ವಿಷಯಕ್ಕೆ ಹೋಗಿ

ಶಿಕ್ಷಣ ಮಾರಾಟಕ್ಕಲ್ಲ - ಲೇಖನ - ಪ್ರಿಯಾ ಡಿ


ಶಿಕ್ಷಣ ಮಾರಾಟವಲ್ಲ; ಕಲಿತು ನಲಿ

     ಭೂಮಿಗೆ ಪಾದಾರ್ಪಣೆ ಮಾಡುವ ಮಗುವಿಗೆ ಅರಿವಿಲ್ಲದೆ ಅಮ್ಮ ಎಂಬ ಪದವ ಕಲಿತು ತಾಯಿಯ ಜೊತೆ ನಲಿಯುತ್ತದೆ, ಹೆಜ್ಜೆಯ ಜೊತೆ ಗೆಜ್ಜೆಯ ಕಟ್ಟಿ ನಲಿಯುವಾಗ ಸಮಾಜದಲ್ಲಿ ಸಾಧಕನಾಗಲು ಶಿಕ್ಷಣದ ಅನಿವಾರ್ಯ‌ ಅರಿವಾಗಿ ಗುರುವಿನ ಮೊರೆಹೋಗಬೇಕಾಗುತ್ತದೆ.

ತಾಯಿಯಿಂದ ಕಲಿತ ಶಿಕ್ಷಣದ ಜೊತೆ ಶಿಕ್ಷಕರು ನೀಡುವ ಶಾಲೆಯ ಶಿಕ್ಷಣ ಮಕ್ಕಳ ಸಾಧನೆಯ ನಾನಾ ದಾರಿಯಲ್ಲಿ ಪಯಣ ಸಾಧಿಸಲು ಸಹಕಾರಿಯಾಗುತ್ತದೆ, ಪ್ರತಿ ಮಗು ಕಲಿಯುವ ಶಿಕ್ಷಣ ಮಾರಾಟದ ವಸ್ತುವಾಗಬಾರದು ಎಂಬ ಗುರುಕುಲ ಶಿಕ್ಷಣ ಪದ್ದತಿ ಮರೆಯಾಗಿ ಖಾಸಗೀಕರಣ ಎಂಬ ಮಹಾ ಭೂತ ಇಂದಿನ ಶಿಕ್ಷಣ‌ದ ಮೇಲೆ ಪ್ರಭಾವ ಭೀರುವ ಮೂಲಕ ಶಿಕ್ಷಣ ಮಾರಾಟದ ಅಂಗವಾಗುವಂತೆ ಮಾಡುತ್ತಿದೆ.ಆದರೆ ನಮ್ಮ‌ಸರ್ಕಾರಿ ಶಾಲೆಗಳು  ಉಚಿತ ಶಿಕ್ಷಣ ನೀಡುವ ಮೂಲಕ  ಇಂದು ಶಿಕ್ಷಣ ಮಾರಾಟದ ವಸ್ತುವಲ್ಲ ಎಂಬ  ಸಂದೇಶ ಸಾರುತ್ತಿವೆ.

