ಅಲ್ಲಿ ನಿಂತು ನೋಡಿದಾಗ
ಅಲ್ಲಿ ನಿಂತು ನೋಡಿದಾಗ
ಏನು ಕಾಂಬುದೋ?
ನುಣ್ಣಗೆ ದೂರದೆಲ್ಲ ಸಂಗತಿ
ಹಾಳಾದ ಈ ಬೋಳು ಕಣ್ಣಿಗೆ
ಸರಿದು ನೋಡು
ತೆರೆದು ನೋಡು
ಕಾಂಬುದೆಲ್ಲ ಮುಳ್ಳು
ಒಳಗೆಲ್ಲಾ ಟೊಳ್ಳು
ಮೂಟೆ ಮೂಟೆ ಸುಳ್ಳು
ಅವರ ಕಷ್ಟ
ನಿನಗೇನು ನಷ್ಟ
ನೋಡಿ ಸರಿದು ಬಿಡು
ಮಾತು ಬೇಡ ಸುಮ್ಮನಿರು
ಮೌನವಹಿಸಿ ಬಂದುಬಿಡು
ಹತ್ತಿರಕ್ಕೆ ಸುಳಿಯಲು ಗಡಗಡ
ಬೋಳಿಸಿದ ಮೀಸೆ, ಮಾರುದ್ದ ಜಡೆ
ಅತಿಯಾದ ಉಬ್ಬು ಎದೆಗಳಲ್ಲಿ
ಒರಟು ಸೊಂಟು, ಮಾತಿನಲ್ಲಿ ನವ್ಯತೆ
ಚಪ್ಪಾಳೆಯ ಗಡುಸುತನ
ಎಲ್ಲರಲ್ಲೂ ಭಯ ಹುಟ್ಟಿಸುತ್ತಿತ್ತು
ಒಮ್ಮೆ ಕಣ್ಣು ಹೊಡೆದು
ತುಟಿಯಗಲಿಸಿ ಸೆರಗು ಜಾರಿಸಿದರೆ
ಪ್ರಾಣವೇ ಹೋಗುತ್ತಿತ್ತು ಎದುರಿದ್ದವರಿಗೆ
ಭಂಡರೋ, ಬಡಾಯಿಗಳೋ
ಬಾಯಿಬಡುಕರೋ ಎನಿಸುವುದು
ದೂರದಲ್ಲಿ ನಿಂತು ನೋಡಿದಾಗ
ಮೃದು ಮನಸ್ಸಿನವರು
ಮನುಷ್ಯತ್ವ ಮೆರೆದರು ಎಂದರಿವಾಗುವುದು
ಹತ್ತಿರದಿಂದ ನೋಡಲು ಬಯಸಿದಾಗ
ಚಿಲ್ಲರೆ ಕಾಸಿಗಾಗಿ
ಅಲೆಯುವರು ದಿನವಿಡೀ
ಪದೇ ಪದೇ ಜಾರುವ ಸೆರಗಿನಡಿ
ಕಳೆವರು ರಾತ್ರಿಯ ಅಂಗೈಯಗಲ ಸೂರಿನಡಿ
ವಂಚಿತರು,
ದೂರ ಸರಿದವರು, ನಮ್ಮವರು
ನಮ್ಮಂತೆಯೇ ಅವರೂ ಕೂಡ ಮನುಷ್ಯರು
ಕೈಲಾದ್ದು ಕೊಡು
ಇಲ್ಲವೇ ಹೊರಟುಬಿಡು
ಹೊರಡುವ ಮೊದಲು
ಸಣ್ಣ ಮಂದಹಾಸ ಬೀರಿಬಿಡು
ಅಯ್ಯೋ.. ಎಂದು ಮರುಕಪಡು
ಅಲ್ಲಿ ನಿಂತು ನೋಡಿದ ತಪ್ಪಿಗೆ
ಹತ್ತಿರದಿಂದೊಮ್ಮೆ ಕ್ಷಮೆಯಾಚಿಸಿಬಿಡು
- ಅನಂತ ಕುಣಿಗಲ್
ಅಲ್ಲಿ ನಿಂತು ನೋಡಿದಾಗ
ಏನು ಕಾಂಬುದೋ?
