ಲೋಕದ ಕಣ್ಣಿಗೆ ಹೆಣ್ಣಾದರೂ ಅದೇ ಲೋಕ ನೋಡುವ ದೃಷ್ಟಿಗೆ ಮೂರನೆಯವಳು!
ಅವಳೆಂದರೆ ಶಕ್ತಿ! ಜಗತ್ತಿನ ಎಲ್ಲಾ ಸಹನ ಶಕ್ತಿಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಎಲ್ಲವನ್ನು ಸಹಿಸುವವಳು, ಪ್ರೀತಿಸುವವಳು. ಅಂಥವಳನ್ನು ಕವಿ ಅನಂತ ಅವರು "ಮೂರನೆಯವಳು" ಎಂಬ ತಮ್ಮ ಕವನ ಸಂಕಲನದಲ್ಲಿ ಅವಳ ಸ್ವರೂಪನ್ನು ಅಕ್ಷರಗಳ ಮೂಲಕ ಚಿತ್ರಿಸಿದ್ದಾರೆ..!
ವಿಭಿನ್ನವಾದ ಮುಖಪುಟ ಆಕೆಯ ಬದುಕಿನ ಸಾಗುವ ಹೆಜ್ಜೆಗಳನ್ನು, ಆಕೆಯು ಅನುಭವಿಸುವ ತನ್ನೊಳಗಿನ ನೋವನ್ನು ಬಿಂಬಿಸುತ್ತದೆ. ಮುಖಪುಟ ಸರಿಸಿ ಮುಂದೆ ಹೋದಂತೆ ತನ್ನ ತಾಯಿ ಹಾಗೂ ಕಾಮದ ಕಣ್ಣಿಗೆ ಬಲಿಯಾದ ಹೆಣ್ಣು ಮಕ್ಕಳ ಅತೃಪ್ತ ಆತ್ಮಗಳಿಗೆ ಎಂಬ ಕವಿಯ ಅರ್ಪಣಾ ಭಾವ ಮನ ಹೊಕ್ಕುತ್ತದೆ..!
ಮೂರನೆಯವಳು ಕವನ ಸಂಕಲನವನ್ನು ಐದು ಭಾಗಗಳಾಗಿ ವಿಂಗಡಿಸಿ.. ಪ್ರತಿ ಭಾಗದಲ್ಲೂ ಹೆಣ್ಣಿನ ವಿಭಿನ್ನ ರೂಪಗಳನ್ನು ಸೆರೆಹಿಡಿದಿದ್ದಾರೆ. ಎಳೆ ವಯಸ್ಸಿನಲ್ಲಿ ಹೆಣ್ಣು ಗಂಡು ಎಂಬ ಯಾವುದೇ ಬೇಧವಿಲ್ಲದೆ ಆಡಿ ಬೆಳೆಯುತ್ತಿದ್ದ ನಾವು ಕ್ರಮೇಣ ಆಕೆ ಗಂಡು ಮಕ್ಕಳನ್ನು ಮಾತನಾಡಿಸಲು ಹಿಂಜರಿಯುತ್ತಾಳೆ. ಕಾರಣ ಮನಸ್ಥಿತಿ ಒಂದೇ ಇದ್ದರೂ ದೇಹಸ್ಥಿತಿ ಬದಲಾಗಿ ಹೋಗಿರುತ್ತದೆ.. "ನೀನು ಹೆಣ್ಣು ನೀ ಇನ್ನು ಮುಂದೆ ಹೀಗೆ ಇರಬೇಕು ಅನ್ನೋ ಕಟ್ಟು ಪಾಡುಗಳಿಂದ ಅವಳನ್ನು ಸಮಾಜ ಬಂಧಿಸಿಬಿಡುತ್ತದೆ.!" ಆಗ ಅವಳು ಮೂರನೆಯವಳಾಗಿ ಬದುಕಬೇಕು!
ಲೋಕದ ಕಣ್ಣಿಗೆ ಹೆಣ್ಣಾದರೂ ಅದೇ ಲೋಕ ನೋಡುವ ದೃಷ್ಟಿಗೆ ಅವಳು ಮೂರನೆಯವಳು!