ಮನುಷ್ಯ ಬೇಕು ಆದರೆ ಮನುಷ್ಯನ ಜಾತಿ ಬೇಡ ಎಂದಾಯಿತು,ಮಗುವಿಗೆ ಜನ್ಮ ನೀಡಿ ತಾನು ಮರುಜನ್ಮ ತಾಳಲು ತಾಯಿಬೇಕು ಆದರೆ ಹೆಣ್ಣುಮಗು ಬೇಡವೆಂದಾಯಿತು,ತಿನ್ನಲು ರುಚಿಯಾದ ಆಹಾರಬೇಕು 
ದೇಹಕ್ಕೆ ಆರೋಗ್ಯ ಬೇಕು ಆದರೆ ಸಾವಯವ ಗೊಬ್ಬರ ಬೇಡವೆಂದಾಯಿತು, ಕಣ್ಣುತುಂಬಿಕೊಳ್ಳಲು ಹರಿಯುವ ನದಿ-ಸರೋವರಗಳು ಬೇಕು ಆದರೆ ಅವುಗಳ ಸಂರಕ್ಷಣೆ ಬೇಡವೆಂದಾಯಿತು.ಎಂತ ಸೋಜಿಗ!.ಒಳ್ಳೆಯದು ಎಂಬುದೆಲ್ಲ ಎನಗೆ ಮಾತ್ರ ಇರಲಿ,ಉಳಿದಿದೆಲ್ಲ ....?.
ನಾವು ಸತ್ತ ಮೇಲೂ ನಮ್ಮ ಕುಟುಂಬ ಚೆನ್ನಾಗಿ ಇರಬೇಕು,ಮನೆ,ಕಾರು ...ಎಲ್ಲ ಬೇಕು ಅದಕ್ಕೆ "ನನಗೆ ಸರ್ಕಾರಿ ನೌಕರಿ ಬೇಕೆ-ಬೇಕು!". ಆದರೆ ನನ್ನ ಮಕ್ಕಳನ್ನು ನಾನು ಹುಟ್ಟುವುದಕ್ಕೂ ಮುಂಚೆಯೇ ಖಾಸಗಿ ಶಾಲೆಯಲ್ಲಿ ಲಕ್ಷ -ಲಕ್ಷ ಕೊಟ್ಟು ದಾಖಾಲಾತಿ ಮಾಡಿಸಬೇಕು, ಸರ್ಕಾರಿ ಶಾಲೆಗಳ ಕಡೆಗೆ ನನ್ನ ಮಕ್ಕಳು ಕಣ್ಣನ್ನು ‌ಸಹ ಹಾಯಿಸಬಾರದು.ಇದು ಸದ್ಯದ ಜನರ ಮನೋಭಾವನೆ, ಸರ್ಕಾರಿ ಶಾಲೆಗಳ ಮೇಲಿನ ಆಸಡ್ಡೆತನ ಎಂದೇ ಹೇಳಬಹುದು. ಮಕ್ಕಳಿಗೆ ಶಿಕ್ಷಣ, ಬಟ್ಟೆ, ಪುಸ್ತಕ, ಸಮವಸ್ತ್ರ, ಊಟ, ಹಾಲು ಹಾಗೂ ಶಾಲೆಗೆ ಬರುವುದಕ್ಕೆ ಸೈಕಲ್, ಬರಲಿಲ್ಲವೆಂದರೆ ಮನೆ ಬಾಗಿಲಿಗೆ ಬರುವ ಶಿಕ್ಷಕರು,ಆಡುವುದಕ್ಕೆ ಮೈದಾನ, ನಲಿಯುವುದಕ್ಕೆಪ್ರತಿಭಾಕಾರಂಜಿ,ಕ್ರೀಡಕೂಟಗಳಾಂತಹ ಕಾರ್ಯಕ್ರಮಗಳು,ಕಲಿಯುವುದಕ್ಕೆ ಗ್ರಂಥಾಲಯ, ಕಂಪ್ಯೂಟರ್ ಗಳು ಹೀಗೆ ಎಲ್ಲಾ ಸೌಕರ್ಯಗಳನ್ನು ಉಚಿತವಾಗಿಯೇ ಸರ್ಕಾರ ಕೊಡುತ್ತದೆ. ಬೆಯುತ್ತಿರುವ ಅನ್ನದಲ್ಲಿ ಎರಡು ಅಗಳು ತೆಗೆದುಕೊಂಡು ಅವುಗಳ ಆಧಾರದ ಮೇಲೆ ಇಡೀ ಪಾತ್ರೆಯಲ್ಲಿರುವ ಅನ್ನವನ್ನು ಪರೀಕ್ಷಿಸುವಂತೆ, ಒಂದೆರಡು ತಪ್ಪುಗಳನ್ನು ಆಧಾರಿಸಿ ಎಲ್ಲಾ ಸರ್ಕಾರಿ ಶಾಲೆಗಳನ್ನು ತೂಕ ಹಾಕುತ್ತಾರೆ. ಈ ಪರ-ವಿರೋಧ ಮಾತನಾಡುವ ಜನರನ್ನು ತಕ್ಕಡಿಯಲ್ಲಿ ಹಾಕಿದರೆ,ವೈಹಿಸಿಕೊಂಡುವರು ನೆಲಕಚ್ಚಿರುತ್ತಾರೆ,ಅವರಲ್ಲೂ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾತ್ರ ಸರ್ಕಾರಿ ಶಾಲೆಗಳ ಪರವಾಗಿರುತ್ತಾರೆ. 
ಇಂಡಿಯನ್ ಎಕ್ಸ್ ಪ್ರೆಸ್ ಒಂದು ವರದಿಯ ಪ್ರಕಾರ 28,847 ಸರ್ಕಾರಿ ಶಾಲೆಗಳು[ಅನುದಾನಿತ ಶಾಲೆಗಳು ಸೇರಿ] ಕೆಲವೇ ದಿನಗಳಲ್ಲಿ ಮುಚ್ಚಿಹೋಗುತ್ತವೆ.ಕಾರಣ ಶೂನ್ಯ ಅಥವಾ ಕಡಿಮೆ ದಾಖಾಲಾತಿ. ಬಜೆಟ್ ಮಂಡನೆ ವೇಳೆ ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿದಂತೆ 8,530 ಸರ್ಕಾರಿ ಶಾಲೆಗಳು ಹತ್ತಿರವಿರುವ ಸರ್ಕಾರಿ ಶಾಲೆಗಳೊಂದಿಗೆ  ವಿಲೀನವಾಗುತ್ತವೆ ಎಂಬ ಮಾತು ನಿಜಕ್ಕೂ ಖಂಡನೀಯ. ರಾಜ್ಯದಲ್ಲಿ 11ವರ್ಷದಲ್ಲಿ 10,784 ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲಾಗಿದೆ[09/03/2017 ಪ್ರಜಾವಾಣಿ ದಿನಪತ್ರಿಕೆ ವರದಿ].ಪ್ರಸ್ತುತವಾಗಿ 216 ದಾಖಲಾತಿ ಹೊಂದಿರುವ ಪ್ರಾಥಮಿಕ ಶಾಲೆಗಳು,57 ಹಿರಿಯ ಪ್ರಾಥಮಿಕ ಶಾಲೆಗಳಿದ್ದು, 1ರಿಂದ 10 ಮಕ್ಕಳನ್ನು ಹೊಂದಿದ 3,374 ಪ್ರಾಥಮಿಕ ಹಾಗೂ 220 ಹಿರಿಯ ಪ್ರಾಥಮಿಕ ಶಾಲೆಗಳಿವೆ. 11 ರಿಂದ 30 ಮಕ್ಕಳನ್ನು ಹೊಂದಿದ 11,077 ಪ್ರಾಥಮಿಕ ಹಾಗೂ 1,541 ಹಿರಿಯ ಪ್ರಾಥಮಿಕ ಶಾಲೆಗಳಿವೆ[ ವಿಜಯವಾಣಿ ದಿನಪತ್ರಿಕೆಯ ವರದಿ].


