ವಿಷಯಕ್ಕೆ ಹೋಗಿ

ಗಂಗೆಯ ಮಡಿಲಲ್ಲಿ - ತಿರಸ್ಕರಿಸಲ್ಪಟ್ಟ ಕವಿತೆ - ಅನಂತ ಕುಣಿಗಲ್



      ಕವಿತೆಯಲ್ಲಿ ಅವರಿಗೆ ಕಂಡಂತಹ ತಪ್ಪು ಏನು ಎಂದು ನಿಜಕ್ಕೂ ತಿಳಿಯುತ್ತಿಲ್ಲ. ನಮ್ಮಂಥ ಬರಹಗಾರರಿಂದ ಬೇಕಾದಷ್ಟು ಬರೆಸಿಕೊಂಡು ಘನತೆ ಹೆಚ್ಚಿಸಿಕೊಳ್ಳುವ ಕೆಲವು ಪತ್ರಿಕೆ, ಬ್ಲಾಗ್ ಗಳು, ಇ-ಪತ್ರಿಕೆಗಳಿಗೆ ನಿಜಾಂಶಗಳಿರುವ ಬರಹಗಳನ್ನು ಕಂಡರೆ ನಿರಾಕರಿಸುವುದೇಕೆ?? ಇದರಿಂದ ಅವರು ಸಮಾಜಕ್ಕೆ ಸಾರುವುದಾದರೂ ಏನು???
ಬೆತ್ತಲೆ ಬರಹಗಳನ್ನು ಚಪ್ಪರಿಕೊಂಡು ಓದುವಂತೆ ಚಿತ್ರಗಳ ಚಿತ್ತಾರದೊಂದಿಗೆ ಪ್ರಕಟಿಸುವ ಇಂತಹ ಹತ್ತಾರು ದಿನಪತ್ರಿಕೆಗಳಿಗೆ, ಇ- ಪತ್ರಿಕೆಗಳಿಗೆ ಹಾಗೂ ಬ್ಲಾಗ್ ಗಳಿಗೆ ನಾಚಿಕೆಯಾಗಬೇಕು.
ಕನಿಷ್ಠ ಕಾರಣವನ್ನಾದರೂ ಕೊಟ್ಟಿದ್ದರೆ ಕಳೆದುಕೊಳ್ಳುತ್ತಿದ್ದ ಗಂಟು ಏನು ಎಂಬುದೇ ನನ್ನ ಮುಂದಿರುವ ಪ್ರಶ್ನೆ.

ಕವಿತೆಯಲ್ಲಿ ಅಂದಿನ ಗಂಗೆಗೂ ಇಂದಿನ ಗಂಗೆಗೂ ಹೋಲಿಕೆ ಮಾಡಿ, ದುರಂತಗಳಿಗೆ ಕಾರಣವಾದ ಪರಿಸರವನ್ನು ಹಾನಿ ಮಾಡಬಹುದಾದ ನಮ್ಮ ಕೆಲವು ಹಾಳು ಚಟುವಟಿಕೆಗಳ ಬಗ್ಗೆ ನಮ್ಮನ್ನೇ ಪ್ರಶ್ನಿಸಿಕೊಳ್ಳುವ ಹಾಗೂ ದೂಷಿಸಿಕೊಳ್ಳುವ ಸಾಲುಗಳಿವೆ. ಅದರಲ್ಲಿ ಕಾಣುವ ತಪ್ಪೇನು ಅಂತ ನನಗೆ ತಿಳಿದಿಲ್ಲ. ಓದಿದಾಗ ನಿಮಗೆ ತಿಳಿದರೆ, ದಯವಿಟ್ಟು ತಿಳಿಸಿ.

(ಗಂಗಾಮಾತೆ ಕಲುಷಿತಗೊಳ್ಳಲು ಇವರ ಕೊಡುಗೆ ಏನೂ ಇಲ್ಲ ಅಂತ ಕಾಣ್ತದೆ. ಬಹುಶಃ ಇವರು ಭಾರತದಲ್ಲಿಲ್ಲ!)


"ಗಂಗೆಯ ಮಡಿಲಲ್ಲಿ"

ಭಾರತದ ಜಲ ಇತಿಹಾಸವನ್ನೇ
ಬರೆದ ಮಾತೆ; ಗಂಗಾ
ಅದೆಷ್ಟು ಸ್ವಚ್ಚಂದ!
ಅದೆಂತಾ ಸೊಬಗು!!
ಅದೆಲ್ಲಾ ಈಗ ಮಾಯವಾಗಿದೆ!

