(ವೇಶ್ಯೆ ಎಂದಾಕ್ಷಣ ಮುಖ ಸಿಂಡರಿಸುವ ವ್ಯಕ್ತಿಗಳಿಗೆ ಅವಳ ಮತ್ತೊಂದು ರೂಪವನ್ನು ಪರಿಚಯಿಸುವುದೇ ಈ ಕವಿತೆಯ ಉದ್ದೇಶವಾಗಿರುತ್ತದೆ.)
ಅಂದು ಮತ್ತು ಇಂದು
ಹೇವರಿಕೆ ಹುಟ್ಟಿಸುವಂತಹ
ಉದ್ಯೋಗ ನನ್ನದು ಹೌದು
ಆದರೆ ಅರಸಿ ಬಂದದ್ದಲ್ಲ
ಹಸಿ ಮಾಂಸದ ಥರಾ
ಮಾರಾಟವಾದದ್ದು!
ಬಡತನವೆಂಬುದು ನಿಗಿನಿಗಿ
ಪ್ರಾಯದೊಂದಿಗೆ ಸ್ಪರ್ಧೆಗೆ
ನಿಂತಿದ್ದಾಗ ನನ್ನವರೇ ದೂಡಿದ್ದು!
ಅಂದು ಮುರುಕಲು ಮತ್ತು
ಗಾಳಿ ಬೆಳಕಿಲ್ಲದ ಕೋಣೆಯಲ್ಲಿ
ಕಚ್ಚೆ ಹರುಕನಿಗೆ ಸೆರಗ ಹಾಸಿದ್ದೇನೋ
ಹೌದು.
ನೂರು ರೂಪಾಯಿಯ ಒಂದು
ನೋಟಿಗೆ ಒದ್ದೆಯಾಗಿ ಹೋದದ್ದು
ನಿಜವೇ.
ಇಂದು ನನ್ನ ವ್ಯವಹಾರವೆಲ್ಲಾ ಪಂಚ ತಾರೆ
ಹೋಟೆಲುಗಳಲ್ಲಿ ನಡೆಯುತ್ತಿದೆ
ನೂರಾರು
ಮಹಲಿನ ಮೆಟ್ಟಿಲುಗಳ ಹತ್ತಿ
ಇಳಿಯುತ್ತಿದ್ದೇನೆ
ಆದರೆ ಈ ಹಿಂದಿನಂತೆಯೇ
ಕುತ್ತಿಗೆಯಲ್ಲಿ
ಪರಚಿದ ಗುರುತು,ತೋಳುಗಳಲ್ಲಿ ಜಿನುಗುವ
ರಕ್ತ, ಪ್ರಾಣಿಯಂತೆ ಅಪರಿಚಿತನೊಬ್ಬ
ಕಚ್ಚಿದ
ಪ್ರತಿಫಲವಾಗಿ ಊದಿದ ತುಟಿಗಳ ದರುಶನ
ನಿಮಗಾಗುತ್ತದೆ.
ನನ್ನಲ್ಲಿನ ತಾಯ ಕರುಳು ಮಡತೆ
ಬಿದ್ದು ದಶಕಗಳಾಗಿವೆ
ಹೆಣ್ತನವೆಂಬುದು ರಾತ್ರೋರಾತ್ರಿ
ಸತ್ತು ಹೋಗಿದೆ
ನನ್ನ ಮೈ ಮೇಲೆ ಸವಾರಿ ಮಾಡುವವರಿಗೆ
ನಾನು ಭೋಗದ ವಸ್ತುವಷ್ಟೆ ಈಗ!
ರೇಡ್ ಆಗುವ ರಸ್ತೆಗಳಲ್ಲಿ 'ಹೋ' ಎಂದು
ಚೀರಾಡುವುದೆ ನನ್ನ ಸದ್ಯದ ಯೋಗ!
ಭೂತಕಾಲದಲ್ಲಿ ಧಕ್ಕಡಿಯ
ದಿನಗಳೊಂದಿಗೆ ಬದುಕುತ್ತಿದ್ದೆ
ಈಗ ತಕ್ಕಡಿ ತುಂಬುವಷ್ಟು
ಹಣವಿದೆ. ಆದರೆ ಜೊತೆಯಲ್ಲಿ
'ವೇಶ್ಯೆ' ಎಂಬ ಪಟ್ಟವಿದೆಯಲ್ಲಾ
ಏನು ಮಾಡಲಿ?