     ಸರ್ಕಾರಿ ಶಾಲೆಗಳು ಚುನಾವಣೆ ನೆಡೆಸಲು ಮಾತ್ರ ಯೋಗ್ಯವಾಗಿವೆ ಎಂಬುದನ್ನು ನಮ್ಮ ನಾಯಕರುಗಳು ಮತದಾನದ ಒಂದು ದಿನ ಮಾತ್ರ ಸರ್ಕಾರಿ ಶಾಲೆಗಳಿಗೆ ಬಂದು ತೋರಿಸಿದ್ದಾರೆ. ಮರುದಿನ ಶಾಲೆಯ ಮುಂದೆಯೇ ನಮ್ಮ ನಾಯಕರುಗಳು ಹೋದರು ಅವರ ಕಣ್ಣು ಶಾಲೆಯ ಮೇಲೆ ಇರುವುದಿಲ್ಲ ಬದಲು ಶಾಲೆಯ ಪಕ್ಕದ ಖಾಲಿ ಜಾಗದ ಮೇಲೆ ಇರುತ್ತದೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡೇ ಮಾಡುತ್ತೇನೆ ಎಂದು ಕೊಚ್ಚಿಕೊಳ್ಳುವ ನಾಯಕರು,ಸರ್ಕಾರಿಶಾಲೆಗಳು ಕೊಚ್ಚಿಕೊಂಡು ಹೋಗುವುದನ್ನು ಕಂಡು ಮೌನವಾಗಿರುವುದು ಅವರ ಭಂಡತನವನ್ನು ಏತ್ತಿ ಹಿಡಿಯುತ್ತದೆ.ತಮ್ಮ ಮಕ್ಕಳನ್ನೋ ,ಮೊಮ್ಮಕ್ಕಳನ್ನೋ ಕಾರಿನಲ್ಲಿ ಕೂರಿಸಿಕೊಂಡು, ಯಾವುದೋ ಒಬ್ಬ ವ್ಯಕ್ತಿ ಹೆಸರನ್ನ ಕೆತ್ತಿಸಿ ಹಾಕಿದ ದೊಡ್ಡದೊಂದು ಬೋರ್ಡ್ ನೇತುಹಾಕಿದ ಗೇಟ್ ಮುಂದೆಯಲ್ಲ,ಶಾಲೆಯ ಎಸಿ ಕೊಠಡಿಯ ಒಳಗೆ ಹೋಗಿ ಕೂರಿಸಿ,ಒಂದೆರಡು ಕಂಗ್ಲಿಷ್ ಮಾತುಗಳನ್ನು ಹಾಡುವ ನಿಮಗೆ ನಮ್ಮಂತಹ ಮಕ್ಕಳು ಸರ್ಕಾರಿ ಶಾಲೆಯಲ್ಲಿ  ಕಲಿತ ಬಗೆ ಎಲ್ಲಿ ತಿಳಿಯಬೇಕು. ನಮ್ಮ ಶಾಲೆಯ ಗೇಟಿನಲ್ಲೇ ಕೈ ಮುಗಿದು ಬಾ ಎಂದು ಶಾರದೆ ಸ್ವಾಗತ ಕೋರುವ ಬಗೆ,ಗಿಡ-ಮರಗಳಿಂದ ಕೂಡಿದ ಶಾಲಾ ವಾತಾವರಣ ನಿಜಕ್ಕೂ ಪ್ರತಿಯೊಬ್ಬ ವಿದ್ಯಾರ್ಥಿಗೂ ಅವೀಸ್ಮರಣೀಯ.ನೀವು ಕಾನ್ವೆಂಟ್ ಹುಂಡಿಗೆ ಹಾಕುವ ಲಕ್ಷ-ಲಕ್ಷ ರೂಪಾಯಿಗಳನ್ನು ನಮ್ಮ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಾಕಿ. ನಾಯಕರುಗಳೇ ಹಾಗೂ ಸರ್ಕಾರಿ ನೌಕರಿಯಲ್ಲಿರುವ ಎಲ್ಲ ನೌಕರೇ ಸರ್ಕಾರಿ ಶಾಲೆಗೆ ನಿಮ್ಮ ಮಕ್ಕಳನ್ನು ಸೇರಿಸಿ ಆನಂತರ ಸರ್ಕಾರಿ ಶಾಲೆಗಳ ಅಥವಾ ಸರ್ಕಾರದ ಬಗ್ಗೆ ಮಾತನಾಡಿ.
ಒಬ್ಬ ಸರ್ಕಾರಿ ಡಾಕ್ಟರ್ ಚಿಕಿತ್ಸೆ ನೀಡುಲು ಹಣ ತೆಗೆದುಕೊಂಡಾಗ ಒಬ್ಬ ಪ್ರೆಶ್ನೆಸಿದಕ್ಕೆ,ಅವರು ಕೊಟ್ಟ ಉತ್ತರ, 1-10ನೇ ತರಗತಿಯವರೆಗೂ ಓದಿದ್ದು ಖಾಸಗಿ international ಶಾಲೆಯಲ್ಲಿ ಅದಕ್ಕೆ ಸುಮಾರು 10ಲಕ್ಷಕ್ಕೂ ಹೆಚ್ಚು ಖರ್ಚಾಗಿರಬಹುದು,ಪದವಿ ಪೂರ್ವ ಕಾಲೇಜಿಗೆ  ಎರಡು ವರ್ಷಕ್ಕೆ 5ಲಕ್ಷ, ಡಾಕ್ಟರ್ ಹುದ್ದೆಗೆ ಪ್ರವೇಶ ಪರೀಕ್ಷೆ ಬರೆಯುವುದಕ್ಕೆ ತರಬೇತಿಗೆ 2ಲಕ್ಷ , ಕೊನೆಗೂ ಸೀಟು ಸಿಕ್ಕಿದ್ದು ಖಾಸಗಿ ಕಾಲೇಜಿನಲ್ಲಿ,ಕೇವಲ ದಾಖಾಲಾತಿಗೆ 8ಲಕ್ಷ .ಹೀಗೆ ಒಟ್ಟು ವೆಚ್ಚ 30-35 ಲಕ್ಷಕ್ಕೂ ಹೆಚ್ಚು ಖರ್ಚಾಗಿದೆ.ಖರ್ಚು ಮಾಡಿದ ಹಣವನ್ನು ನಾನು ಸಂಪಾದಿಸಬೇಕಲ್ಲ ಎಂದ.
[ಇದು ಒಂದು ಉದಾಹರಣೆಯಷ್ಟೆ ಈ ಮೊತ್ತ ಒಂದು ಕೋಟಿಯನ್ನು ಮೀರಬಹುದು.]
ಅದಕ್ಕೆ ಆ ವ್ಯಕ್ತಿ ಹೀಗೆ ಉತ್ತರಿಸಿದ್ದಾನೆ,ನಿಮಗೆ ಸಂಬಳ ಕೊಡುವುದು ಸರ್ಕಾರ ಎಂತಕ್ಕೆ,ಜನರ ಸೇವೆ ಮಾಡಲು.ನೀವು ಓದಲು ಅಷ್ಟು ಖರ್ಚು ಮಾಡಿದಕ್ಕೆ ಸರ್ಕಾರ ಅಥವಾ ಜನರು ಹೊಣೆಯಲ್ಲ.ಎಲ್ಲ ಇಂಜಿನಿಯರ್ ಗಳು ವಿಶ್ವೇಶ್ವರಯ್ಯ ಆಗಲು ಸಾಧ್ಯವಿಲ್ಲ ಏಕೆಂದರೆ ಅವರು ಸರ್ಕಾರಿ ಶಾಲೆಯಲ್ಲಿ ಓದಿದಲ್ಲವೇ?.