ಪ್ರಾಚೀನ ಹಾಗೂ ಪಾವಿತ್ರ್ಯತೆಯ
ಪುರಾಣ ಮಹಾಕಾವ್ಯಗಳ ದೇವನದಿ
ಗಂಗೋತ್ರಿ ತಪ್ಪಲಿನ ಹಿಮನದಿ
ಅಖಂಡ ಭಾರತದ ಜೀವನದಿ
ಎಲ್ಲರಿಂದ ಪೂಜಿತ ಮಾತೆ;
ಅದುವೇ ನಮ್ಮ ಗಂಗಾ ಮಾತೆ

ಗೂಲ್ಲರು, ಕಾಕರು, ಪಾದಚಾರಿಗಳು
ದೂರದಿಂದ ದಣಿದು ಬಂದ
ವಿಧವಿಧ ವಿದೇಶದ ಜನರೂ..
ಇಲ್ಲೇ ಹುಟ್ಟಿ, ಇಲ್ಲೇ ಬೆಳೆದ
ಬಡಬಗ್ಗ ಹಿರಿಯರೂ ಕುಡಿದು ಜೀವಿಸಿದ
ಅಮೃತ ಪಾನಕ; ಗಂಗಾ

ಪ್ಲಾಸ್ಟಿಕ್ ಮುಕ್ತ ತಿಳಿ ನೀರು
ಜೀವಜಲದ ಸಿಹಿ ನೀರು
ಪಾಚಿ-ಪ್ರಾಣಿಗಳಿಗಾಧಾರ
ದೇವರ ಹುಟ್ಟು, ನಮ್ಮಯ ಅಂತ್ಯದ
ಸೂತಕದ ಸುಳಿಯೇ ಈ ನೀರು
ಈಗ ಎಲ್ಲವೂ ಇಲ್ಲೇ; ಸಾವೂ ಕೂಡ

ಈಜಿದವರು, ಪೂಜಿದವರು
ಕುಡಿದವರು, ಮೂತ್ರ ಮಾಡಿದವರು
ವಿಷವ ಸುರಿದವರು, ಬಾಟಲಿ ಮಾರಿದವರು
ಶ್ರೀಮಂತರು, ನೀರು ಸಿಗದೆ ಬಡವರಾದವರು
ಎಲ್ಲಾ ಧರ್ಮದ ಎಲ್ಲಾ ಜಾತಿಯ
ಎಲ್ಲರೂ ಇಲ್ಲೆ ಇದ್ದಾರೆ ನೋಡಿ
ಇಲ್ಲಾ, ತೇಲುತ್ತಿದ್ದಾರೆ ನೋಡಿ
ಈ ಬತ್ತದ ಅಗಣಿತ ವಿಶಾಲ ಹೃದಯದಲ್ಲಿ
ಸೋತು ಮಲಗಿವೆ ನೋಡಿ ಸಾಲು ಹೆಣಗಳು
ಗಂಗೆಯ ಮಡಿಲಲ್ಲಿ..

ಗಂಧದಕಡ್ಡಿಯ ಹೊಗೆಯೊಟ್ಟಿಗೆ
ಕರ್ಪೂರವೂ ಜ್ವಲಿಸುತ್ತಿದೆ
ಗಂಟೆ-ಜಾಗಟೆಗಳೊಟ್ಟಿಗೆ
ತಮಟೆ-ತಟ್ಟೆಗಳೂ ಮಾರ್ಧನಿಸುತ್ತಿವೆ
ಸತ್ತವರ ನೆರಳಿನ ಕೂಗು ಮೊಳಗುತ್ತಿದೆ
ಸತ್ತು ತೇಲುವವರ ಸಂಖ್ಯೆ ಮುಗಿಲು ಮುಟ್ಟಿದೆ
ಅದೇ ಗಂಗೆಯಲ್ಲಿ..
ಶುದ್ಧವಿಲ್ಲದ ಪರಿಶುದ್ಧ ಗಂಗೆಯಲ್ಲಿ..



