ಸೈಕಲ್ ನೆನಪು
ಈಗಲೂ ಅಲ್ಲೇ ನಿಂತಿದೆ
ಇನ್ನೇನು ಬೀಳಲಿರುವ ಹಳೇ ಬಿಳಿ ಗೋಡೆಗೆ
ಬೋರಲಾಗಿ ವರಗಿಕೊಂಡು;
ನನ್ನ ನೆಚ್ಚಿನ ಸೈಕಲ್
ಹದಿಮೂರು ವರ್ಷಗಳಾಯ್ತು
ಅಪ್ಪ ಹೋಗಿ,
ಆದರೂ ಅಪ್ಪ ಸನಿಹವೇ ಇರುವಂತೆ ನೆಪ್ಪಾಗ್ತಾರೆ
ಆ ಸೈಕಲ್ ನೋಡಿದಾಗ
ಮಂಡಿ ಆಪರೇಷನ್ ಮಾಡಿಸಿಕೊಂಡು
ಮಲಗುವುದೊಂದೇ ಬಾಕಿ;
ಹರಸಾಹಸಪಟ್ಟು ಸೈಕಲ್ ಕಲಿಯಲು ಹೋದಾಗ
ಅಪ್ಪಾ.. ಅವ್ವಾ.. ಅಣ್ಣಾ.. ಎಲ್ಲರೂ ಸಹಕರಿಸಿದ್ದಾರೆ
ಎಷ್ಟೋ ಸಲ ಬಿದ್ದು, ಎದ್ದು, ಮತ್ತೆ ಬಿದ್ದು..
ಅದೊಂದು ರಾಮಾಯಣವೇ ಸರಿ
ಕಲಿತದ್ದೇ ಒಂದು ಸೋಜಿಗ!
ಯಾವಾಗ ನೆನೆದರೂ ಮೈ ಪುಳಕಿತ
ಅಟ್ಲಾಸ್, ಹರ್ಕ್ಯುಲಸ್
ಇವೆರಡೇ ಕಂಪನಿಗಳು ಗೊತ್ತಿದ್ದು
ವಜ್ರಮುನಿ ಮಾಡುತ್ತಿದ್ದ ಪಾತ್ರಗಳ ಹೆಸರನ್ನೇ
ನಮ್ಮ ಸೈಕಲ್ಲುಗಳಿಗೆ ನಾಮಕರಣ ಮಾಡುತ್ತಿದ್ದೆವು
ಚಕ್ರ ತಿರುಗಿದ ವೇಗಕ್ಕೆ ಬ್ಯಾಟರಿ ಚಾರ್ಜ್ ಆಗಿ
ಮುಂದಿನ ಹೆಡ್ ಲೈಟ್ ಹತ್ತುತ್ತಿದ್ದವು
ಆ ಚಕ್ರಗಳಿಗಂತು ಉಸಿರುಕಟ್ಟುವ ಹಾಗೆ
ಬಣ್ಣಬಣ್ಣದ ಮಣಿಗಳಿಂದ ಅಲಂಕರಿಸುತ್ತಿದ್ದವು
ಸೀಟುಗಳಿಗೆ ಚಲನಚಿತ್ರಗಳ ಪೋಸ್ಟರುಗಳು
ಚಿತ್ರ-ವಿಚಿತ್ರವಾಗಿ ಕೂಗುವ ಹಾರನುಗಳು
ಹುಡುಗಿಯರ ಸೈಕಲ್ಲುಗಳಿಗೆ ಮುಂದೆ ಬುಟ್ಟಿ ಇದ್ದವು
ಅವೆಲ್ಲವೂ ಸೈಕಲ್ಲುಗಳನ್ನು ಜೀವಂತವಾಗಿರಿಸಿದ್ದವು
ಆಯುಧ ಪೂಜೆಯ ದಿನವಂತೂ ದೊಡ್ಡ ಹಬ್ಬ
ಲಗ್ಗೇಜ್ ಮೇಲೆ ಲಗ್ಗೇಜ್ ಹೊತ್ತು
ಸುಸ್ತಾಗಿದ್ದ ಗುಜುರಿ ಸೇರಬೇಕಿದ್ದ ಸೈಕಲ್ಲನ್ನು
ಹೊರತೆಗೆದು, ಕೆರೆಯಲ್ಲಿ ಸ್ನಾನ
ದೃಷ್ಠಿಯಾಗಬಾರದೆಂದು ಕಪ್ಪು ದಾರ