ಯೋಚನೆ ಮಾಡಿ ಬಂಧುಗಳೇ, ನೀವು ಹೇಳುವಂತೆ ಸರ್ಕಾರಿ ಶಾಲೆಯಲ್ಲಿನ ಶಿಕ್ಷಣ ಕೊಂಚ ಖಾಸಗಿ ಶಾಲೆಗಳ ಶಿಕ್ಷಣಕ್ಕಿಂತ ಕಡಿಮೆಯೇ ಎಂದು ಇಟ್ಟುಕೊಳ್ಳೋಣ ಹಾಗಾದರೆ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ವಂಚನೆಯಾಗುತ್ತಿಲ್ಲವೇ? ಒಂದರಿಂದ -ಹತ್ತನೇ ತರಗತಿಯವರೆಗೂ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಓದಿ,ಮತ್ತೆ ತಾವು ಆಯ್ಕೆ ಮಾಡಿಕೊಂಡ ವಿಷಯವನ್ನು ಸರ್ಕಾರಿ ಕಾಲೇಜಿನಲ್ಲಿಯೇ ಓದಿದ ಮಕ್ಕಳಿಗೆ ಮುಂದೆ ನೌಕರಿ ವಿಷಯ ಬಂದಾಗ ಆ ಮಕ್ಕಳು ಎದರಿಸುವ ಸಮಸ್ಯೆಗಳು ನೂರಾರು!. ಎಲ್ಲ ಶಿಕ್ಷಣವನ್ನು ಖಾಸಗಿ ಶಾಲೆಯಲ್ಲಿ ಮುಗಿಸಿದವರು, ಕೊನಯದಾಗಿ ಅದು ಹೇಗೆ ನೀವು ಸರ್ಕಾರಿ ನೌಕರಿ ಆಸೆಗೆ ಬೀಳುತ್ತೀರ?.ಸರ್ಕಾರ ಹೇಗೆ ತನ್ನ ಶಾಲೆಯಲ್ಲಿ ಓದಿದವರನ್ನು
ನಿಲರ್ಕ್ಷ ಮಾಡುತ್ತದೆ?.ಎಲ್ಲಾ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಮುಗಿಸಿದವರು ಕೊನೆಗೆ ಖಾಸಗಿ ಕ್ಷೇತ್ರಕ್ಕೆ ಹೋಗುವುದು ಏನಾದರೂ ವಾಡಿಕೆಯೇ?.
1-10ನೇ ತರಗತಿಯವರೆಗೂ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಶೇಕಡ 5೦%ರಷ್ಟು ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಕೊಡಿ.ಸ್ವಯಂಚಾಲಿತವಾಗಿ ಸರ್ಕಾರಿ ಶಾಲೆಗಳಿಗೆ ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಸೇರಿಸುತ್ತರೆ.ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದುತ್ತವೆ. ಆಗ ಸರ್ಕಾರ ಆರ್ ಟಿ ಇ(ಶಿಕ್ಷಣ ಹಕ್ಕು ಕಾಯ್ದೆ) ಅಡಿ ಖಾಸಗಿ ಶಾಲೆಗಳಿಗೆ ವರ್ಷಕ್ಕೆ 450ಕೋಟಿ ಕೊಡುವುದು ತಪ್ಪುತ್ತದೆ. ಅದೇ ಹಣವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಬಹುದು.