                         - ಅನಂತ ಕುಣಿಗಲ್
            ananthangowda97@gmail.com 

ಕಾಮೆಂಟ್‌ಗಳು

  1. ವಾಸ್ತವಿಕತೆಯ ನಿರ್ದಶನವಿ ಕವಿತೆ.. ಇರುವುದ ಇರುವಂತೆ ಒಪ್ಪಿ ಪ್ರಕಟಿಸಿದ್ರೆ ಸ್ವಲ್ಪ ಮಟ್ಟಿಗೆ ಪರಿಸರ ಪ್ರೇಮಿಗಳು ದಂಗೆ ಏಳಬಹುದು .? ಅಧಿಕಾರಿಗಳನ್ನು ಪ್ರಶ್ನಿಸುತ್ತಾರೆ.? ಇದೆಲ್ಲದರ ಮೂಲ ಹುಡುಕಿ ಹೋದರೆ ನಿಮ್ಮಿಂದ ಅನ್ನುವ ಧೋರಣೆಯ ಎದುರಿಸಲಾರರೇನೋ ಬಹುಶಃ😑😑ಲೇಖನಿ ಹರಿತ ಚುಚ್ಚಿದೆ ಪಾಪ

    ಪ್ರತ್ಯುತ್ತರಅಳಿಸಿ
  2. ವಾಸ್ತವತೆಗೆ ಹತ್ತಿರವಿದೆ ಈ ಕವಿತೆ, ಯಾವ ಲೋಪ ದೋಷವು ಇಲ್ಲ,

    ಪ್ರತ್ಯುತ್ತರಅಳಿಸಿ
  3. ಖಂಡಿತ ಇದು ಹಿಂದೆ ನಡೆದಿರುವ ಈಗಲೂ ನಡೆಯುತ್ತಿರುವ ನೈಜ್ಯಾ ಘಟನೆ ಕವಿತೆ ಅಲ್ಲಿ ಅಡಗಿದೆ. ಯಾವುದೇ ತರಹದ ತಪ್ಪು ಕಾಲ್ಪನಿಕ ಸಾಲುಗಳು ಸಹ ಇದರಲ್ಲಿ ಇಲ್ಲ.ನನಗೆ ತಿಳಿದಿರುವ ಮಟ್ಟಿಗೆ..

    ಪ್ರತ್ಯುತ್ತರಅಳಿಸಿ
  4. ಇರುವ ಸತ್ಯವ ಕಣ್ಣಗಲಿಸಿ ತೋರಿದ ಪರಿ

    ಪ್ರತ್ಯುತ್ತರಅಳಿಸಿ


  5. ಪ್ರಸ್ತುತ ವಾಸ್ತವ್ಯವನ್ನು ಹೇಳುತ್ತಿದೆ
    ಆದರೆ ಕವಿತೆಯ ಪದ್ಯ ಗಳು ಜಾಸ್ತಿ ಆಗಿರಬಹುದೆಂದು ನನ್ನ ಭಾವನೆ

    ಪ್ರತ್ಯುತ್ತರಅಳಿಸಿ
  6. ಕವಿತೆ ವಸ್ತು ಸಮಕಾಲೀನ ಕಾರಣದಿಂದ ಗಮನ ಸೆಳೆದಿದೆ, ಆದರೆ ಕಾವ್ಯಾತ್ಮಕವಾಗಿ ಕವಿತೆ ಪಳಗಬೇಕು ಅನಿಸುತ್ತದೆ ಗೆಳೆಯ. 🙏

    ಪ್ರತ್ಯುತ್ತರಅಳಿಸಿ
  7. ನೀವು hengaa ಹಿಗ್ಗಾ ಮುಗ್ಗಾ ಬರುದ್ರೆ ನಿಮ್ ಮೇಲೆ ದೇಶ ದ್ರೋಹದ ಆರೋಪ ಬರುತ್ತೆ.ಅದು ಬರದ ಹಾಗೆ ಇರಲಿ ಅಂತ ಪ್ರಕಟಿಸಿಲ್ಲ...ತಿಳೀತಾ.