ವಿಭೂತಿ ಜೊತೆಗೆ ಥರಥರಹದ ಬಣ್ಣಗಳಿಂದ
ಸೈಕಲ್ಲಿನ ಮೈಯನ್ನೇ ಮುಚ್ಚುವಂತೆ ಬಳಿದು
ಚಿತ್ತಾರದ ತೋರಣಗಳನ್ನು ಕಟ್ಟುತ್ತಿದ್ದೆವು
ನೈವೇದ್ಯಕ್ಕಾಗಿ ಕಡ್ಲೆಪುರಿ ಪ್ರಸಾದ ಬೇರೆ
ನಂತರ ಊರೆಲ್ಲ ಮೆರವಣಿಗೆ; ಅಂದೂ ಕೂಡ ಬಿಡುವಿಲ್ಲ
ಹೆಚ್ಚು ಕಮ್ಮಿ ಊರಿನ ಹೈಕ್ಳೆಲ್ಲಾ ಸವಾರಿ ಮಾಡಿದ್ದಾರೆ
ಒಂಟೆಕೇತ, ಹಾವುರಾಣಿ, ಬೀದಿ ನಾಯಿಗಳ ಶವಗಳನ್ನು
ಊರಾಚೆಗೆ ಹೋಯ್ದು ಸಂಸ್ಕಾರ ಮಾಡಿದ್ದುಂಟು
ಚಿಕ್ಕವರನ್ನು ಶಾಲೆಗೆ ಬಿಡಲು ಮತ್ತು ಕರೆತರಲು
ಚೇಪಿಕಾಯಿ ಕದ್ದು ಕೀಳಲು ಏಣಿಯಾಗಿ
ಮೇವಿನ ಮೂಟೆಗಳನ್ನು ಸಾಗಿಸಲು
ಮೇಷ್ಟ್ರುಗಳನ್ನು ಬಸ್ಟ್ಯಾಂಡಿಗೆ ಡ್ರಾಪ್ ಮಾಡಲು
ಗಣೇಶನ ವಿಸರ್ಜನೆಗೆ ಭರ್ಜರಿ ಬ್ಯಾಂಡು ಸಮೇತ
ಸೈಕಲ್ಲನ್ನೂ ನೀರಿಗೆ ಬಿಟ್ಟು; ಬೆಳಿಗ್ಗೆ ಹುಡುಕಿದ್ದುಂಟು
ಹಾಗೇ,
ಸರ್ಕಾರ ಕೊಟ್ಟ ಸೈಕಲ್ಲುಗಳನ್ನು ಬಳಸದ ಕಾರಗಳೇ ಇಲ್ಲ
ಆರೋಗ್ಯದ ಗುಟ್ಟೆಂದರೆ ಮನೆಗೊಂದು ಸೈಕಲ್
ಈಗಲೂ ಅಲ್ಲೇ ನಿಂತಿದೆ
ಇನ್ನೇನು ಬೀಳಲಿರುವ ಹಳೇ ಬಿಳಿ ಗೋಡೆಗೆ
ಬೋರಲಾಗಿ ವರಗಿಕೊಂಡು;
ನನ್ನ ನೆಚ್ಚಿನ ಸೈಕಲ್
ಹದಿಮೂರು ವರ್ಷಗಳಾಯ್ತು
ಅಪ್ಪ ಹೋಗಿ,
ಆದರೂ ಅಪ್ಪ ಸನಿಹವೇ ಇರುವಂತೆ ನೆಪ್ಪಾಗ್ತಾರೆ
ಆ ಸೈಕಲ್ ನೋಡಿದಾಗ
ಮಂಡಿ ಆಪರೇಷನ್ ಮಾಡಿಸಿಕೊಂಡು
ಮಲಗುವುದೊಂದೇ ಬಾಕಿ;
ಹರಸಾಹಸಪಟ್ಟು ಸೈಕಲ್ ಕಲಿಯಲು ಹೋದಾಗ
ಅಪ್ಪಾ.. ಅವ್ವಾ.. ಅಣ್ಣಾ.. ಎಲ್ಲರೂ ಸಹಕರಿಸಿದ್ದಾರೆ
ಎಷ್ಟೋ ಸಲ ಬಿದ್ದು, ಎದ್ದು, ಮತ್ತೆ ಬಿದ್ದು..
ಅದೊಂದು ರಾಮಾಯಣವೇ ಸರಿ
ಕಲಿತದ್ದೇ ಒಂದು ಸೋಜಿಗ!