                             - ಪ್ರಿಯಾ ಡಿ

ಕಾಮೆಂಟ್‌ಗಳು

  1. ಅಕ್ಕ ನಿಮ್ಮ ಬರಹ ತುಂಬಾ ಚೆನ್ನಾಗಿದೆ
    ಇದೇ ತರ ನಿಮ್ಮ ಬರಹ ಗಳು ಇನ್ನೂ ಚೆನ್ನಾಗಿ ಹಾಗೂ ಪ್ರಸಿದ್ದಿ ಪಡೆಯಲಿ ಎ0ದು
    ಬಯಸುತ್ತೇನೆ ..
    ಅಭಿನಂದನೆಗಳು..💐💐

    ಪ್ರತ್ಯುತ್ತರಅಳಿಸಿ
  2. ಒಂದು ಉತ್ತಮ ಪ್ರಯತ್ನ. ಸಮಸ್ಯೆಗಳನ್ನ ಗುರುತಿಸುವ ತೀಕ್ಷ್ಣತೆ ಇದ್ದಂತೆ, ಪರಿಹಾರ ಸೂಚಿಸುವ ಸೂಕ್ಷ್ಮತೆ ಕೂಡ ಇರಬೇಕಿತ್ತು ಅನ್ನಿಸಿತು.
    ಮೊದಲು ಮೀಸಲಾತಿಯ ಬಗೆಗಿನ ತಿಳುವಳಿಕೆ ಹೊಂದಬೇಕು. ಮೀಸಲಾತಿ ಇರುವುದು, ಐತಿಹಾಸಿಕವಾಗಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ, ತುಳಿತಕ್ಕೊಳಗಾದವರನ್ನು ಮೇಲೆತ್ತಲು, ಸಂವಿಧಾನದಲ್ಲಿ ಅಳವಡಿಸಿದ ಮಾರ್ಗ.
    ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಮೀಸಲಾತಿ ಎಂದರೆ, ಅಲ್ಲಿ ಓದುವವರು ಹಿಂದುಳಿದವರು, ಅಶಕ್ತರು/ಸಾಮಾಜಿಕ ತುಳಿತಕ್ಕೊಳಗಾದವರು ಅಂತ ಒಪ್ಪಿದಂತಲ್ಲವೆ. ಹಾಗು ಒಂದು ಪಕ್ಷ ಮೀಸಲಾತಿ ಕೊಟ್ಟರು, ಈ ರೀತಿ ಕಡಿಮೆ ಸಾಮರ್ಥ್ಯ ಉಳ್ಳವರಿಂದ ಆಡಳಿತ ಯಂತ್ರ, ಸಮರ್ಥವಾಗಿ ಸಾಗಬಲ್ಲದೆ? ಯೋಚಿಸಿ!
    ಇನ್ನೊಂದು ಶಿಕ್ಷಣ , ಪ್ರತಿಯೊಬ್ಬ ಭಾರತೀಯನ ಮೂಲಭೂತ ಹಕ್ಕು.ಹಾಗಾಗಿ ಸರ್ಕಾರ ಉಚಿತ ಶಿಕ್ಷಣ ನೀಡುವ ಜವಾಬ್ದಾರಿ ಹೊತ್ತಿದೆ. ಆದರೆ, ಸರ್ಕಾರಿ ಕೆಲಸ ಎಲ್ಲರ ಮೂಲಭೂತ ಹಕ್ಕಲ್ಲ. ಅದನ್ನು ಪಡೆಯಲು ಸಮಾನ ಅವಕಾಶವಿದ್ದರು, ಅದೇ ಮೂಲ ಮಾನದಂಡ ಆಗಬಾರದು.
    ಇಲ್ಲಿ ಮುಖ್ಯ ಸಮಸ್ಯೆ ಇರುವುದು 'ಗುಣಮಟ್ಟದ ಶಿಕ್ಷಣದಲ್ಲಿ'. ಇದಕ್ಕೆ ಬೇರು ಆರ್ಥಿಕ ಸಂಪನ್ಮೂಲ ಕೊರತೆ. ನಿಮಗೆ ತಿಳಿದಿರಲಿ, ನವೋದಯ ಶಾಲೆ, ಸೈನಿಕ ಶಾಲೆ , ಕೇಂದ್ರೀಯ ಶಾಲೆ(ಕೆ.ವಿ) ಇವು ಸಹ ಸರ್ಕಾರಿ ಶಾಲೆಗಳೇ. ಆದ್ರೆ ಇಲ್ಲಿ ಸೇರಲು ಜನ ಮುಗಿಬಿದ್ದು ನಿಲ್ಲುತ್ತಾರೆ. ಕಾರಣ ಅಲ್ಲಿ ಓದಿದವರಿಗೆ ಯಾವುದೋ ಮೀಸಲಾತಿ ಸಿಗುವುದು ಎಂದಲ್ಲ, ಬದಲಿಗೆ ಅಲ್ಲಿನ ಗುಣಮಟ್ಟ ಮಕ್ಕಳನ್ನ ಉತ್ತಮ ಯಶಸ್ಸಿಗೆ ಕೊಂಡೊಯ್ಯುವುದು ಎಂದು.
    ಇಲ್ಲಿ ಆಗಬೆಕಿರುವುದು, "ಸಹಭಾಗಿತ್ವ, ಸಹಕಾರ". ಅಂದರೆ, ಸರ್ಕಾರೀ ಶಾಲೆಗಳಲ್ಲಿ ಗುಣಮಟ್ಟ ಎತ್ತರಿಸಲು, ಸರ್ಕಾರದ ಜೊತೆಗೆ, ಖಾಸಗಿ ಸಂಸ್ಥೆಗಳು, ಸರ್ಕಾರೇತರ ಮತ್ತು ನಾಗರೀಕ ಸಂಸ್ಥೆಗಳು ಮತ್ತು ಮುಖ್ಯವಾಗಿ ಜನರ ನೇರ ಸಹಭಾಗಿತ್ವ.
    ಒಬ್ಬ ಕೂಲಿ ಮಾಡುವ ಕಾರ್ಮಿಕನು ತನ್ನ ದುಡಿಮೆಯ ದುಡ್ಡು ತೆತ್ತು ತನ್ನ ಮಕ್ಕಳನ್ನು ಇಂದು ಖಾಸಗಿ ಶಾಲೆಗೆ ಕಳಿಸುವುದು ಬಚ್ಚಿಟ್ಟ ಸತ್ಯವೇನಲ್ಲ. ಅಲ್ಲಿ ಖಾಸಗಿಯವರ ಲಾಭಕ್ಕೆ ತೆತ್ತುವ ದುದ್ದಲ್ಲಿ 20-30% ಸರ್ಕಾರೀ ಶಾಲೆಗೆ ಫೀಸ್ ಮಾದರಿಯಲ್ಲಿ ತೆತ್ತರೆ, ಖಾಸಗಿಯವರು 40-50% ಸಂಪನ್ಮೂಲ ಒದಗಿಸಿದರೆ, ಇನ್ನು ಮಿಕ್ಕಿದ್ದು ಸರ್ಕಾರ ನೋಡಿಕೊಳ್ಳುತ್ತದೆ. ಹಗೆ ಎಲ್ಲರ ಸಹಭಾಗಿತ್ವ ಮತ್ತು ಗುಣಮಟ್ಟದ ಶಿಕ್ಷಕರ ನೀಡಿ ಸರ್ಕಾರೀ ಶಾಲೆ ಮೇಲೆತ್ತಬೆಕೆ ವಿನಹ ಮೀಸಲಾತಿ ಮುಂತಾದವುಗಳಿಂದಲ್ಲ ಅಲ್ಲವೇ?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಭಾರತದ ಸಂವಿಧಾನದ ಪ್ರಕಾರ ಎಲ್ಲರೂ ಸಮಾನರು.
      ಮೀಸಲಾತಿ ತೆಗೆದುಕೊಂಡ ತಕ್ಷಣ ಹಿಂದುಳಿದ, ತುಳಿತಕ್ಕೊಳಗಾದವರು ಎಂದು ಆಗುವುದಿಲ್ಲ. CETಯ ನಂತರ ನಾವು ವಿದ್ಯಾರ್ಥಿಗಳು ಸಾಕಷ್ಟು ಮೀಸಲಾತಿ ಗಳನ್ನು ಪಡೆದುಕೊಳ್ಳುತ್ತೇವೆ.
      ಮೀಸಲಾತಿ ಹೆಸರಿನಾಡಿ ಹಿಂದುಳಿದ ,ತುಳಿತಕ್ಕೊಳಗಾದವರು ಎಂಬ ಪದಗಳ ಬಳಕೆ ಖಂಡನೀಯ