ಸಂಕಲನದ ಮೊದಲ ಭಾಗ "ಮೂರನೆಯವಳು"
ಇರುವುದು ಎರಡೇ ಕಣ್ಣು
ಒಂದು ಗಂಡು, ಒಂದು ಹೆಣ್ಣು
ಆದರೆ, ಮೂರನೆಯವಳು ಕಾಣುವುದು ಮಾತ್ರ
ಎರಡು ಕಣ್ಣುಗಳನ್ನು ತಿಂದುಕೊಂಡವರಿಗೆ!
ಎಂಬ ಮೊದಲ ಕವನದಲ್ಲೇ ಹೆಣ್ಣನ್ನು ನೋಡುವ ಕೆಟ್ಟ ಕಣ್ಣುಗಳಿಗೆ ಅವಳು ಹೇಗೆ ಬೇರೆಯವಳಾಗಿ ತನ್ನ ಇರುವಿಕೆಯನ್ನು ಕಳೆದುಕೊಳ್ಳುತ್ತಾಳೆ ಎಂಬ ಭಾವವನ್ನು ಮನಸಿನಾಳಕ್ಕೆ ನಾಟುವಂತೆ ಬಿಂಬಿಸಿದ್ದಾರೆ.
ಹೀಗೆ ಬರೆಯುತ್ತಾ.. ರಾತ್ರಿ ಊಟ ಮಾಡುವಾಗ ಇದ್ದ ಉತ್ಸಾಹ ಊಟ ಮಾಡಿದ ಮೇಲೆ ಏಕೆ ಇರುವುದಿಲ್ಲ ಎಂದು ಪ್ರಶಿಸುವ ಅವಳು ಊಟವಾದ ನಂತರ ಅವನ ಕಣ್ಣಿಗೆ ಮೂರನೆಯವಳಾಗಿ ಉಳಿದು ಹೋಗುತ್ತಾಳೆ. ತಾಳಿ ಎಂಬ ಪಾಶದಲ್ಲಿ ಕಟ್ಟಿ ಹಾಕಿ, ತಮಗಿಷ್ಟ ಬಂದಂತೆ ನಡೆಸಿಕೊಂಡು ಪೆಟ್ಟು ಕೊಡುವ ಗಂಡಿನ ಸಮಾಜಕ್ಕೆ ಮುಲಾಜಿಲ್ಲದೆ ಅವಳ ಪರವಾಗಿ ಪ್ರಶ್ನೆಗಳ ಸವಾಲನ್ನೇ ಎಸೆದಿದ್ದಾರೆ..! ಆಕೆಯ ಬದಲಾಗುವ ದೇಹಸ್ಥಿತಿ, ಋತುಮತಿಯಾಗುವ ಕ್ಷಣಗಳನ್ನು, ಆಕೆ ಅನುಭವಿಸುವ ಪರಿಸ್ಥಿತಿಗಳನ್ನು ಬಹಳ ಅಚ್ಚುಕಟ್ಟಾಗಿ ಬಣ್ಣಿಸಿದ್ದಾರೆ ಕವಿ.
ಅವಳು ನನ್ನವಳು! ಎನ್ನುತ್ತ ಎರಡನೆಯ ಭಾಗದಲ್ಲಿ ತನ್ನ ತಾಯಿಯನ್ನು, ಆಕೆಯ ಕಷ್ಟಗಳನ್ನು ಬಹಳ ನಾಜುಕಿನಿಂದ ವರ್ಣಿಸುತ್ತಾರೆ.
