನನ್ನ ಜಿಹ್ವೆಯಲ್ಲಿ ಬಂಧವನು ಬಿಡೆನಾನು ಕನ್ನಡದ ನುಡಿಯಲ್ಲಿ ಸಂದು ಹೋದರು ಜೀವ ಲೋಕವನ್ನು ನಾಲಿಗೆಯ ಸೀಳಿದರೆ ಮೂಗಿನಲಿ ಕನ್ನಡವ ಆಲಿಸುವ ತೆರನಾಡುವಂಥ ರತ್ನ ಪಾಲಿಸಲೆ ಬೇಕಲ್ಲ ಹೊನ್ನು ಕನ್ನಡ ನುಡಿಯ ಲಾಲಿ ಹಾಡಿನ ಹಾಗೆ ಹಾಡಿ ಚೆನ್ನು ನನಗೆ ನನ್ನಯ ನಾಡು ತಾಯಿಗಿಂತಲು ಮಿಗಿಲು ತನು ಮನದಿ ನಮಿಸುವೆನು ನಿತ್ಯ ನಾನು ಕನಸು ಮನಸಲು ಎರಡು ಎಣಿಸದಿಹ ಭಾವವದು ಎನಗಿಹುದು ಇದು ನಿಜಕು ಹಾಲು ಜೇನು ತೊರೆಯೆ ಕನ್ನಡ ನಾಡ ಮೆರೆವೆ ಇಲ್ಲಿಯೆ ಎನುವ ಹಿರಿಯ ಭಾವವ ತುಂಬಿ ಕೊಳ್ಳಬೇಕು ನರಿಯಂತೆ ಕಪಟತನ ಹೊಂದಿ ನಾಡನು ಮರೆಯೆ ತರವಲ್ಲ ಬದುಕಿನಲಿ ಇಂಥ ನೀತಿ ಡಾ ಸುರೇಶ ನೆಗಳಗುಳಿ ಮಂಗಳೂರು