      ನಿಮ್ಮ ಸಲಹೆಗಳಿಗೆ ಧನ್ಯವಾದಗಳು..

      ಅಳಿಸಿ
    2. ದಯಮಾಡಿ ಭಾರತದ ಸಂವಿಧಾನ ಪರಿಚ್ಚೆದ 15, 16 ರನ್ನು ಸಮಗ್ರವಾಗಿ ಓದಿ, ಅರ್ಥೈಸಿಕೊಂಡು ಆಮೇಲೆ ಖಂಡಿಸುವಿರಂತೆ!
      ಅಲ್ಲಿ ಬಳಕೆಯಾಗುವ ಮೂಲ ಪದ "ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ" ಮೀಸಲಾತಿ ಎಂದಿದೆ. ಇತ್ತೀಚೆಗೆ ಸಂವಿಧಾನದ 103ನೇ ತಿದ್ದುಪಡಿ ಅನ್ವಯ "ಆರ್ಥಿಕ ಹಿಂದುಳಿದ" ಎಂಬ ಪದ ಸೇರ್ಪಡೆ ಮಾಡಿ 10% ಮೀಸಲಾತಿ ನೀಡಲಾಗಿದೆ. ಮುಂದುವರೆದು ಈಗಾಗಲೇ ಗ್ರಾಮೀಣ ಪ್ರದೆಶದಲ್ಲಿದ್ದು ಹಿಂದುಳಿದ, ಕಲ್ಯಾಣ ಕರ್ನಾಟಕ ಇತ್ಯಾದಿ ಮೀಸಲಾತಿಗಳು ಇರುವುದು ಹಿಂದುಳಿದ ವರ್ಗಗಳ ಮುಂದೆ ತರಲೆಂದೆ ಹೊರತು, ಈ ರೀತಿ ಕಾಟಾಚಾರವಾಗಿ ಹೇಗೆ ಬೇಕು ಹಾಗೆ ಬಳಸಲು ಅಲ್ಲ. ವಾಸ್ತವಾಂಶಗಳ ಅರಿವು , ಅಭಿಪ್ರಾಯಗಳ ಖಂಡಿಸುವ ಮುನ್ನ ಇದ್ದರೆ ಒಳಿತು. ಒಳಿತಾಗಲಿ

