ಈ ಕವಿತೆಯಲ್ಲಿ ಅವರಿಗೆ ಕಂಡಂತಹ ತಪ್ಪು ಏನು ಎಂದು ನಿಜಕ್ಕೂ ತಿಳಿಯುತ್ತಿಲ್ಲ. ನಮ್ಮಂಥ ಬರಹಗಾರರಿಂದ ಬೇಕಾದಷ್ಟು ಬರೆಸಿಕೊಂಡು ಘನತೆ ಹೆಚ್ಚಿಸಿಕೊಳ್ಳುವ ಕೆಲವು ಪತ್ರಿಕೆ, ಬ್ಲಾಗ್ ಗಳು, ಇ-ಪತ್ರಿಕೆಗಳಿಗೆ ನಿಜಾಂಶಗಳಿರುವ ಬರಹಗಳನ್ನು ಕಂಡರೆ ನಿರಾಕರಿಸುವುದೇಕೆ?? ಇದರಿಂದ ಅವರು ಸಮಾಜಕ್ಕೆ ಸಾರುವುದಾದರೂ ಏನು???
ಬೆತ್ತಲೆ ಬರಹಗಳನ್ನು ಚಪ್ಪರಿಕೊಂಡು ಓದುವಂತೆ ಚಿತ್ರಗಳ ಚಿತ್ತಾರದೊಂದಿಗೆ ಪ್ರಕಟಿಸುವ ಇಂತಹ ಹತ್ತಾರು ದಿನಪತ್ರಿಕೆಗಳಿಗೆ, ಇ- ಪತ್ರಿಕೆಗಳಿಗೆ ಹಾಗೂ ಬ್ಲಾಗ್ ಗಳಿಗೆ ನಾಚಿಕೆಯಾಗಬೇಕು.
ಕನಿಷ್ಠ ಕಾರಣವನ್ನಾದರೂ ಕೊಟ್ಟಿದ್ದರೆ ಕಳೆದುಕೊಳ್ಳುತ್ತಿದ್ದ ಗಂಟು ಏನು ಎಂಬುದೇ ನನ್ನ ಮುಂದಿರುವ ಪ್ರಶ್ನೆ.
ಕವಿತೆಯಲ್ಲಿ ಅಂದಿನ ಗಂಗೆಗೂ ಇಂದಿನ ಗಂಗೆಗೂ ಹೋಲಿಕೆ ಮಾಡಿ, ದುರಂತಗಳಿಗೆ ಕಾರಣವಾದ ಪರಿಸರವನ್ನು ಹಾನಿ ಮಾಡಬಹುದಾದ ನಮ್ಮ ಕೆಲವು ಹಾಳು ಚಟುವಟಿಕೆಗಳ ಬಗ್ಗೆ ನಮ್ಮನ್ನೇ ಪ್ರಶ್ನಿಸಿಕೊಳ್ಳುವ ಹಾಗೂ ದೂಷಿಸಿಕೊಳ್ಳುವ ಸಾಲುಗಳಿವೆ. ಅದರಲ್ಲಿ ಕಾಣುವ ತಪ್ಪೇನು ಅಂತ ನನಗೆ ತಿಳಿದಿಲ್ಲ. ಓದಿದಾಗ ನಿಮಗೆ ತಿಳಿದರೆ, ದಯವಿಟ್ಟು ತಿಳಿಸಿ.
(ಗಂಗಾಮಾತೆ ಕಲುಷಿತಗೊಳ್ಳಲು ಇವರ ಕೊಡುಗೆ ಏನೂ ಇಲ್ಲ ಅಂತ ಕಾಣ್ತದೆ. ಬಹುಶಃ ಇವರು ಭಾರತದಲ್ಲಿಲ್ಲ!)
"ಗಂಗೆಯ ಮಡಿಲಲ್ಲಿ"
ಭಾರತದ ಜಲ ಇತಿಹಾಸವನ್ನೇ
ಬರೆದ ಮಾತೆ; ಗಂಗಾ
ಅದೆಷ್ಟು ಸ್ವಚ್ಚಂದ!
ಅದೆಂತಾ ಸೊಬಗು!!
ಅದೆಲ್ಲಾ ಈಗ ಮಾಯವಾಗಿದೆ!
