ಆಕೆಗೆ ಅದೇ ಮೊದಲ ರಾತ್ರಿ!
ಅವನಿಗೆ ಅದೆಷ್ಟನೇ ರಾತ್ರಿಯೋ?
ಅವಳಿಗೆ ಮೊದಲ ರಾತ್ರಿ!
ಅವನಿಗೆ ಅದೆಷ್ಟನೇ ರಾತ್ರಿಯೋ?
ಅವಳಿಗೆ ಮೊದಲ ರಾತ್ರಿ!
ಅಪ್ಪನ ಹೊರತು ಬೇರೆ
ಗಂಡಸಿನ ದೇಹದ ಬಿಸುಪು
ಅನುಭವಿಸಿರದ ಆಕೆಗೆ
ಅದೇ ಮೊದಲ ರಾತ್ರಿ!
ಹೆಣ್ಣು ಕಾಣದ ಗಾವಿಲನಂತೆ
ಖಿಲ್ಲನೆ ನಗುತ್ತಾ ಹೊಕ್ಕುಳ ಹುಡುಕುವ
ಅವನಿಗೆ ಅದೆಷ್ಟನೇ ರಾತ್ರಿಯೋ?
ವಗರು ವಗರಾದ ಆಸೆಯ
ಕಿಬ್ಬೊಟ್ಟೆಯಲ್ಲಿ ಬಚ್ಚಿಟ್ಟು ಅನರ್ಘ್ಯ
ಶೀಲವ ಬಹುಕಾಲ ರಕ್ಷಿಸಿದ
ಆಕೆಗೆ ಅದೇ ಮೊದಲ ರಾತ್ರಿ!
ಹಠಕ್ಕೆ ಬಿದ್ದ ಹೋರಿಯಂತೆ
ಛಂಗನೆ ಎಗರುವ ಭೂಪತಿಗೆ
ಅದೆಷ್ಟನೇ ರಾತ್ರಿಯೋ?
ಗರ ಬಡಿದವಳಂತೆ ಕಣ್ಣು ಮಿಟುಕಿಸದೆ
ಎಲ್ಲಾ ಚಟುವಟಿಕೆಗಳಿಗೂ ಸ್ಪಂದಿಸುವ
ಆಕೆಗೆ ಅದೇ ಮೊದಲ ರಾತ್ರಿ!
ಗುಬ್ಬಿ ಒಡಲೊಳು ಆನೆ ಹೊಕ್ಕರೆ
ಉಳಿದಿತೇ?
ಹುಟ್ಟಿನಿಂದಲೇ ಅರ ಪಾವಿನಷ್ಟು
ಕಾಮವ ಪೂಸಿಕೊಂಡು ಬೆಳೆದ
ಅವನಿಗೆ ಅದೆಷ್ಟನೇ ರಾತ್ರಿಯೋ?
ಕಮ್ಮಗೆ ಬರುವ ಬೆವರ ವಾಸನೆಯ
ಎಂದೂ ಸ್ವಾದಿಸದ ಆಕೆಗೆ
ಅದೇ ಮೊದಲ ರಾತ್ರಿ!
ಮೂರು ಜಾವ ಬಿಟ್ಟೂ ಬಿಡದೆ
ಆಕೆಯ ದೇಹವ ಒದ್ದೆ ಮಾಡಿದ
ಅವನಿಗೆ ಅದೆಷ್ಟನೇ ರಾತ್ರಿಯೋ?
ಆಗಷ್ಟೇ ಅನೂಹ್ಯವಾದ ಲೋಕದ
ಪರಿಚಯ ಮಾಡಿಕೊಂಡ ಆಕೆಗೆ
ಅದೇ ಮೊದಲ ರಾತ್ರಿ!
ಏನು ಆಗಿಲ್ಲವೆಂಬಂತೆ ಗಳಿಸಿದ
ಸುಖವ ಬಚ್ಚಲು ಮನೆಯಲ್ಲಿ ತೊಳೆದು
ಬರುವ ಅವನಿಗೆ ಅದೆಷ್ಟನೇ ರಾತ್ರಿಯೋ?
ಮೈಯ್ಯ ಸತುವನ್ನೆಲ್ಲಾ ಕ್ರೋಢಿಕರಿಸಿ ಎದ್ದು
ನಿಂತರೂ ತಾರಾಡಿ ಬೀಳುತ್ತಿದ್ದ ಆಕೆಗೆ
ಅದೇ ಮೊದಲ ರಾತ್ರಿ!..
- ದೀಕ್ಷಿತ್ ನಾಯರ್
ಯುವ ಬರಹಗಾರ, ಮಂಡ್ಯ
ಗಂಡಸಿನ ದೇಹದ ಬಿಸುಪು
ಅನುಭವಿಸಿರದ ಆಕೆಗೆ
ಅದೇ ಮೊದಲ ರಾತ್ರಿ!