    ಪ್ರತ್ಯುತ್ತರಅಳಿಸಿ
  8. ಸತ್ಯಕ್ಕೆ ಬೆಲೆ ಇಲ್ಲ ಸರ್‌ .... ಸುಳ್ಳು ಹೇಳಿದವನನ್ನು ಹೋತ್ತು ಮೆರೆಸುತ್ತಾರೆ ಎಲ್ಲರು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಆಕೆಗೆ ಅದು ಮೊದಲ ರಾತ್ರಿಯಲ್ಲ! - ಕವಿತೆ - ಅನಂತ ಕುಣಿಗಲ್

" ಆಕೆಗೆ ಅದು ಮೊದಲ ರಾತ್ರಿಯಲ್ಲ! " ಆಕೆಗೆ ಅದು ಮೊದಲ ರಾತ್ರಿಯಲ್ಲ ಯಾಕೆಂದರೆ, ಅವಳು ಮದುವೆಯೇ ಆಗಿರಲಿಲ್ಲ!! ಇಪ್ಪತ್ತೆರೆಡು ವರ್ಷದ ಆ ಬಾಲಕಿ ಹೆಚ್ಚು ಓದಲಾಗಲಿಲ್ಲ, ಕಾರಣ ನೂರಾರು  ಅಪ್ಪ ಕುಡಿದು ಕುಡಿದು ಸತ್ತ ಇಲ್ಲ, ಮಗನಿಂದಲೇ ಕೊಲೆಯಾದ ಅಪರಾಧಿ ತಮ್ಮ ಜೈಲಿಗೆ ಹೋದ ಅಮ್ಮ ಒಬ್ಬಳೇ ಹಾಸಿಗೆ ಮೇಲೆ ದಿನ ಎಣಿಸುತ್ತಿದ್ದಾಳೆ ಹಾಳಾದ ಕ್ಯಾನ್ಸರ್ ರೋಗ ಆರು ವರ್ಷಗಳಿಂದ ಅವಳ ನಗು ಕಿತ್ತುಕೊಂಡಿದೆ  ಈಗಲೂ ಅವಳು ಸ್ವಾರ್ಥಿಯಾದರೆ..? ಆ ಬದುಕಿಗೆ ಅರ್ಥವುಂಟೆ?! ಓದಿಗೆ ತಕ್ಕನಾದ ಕೆಲಸವಿಲ್ಲ ತನ್ನವರು ಅಂತ ಯಾರೂ ಇಲ್ಲ ಒಬ್ಬಳಿಗೊಬ್ಬಳೇ.. ಒನಕೆ ಓಬವ್ವನೂ ಅಲ್ಲ  ಮದುವೆಯಾದರೆ ಸರಿಯಾಗುವುದೇ ಎಲ್ಲ? ನಂತರವೂ ಎಲ್ಲ ಹೀಗೆ ಇದ್ದರೆ.. ಮದುವೆ ಅನರ್ಥ ಹೀಗೇ ಇದ್ದುಬಿಡೋಣ.. ಅದೊಂದು ಗಟ್ಟಿ ನಿರ್ಧಾರ  ಎಷ್ಟು ದುಡಿಯಬಹುದು? ಎರಡೇ ಎರಡು ಕೈಗಳು?! ಪಾಪ ಪುಟ್ಟ ಕೈಗಳು ಸೂರ್ಯನಿಗೂ ಸಮಯದ ಅರಿವಿಲ್ಲ ಬೇಗ ಬಂದು ಬೇಗ ಹೋಗುತ್ತಾನೆ ಸಿಗುವುದು ಚಿಲ್ಲರೆ ರೂಪಾಯಿಗಳಷ್ಟೇ ಅದರಿಂದ ಅವಳ ಹೊಟ್ಟೆ ತುಂಬೀತೇ?? ಹೆತ್ತಾಕೆಯ ರೋಗ ಹೋದೀತೇ?? ಮತ್ತೆ ಎಲ್ಲವೂ.. ಹಾಗೇ!!  ಇನ್ನೊಂದು ನಿರ್ಧಾರವಾಗಬೇಕಿದೆ ಹಳ್ಳಿ ಬಿಟ್ಟು ಪಟ್ಟಣ ಸೇರುವುದು ಅದೂ ಆಯ್ತು.. ಕೆಲಸಕ್ಕಾಗಿ ಅಲೆದಲೆದು ಸಾಕಾಯ್ತು ಕಣ್ಣಿನಲ್ಲಡಗಿರುವ ನೋವು ನೋಡಿದವರಿಗಿಂತ ಅವಳೆದೆಯ ಉಬ್ಬು ಸವಿದವರೇ ಹೆಚ್ಚು ಅವರ ಕಣ್ಣಿನ ದಾಹಕ್ಕೆ ಎದೆಯೇ ಹಿಂಗುತ್ತಿವೆ ದಿನವೂ ...