ಅತ್ಯಾಚಾರ
ಈ ಪ್ರಪಂಚದಲ್ಲಿ ಅತ್ಯಾಚಾರಕ್ಕೆ ಕೊನೆಯೆ ಇಲ್ಲ ಎಂಬುವುದು ಸ್ಪಷ್ಟವಾಗುತ್ತಿದೆ. ಹೆಣ್ಣೆಂದರೆ ಏನು? ಅವಳು ಅಬಲೇ,ತ್ಯಾಗಮಯಿ,ಮೃದು ಸ್ವಭಾವದ ಮುಗುದೆ.
ಪ್ರತಿ ಹೆಣ್ಣಲ್ಲೂ ಲಕ್ಷ್ಮೀ ನೆಲೆಸಿರುತ್ತಾಳೆ. ಪ್ರತಿ ಹೆಣ್ಣಲ್ಲೂ ಸೀತೆ ವಾಸವಿರುತ್ತಾಳೆ.ಅದಕ್ಕಿಂತ ಮಿಗಿಲಾಗಿ ಪ್ರತಿ ಹೆಣ್ಣಲ್ಲೂ ಒಬ್ಬ ತಾಯಿ, ತಂಗಿ, ಅಕ್ಕ ಇರುತ್ತಾಳೆ. ಹೆಣ್ಣು ಎಂಬುವವಳು ಮಗುವಿಗೆ ತಾಯಿಯಾಗುತ್ತಾಳೆ, ತಮ್ಮನಿಗೆ ಅಕ್ಕನಾಗುತ್ತಾಳೆ, ಅಣ್ಣನಿಗೆ ತಂಗಿಯಾಗುತ್ತಾಳೆ, ಗಂಡನಿಗೆ ಹೆಂಡತಿಯಾಗುತ್ತಾಳೆ. ಹೀಗೆ ಹಲವಾರು ಆಕೆಯ ಬಂಧನದ ಬದುಕು. ಯಾಕೆ ಇಂದು ಈ ಪ್ರಪಂಚದಲ್ಲಿ ಹೆಣ್ಣಿಗೆ ರಕ್ಷಣೆ ಸಿಗುತ್ತಿಲ್ಲ. ಗಂಡೆಂದರೆ ಹೆಣ್ಣಿಗೆ ರಕ್ಷಣೆ ಕೊಡುವವನು ಎಂಬ ತಪ್ಪು ತಿಳುವಳಿಕೆಯ?
ಅಂದು ದ್ರೌಪದಿಗೆ ತುಂಬಿದ ಸಭೆಯಲ್ಲಿ ಅವಮಾನ ಆಗುತ್ತಿದ್ದರೂ, ವಸ್ತ್ರಾಪಹರಣ ಆಗುತ್ತಿದ್ದರೂ, ಹೆಣ್ಣಿಗೆ ದೌರ್ಜನ್ಯ ಆಗುತ್ತಿದ್ದರೂ ಸುಮ್ಮನೆ ಕುಳಿತು ನೋಡುತ್ತಿದ್ದರೇ ವಿನಹ ಅವಳ ಸಹಾಯಕ್ಕೆ ಯಾರು ಒಂದು ಹೆಜ್ಜೆ ಮುಂದಿಡಲಿಲ್ಲ.