ಹೆಣ್ಣು ಕಾಣದ ಗಾವಿಲನಂತೆ
ಖಿಲ್ಲನೆ ನಗುತ್ತಾ ಹೊಕ್ಕುಳ ಹುಡುಕುವ
ಅವನಿಗೆ ಅದೆಷ್ಟನೇ ರಾತ್ರಿಯೋ?
ವಗರು ವಗರಾದ ಆಸೆಯ
ಕಿಬ್ಬೊಟ್ಟೆಯಲ್ಲಿ ಬಚ್ಚಿಟ್ಟು ಅನರ್ಘ್ಯ
ಶೀಲವ ಬಹುಕಾಲ ರಕ್ಷಿಸಿದ
ಆಕೆಗೆ ಅದೇ ಮೊದಲ ರಾತ್ರಿ!
ಹಠಕ್ಕೆ ಬಿದ್ದ ಹೋರಿಯಂತೆ
ಛಂಗನೆ ಎಗರುವ ಭೂಪತಿಗೆ
ಅದೆಷ್ಟನೇ ರಾತ್ರಿಯೋ?
ಗರ ಬಡಿದವಳಂತೆ ಕಣ್ಣು ಮಿಟುಕಿಸದೆ
ಎಲ್ಲಾ ಚಟುವಟಿಕೆಗಳಿಗೂ ಸ್ಪಂದಿಸುವ
ಆಕೆಗೆ ಅದೇ ಮೊದಲ ರಾತ್ರಿ!
ಗುಬ್ಬಿ ಒಡಲೊಳು ಆನೆ ಹೊಕ್ಕರೆ
ಉಳಿದಿತೇ?
ಹುಟ್ಟಿನಿಂದಲೇ ಅರ ಪಾವಿನಷ್ಟು
ಕಾಮವ ಪೂಸಿಕೊಂಡು ಬೆಳೆದ
ಅವನಿಗೆ ಅದೆಷ್ಟನೇ ರಾತ್ರಿಯೋ?
ಕಮ್ಮಗೆ ಬರುವ ಬೆವರ ವಾಸನೆಯ
ಎಂದೂ ಸ್ವಾದಿಸದ ಆಕೆಗೆ
ಅದೇ ಮೊದಲ ರಾತ್ರಿ!
ಮೂರು ಜಾವ ಬಿಟ್ಟೂ ಬಿಡದೆ
ಆಕೆಯ ದೇಹವ ಒದ್ದೆ ಮಾಡಿದ
ಅವನಿಗೆ ಅದೆಷ್ಟನೇ ರಾತ್ರಿಯೋ?
ಆಗಷ್ಟೇ ಅನೂಹ್ಯವಾದ ಲೋಕದ
ಪರಿಚಯ ಮಾಡಿಕೊಂಡ ಆಕೆಗೆ
ಅದೇ ಮೊದಲ ರಾತ್ರಿ!
ಏನು ಆಗಿಲ್ಲವೆಂಬಂತೆ ಗಳಿಸಿದ
ಸುಖವ ಬಚ್ಚಲು ಮನೆಯಲ್ಲಿ ತೊಳೆದು
ಬರುವ ಅವನಿಗೆ ಅದೆಷ್ಟನೇ ರಾತ್ರಿಯೋ?
ಮೈಯ್ಯ ಸತುವನ್ನೆಲ್ಲಾ ಕ್ರೋಢಿಕರಿಸಿ ಎದ್ದು
ನಿಂತರೂ ತಾರಾಡಿ ಬೀಳುತ್ತಿದ್ದ ಆಕೆಗೆ
ಅದೇ ಮೊದಲ ರಾತ್ರಿ!..
- ದೀಕ್ಷಿತ್ ನಾಯರ್
ಯುವ ಬರಹಗಾರ, ಮಂಡ್ಯ
ಹೆಣ್ಣೋಬ್ಬಳ್ಳು ಗ್ರಹಿಸಲಾಗದ ಅವನ ದೊಡ್ಡ ತಪ್ಪನ್ನು ತುಂಬಾ ಅರ್ಥಪೂರ್ಣವಾಗಿ ವ್ಯಕ್ತಪಡಿಸಿದೀಯಾ ದೀಕ್ಷಿತ್
ಪ್ರತ್ಯುತ್ತರಅಳಿಸಿಹೆಣ್ಣಿನ ಮಹತ್ತು ಮತ್ತು ಗಂಡಿನ ಆಸೆ ಸ್ವಾರಸ್ಯವನ್ನ ತುಂಬ ಮಾರ್ಮಿಕವಾಗಿ ಕವನದ ಮೂಲಕ ಬಿತ್ತರಿಸಿದ ತಮಗೆ ಕೋಟಿ ಪ್ರಣಾಯಗಳು ಸರ್..
ಪ್ರತ್ಯುತ್ತರಅಳಿಸಿ