ಅದೆಷ್ಟೋ ಸೌದೆ ಕಂತೆಗಳು ಸವಾರಿ ಮಾಡಿವೆ
ನನ್ನವಳ ನೆತ್ತಿಯ ಮೇಲೆ,
ಕರುಣೆ ಇಲ್ಲದೆ ಸಾವಿರಾರು ಕೊಡಗಳು
ಆ ಸೊಂಟದ ತೊಗಲನು ಉಜ್ಜಿ ಗಾಯ ಮಾಡಿವೆ
ಅಂತಹ ಅನಂತ ಗಾಯಗಳ ಮೈಯವಳು
ತನ್ನ ಮನಸಿನ ಭಾವನೆಗಳಿಗೆ ಪೆಟ್ಟು ಬಿದ್ದಾಗ ಅದೆಂತಹ ಪ್ರೀತಿಯನ್ನು ಬಿಟ್ಟು ಹೋಗುವ ತಾಕತ್ತು ಅವಳಿಗಿದೆ. ಬಹುವಾಗಿ ಎಲ್ಲವನ್ನು ಸಹಿಸುವ ಅವಳು ತನ್ನ ಭಾವನೆಗೆ ಬೀಳುವ ಪೆಟ್ಟನ್ನು ಸಹಿಸಲಾರಳು! ಅದನ್ನೇ "ನೀ ಎಲ್ಲವನ್ನು ಮರೆತೆಯಾ!?" ಎಂಬ ಸಂಕಲನದ ಕೊನೆಯ ಭಾಗದಲ್ಲಿ ಹದಿನಾರರ ಹುಡುಗಿಯರ & ಹದಿನೆಂಟರ ಹುಡುಗರ ತಲ್ಲಣಗಳನ್ನು ಬಿಂಬಿಸುತ್ತ ಹೋಗುತ್ತಾರೆ.
ಯಾರನ್ನೋ ಹುಡುಕುವ ಭರದಲ್ಲಿ ನನ್ನನ್ನೇ ಕಳೆದುಕೊಂಡನಲ್ಲ ಎಂದು ಪರಿತಪಿಸುವ ಅವಳಂತವರು ಬಹಳಷ್ಟಿದ್ದಾರೆ! ಕೊನೆಗೆ ಅದು ಜೀವನದ ಬೇಡದ ಅಧ್ಯಾಯವಾಗಿ ಉಳಿದು ಹೋಗುತ್ತದೆ. ಹದಿನಾರರ ವಯಸಿನಲ್ಲಿ ಆಕೆಗಿರುವ ಕನಸು, ತಲ್ಲಣಗಳ ಚಿತ್ರಣವನ್ನು ಇಲ್ಲಿ ಕಾಣಬಹುದಾಗಿದೆ.
ಮೂರನೆಯವಳಾಗಿ ಒಂದು ಹೆಣ್ಣನ್ನು, ಆಕೆಯ ಮನಸಿನ ಅಂತರಾಳದ ಭಾವನೆಗಳನ್ನು ಹೊಕ್ಕು ತೆಗೆದಿರುವ ಕವಿಗೆ ತಮ್ಮ ತಾಯಿಯೇ ಸ್ಫೂರ್ತಿ! ಇದು ಅನಂತ ಅವರ ಎರಡನೇ ಕೃತಿಯಾದರೂ ಅವರ ಕವಿತೆಗಳು ಇನ್ನಷ್ಟು ಮಾಗಬೇಕೇನಿಸಿತು.. ಕೆಲವೊಂದು ಕವಿತೆಗಳಲ್ಲಿ ಇನ್ನುಷ್ಟು ಭಿನ್ನ ಹೋಲಿಕೆಗಳನ್ನು ಕೊಡಬಹುದಾಗಿತ್ತು.. ಋತು ಹಾಗೂ ಕೆಲವು ಕವಿತೆಗಳಲ್ಲಿ ಪದಗಳು ಮರುಬಳಕೆಯಾಗಿ ಅದನ್ನ ಓದುಗ ಮರು ಓದಿದೆನಾ? ಎಂಬ ಗೊಂದಲಕ್ಕೆ ಒಳಗಾಗುವಂತೆ ಮಾಡುತ್ತದೆ. ಇನ್ನಷ್ಟು ಬೇರೆ ಪದಗಳ ಬಳಕೆ ಮಾಡಿದ್ದರೆ ಇನ್ನಷ್ಟು ಕವಿತೆಯ ರುಚಿ ಹೆಚ್ಚಿಸುತಿತ್ತು.