ಯಾವಾಗ ನೆನೆದರೂ ಮೈ ಪುಳಕಿತ
ಅಟ್ಲಾಸ್, ಹರ್ಕ್ಯುಲಸ್
ಇವೆರಡೇ ಕಂಪನಿಗಳು ಗೊತ್ತಿದ್ದು
ವಜ್ರಮುನಿ ಮಾಡುತ್ತಿದ್ದ ಪಾತ್ರಗಳ ಹೆಸರನ್ನೇ
ನಮ್ಮ ಸೈಕಲ್ಲುಗಳಿಗೆ ನಾಮಕರಣ ಮಾಡುತ್ತಿದ್ದೆವು
ಚಕ್ರ ತಿರುಗಿದ ವೇಗಕ್ಕೆ ಬ್ಯಾಟರಿ ಚಾರ್ಜ್ ಆಗಿ
ಮುಂದಿನ ಹೆಡ್ ಲೈಟ್ ಹತ್ತುತ್ತಿದ್ದವು
ಆ ಚಕ್ರಗಳಿಗಂತು ಉಸಿರುಕಟ್ಟುವ ಹಾಗೆ
ಬಣ್ಣಬಣ್ಣದ ಮಣಿಗಳಿಂದ ಅಲಂಕರಿಸುತ್ತಿದ್ದವು
ಸೀಟುಗಳಿಗೆ ಚಲನಚಿತ್ರಗಳ ಪೋಸ್ಟರುಗಳು
ಚಿತ್ರ-ವಿಚಿತ್ರವಾಗಿ ಕೂಗುವ ಹಾರನುಗಳು
ಹುಡುಗಿಯರ ಸೈಕಲ್ಲುಗಳಿಗೆ ಮುಂದೆ ಬುಟ್ಟಿ ಇದ್ದವು
ಅವೆಲ್ಲವೂ ಸೈಕಲ್ಲುಗಳನ್ನು ಜೀವಂತವಾಗಿರಿಸಿದ್ದವು
ಆಯುಧ ಪೂಜೆಯ ದಿನವಂತೂ ದೊಡ್ಡ ಹಬ್ಬ
ಲಗ್ಗೇಜ್ ಮೇಲೆ ಲಗ್ಗೇಜ್ ಹೊತ್ತು
ಸುಸ್ತಾಗಿದ್ದ ಗುಜುರಿ ಸೇರಬೇಕಿದ್ದ ಸೈಕಲ್ಲನ್ನು
ಹೊರತೆಗೆದು, ಕೆರೆಯಲ್ಲಿ ಸ್ನಾನ
ದೃಷ್ಠಿಯಾಗಬಾರದೆಂದು ಕಪ್ಪು ದಾರ
ವಿಭೂತಿ ಜೊತೆಗೆ ಥರಥರಹದ ಬಣ್ಣಗಳಿಂದ
ಸೈಕಲ್ಲಿನ ಮೈಯನ್ನೇ ಮುಚ್ಚುವಂತೆ ಬಳಿದು
ಚಿತ್ತಾರದ ತೋರಣಗಳನ್ನು ಕಟ್ಟುತ್ತಿದ್ದೆವು
ನೈವೇದ್ಯಕ್ಕಾಗಿ ಕಡ್ಲೆಪುರಿ ಪ್ರಸಾದ ಬೇರೆ
ನಂತರ ಊರೆಲ್ಲ ಮೆರವಣಿಗೆ; ಅಂದೂ ಕೂಡ ಬಿಡುವಿಲ್ಲ
ಹೆಚ್ಚು ಕಮ್ಮಿ ಊರಿನ ಹೈಕ್ಳೆಲ್ಲಾ ಸವಾರಿ ಮಾಡಿದ್ದಾರೆ
ಒಂಟೆಕೇತ, ಹಾವುರಾಣಿ, ಬೀದಿ ನಾಯಿಗಳ ಶವಗಳನ್ನು
ಊರಾಚೆಗೆ ಹೋಯ್ದು ಸಂಸ್ಕಾರ ಮಾಡಿದ್ದುಂಟು
ಚಿಕ್ಕವರನ್ನು ಶಾಲೆಗೆ ಬಿಡಲು ಮತ್ತು ಕರೆತರಲು
ಚೇಪಿಕಾಯಿ ಕದ್ದು ಕೀಳಲು ಏಣಿಯಾಗಿ
ಮೇವಿನ ಮೂಟೆಗಳನ್ನು ಸಾಗಿಸಲು
ಮೇಷ್ಟ್ರುಗಳನ್ನು ಬಸ್ಟ್ಯಾಂಡಿಗೆ ಡ್ರಾಪ್ ಮಾಡಲು