ಪ್ರಾಚೀನ ಹಾಗೂ ಪಾವಿತ್ರ್ಯತೆಯ
ಪುರಾಣ ಮಹಾಕಾವ್ಯಗಳ ದೇವನದಿ
ಗಂಗೋತ್ರಿ ತಪ್ಪಲಿನ ಹಿಮನದಿ
ಭಾರತದ ಜಲ ಇತಿಹಾಸವನ್ನೇ
ಬರೆದ ಮಾತೆ; ಗಂಗಾ
ಅದೆಷ್ಟು ಸ್ವಚ್ಚಂದ!
ಅದೆಂತಾ ಸೊಬಗು!!
ಅದೆಲ್ಲಾ ಈಗ ಮಾಯವಾಗಿದೆ!
ಪ್ರಾಚೀನ ಹಾಗೂ ಪಾವಿತ್ರ್ಯತೆಯ
ಪುರಾಣ ಮಹಾಕಾವ್ಯಗಳ ದೇವನದಿ
ಗಂಗೋತ್ರಿ ತಪ್ಪಲಿನ ಹಿಮನದಿ
ಅಖಂಡ ಭಾರತದ ಜೀವನದಿ
ಎಲ್ಲರಿಂದ ಪೂಜಿತ ಮಾತೆ;
ಅದುವೇ ನಮ್ಮ ಗಂಗಾ ಮಾತೆ
ಗೂಲ್ಲರು, ಕಾಕರು, ಪಾದಚಾರಿಗಳು
ದೂರದಿಂದ ದಣಿದು ಬಂದ
ವಿಧವಿಧ ವಿದೇಶದ ಜನರೂ..
ಇಲ್ಲೇ ಹುಟ್ಟಿ, ಇಲ್ಲೇ ಬೆಳೆದ
ಬಡಬಗ್ಗ ಹಿರಿಯರೂ ಕುಡಿದು ಜೀವಿಸಿದ
ಅಮೃತ ಪಾನಕ; ಗಂಗಾ
ಪ್ಲಾಸ್ಟಿಕ್ ಮುಕ್ತ ತಿಳಿ ನೀರು
ಜೀವಜಲದ ಸಿಹಿ ನೀರು
ಪಾಚಿ-ಪ್ರಾಣಿಗಳಿಗಾಧಾರ
ದೇವರ ಹುಟ್ಟು, ನಮ್ಮಯ ಅಂತ್ಯದ
ಸೂತಕದ ಸುಳಿಯೇ ಈ ನೀರು
ಈಗ ಎಲ್ಲವೂ ಇಲ್ಲೇ; ಸಾವೂ ಕೂಡ
ಈಜಿದವರು, ಪೂಜಿದವರು
ಕುಡಿದವರು, ಮೂತ್ರ ಮಾಡಿದವರು
ವಿಷವ ಸುರಿದವರು, ಬಾಟಲಿ ಮಾರಿದವರು
ಶ್ರೀಮಂತರು, ನೀರು ಸಿಗದೆ ಬಡವರಾದವರು
ಎಲ್ಲಾ ಧರ್ಮದ ಎಲ್ಲಾ ಜಾತಿಯ
ಎಲ್ಲರೂ ಇಲ್ಲೆ ಇದ್ದಾರೆ ನೋಡಿ
ಇಲ್ಲಾ, ತೇಲುತ್ತಿದ್ದಾರೆ ನೋಡಿ
ಈ ಬತ್ತದ ಅಗಣಿತ ವಿಶಾಲ ಹೃದಯದಲ್ಲಿ
ಸೋತು ಮಲಗಿವೆ ನೋಡಿ ಸಾಲು ಹೆಣಗಳು
ಗಂಗೆಯ ಮಡಿಲಲ್ಲಿ..
ಗಂಧದಕಡ್ಡಿಯ ಹೊಗೆಯೊಟ್ಟಿಗೆ
ಕರ್ಪೂರವೂ ಜ್ವಲಿಸುತ್ತಿದೆ
ಗಂಟೆ-ಜಾಗಟೆಗಳೊಟ್ಟಿಗೆ
ತಮಟೆ-ತಟ್ಟೆಗಳೂ ಮಾರ್ಧನಿಸುತ್ತಿವೆ
ಸತ್ತವರ ನೆರಳಿನ ಕೂಗು ಮೊಳಗುತ್ತಿದೆ
ಸತ್ತು ತೇಲುವವರ ಸಂಖ್ಯೆ ಮುಗಿಲು ಮುಟ್ಟಿದೆ
ಅದೇ ಗಂಗೆಯಲ್ಲಿ..
