ಕ್ಷಮಿಸಿಬಿಡು ಭಾರತಾಂಬೆ
ಕ್ಷಮಿಸಿಬಿಡು ಭಾರತಾಂಬೆ ಕ್ಷಮಿಸಿಬಿಡು ಒಮ್ಮೆ
ಬುದ್ಧಿ ಬೆಳೆಯದ ಅಮಾಯಕರು ನಾವು
ಚಹದ ವ್ಯಾಪಾರಿಗಳಾಗಿ ಬಂದು ದೊರೆಗಳಾಗಿ
ಒಂದೂವರೆ ಶತಮಾನಗಳ ಕಾಲ ನಮ್ಮನು
ಗುಲಾಮರಾಗಿರಿಸಿದರೂ ಜಪಾನೀ ಜರ್ಮನಿ
ಜನರಿಗೆ ಬಂದ ಬುದ್ಧಿ ಬರಲಿಲ್ಲ ನಮಗೆ
ಸ್ವಾತಂತ್ರ್ಯಯಾಗದಿ ಧುಮುಕಿದ ಅಸಂಖ್ಯರು
ಅಮರ ಹುತಾತ್ಮರಾದ ಸಹಸ್ರಾರು ಜನರು
ಬಾಬು ಗೇನುವಿನಿಂದ ಹಿಡಿದು ಅನೇಕರ
ಹೆಸರುಗಳು ನೆನಪೇ ಆಗುತ್ತಿಲ್ಲ ಇತ್ತೀಚಿಗೆ
ಸ್ವಾತಂತ್ರ್ಯ ಎಂದರೆ ಸ್ವೈರಾಚಾರವಲ್ಲ ಎಂದು
ಮಹಾತ್ಮಾ ಗಾಂಧೀಜಿಯವರು ಹೇಳಿದ್ದರೂ
ಸ್ವೈರಾಚಾರವೇ ನಮ್ಮ ಜನ್ಮ ಸಿದ್ಧ ಹಕ್ಕು
ಎನ್ನುವಂತಿರುವರು ಇನ್ನೂ ಕೆಲವರು
ಅವರ ಕಸವನ್ನು ನಮ್ಮ ದೇಶದಲ್ಲಿ ಮಾರಿ
ಹಣ ಗಳಿಸುತ್ತ ನಮ್ಮನ್ನೇ ಮುಗಿಸುವ
ಚೀನಾದ ಹುನ್ನಾರ ಗೊತ್ತಾಗುವುದೆಮಗೆ
ನಮ್ಮ ಸೈನಿಕರು ಮಡಿದ ದಿನ ಮಾತ್ರ
ಕ್ಷಮಿಸಿಬಿಡು ಭಾರತಾಂಬೆ ಕ್ಷಮಿಸಿಬಿಡು ಒಮ್ಮೆ
ಬುದ್ಧಿ ಬೆಳೆಯದ ಅಮಾಯಕರು ನಾವು
ನೂರಾರು ಸಂತ ಶರಣರು ತಿಳಿ ಹೇಳಿದರೂ
ಮತ್ತೆ ಮತ್ತೆ ಸ್ಮೃತಿ ಕಳೆದುಕೊಳ್ಳುವೆವು ನಾವು
ಡಾ. ಗುರುಸಿದ್ಧಯ್ಯಾ ಸ್ವಾಮಿ
ಅಕ್ಕಲಕೋಟ ಮಹಾರಾಷ್ಟ್ರ
ಕ್ಷಮಿಸಿಬಿಡು ಭಾರತಾಂಬೆ ಕ್ಷಮಿಸಿಬಿಡು ಒಮ್ಮೆ
ಬುದ್ಧಿ ಬೆಳೆಯದ ಅಮಾಯಕರು ನಾವು
ಚಹದ ವ್ಯಾಪಾರಿಗಳಾಗಿ ಬಂದು ದೊರೆಗಳಾಗಿ
ಒಂದೂವರೆ ಶತಮಾನಗಳ ಕಾಲ ನಮ್ಮನು
ಗುಲಾಮರಾಗಿರಿಸಿದರೂ ಜಪಾನೀ ಜರ್ಮನಿ
ಜನರಿಗೆ ಬಂದ ಬುದ್ಧಿ ಬರಲಿಲ್ಲ ನಮಗೆ
ಸ್ವಾತಂತ್ರ್ಯಯಾಗದಿ ಧುಮುಕಿದ ಅಸಂಖ್ಯರು
ಅಮರ ಹುತಾತ್ಮರಾದ ಸಹಸ್ರಾರು ಜನರು
ಬಾಬು ಗೇನುವಿನಿಂದ ಹಿಡಿದು ಅನೇಕರ
ಹೆಸರುಗಳು ನೆನಪೇ ಆಗುತ್ತಿಲ್ಲ ಇತ್ತೀಚಿಗೆ
ಸ್ವಾತಂತ್ರ್ಯ ಎಂದರೆ ಸ್ವೈರಾಚಾರವಲ್ಲ ಎಂದು
ಮಹಾತ್ಮಾ ಗಾಂಧೀಜಿಯವರು ಹೇಳಿದ್ದರೂ
ಸ್ವೈರಾಚಾರವೇ ನಮ್ಮ ಜನ್ಮ ಸಿದ್ಧ ಹಕ್ಕು
ಎನ್ನುವಂತಿರುವರು ಇನ್ನೂ ಕೆಲವರು
ಅವರ ಕಸವನ್ನು ನಮ್ಮ ದೇಶದಲ್ಲಿ ಮಾರಿ
ಹಣ ಗಳಿಸುತ್ತ ನಮ್ಮನ್ನೇ ಮುಗಿಸುವ
ಚೀನಾದ ಹುನ್ನಾರ ಗೊತ್ತಾಗುವುದೆಮಗೆ
ನಮ್ಮ ಸೈನಿಕರು ಮಡಿದ ದಿನ ಮಾತ್ರ
ಕ್ಷಮಿಸಿಬಿಡು ಭಾರತಾಂಬೆ ಕ್ಷಮಿಸಿಬಿಡು ಒಮ್ಮೆ
ಬುದ್ಧಿ ಬೆಳೆಯದ ಅಮಾಯಕರು ನಾವು
ನೂರಾರು ಸಂತ ಶರಣರು ತಿಳಿ ಹೇಳಿದರೂ
ಮತ್ತೆ ಮತ್ತೆ ಸ್ಮೃತಿ ಕಳೆದುಕೊಳ್ಳುವೆವು ನಾವು
ಡಾ. ಗುರುಸಿದ್ಧಯ್ಯಾ ಸ್ವಾಮಿ
ಅಕ್ಕಲಕೋಟ ಮಹಾರಾಷ್ಟ್ರ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