ವಿಷಯಕ್ಕೆ ಹೋಗಿ

ಅಷ್ಟದಿಗ್ಭಂಧನ - ಕವಿತೆ - ಅನಂತ ಕುಣಿಗಲ್


ಅಷ್ಟದಿಗ್ಭಂಧನ

ಅದೆಷ್ಟೋ ದಿನಗಳಿಂದ
ಯಾರಿಗೂ ಕಾಣಿಸಿಕೊಳ್ಳದೆ
ಸ್ವಯಿಚ್ಚೆಯಿಂದ ಬಂಧಿತರಾಗಿ
ಕತ್ತಲ್ಲನ್ನೇ ಅಪ್ಪಿ ಮುದ್ದಾಡಿದ ನಮಗೆ
ಅಪರೂಪಕ್ಕೆ ಕಂಡ ಬೆಳಕು
ಕಣ್ಕುಕ್ಕಿತ್ತಲ್ಲ!

ಮಾಸ್ಕ್ ಮೇಲೆ ಮಾಸ್ಕ್ ಧರಿಸಿ
ವಾಹಗಳನ್ನು ಬೀದಿಯಿಂದ ಬಿಡಿಸಿ
ಹಸು ಕರುಗಳು ನಿರ್ಭೀತಿಯಿಂದ
ಓಡಾಡುವ ಹಾಗೆ ಏರ್ಪಡಿಸಿ
ಕೈಗಳಿಗೆ ಮೊಬೈಲ್ ಕೊಟ್ಟು
ಹೊಟ್ಟೆಗೆ ಪಿಜ್ಜಾ-ಬರ್ಗರ್ ಇಟ್ಟು
ಅಲರಾಂ ಹೊಡೆತಕ್ಕೆ ಎಚ್ಚರವಾಗುವ
ನಮ್ಮಯ ಅಸಹಾಯಕ ಸ್ಥಿತಿ
ಯಾರಿಗೂ ಬಾರದಿರಲಿ!

ಒಮ್ಮೆ ಜೋರಾಗಿ ಗಾಳಿ ಬೀಸಿದಾಗ
ಹೋಗಿದ ಜೀವ ಮತ್ತೆ ಬಂದಂತಾಗುತ್ತದೆ
ಅಷ್ಟು ಉಸಿರುಗಟ್ಟೆದ್ದೇವೆ ನಾವೆಲ್ಲರೂ..
ನಾಲ್ಕು ಗೋಡೆಗಳ ಗಬೆಯಲ್ಲಿ
ಮೂಳೆಯೂ ತುಕ್ಕಿಡಿಯುವಂತೆ
ಕೊಳೆತು ನಾರುತ್ತಿದ್ದೇವೆ
ಮೂಗು ಮುಚ್ಚಿಕೊಂಡು
ಭಯದಿಂದ ಮೌನವಾಗಿ ನಿಂತಿದ್ದೇವೆ!

ದಿನವೂ ಅದೇ ವಿಚಾರಗಳು
ಕೊಂಕು ನುಡಿಯುವುದೊಂದೇ ವಿಶೇಷ
ಬಸ್ಸಿನ ಹಿಂದೆ ಓಡುವ ಜನಕೆ
ಬಸ್ಸೇ ಪ್ರಪಂಚ
ಹಾಗಾದರೆ ಬಸ್ಸಿನ ಮುಂದೆ ಓಡುವವರು?
ಹೆಗಲಿನಲ್ಲಿ ಸಾವ ಕಟ್ಟಿಕೊಂಡವರು!
ಧೈರ್ಯವಿದ್ದವರಿಗೆ ಬೆದರಿಕೆ
ಬಾಯ್ಬಿಟ್ಟರೆ ಬಾಂಬು
ಬಿಡದಿದ್ದರೆ ರಕ್ತಾಘಾತ ಸಂಕಟ