ನುಣ್ಣಗೆ ದೂರದೆಲ್ಲ ಸಂಗತಿ
ಹಾಳಾದ ಈ ಬೋಳು ಕಣ್ಣಿಗೆ
ಸರಿದು ನೋಡು
ತೆರೆದು ನೋಡು
ಕಾಂಬುದೆಲ್ಲ ಮುಳ್ಳು
ಒಳಗೆಲ್ಲಾ ಟೊಳ್ಳು
ಮೂಟೆ ಮೂಟೆ ಸುಳ್ಳು
ಅವರ ಕಷ್ಟ
ನಿನಗೇನು ನಷ್ಟ
ನೋಡಿ ಸರಿದು ಬಿಡು
ಮಾತು ಬೇಡ ಸುಮ್ಮನಿರು
ಮೌನವಹಿಸಿ ಬಂದುಬಿಡು
ಹತ್ತಿರಕ್ಕೆ ಸುಳಿಯಲು ಗಡಗಡ
ಬೋಳಿಸಿದ ಮೀಸೆ, ಮಾರುದ್ದ ಜಡೆ
ಅತಿಯಾದ ಉಬ್ಬು ಎದೆಗಳಲ್ಲಿ
ಒರಟು ಸೊಂಟು, ಮಾತಿನಲ್ಲಿ ನವ್ಯತೆ
ಚಪ್ಪಾಳೆಯ ಗಡುಸುತನ
ಎಲ್ಲರಲ್ಲೂ ಭಯ ಹುಟ್ಟಿಸುತ್ತಿತ್ತು
ಒಮ್ಮೆ ಕಣ್ಣು ಹೊಡೆದು
ತುಟಿಯಗಲಿಸಿ ಸೆರಗು ಜಾರಿಸಿದರೆ
ಪ್ರಾಣವೇ ಹೋಗುತ್ತಿತ್ತು ಎದುರಿದ್ದವರಿಗೆ
ಭಂಡರೋ, ಬಡಾಯಿಗಳೋ
ಬಾಯಿಬಡುಕರೋ ಎನಿಸುವುದು
ದೂರದಲ್ಲಿ ನಿಂತು ನೋಡಿದಾಗ
ಮೃದು ಮನಸ್ಸಿನವರು
ಮನುಷ್ಯತ್ವ ಮೆರೆದರು ಎಂದರಿವಾಗುವುದು
ಹತ್ತಿರದಿಂದ ನೋಡಲು ಬಯಸಿದಾಗ
ಚಿಲ್ಲರೆ ಕಾಸಿಗಾಗಿ
ಅಲೆಯುವರು ದಿನವಿಡೀ
ಪದೇ ಪದೇ ಜಾರುವ ಸೆರಗಿನಡಿ
ಕಳೆವರು ರಾತ್ರಿಯ ಅಂಗೈಯಗಲ ಸೂರಿನಡಿ
ವಂಚಿತರು,
ದೂರ ಸರಿದವರು, ನಮ್ಮವರು
ನಮ್ಮಂತೆಯೇ ಅವರೂ ಕೂಡ ಮನುಷ್ಯರು
ಕೈಲಾದ್ದು ಕೊಡು
ಇಲ್ಲವೇ ಹೊರಟುಬಿಡು
ಹೊರಡುವ ಮೊದಲು
ಸಣ್ಣ ಮಂದಹಾಸ ಬೀರಿಬಿಡು
ಅಯ್ಯೋ.. ಎಂದು ಮರುಕಪಡು
ಅಲ್ಲಿ ನಿಂತು ನೋಡಿದ ತಪ್ಪಿಗೆ
ಹತ್ತಿರದಿಂದೊಮ್ಮೆ ಕ್ಷಮೆಯಾಚಿಸಿಬಿಡು
- ಅನಂತ ಕುಣಿಗಲ್
Tumba sogasagide
ಪ್ರತ್ಯುತ್ತರಅಳಿಸಿspr
ಪ್ರತ್ಯುತ್ತರಅಳಿಸಿಸೊಗಸಾದ ಸಾಲುಗಳು
ಪ್ರತ್ಯುತ್ತರಅಳಿಸಿಅವರಲ್ಲ ನಾವು..
ಪ್ರತ್ಯುತ್ತರಅಳಿಸಿಅವರಲ್ಲ ನಾವು..
ಸುಟ್ಟಿಹುದು ಬಿಸಿಯಾದ ಸಮಾಜದ ಕಾವು..
ಬೇಡುತ್ತಾ ನಿಂತಿಹೆವು ಕಾಡುವ ಮನಸಿಲ್ಲದೆ
ನೀಡಬಲ್ಲಿರಾ ಭಿಕ್ಷೆ,
ಎಲ್ಲರೊಂದಿಗೆ ಸಹಬಾಳ್ವೆಯಾ ಶ್ರೀರಕ್ಷೆ.
ಯಾರಿಗೆ ಬೇಕಿದೆ ಈ ನಿಮ್ಮ ಮರುಕ?
ಮಾಡಬೇಡಿರಿ ನಮ್ಮ ಜೀವನವ ಭೋಗದಾ ಸರಕಾ.
ನಾವುಗಳು ನೀವೇ, ನೀವುಗಳು ನಾವೇ
ಮರೆಯಬಾರದು ಮಾನವತೆಯ ತತ್ವ