ಶುದ್ಧವಿಲ್ಲದ ಪರಿಶುದ್ಧ ಗಂಗೆಯಲ್ಲಿ..
- ಅನಂತ ಕುಣಿಗಲ್
ಎಲ್ಲರಿಂದ ಪೂಜಿತ ಮಾತೆ;
ಅದುವೇ ನಮ್ಮ ಗಂಗಾ ಮಾತೆ
ಗೂಲ್ಲರು, ಕಾಕರು, ಪಾದಚಾರಿಗಳು
ದೂರದಿಂದ ದಣಿದು ಬಂದ
ವಿಧವಿಧ ವಿದೇಶದ ಜನರೂ..
ಇಲ್ಲೇ ಹುಟ್ಟಿ, ಇಲ್ಲೇ ಬೆಳೆದ
ಬಡಬಗ್ಗ ಹಿರಿಯರೂ ಕುಡಿದು ಜೀವಿಸಿದ
ಅಮೃತ ಪಾನಕ; ಗಂಗಾ
ಪ್ಲಾಸ್ಟಿಕ್ ಮುಕ್ತ ತಿಳಿ ನೀರು
ಜೀವಜಲದ ಸಿಹಿ ನೀರು
ಪಾಚಿ-ಪ್ರಾಣಿಗಳಿಗಾಧಾರ
ದೇವರ ಹುಟ್ಟು, ನಮ್ಮಯ ಅಂತ್ಯದ
ಸೂತಕದ ಸುಳಿಯೇ ಈ ನೀರು
ಈಗ ಎಲ್ಲವೂ ಇಲ್ಲೇ; ಸಾವೂ ಕೂಡ
ಈಜಿದವರು, ಪೂಜಿದವರು
ಕುಡಿದವರು, ಮೂತ್ರ ಮಾಡಿದವರು
ವಿಷವ ಸುರಿದವರು, ಬಾಟಲಿ ಮಾರಿದವರು
ಶ್ರೀಮಂತರು, ನೀರು ಸಿಗದೆ ಬಡವರಾದವರು
ಎಲ್ಲಾ ಧರ್ಮದ ಎಲ್ಲಾ ಜಾತಿಯ
ಎಲ್ಲರೂ ಇಲ್ಲೆ ಇದ್ದಾರೆ ನೋಡಿ
ಇಲ್ಲಾ, ತೇಲುತ್ತಿದ್ದಾರೆ ನೋಡಿ
ಈ ಬತ್ತದ ಅಗಣಿತ ವಿಶಾಲ ಹೃದಯದಲ್ಲಿ
ಸೋತು ಮಲಗಿವೆ ನೋಡಿ ಸಾಲು ಹೆಣಗಳು
ಗಂಗೆಯ ಮಡಿಲಲ್ಲಿ..
ಗಂಧದಕಡ್ಡಿಯ ಹೊಗೆಯೊಟ್ಟಿಗೆ
ಕರ್ಪೂರವೂ ಜ್ವಲಿಸುತ್ತಿದೆ
ಗಂಟೆ-ಜಾಗಟೆಗಳೊಟ್ಟಿಗೆ
ತಮಟೆ-ತಟ್ಟೆಗಳೂ ಮಾರ್ಧನಿಸುತ್ತಿವೆ
ಸತ್ತವರ ನೆರಳಿನ ಕೂಗು ಮೊಳಗುತ್ತಿದೆ
ಸತ್ತು ತೇಲುವವರ ಸಂಖ್ಯೆ ಮುಗಿಲು ಮುಟ್ಟಿದೆ
ಅದೇ ಗಂಗೆಯಲ್ಲಿ..
ಶುದ್ಧವಿಲ್ಲದ ಪರಿಶುದ್ಧ ಗಂಗೆಯಲ್ಲಿ..