ಏನಾಗಿದೆ ಈ ಜಗಕೆ
ಆಗಬೇಕಾದ್ದೇನೂ ಆಗುತ್ತಿಲ್ಲ
ಬೆಲೆ ಏರಿಕೆ ಮತ್ತು ಜನಸಂಖ್ಯಾಸ್ಟೋಟ
ಇದಲ್ಲವೇ ನಮ್ಮ ಪ್ರಗತಿ?
ಎಲ್ಲಿಯ ದೇವರು? ಎಲ್ಲಿಯ ತಂತ್ರಜ್ಞಾನ
ಇನ್ನೆಲ್ಲಿಯ ವಿಜ್ಞಾನ?
ಸಾಯುವವನಿಗೆ ಎಲ್ಲವೂ ಶೂನ್ಯ
ಆಡಳಿತವೊಂದೇ ಸಾಕು
ಕುರಿ ಕೊಟ್ಟಿಗೆಯ ಕಟ್ಟಲು
ನಕ್ಷತ್ರಗಳು ಉದುರುತ್ತವೆ
ಭಾಷಣಗಳ ಬಿಗಿ ತಾಳಲಾರದೆ!

ಬೈಕು, ಕಾರುಗಳ ಸೀಟಿನ ಮೇಲೆ
ಕುಂಡೆಗಳು ನೋಯುತ್ತಿವೆ
ಮಂಚದ ಮೇಲೆ ಬೆತ್ತಲೆಯ ದೇಹ ಮಲಗಿದೆ
ಸಿಗರೇಟು, ಮಧ್ಯದ ವಾಸನೆಗೆ
ಗುಂಡಿಗೆಯಿಲ್ಲದ ಬಂದೂಕು ಹಪಾಹಪಿಸುತ್ತಿದೆ
ಯಾರ ಕೂರಳಿಗೆ ರಾಗಿ ಪೈರಿನ ಪಾಶ ಕಟ್ಟುವರೋ..
ಆತ್ಮಹತ್ಯೆ ಎಂದು ಖುಲಾಸು ಮಾಡುವರು
ಓದದಿದ್ದರೂ ಎಲ್ಲರೂ ಪ್ಯಾಸು
ಕೆಲಸವಿಲ್ಲದೆ ವಯಸ್ಸು ಲಾಸು
ಅರಿವಿಲ್ಲದೆ ದಿನ ಕಳೆದಿವೆ
ಮೂಲೆಯಲ್ಲಿದ್ದ ಯಂತ್ರದ ಲೆಕ್ಕಾಚಾರ

ಮಾತನಾಡುವುದು ಮರೆತಿದ್ದೇವೆ
ಓದುವುದು ಬಿಟ್ಟಿದ್ದೇವೆ
ಬೆರಳುಗಳು ಬರೆಯುತ್ತಿವೆ ಸೆಳೆಯಲು
ಪ್ಯಾಡು-ಕಾಂಡೋಮುಗಳು ಪೈಪೋಟಿಗೆ ಬಿದ್ದಿವೆ
ಯಾರೂ ಕೇಳುಗರಿಲ್ಲದೆ
ಖುರ್ಚಿ ತನ್ನ ಹೆಸರನ್ನೇ ಬದಲಾಯಿಸಿಕೊಂಡಿದೆ
ಉಳಿದವರು ಕೂಗುತ್ತಿದ್ದಾರೆ
ಉರಿದವರು ಬೇಯುತ್ತಿದ್ದಾರೆ
ರುಚಿ ನೋಡಿದವರು ಆಕಾಶದಲ್ಲಿ ಹಾರಾಡುತ್ತಿದ್ದಾರೆ
ನಾವೀಗ ಯಂತ್ರಗಳು
ಯಂತ್ರಗಳೆಂಬ ಮನುಷ್ಯ ಗುಲಾಮರಿಗಾಗಿ
ಹುಡುಕಾಟ ನಡೆಸಿದ್ದೇವೆ!!


