ಛಲ..
ಬೇಕು ಬೇಕು ಅನ್ನೊ ಕನಸುಗಳಿವೆ
ಬೇಡ ಬೇಡ ಅನ್ನೊ ಮನಸ್ಸುಗಳಿವೆ
ಈಡೇರಿಸಬೇಕೆಂಬ ಛಲ ನಿನ್ನದು
ಫಲಸಿಗುವುದು ಆ ದೇವರು ಕಣ್ಣು ಬಿಟ್ಟಾಗ
ಸಿಗುವವರೆಗೂ ಹೋರಾಡು ನೀ ಒಬ್ಬಂಟಿಯಾಗಿ
ಈ ಸಾಧನೆಯ ಹಾದಿಯಲ್ಲಿ
ಕಷ್ಟಗಳೆಷ್ಷು ಬರುವವೊ
ಸುಖಗಳೆಷ್ಟು ಕಾಣುವೆವೊ
ಇವೆಲ್ಲವನ್ನೂ ಸರಿದುಗಿಸಿಕೊಂಡು
ಸಾಗು ನೀ ಗುರಿಯ ಕಡೆಗೆ
ಸಾಕು ಸಾಕು ಎಂದರೂ..
ಮತ್ತೆ ಬೇಕೆನಿಸುತ್ತೆ ಸಾಧಿಸುವ ಹಂಬಲ
ದೃಢವಾದ ಕನಸ್ಸು
ನಿಷ್ಕಲ್ಮಷವಾದ ಮನಸ್ಸು
ಜೊತೆಯಾದರೆ ನಿನ್ನ ಗುರಿ ತಲುಪುವೆ
ಕೊನೆಗೆ ಸಾಧಿಸುವೆ ನಿನ್ನ ಛಲ!
- ಕಿರಣ್ ಸಿದ್ದನಾಥ
ಅತ್ಯದ್ಭುತ ಸರ್ ಶುಭವಾಗಲಿ ನಿಮಗೆ ನಿಮ್ಮ ಕನಸುಗಳು ಸಾಕಾರಗೊಳ್ಳಲಿ ನಿಮ್ಮಗುರಿ ಬೇಗ ತಲುಪಿ💐💐💐💐
ಪ್ರತ್ಯುತ್ತರಅಳಿಸಿ