ಗಣೇಶನ ವಿಸರ್ಜನೆಗೆ ಭರ್ಜರಿ ಬ್ಯಾಂಡು ಸಮೇತ
ಸೈಕಲ್ಲನ್ನೂ ನೀರಿಗೆ ಬಿಟ್ಟು; ಬೆಳಿಗ್ಗೆ ಹುಡುಕಿದ್ದುಂಟು
ಹಾಗೇ,
ಸರ್ಕಾರ ಕೊಟ್ಟ ಸೈಕಲ್ಲುಗಳನ್ನು ಬಳಸದ ಕಾರಗಳೇ ಇಲ್ಲ
ಆರೋಗ್ಯದ ಗುಟ್ಟೆಂದರೆ ಮನೆಗೊಂದು ಸೈಕಲ್
ಎಂದು ನಂಬಿದ್ದ ನಮ್ಮನ್ನು ಮೀರಿ
ಈಗೆಲ್ಲಾ ಸೈಕಲ್ಲುಗಳು ಅಪ್ಡೇಟ್ ಪಡೆದಿವೆ
ಪಂಚರ್ ಆಗದ, ಕಾಲು ನೋವು ಬರದ
ಗುಂಡಿಗೆ ಬಿಟ್ಟರೂ ಕುಲುಕದ
ಐಶಾರಾಮಿ ರೂಪು ಪಡೆದಿವೆ
ಆದರೂ ಆ ಗೋಡೆಗೆ ವರಗೆಕೊಂಡು ನಿಂತಿರುವ
ಹಳೇ ಕಂಪನಿಯ ಸರ್ವಕಾಲಿಕ ಹಾಗೂ,
ಆಲ್ ರೌಂಡರ್ ಸೈಕಲ್ಲುಗಳನ್ನು ಇತ್ತೀಚೆಗೆ ನೋಡಲೇ ಇಲ್ಲ
ಆ ಮಜಾ ದಿನಗಳು ಬರೀ ನೆಪ ಮಾತ್ರ; ಅಪ್ಪನ ಹಾಗೆ
ಕೈತಪ್ಪಿ ಹೋದದ್ದು ಮತ್ತೆ ಸಿಕ್ಕರೂ..
ಮೊದಲಿನ ನಲಿವು ಅವುಗಳಿಂದ ಎಂದಿಗೂ ಸಿಗದು;
ಈಗೆಲ್ಲಾ ಸೈಕಲ್ಲುಗಳು ಅಪ್ಡೇಟ್ ಪಡೆದಿವೆ
ಪಂಚರ್ ಆಗದ, ಕಾಲು ನೋವು ಬರದ
ಗುಂಡಿಗೆ ಬಿಟ್ಟರೂ ಕುಲುಕದ
ಐಶಾರಾಮಿ ರೂಪು ಪಡೆದಿವೆ
ಆದರೂ ಆ ಗೋಡೆಗೆ ವರಗೆಕೊಂಡು ನಿಂತಿರುವ
ಹಳೇ ಕಂಪನಿಯ ಸರ್ವಕಾಲಿಕ ಹಾಗೂ,
ಆಲ್ ರೌಂಡರ್ ಸೈಕಲ್ಲುಗಳನ್ನು ಇತ್ತೀಚೆಗೆ ನೋಡಲೇ ಇಲ್ಲ
ಆ ಮಜಾ ದಿನಗಳು ಬರೀ ನೆಪ ಮಾತ್ರ; ಅಪ್ಪನ ಹಾಗೆ
ಕೈತಪ್ಪಿ ಹೋದದ್ದು ಮತ್ತೆ ಸಿಕ್ಕರೂ..
ಮೊದಲಿನ ನಲಿವು ಅವುಗಳಿಂದ ಎಂದಿಗೂ ಸಿಗದು;
ನಮ್ಮ ಬಾಲ್ಯವೂ ಕೂಡ!
- ಅನಂತ ಕುಣಿಗಲ್
ಸುಂದರ ಕವನ.... ಸೈಕಲ್ ಪಯಣದಂತೆ.....
ಪ್ರತ್ಯುತ್ತರಅಳಿಸಿಸುಂದರ ಕವನ, ಸೈಕಲ್ ಜೊತೆಗಿನ ಅನುಬಂಧ ಅದ್ಭುತವಾಗಿ ವರ್ಣಿಸಿದ್ದಿರ,
ಪ್ರತ್ಯುತ್ತರಅಳಿಸಿಆಳದವರೆಗೂ ನುಗ್ಗಿ ಅದಿರು ಹಿಡಿದು ಹೊರ ಬಂದ ಕವಿತೆ
ಪ್ರತ್ಯುತ್ತರಅಳಿಸಿ