ಇದು ಅಂತ್ಯವಲ್ಲ, ವಿದಾಯವಷ್ಟೇ ಎನ್ನುವ ಕವಿ ಇಲ್ಲಿಂದಲೇ ಮತ್ತೊಂದು ಆರಂಭ ಎಂದು ಹೇಳುತ್ತಾ ಈ ಪುಸ್ತಕವನ್ನು ಮುಗಿಸಿ, ಮತ್ತೊಂದು ಹೆಜ್ಜೆಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಇರಿಸಿದ್ದಾರೆ.
ಅದೇನೇ ಇರಲಿ ಅವಳೆಂದರೆ ಸಾಗರ! ಆಕೆಯ ಮನ ಹೊಕ್ಕಿದರೆ ಸಾಗರದಳದಲ್ಲಿ ದೊರೆಯುವ ಮುತ್ತು, ರತ್ನದಂತಹ ಸುಖ ಸಂತೋಷಗಳು, ಕಲ್ಲು- ಮಣ್ಣಿನಂತ ನೋವು - ಕಣ್ಣೀರು ಪ್ರತಿಯೊಂದನ್ನು ಹೆಕ್ಕಿ ತೆಗೆಯುವಲ್ಲಿ ಕವಿ ಅನಂತ ಅವರು ಗೆದ್ದಿದ್ದಾರೆ..!
ನಂದಾದೀಪ, ಮಂಡ್ಯ

ನನ್ನವಳು!
ಎನ್ನುತ್ತಾ ಪ್ರತಿಯೊಬ್ಬ ತಾಯಿಯ ಕಷ್ಟಗಳನ್ನು ಹೊರಗೆಡವುತ್ತಾರೆ. ಇಂತಹ ಕಷ್ಟಗಳನ್ನು ಪ್ರತಿಯೊಬ್ಬ ತಾಯಂದಿರು ಅನುಭವಿಸಿರುತ್ತಾರೆ. ಅಂತಹ ತಾಯಂದಿರಿಗೂ ಕೂಡ ಈ ಕವಿತೆಯನ್ನು ಯಾವುದೇ ಅನುಮಾನವಿರದೆ ಸಮರ್ಪಿಸಬಹುದು.! ಮುನ್ನುಡಿಯಲ್ಲೂ ಕೂಡ ಹಿರಿಯ ಕವಿ ವಾಸುದೇವ ನಾಡಿಗ್ ಅವರು ಇಲ್ಲಿ ಆಕೆಯ ಬಿಸಿ ಉಸಿರಿನ ಛಾಯೆ ಇದೆ ಎನ್ನುತ್ತಾರೆ.

ಇದು ನನ್ನದೇ ಭಾವ ನಿಮ್ಮದು ಕೂಡ ಆಗಿರಬಹುದು ಟ್ರೈ ಮಾಡಿ ಎಂದು ಹೇಳುತ್ತಾರೆ. ಹೆಣ್ಣಿಗೆ ಮಾತ್ರ ಮುಗುದಾರ ಹಾಕಿದಿರಿ, ಅದೇ ಗಂಡಿಗೆ ಯಾಕಿಲ್ಲ? ಎಂಬ ಪ್ರಶ್ನೆ ನನ್ನನ್ನು ಬಹಳ ಕಾಡುತ್ತದೆ! ಆ ಭಾವ ನನ್ನದು ಕೂಡ ಹೌದು. ಅದಷ್ಟೇ ಅಲ್ಲದೆ, ನೋಡುತ್ತಲೇ ಪರಿಚಯವಾಗುವ ಸ್ನೇಹ ಹಾಯ್, ಹಲೋ ಎನ್ನುತ್ತಾ ಬೆಳೆದು, ಯು ಆರ್ ವೆರಿ ಕ್ಯೂಟ್, ಹಾಗೆ - ಹೀಗೆ ಎಂದು ಹೊಗಳಿಕೆಯ ಆಕರ್ಷಣೆಗೆ ಸಿಲುಕಿ.. ಕಾಲಕಳೆದಂತೆ ಹೇಗಿದ್ದೀಯ? ಎಂದು ಕೇಳುವಷ್ಟು ಸಮಯವೇ ಇಲ್ಲ ಎಂದು ನಯವಾಗಿ ಕಳಚಿಕೊಳ್ಳುವ ಸಂಬಂಧಗಳು ಅದೆಷ್ಟು ಗಟ್ಟಿ!? ಮತ್ತೆ ಬೇಸರವಾದಗ ಮಿಸ್ ಯು ಎನ್ನುತ್ತಾ ಕೂಡಿಕೊಳ್ಳುವ ಅವಶ್ಯಕತೆಗೆ ಅರಸಿ ಬರುವ ಬಂಧಗಳ ಕತೆಯದ್ದು ಮತ್ತದೇ ರಾಗ ಅದೇ ಹಾಡು ಎಂದು ಸಾರಸಗಟಾಗಿ ತಿರಸ್ಕಾರದ ನಿಟ್ಟುಸಿರು ಬಿಡುವಂತೆ ಸೊಗಸಾಗಿ ಹೇಳುತ್ತಾರೆ.