      ಧನ್ಯವಾದಗಳು

      ಅಳಿಸಿ
    3. ನೀವು ಹೇಳಿದ ವಿಚಾರಗಳನ್ನೆ ಒಪ್ಪಿಕೊಳ್ಳೋಣ....!!
      ನವೋದಯ ಶಾಲೆ, ಸೈನಿಕ ಶಾಲೆ , ಕೇಂದ್ರೀಯ ಶಾಲೆ
      ಇವುಗಳನ್ನು ಸರ್ಕಾರ ನೆಡೆಸುತ್ತಿರುವುದು. ನಾನು ಹೇಳ ಹೊರಟಿರುವುದು ಸರ್ಕಾರ ನೆಡೆಸುತ್ತಿರುವ "ಸರ್ಕಾರಿ ಶಾಲೆ "(ಹೆಸರನ್ನು ಗಮನಿಸಿ).
      ನಾನು 1-10ನೇ ತರಗತಿಯ ವರೆಗೂ ಸರ್ಕಾರಿ ಶಾಲೆಯಲ್ಲಿಯೇ ಆಭ್ಯಾಸ ಮಾಡಿದ್ದು ,ಶಾಲೆಯ ವಾತವರಣ ,ಶಿಕ್ಷಣದ ಬಗ್ಗೆ ಸ್ವತಃ ಕಂಡಿದ್ದೇನೆ ಹಾಗೂ ಶಾಲೆಗೆ ಋಣಿಯಾಗಿದ್ದೇನೆ. ಅನೇಕ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳಿಂದ (ಅಚ್ಚುಕಟ್ಟಾದ ಕಟ್ಟಡ, ಶೌಚಾಲಯ)ವಂಚಿತವಾಗಿವೆ. ಕಂಪ್ಯೂಟರ್ ಗಳಿದ್ದು ಸಹ ಹೇಳಿ ಕೊಡಲು ಶಿಕ್ಷಕರಿಲ್ಲದೆ ಡಿಜಿಟಲ್ ಶಿಕ್ಷಣ ದಿಂದ ವಿಧ್ಯಾರ್ಥಿಗಳು ವಂಚಿತರಾಗಿದ್ದಾರೆ (ಸ್ವಂತ ಅನುಭವ)
      ಹಾಗದರೆ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಸೌಕರ್ಯ ಗಳಿಂದ ವಂಚಿತರಾಗುತ್ತಿಲ್ಲವೇ..???ಇತರೆ ಶಾಲೆಗಳ ಮಕ್ಕಳಿಗಿಂತ ಸರ್ಕಾರಿ ಶಾಲೆಯ ಮಕ್ಕಳು ಹಿಂದುಳಿಯುತ್ತಿಲ್ಲವೇ..?? ನೀವೇ ಹೇಳಿದಂತೆ ಅವರಿಗೆ ಮೀಸಲಾತಿ ಕೊಡಬೇಕಲ್ಲವೇ...??
      ನಾವು ಅನುಭವಿಸಿದ ಕಷ್ಟಗಳನ್ನು ನಮ್ಮ ಶಾಲೆಯ ಮಕ್ಕಳು ಅನುಭವಿಸ ಬಾರದು ಎಂಬ ಉದ್ದೇಶದಿಂದ ನಮ್ಮ ಒಂದು ಚಿಕ್ಕ ತಂಡ ಉಚಿತವಾಗಿ ಸರ್ಕಾರಿ ಶಾಲೆಗಳ ಜೀಣೋದ್ದಾರ( ಬಣ್ಣ,ಸ್ವಚ್ಛತೆ) ಮಾಡುತ್ತಿದ್ದೇವೆ, ನಮ್ಮ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಪ್ರಾಯೋಗಿಕ ತರಗತಿಗಳನ್ನು ಮಾಡಿದ್ದೇವೆ.
      ಈ ಒಂದು ಲೇಖನ ಸರ್ಕಾರಕ್ಕೆ ಎಚ್ಚರಿಕೆಯ ಘಂಟೆ ಬಾರಿಸುವ ಸಲುವಾಗಿ ಬರೆದ್ದಿದ್ದು , ಸುಮಾರು 4-5 ಪತ್ರಿಕೆ , ಗೂಗಲ್ ,ಸರ್ಕಾರಿ ಶಾಲಾ ಶಿಕ್ಷಕರು ಹೀಗೆ ಹತ್ತಾರು ಮೂಲಗಳಿಂದ ವಿಷಯ ಸಂಗ್ರಹಣೆಯಾಗಿದೆ.
      ಪೂರ್ಣ ಲೇಖನವು ಕೆಲವು ವಿಮರ್ಶಕರಿಂದಲೂ ತಿದ್ದುಪಡಿಗೆ ಒಳಪಟ್ಟಿದೆ.
      ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೂ ಪಟ್ಟಣದ ಶಾಲೆಗಳಿಗೂ ವ್ಯತ್ಯಾಸವಿದೆ.