- ಅನಂತ ಕುಣಿಗಲ್
ವಾಸ್ತವಿಕತೆಯ ನಿರ್ದಶನವಿ ಕವಿತೆ.. ಇರುವುದ ಇರುವಂತೆ ಒಪ್ಪಿ ಪ್ರಕಟಿಸಿದ್ರೆ ಸ್ವಲ್ಪ ಮಟ್ಟಿಗೆ ಪರಿಸರ ಪ್ರೇಮಿಗಳು ದಂಗೆ ಏಳಬಹುದು .? ಅಧಿಕಾರಿಗಳನ್ನು ಪ್ರಶ್ನಿಸುತ್ತಾರೆ.? ಇದೆಲ್ಲದರ ಮೂಲ ಹುಡುಕಿ ಹೋದರೆ ನಿಮ್ಮಿಂದ ಅನ್ನುವ ಧೋರಣೆಯ ಎದುರಿಸಲಾರರೇನೋ ಬಹುಶಃ😑😑ಲೇಖನಿ ಹರಿತ ಚುಚ್ಚಿದೆ ಪಾಪ
ಪ್ರತ್ಯುತ್ತರಅಳಿಸಿವಾಸ್ತವತೆಗೆ ಹತ್ತಿರವಿದೆ ಈ ಕವಿತೆ, ಯಾವ ಲೋಪ ದೋಷವು ಇಲ್ಲ,
ಪ್ರತ್ಯುತ್ತರಅಳಿಸಿಖಂಡಿತ ಇದು ಹಿಂದೆ ನಡೆದಿರುವ ಈಗಲೂ ನಡೆಯುತ್ತಿರುವ ನೈಜ್ಯಾ ಘಟನೆ ಕವಿತೆ ಅಲ್ಲಿ ಅಡಗಿದೆ. ಯಾವುದೇ ತರಹದ ತಪ್ಪು ಕಾಲ್ಪನಿಕ ಸಾಲುಗಳು ಸಹ ಇದರಲ್ಲಿ ಇಲ್ಲ.ನನಗೆ ತಿಳಿದಿರುವ ಮಟ್ಟಿಗೆ..
ಪ್ರತ್ಯುತ್ತರಅಳಿಸಿಇರುವ ಸತ್ಯವ ಕಣ್ಣಗಲಿಸಿ ತೋರಿದ ಪರಿ
ಪ್ರತ್ಯುತ್ತರಅಳಿಸಿ
ಪ್ರತ್ಯುತ್ತರಅಳಿಸಿಪ್ರಸ್ತುತ ವಾಸ್ತವ್ಯವನ್ನು ಹೇಳುತ್ತಿದೆ
ಆದರೆ ಕವಿತೆಯ ಪದ್ಯ ಗಳು ಜಾಸ್ತಿ ಆಗಿರಬಹುದೆಂದು ನನ್ನ ಭಾವನೆ
ವಾಸ್ತವ ಅಂಶ,ಸತ್ಯ ತಿಳಿಸಿದ್ದೀರಿ...
ಪ್ರತ್ಯುತ್ತರಅಳಿಸಿಕವಿತೆ ವಸ್ತು ಸಮಕಾಲೀನ ಕಾರಣದಿಂದ ಗಮನ ಸೆಳೆದಿದೆ, ಆದರೆ ಕಾವ್ಯಾತ್ಮಕವಾಗಿ ಕವಿತೆ ಪಳಗಬೇಕು ಅನಿಸುತ್ತದೆ ಗೆಳೆಯ. 🙏
ಪ್ರತ್ಯುತ್ತರಅಳಿಸಿನೀವು hengaa ಹಿಗ್ಗಾ ಮುಗ್ಗಾ ಬರುದ್ರೆ ನಿಮ್ ಮೇಲೆ ದೇಶ ದ್ರೋಹದ ಆರೋಪ ಬರುತ್ತೆ.ಅದು ಬರದ ಹಾಗೆ ಇರಲಿ ಅಂತ ಪ್ರಕಟಿಸಿಲ್ಲ...ತಿಳೀತಾ.
ಪ್ರತ್ಯುತ್ತರಅಳಿಸಿಸತ್ಯಕ್ಕೆ ಬೆಲೆ ಇಲ್ಲ ಸರ್ .... ಸುಳ್ಳು ಹೇಳಿದವನನ್ನು ಹೋತ್ತು ಮೆರೆಸುತ್ತಾರೆ ಎಲ್ಲರು
ಪ್ರತ್ಯುತ್ತರಅಳಿಸಿ