ರಾತ್ರಿ ಹನ್ನೆರಡರವರೆಗೆ ಆನ್ಲೈನ್ ಅಲ್ಲಿ ಇದ್ದುಕೊಂಡು ಪೋಲಿ ಚಾಟುಗಳ ಮಾಡಿ ಬೆಳಗೆದ್ದು ನಾ ಹಾಗಲ್ಲ ಎಂದು ಹೇಳುವವರ ಕಥೆಯೂ ಅಷ್ಟೇ ಸ್ವಾಮಿ ಎಂದು ಯಾವುದೇ ಇಲಾಜಿಗೆ ಸಿಲುಕದೆ ನಯವಾಗಿಯೇ ಹೇಳಿ ಮುಗಿಸುವ ಜಾಣ್ಮೆ ಕವಿಯದ್ದು!
ಅವಳು ತಾಯಿಯಾಗಿ, ಅಕ್ಕನಾಗಿ, ತಂಗಿಯಾಗಿ, ಮಡದಿಯಾಗಿ ಅದೆಷ್ಟೋ ಪಾತ್ರಗಳನ್ನು ನಿಭಾಯಿಸಿವವಳನ್ನು "ಹೆಣ್ಣೆಂದರೆ ಅಷ್ಟೇ ಸಾಕೇ!?" ಎಂಬ ನಾಲ್ಕನೆಯ ಭಾಗದಲ್ಲಿ ಅವಳ ಕನಸು, ಕಾಯುವಿಕೆ, ತನ್ನ ಇನಿಯನ ಆಗಮನದ ನಿರೀಕ್ಷೆಯಲ್ಲಿ ಚಿಂತಿಸದಿರು ಮನವೇ, ಮಲಗು, ಬಂದೆ ಬರುವನು ರಾಜಕುಮಾರ ಎಂದು ಮನಸಿಗೆ ಮುದ್ದು ಮಾಡಿ, ಅಂದರೆ ತನ್ನನ್ನು ತಾನೇ ಸಮಾಧಾನಿಸಿಕೊಳ್ಳುವ ಪರಿ ಬಹುವಾಗಿ ಕಾಡಿಬಿಡುತ್ತದೆ..!
ರಾತ್ರಿ ಹನ್ನೆರಡರವರೆಗೆ ಆನ್ಲೈನ್ ಅಲ್ಲಿ ಇದ್ದುಕೊಂಡು ಪೋಲಿ ಚಾಟುಗಳ ಮಾಡಿ ಬೆಳಗೆದ್ದು ನಾ ಹಾಗಲ್ಲ ಎಂದು ಹೇಳುವವರ ಕಥೆಯೂ ಅಷ್ಟೇ ಸ್ವಾಮಿ ಎಂದು ಯಾವುದೇ ಇಲಾಜಿಗೆ ಸಿಲುಕದೆ ನಯವಾಗಿಯೇ ಹೇಳಿ ಮುಗಿಸುವ ಜಾಣ್ಮೆ ಕವಿಯದ್ದು!