      ಸಂವಿಧಾನದ ಬಗೆಗಿನ ಮಾಹಿತಿಗೆ ಧನ್ಯವಾದಗಳು..
      ನಿಮ್ಮ ಸಲಹೆಗಳಿಗೆ ಸ್ವಾಗತ..!!

      ಅಳಿಸಿ
    4. ಖಂಡಿತ. ನಿಮ್ಮಂತೆಯೇ ನಾವು ಸಹ. ಗ್ರಾಮೀಣ ಭಾಗದ ಸರ್ಕಾರೀ, ಕನ್ನಡ ಮಾಧ್ಯಮದಲ್ಲೇ ಓದಿ, ಉನ್ನತ ಶಿಕ್ಷಣದವರೆಗೂ ಸರ್ಕಾರದ ಸಂಸ್ಥೆಗಳಲ್ಲೇ ಪೂರ್ಣಗೊಳಿಸಿದ್ದೇವೆ. ನೋಡಿ ಸಮಸ್ಯೆಯ ಮೂಲ ನಿಮಗೆ ತಿಳಿದಿದೆ. ಏನು? ಮೂಲಭೂತ ಸೌಕರ್ಯದ ಕೊರತೆ ಹಾಗಾಗಿ ಅಲ್ಲಿ ಓದುವ ಮಕ್ಕಳು , ಉಳಿದವರುಗಳಿಗಿಂತ ಹಿಂದುಉಳಿದೇ ಉಳಿಯುತ್ತಾರೆ. ಇದು ಪ್ರಾಯೋಗಿಕ ಸತ್ಯ.
      ಈಗ ನೀವು ಮೀಸಲಾತಿ ಪರಿಹಾರ ಹೇಳಿದ್ದು, ಈ ವ್ಯವಸ್ಥೆ ಹಾಗೆ ಇರಲಿ, ಇಲ್ಲಿ ಓದುವವರು ಹಿಂದು ಉಳಿಯುತ್ತಲೇ ಇರಲಿ , ನೀವು ಈ ಹಿಂದುಳಿಸಿದ ವರ್ಗಕ್ಕೆ ಮೀಸಲಾತಿ ಕೊಟ್ಟು, ಈ ವ್ಯವಸ್ಥೆ ಹೇಗೆ ಮುಂದುವರೆಸಿ ಎನ್ನುವಂತೆ ಆಗಲಿಲ್ಲವೆ.
      ಅದೇ ನೋಡಿ ಎಲ್ಲ್ರರ "ಸಹಕಾರ ತತ್ವದಿಂದ", ಆರ್ಥಿಕ ಸಂಪನ್ಮೂಲ ಕ್ರೂಢಿಕೃತ ಮಾಡಿದರೆ, ಯಾವ ಸರ್ಕಾರೀ ಶಾಲೆ ಅಭಿವೃದ್ಧಿ ಆಗೋಲ್ಲ. ಇದಕ್ಕೆ ಬೇಕಿರುವುದು, ಸರ್ಕಾರದಿಂದ ಒಂದು ಶಿಕ್ಷಣ ಪಾಲಿಸಿ ಮತ್ತು ಜನಪ್ರತಿನಿಧಿಗಳ ಮತ್ತು ಜನರ ದೃಢ ನಿಶ್ಚಯ.
      ಶಿಕ್ಷಣ ಮಾರಾಟಕ್ಕಿಲ್ಲ ಒಪ್ಪೋಣ, ಆದರೆ ಶಿಕ್ಷಣ ಮೀಸಲಾತಿಯ ದಾರಿ ಆಗಬಾರದು. ಮೀಸಲಾತಿಯ ಮೀರಿ ಬೆಳೆವ ವ್ಯಕ್ತಿತ್ವ ಸೃಷ್ಟಿ 21ನೇ ಶತಮಾನದ ತರುಣ-ತರಿಣಿಯರ ಕನಸಾಗಬೇಕು.
      ನಿಮ್ಮ ಲೇಖನ ಮತ್ತು ಅದರ ಪರಿಶ್ರಮ ಹಾಗು ಅದರ ಉದ್ದೇಶ ಸ್ವಾಗತಾರ್ಹ ಮತ್ತು ಶ್ಲಾಘನೀಯ. ಆದರೆ ಮೀಸಲಾತಿಯ ಬಗೆಗಿನ ಪರಿಹಾರ ಸೂಕ್ತವಲ್ಲ ಎಂಬ ಅಭಿಪ್ರಾಯ ಅಷ್ಟೇ ನಾನು ತಿಳಿಸಿದ್ದು.
      # ಶಿಕ್ಷಣ ಮೀಸಲಾತಿಗಲ್ಲ

      ತಮ್ಮ ಮತ್ತು ತಮ್ಮ ತಂಡದ ಕಾರ್ಯ ಹೀಗೆ ಮುಂದುವರೆಯಲಿ.����

      ಅಳಿಸಿ
    5. ಶಿಕ್ಷಣ ಮೀಸಲಾತಿಗಲ್ಲ ಎಂಬುದಕ್ಕೆ ನನ್ನ ಬೆಂಬಲವಿದೆ.

      ಅಳಿಸಿ
    6. ಶಿಕ್ಷಣ ಮೀಸಲಾತಿಗಲ್ಲ ಎಂಬುದಕ್ಕೆ ನನ್ನ ಬೆಂಬಲವಿದೆ.

      ನಿಮ್ಮ ಸಲಹೆಗಳಿಗೆ ಧನ್ಯವಾದಗಳು..!!

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...