                    ಅನಂತ ಕುಣಿಗಲ್
           ಯುವಬರಹಗಾರ & ರಂಗಕಲಾವಿದ

ಕಾಮೆಂಟ್‌ಗಳು

  1. ತುಂಬಾ ಚೆನ್ನಾಗಿದೆ ಸರ್‌‌‌‌‌.....‌‌ಎಲ್ಲವೂ ಬದಲಾಗಬೇಕು ಎಲ್ಲವನ್ನೂ ಬದಲಾಯಿಸಬೇಕು...
    ಆ ಬದಲಾವಣೆ ನಮ್ಮಿಂದಾಗಬೇಕು.‌.‌ತುಂಬಾ ಚೆನ್ನಾಗಿದೆ..‌

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಯಾರ ಸ್ವಾತಂತ್ರ್ಯ? - ಕವಿತೆ - ಚಂದ್ರಪ್ಪ ಬೆಲವತ್ತ

ಯಾರ ಸ್ವಾತಂತ್ರ್ಯ ? ಬಂತಪ್ಪ ಸ್ವಾತಂತ್ರ್ಯ  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  47ರ  ಮಧ್ಯ ರಾತ್ರಿಯ ಸ್ವಾತಂತ್ರ್ಯ  ಭೂಮಿ ನುಂಗುವರ ಪಾಲಿಗೆ ಬಂತು ಅನುದಾನ ತಿನ್ನುವರ ನಾಲ್ಗೆಗೆ  ಬಂತು ಸುಳ್ಳು ಬುರುಕರ ಪಾಲಿಗೆ ಬಂತು  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  ಕಾಳ ಧನಿಕರ ಜೇಬಿಗೆ ಬಂತು  ಬಡವರ ಕೊರಳಿಗೆ ಉರುಳೆ ಆಯ್ತು  ಹೆಣ್ಣು ಮಕ್ಕಳ ಕಣ್ಣೀರಾಯ್ತು  47ರ ಸ್ವಾತಂತ್ರ್ಯ ಮಧ್ಯರಾತ್ರಿಯ ಸ್ವಾತಂತ್ರ್ಯ  ಧರ್ಮಗಳ ನಡುವಿನ ಕಂದರವಾಯ್ತು ಜಾತಿಯ ಆಳದ ಬೇರು ಬಿಟ್ಟಾಯ್ತು  ಮಾನವ ಧರ್ಮವ ಮರೆಯಿಸಿ ಬಿಟ್ಟಿತು  ಆಗಷ್ಟ್ 15ರ ಸ್ವಾತಂತ್ರ್ಯ  ಸಮಾನ ಆರೋಗ್ಯ ತರಲೇ ಇಲ್ಲ  ಸಮಾನ ಶಿಕ್ಷಣ ಕೊಡಿಸಲೇ ಇಲ್ಲ  ಸಮಾನ ಸಂಪತ್ತು ಹಂಚಲೇ ಇಲ್ಲ  47ರ ಮಧ್ಯರಾತ್ರಿಯ ಸ್ವಾತಂತ್ರ್ಯ  ಜಾತಿಯ ಸೋಂಕು ತೊಲಗಲೇ ಇಲ್ಲ  ಅಸಮಾನತೆಯ ನೀಗಿಸಲಿಲ್ಲ  ಹಸಿದವರತ್ತ ಸರಿಯಲೂ ಇಲ್ಲ  ಆಗಷ್ಟ್ 15ರ ಸ್ವಾತಂತ್ರ್ಯ  ಸುಳ್ಳು ಬುರುಕರ ಪಾಲಿಗೆ ಬಂತೆ  ಕೋಮುವಾದಿಗಳ ಬಾಯಿಗೆ ಬಂತೆ ರಿವಾಜು ದಿಕ್ಕರಿಸುವವರ ಜೊತೆಗೆ ಇತ್ತೇ  47ರ ಸ್ವಾತಂತ್ರ್ಯ  ಕಾಲಿನ ಕೋಳವು ಮುರಿಯಲು ಇಲ್ಲ ಜೀತದ ದುಡಿಮೆಯು ನಿಲ್ಲಲೇ ಇಲ್ಲ  ದಣಿಗಳ  ದನಿಯು ಕುಗ್ಗಲೇ ಇಲ್ಲ  ಬಡವನ ಬವಣೆ  ತಗ್ಗಿಸಲಿಲ್ಲ  47ರ ಸ್ವಾತ...