ಅವಳು ತಾಯಿಯಾಗಿ, ಅಕ್ಕನಾಗಿ, ತಂಗಿಯಾಗಿ, ಮಡದಿಯಾಗಿ ಅದೆಷ್ಟೋ ಪಾತ್ರಗಳನ್ನು ನಿಭಾಯಿಸಿವವಳನ್ನು "ಹೆಣ್ಣೆಂದರೆ ಅಷ್ಟೇ ಸಾಕೇ!?" ಎಂಬ ನಾಲ್ಕನೆಯ ಭಾಗದಲ್ಲಿ ಅವಳ ಕನಸು, ಕಾಯುವಿಕೆ, ತನ್ನ ಇನಿಯನ ಆಗಮನದ ನಿರೀಕ್ಷೆಯಲ್ಲಿ ಚಿಂತಿಸದಿರು ಮನವೇ, ಮಲಗು, ಬಂದೆ ಬರುವನು ರಾಜಕುಮಾರ ಎಂದು ಮನಸಿಗೆ ಮುದ್ದು ಮಾಡಿ, ಅಂದರೆ ತನ್ನನ್ನು ತಾನೇ ಸಮಾಧಾನಿಸಿಕೊಳ್ಳುವ ಪರಿ ಬಹುವಾಗಿ ಕಾಡಿಬಿಡುತ್ತದೆ..!
ತನ್ನ ಮನಸಿನ ಭಾವನೆಗಳಿಗೆ ಪೆಟ್ಟು ಬಿದ್ದಾಗ ಅದೆಂತಹ ಪ್ರೀತಿಯನ್ನು ಬಿಟ್ಟು ಹೋಗುವ ತಾಕತ್ತು ಅವಳಿಗಿದೆ. ಬಹುವಾಗಿ ಎಲ್ಲವನ್ನು ಸಹಿಸುವ ಅವಳು ತನ್ನ ಭಾವನೆಗೆ ಬೀಳುವ ಪೆಟ್ಟನ್ನು ಸಹಿಸಲಾರಳು! ಅದನ್ನೇ "ನೀ ಎಲ್ಲವನ್ನು ಮರೆತೆಯಾ!?" ಎಂಬ ಸಂಕಲನದ ಕೊನೆಯ ಭಾಗದಲ್ಲಿ ಹದಿನಾರರ ಹುಡುಗಿಯರ & ಹದಿನೆಂಟರ ಹುಡುಗರ ತಲ್ಲಣಗಳನ್ನು ಬಿಂಬಿಸುತ್ತ ಹೋಗುತ್ತಾರೆ.
ಯಾರನ್ನೋ ಹುಡುಕುವ ಭರದಲ್ಲಿ ನನ್ನನ್ನೇ ಕಳೆದುಕೊಂಡನಲ್ಲ ಎಂದು ಪರಿತಪಿಸುವ ಅವಳಂತವರು ಬಹಳಷ್ಟಿದ್ದಾರೆ! ಕೊನೆಗೆ ಅದು ಜೀವನದ ಬೇಡದ ಅಧ್ಯಾಯವಾಗಿ ಉಳಿದು ಹೋಗುತ್ತದೆ. ಹದಿನಾರರ ವಯಸಿನಲ್ಲಿ ಆಕೆಗಿರುವ ಕನಸು, ತಲ್ಲಣಗಳ ಚಿತ್ರಣವನ್ನು ಇಲ್ಲಿ ಕಾಣಬಹುದಾಗಿದೆ.