'ಇನ್ನು ಬೇಡ' ಎಂಬ ಠರಾವೆತ್ತಿದರೂ
ಮನ ಬಂದಂತೆ ಥಳಿಸುವರಲ್ಲಾ
ಹೇಗೆ ಬಾಳಲಿ?
ತಿಮಿರಗಳಲ್ಲಿಯೇ ಜೀವನದ
ಅರ್ಧ ಭಾಗ ಸವೆಸಿದವಳು ನಾನು
ಅವಿರ್ನಾನುಭಾವ ಬೆಳಕಿನ ಮೇಲೆ
ಆಸೆ ಮತ್ತು ನಂಬಿಕೆಗಳಿಲ್ಲ
ಎಷ್ಟೇ ಹೆಕ್ಕಿದರೂ ಉತ್ತರ ಸಿಗದ
ಬದುಕಿಗೀಗ ನನ್ನ ಹೊಕ್ಕುಳೇ ಬಂಡವಾಳ!
ಮೂಳೆ ಚಕ್ಕಳ ಬಿದ್ದಿದ್ದರೂ ಗಿರಾಕಿಗಳಿಗೆ
ನಾನೇ ಜೀವಾಳ!
ಫೋನು ಖನ ಖನಿಸುತ್ತಿದೆ ಉನ್ಮಾದದ ಉಚ್ವಾಸದೊಂದಿಗೆ ಹೊರಗೊಬ್ಬ ಕಾಯುತ್ತಿದ್ದಾನೆ
ಹೋಗಿ ಬರಲೇ?
ದೀಕ್ಷಿತ್ ನಾಯರ್
ಯುವ ಬರಹಗಾರ & ವಾಗ್ಮಿ, ಮಂಡ್ಯ
ಅಂದು ಮತ್ತು ಇಂದು
ಹೇವರಿಕೆ ಹುಟ್ಟಿಸುವಂತಹ
ಉದ್ಯೋಗ ನನ್ನದು ಹೌದು
ಆದರೆ ಅರಸಿ ಬಂದದ್ದಲ್ಲ
ಹಸಿ ಮಾಂಸದ ಥರಾ
ಮಾರಾಟವಾದದ್ದು!
ಬಡತನವೆಂಬುದು ನಿಗಿನಿಗಿ
ಪ್ರಾಯದೊಂದಿಗೆ ಸ್ಪರ್ಧೆಗೆ
ನಿಂತಿದ್ದಾಗ ನನ್ನವರೇ ದೂಡಿದ್ದು!
ಅಂದು ಮುರುಕಲು ಮತ್ತು
ಗಾಳಿ ಬೆಳಕಿಲ್ಲದ ಕೋಣೆಯಲ್ಲಿ
ಕಚ್ಚೆ ಹರುಕನಿಗೆ ಸೆರಗ ಹಾಸಿದ್ದೇನೋ
ಹೌದು.
ನೂರು ರೂಪಾಯಿಯ ಒಂದು
ನೋಟಿಗೆ ಒದ್ದೆಯಾಗಿ ಹೋದದ್ದು
ನಿಜವೇ.
ಇಂದು ನನ್ನ ವ್ಯವಹಾರವೆಲ್ಲಾ ಪಂಚ ತಾರೆ
ಹೋಟೆಲುಗಳಲ್ಲಿ ನಡೆಯುತ್ತಿದೆ
ನೂರಾರು
ಮಹಲಿನ ಮೆಟ್ಟಿಲುಗಳ ಹತ್ತಿ
ಇಳಿಯುತ್ತಿದ್ದೇನೆ
ಆದರೆ ಈ ಹಿಂದಿನಂತೆಯೇ
ಕುತ್ತಿಗೆಯಲ್ಲಿ
ಪರಚಿದ ಗುರುತು,ತೋಳುಗಳಲ್ಲಿ ಜಿನುಗುವ
ರಕ್ತ, ಪ್ರಾಣಿಯಂತೆ ಅಪರಿಚಿತನೊಬ್ಬ
ಕಚ್ಚಿದ
ಪ್ರತಿಫಲವಾಗಿ ಊದಿದ ತುಟಿಗಳ ದರುಶನ
ನಿಮಗಾಗುತ್ತದೆ.
