ಭಾವೋದ್ವೇಗ
ಒಂಟಿ ಮರಕೆ ಬೇಲಿ ಯಾಕೆ
ಬಿಟ್ಟು ಹೋದಮೇಲೆ ನೀನು
ಕಾಡುವೆ ಏಕೆ
ಬಿಟ್ಟುಕೊಡದೆ ಹೀಗೆ ನನ್ನನ್ನು
ಕೊಟ್ಟೆ ಕೊಟ್ಟೆ ಎಲ್ಲಾ ಬಿಟ್ಟೆ
ಏನು ಉಳಿದಿಲ್ಲ ಇನ್ನು
ಇದ್ದರೆ ಹೇಳು ಬಾಕಿ ಕೊಟ್ಟೇನು
ದೇವರಲ್ಲಿ ಪ್ರಾರ್ಥಿಸಿ
ಊರ ಬಿಡುವೆನು
ನಿನಗಾಗಿ..
ದೊಡ್ಡ ಕನಸ ಕಂಡೇನು
ಇದ್ದಾಗ ಎಷ್ಟು ಚೆನ್ನ
ಇಲ್ಲದೆ ಎಷ್ಟು ಕ್ರೂರ ಸಮಯ
ಹೇಳು ಯಾಕೆ ಬದಲಾದೆ
ಈಗ,
ನಾನೂ ಬದಲಾಗಬೇಕಿದೆ!
ಹೊಸ ಜಾಡ ಹಿಡಿದು
ಬದುಕು ಸಾಗಬೇಕಿದೆ
ತಪ್ಪು ನನ್ನದೇ..
ಕ್ಷಮಿಸು ಒಮ್ಮೆ
ಸಿಗಲಾರೆನು ಇನ್ನೆಂದೂ..
ನೀನೇ ಸರಿ
ನಿನ್ನದೇ ಮಾನ್ಯ
ನಂಬಿ ನಂಬಿ ಹಾಳಾದೆನಾ..
ಪ್ರೀತಿಯ ಜಾತ್ರೆಯಲಿ
ಕಳೆದುಕೊಂಡೆನು ನನ್ನನ್ನೇ ನಾ
ಸದಾ ಸೋಲುತ್ತಾ..
ಸಹಿಸಿಕೊಂಡೆನು ಎಲ್ಲವನು
ಅರ್ಥವೇ ಆಗಲಿಲ್ಲ ನಿನಗೆ
ನಾ ಮಂಡಿಯೂರಿ ಕೂತೆನು
ಬೇಡಿದೆನು ಪ್ರತಿ ಕ್ಷಣ
ಆದರೂ ನೀನೇ ಗೆದ್ದೇ..
ನಾ ಸ್ಪರ್ಧಿಸಲಾಗದೆ ಸೋತೆ
ಕೊನೆಗೆ ಸತ್ತೆ!
ಬಿಟ್ಟು ಹೋದಮೇಲೆ ನೀನು
ಕಾಡುವೆ ಏಕೆ
ಬಿಟ್ಟುಕೊಡದೆ ಹೀಗೆ ನನ್ನನ್ನು
ಕೊಟ್ಟೆ ಕೊಟ್ಟೆ ಎಲ್ಲಾ ಬಿಟ್ಟೆ
ಏನು ಉಳಿದಿಲ್ಲ ಇನ್ನು
ಇದ್ದರೆ ಹೇಳು ಬಾಕಿ ಕೊಟ್ಟೇನು
ದೇವರಲ್ಲಿ ಪ್ರಾರ್ಥಿಸಿ
ಊರ ಬಿಡುವೆನು
ನಿನಗಾಗಿ..
ದೊಡ್ಡ ಕನಸ ಕಂಡೇನು
ಇದ್ದಾಗ ಎಷ್ಟು ಚೆನ್ನ
ಇಲ್ಲದೆ ಎಷ್ಟು ಕ್ರೂರ ಸಮಯ
ಹೇಳು ಯಾಕೆ ಬದಲಾದೆ
ಈಗ,
ನಾನೂ ಬದಲಾಗಬೇಕಿದೆ!
ಹೊಸ ಜಾಡ ಹಿಡಿದು
ಬದುಕು ಸಾಗಬೇಕಿದೆ
ತಪ್ಪು ನನ್ನದೇ..
ಕ್ಷಮಿಸು ಒಮ್ಮೆ
ಸಿಗಲಾರೆನು ಇನ್ನೆಂದೂ..
ನೀನೇ ಸರಿ
ನಿನ್ನದೇ ಮಾನ್ಯ
ನಂಬಿ ನಂಬಿ ಹಾಳಾದೆನಾ..
ಪ್ರೀತಿಯ ಜಾತ್ರೆಯಲಿ
ಕಳೆದುಕೊಂಡೆನು ನನ್ನನ್ನೇ ನಾ
ಸದಾ ಸೋಲುತ್ತಾ..
ಸಹಿಸಿಕೊಂಡೆನು ಎಲ್ಲವನು
ಅರ್ಥವೇ ಆಗಲಿಲ್ಲ ನಿನಗೆ
ನಾ ಮಂಡಿಯೂರಿ ಕೂತೆನು
ಬೇಡಿದೆನು ಪ್ರತಿ ಕ್ಷಣ
ಆದರೂ ನೀನೇ ಗೆದ್ದೇ..
ನಾ ಸ್ಪರ್ಧಿಸಲಾಗದೆ ಸೋತೆ
ಕೊನೆಗೆ ಸತ್ತೆ!
#ಅನಂತ ಕುಣಿಗಲ್
~🔥😍
ಪ್ರತ್ಯುತ್ತರಅಳಿಸಿ