ಮೂರನೆಯವಳಾಗಿ ಒಂದು ಹೆಣ್ಣನ್ನು, ಆಕೆಯ ಮನಸಿನ ಅಂತರಾಳದ ಭಾವನೆಗಳನ್ನು ಹೊಕ್ಕು ತೆಗೆದಿರುವ ಕವಿಗೆ ತಮ್ಮ ತಾಯಿಯೇ ಸ್ಫೂರ್ತಿ! ಇದು ಅನಂತ ಅವರ ಎರಡನೇ ಕೃತಿಯಾದರೂ ಅವರ ಕವಿತೆಗಳು ಇನ್ನಷ್ಟು ಮಾಗಬೇಕೇನಿಸಿತು.. ಕೆಲವೊಂದು ಕವಿತೆಗಳಲ್ಲಿ ಇನ್ನುಷ್ಟು ಭಿನ್ನ ಹೋಲಿಕೆಗಳನ್ನು ಕೊಡಬಹುದಾಗಿತ್ತು.. ಋತು ಹಾಗೂ ಕೆಲವು ಕವಿತೆಗಳಲ್ಲಿ ಪದಗಳು ಮರುಬಳಕೆಯಾಗಿ ಅದನ್ನ ಓದುಗ ಮರು ಓದಿದೆನಾ? ಎಂಬ ಗೊಂದಲಕ್ಕೆ ಒಳಗಾಗುವಂತೆ ಮಾಡುತ್ತದೆ. ಇನ್ನಷ್ಟು ಬೇರೆ ಪದಗಳ ಬಳಕೆ ಮಾಡಿದ್ದರೆ ಇನ್ನಷ್ಟು ಕವಿತೆಯ ರುಚಿ ಹೆಚ್ಚಿಸುತಿತ್ತು.
ಇದು ಅಂತ್ಯವಲ್ಲ, ವಿದಾಯವಷ್ಟೇ ಎನ್ನುವ ಕವಿ ಇಲ್ಲಿಂದಲೇ ಮತ್ತೊಂದು ಆರಂಭ ಎಂದು ಹೇಳುತ್ತಾ ಈ ಪುಸ್ತಕವನ್ನು ಮುಗಿಸಿ, ಮತ್ತೊಂದು ಹೆಜ್ಜೆಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಇರಿಸಿದ್ದಾರೆ.
ಅದೇನೇ ಇರಲಿ ಅವಳೆಂದರೆ ಸಾಗರ! ಆಕೆಯ ಮನ ಹೊಕ್ಕಿದರೆ ಸಾಗರದಳದಲ್ಲಿ ದೊರೆಯುವ ಮುತ್ತು, ರತ್ನದಂತಹ ಸುಖ ಸಂತೋಷಗಳು, ಕಲ್ಲು- ಮಣ್ಣಿನಂತ ನೋವು - ಕಣ್ಣೀರು ಪ್ರತಿಯೊಂದನ್ನು ಹೆಕ್ಕಿ ತೆಗೆಯುವಲ್ಲಿ ಕವಿ ಅನಂತ ಅವರು ಗೆದ್ದಿದ್ದಾರೆ..!
ನಂದಾದೀಪ, ಮಂಡ್ಯ
ಕಾದಂಬರಿಗಾರ್ತಿ
ಒಂದು ಪುಸ್ತಕದ ಬಗ್ಗೆ ಅದ್ಭುತ ವಿವರಣೆ ಪುಸ್ತಕದ ಓದಬೇಕೆಂದು ಓದುಗರಲ್ಲಿ ಜಾಗೃತೆ ಮೂಡಿಸುವಂತೆ ನಂದಾದೀಪ ಬರೆದಿದ್ದಾರೆ ಶುಭವಾಗಲಿ ಲೇಖಕರಿಗೂ ಹಾಗೂ ಇದನ್ನು ಬರೆದವರಿಗೂ ಒಂದು ಪುಸ್ತಕ ಅರ್ಥೈಸಿಕೊಂಡು ಬರೆಯುವದದೆಂದರೆ ಲೇಖಕರಿಗೆ ಬಹುಮಾನ ಬಂದಷ್ಟೆ ಖುಷಿ .. ಒಳ್ಳೆಯದಾಗಲಿ ಇನ್ನಷ್ಟು ಪುಸ್ತಕಗಳು ತಮ್ಮಿಂದ ಹೊರಬರಲಿ
ಪ್ರತ್ಯುತ್ತರಅಳಿಸಿ