ನನ್ನಲ್ಲಿನ ತಾಯ ಕರುಳು ಮಡತೆ
ಬಿದ್ದು ದಶಕಗಳಾಗಿವೆ
ಹೆಣ್ತನವೆಂಬುದು ರಾತ್ರೋರಾತ್ರಿ
ಸತ್ತು ಹೋಗಿದೆ
ನನ್ನ ಮೈ ಮೇಲೆ ಸವಾರಿ ಮಾಡುವವರಿಗೆ
ನಾನು ಭೋಗದ ವಸ್ತುವಷ್ಟೆ ಈಗ!
ರೇಡ್ ಆಗುವ ರಸ್ತೆಗಳಲ್ಲಿ 'ಹೋ' ಎಂದು
ಚೀರಾಡುವುದೆ ನನ್ನ ಸದ್ಯದ ಯೋಗ!
ಭೂತಕಾಲದಲ್ಲಿ ಧಕ್ಕಡಿಯ
ದಿನಗಳೊಂದಿಗೆ ಬದುಕುತ್ತಿದ್ದೆ
ಈಗ ತಕ್ಕಡಿ ತುಂಬುವಷ್ಟು
ಹಣವಿದೆ. ಆದರೆ ಜೊತೆಯಲ್ಲಿ
'ವೇಶ್ಯೆ' ಎಂಬ ಪಟ್ಟವಿದೆಯಲ್ಲಾ
ಏನು ಮಾಡಲಿ?
'ಇನ್ನು ಬೇಡ' ಎಂಬ ಠರಾವೆತ್ತಿದರೂ
ಮನ ಬಂದಂತೆ ಥಳಿಸುವರಲ್ಲಾ
ಹೇಗೆ ಬಾಳಲಿ?
ತಿಮಿರಗಳಲ್ಲಿಯೇ ಜೀವನದ
ಅರ್ಧ ಭಾಗ ಸವೆಸಿದವಳು ನಾನು
ಅವಿರ್ನಾನುಭಾವ ಬೆಳಕಿನ ಮೇಲೆ
ಆಸೆ ಮತ್ತು ನಂಬಿಕೆಗಳಿಲ್ಲ
ಎಷ್ಟೇ ಹೆಕ್ಕಿದರೂ ಉತ್ತರ ಸಿಗದ
ಬದುಕಿಗೀಗ ನನ್ನ ಹೊಕ್ಕುಳೇ ಬಂಡವಾಳ!
ಮೂಳೆ ಚಕ್ಕಳ ಬಿದ್ದಿದ್ದರೂ ಗಿರಾಕಿಗಳಿಗೆ
ನಾನೇ ಜೀವಾಳ!
ಫೋನು ಖನ ಖನಿಸುತ್ತಿದೆ ಉನ್ಮಾದದ ಉಚ್ವಾಸದೊಂದಿಗೆ ಹೊರಗೊಬ್ಬ ಕಾಯುತ್ತಿದ್ದಾನೆ
ಹೋಗಿ ಬರಲೇ?
ದೀಕ್ಷಿತ್ ನಾಯರ್
ಯುವ ಬರಹಗಾರ & ವಾಗ್ಮಿ, ಮಂಡ್ಯ
ಅದ್ಬುತ ದೀಕ್ಷಿತ್🙏🙏🙏👏👏👏👏
ಪ್ರತ್ಯುತ್ತರಅಳಿಸಿ👏👏👏👏👏👏
ಪ್ರತ್ಯುತ್ತರಅಳಿಸಿದುರ್ಬಲ ಹೆಣ್ಣಿನ ಮನಸ್ಸು ತೊರುವ ಕನ್ನಡಿಯಂತಿದೆ.👏👏👌
ಪ್ರತ್ಯುತ್ತರಅಳಿಸಿಬಹಳ ಸೊಗಸಾಗಿದೆ.....
ಪ್ರತ್ಯುತ್ತರಅಳಿಸಿಹೆಣ್ಣೇ ಬರೆದಂತಿದೆ 👍👍👍
ಪ್ರತ್ಯುತ್ತರಅಳಿಸಿ