ಎಲ್ಲಾ ಪಾಂಡವರಾಗಲಿ, ಭೀಷ್ಮ, ಗುರು ದ್ರೋಣ, ಎಲ್ಲಾ ಸಭಿಕರು ಮೂಖರಾದಂತೆ, ಕುರುಡ ದೃತರಾಷ್ಟ್ರ ನಂತೆ ಎಲ್ಲರೂ ಕಣ್ಣಿದ್ದು ಕುರುಡರಂತೆ ವರ್ತಿಸಿದ್ದರು. ಅಂದು ಕೃಷ್ಣನ ಸಹಾಯವೂ ಇಲ್ಲದಿದ್ದರೆ ಏನಾಗುತ್ತಿತ್ತೊ ಏನೋ? ಇಂದು ಕೂಡ ಇಂತಹ ಇಷ್ಟು ಮುಂದುವರೆದ ಪ್ರಪಂಚದಲ್ಲೂ ತಿಳುವಳಿಕೆಯ ವಿಶ್ವದಲ್ಲೂ ಅನ್ಯಾಯ, ಅತ್ಯಾಚಾರ ನಡೆಯುತ್ತಿದ್ದರೂ ಕೂಡ ಜನರು ಮೂಖರಾದಂತೆ, ನ್ಯಾಯದೇವತೆಯ ಹಾಗೇ ಕಣ್ಣಿಗೆ ಬಟ್ಟೆ ಕಟ್ಟಿದಂತೆ ನೋಡುತ್ತಾರೆ ಹೊರತು ಸಹಾಯಕ್ಕಾಗಲಿ, ನ್ಯಾಯಕ್ಕಾಗಲಿ ಹೋರಾಡುವವರಿಲ್ಲ. ಇಂತವರ ನಡುವಲ್ಲಿ ಬೂದಿಯಾಗಿ ಮಸಣ ಸೇರಿದವಳು ಹೆಣ್ಣು. ಇಂತಹ ದುಷ್ಕರ್ಮಿಗಳಿಗೆ ಎಂತಹ ಶಿಕ್ಷೆ ವಿಧಿಸಿದರು ಕಮ್ಮಿಯೆ. ಅವರು ಒಬ್ಬ ತಾಯಿಯ ಹೊಟ್ಟೆಯಲ್ಲಿ ಜನಿಸಿದ್ದರೂ, ಅವರ ಮನೆಯಲ್ಲಿಯೂ ಅಕ್ಕ ತಂಗಿ ಇದ್ದರೂ ಅವರನ್ನು ಕೂಡ ಕಾಮುಕ ದೃಷ್ಟಿಯಿಂದ ನೋಡುವರೋ ಏನೋ?
ಅತ್ಯಾಚಾರಿಗಳ ಕಾಮುಕ ತನಕ್ಕೆ, ಅತ್ಯಾಚಾರಿಯ ತೆವಲಿಗೆ, ಚಪಲಕ್ಕೆ ಬಲಿಯಾದಳು ಹೆಣ್ಣು, ಭಸ್ಮವಾದಳು ಹೆಣ್ಣು. ಒಂದು ಹೆಣ್ಣಿಗೆ ಅವಮಾನವಾದರೆ ಅದು ಸ್ವತಃ ಗಂಡು ತನಗೆ ತಾನೇ ಮಾಡಿಕೊಳ್ಳುವ ಅವಮಾನ. ಹೆಣ್ಣಿಗೆ ಗೌರವ ಕೊಡದ ಗಂಡು ಹೇಗೆ ಹೆಣ್ಣಿಗೆ ರಕ್ಷಕನಾಗುವ? ಇದೆಲ್ಲಾ ಅರಿವಾಗುವುದು ಯಾವಾಗ? ಇನ್ನು ಕಲಿಯುಗದ ವಿಷ್ಣುವಿನ ಅವತಾರವಾಗಬೇಕೋ ಏನೋ?
ಅಂದೇ ಇಂತಹ ಅನಾಚಾರದ, ಅತ್ಯಾಚಾರಿಗಳ ಅಂತ್ಯವಾಗುವುದಾ ಏನೋ? ಎಲ್ಲಾ ಹೆಣ್ಣುಮಕ್ಕಳಿಗೆ ಹೇಳುವುದೊಂದೇ ನಿಮ್ಮ ರಕ್ಷಣೆಯಲ್ಲಿ ನೀವಿರಿ.. ಇಲ್ಲಿ ರಕ್ಷಕರಿಲ್ಲ ಭಕ್ಷಕರಿದ್ದಾರೆ. ಸ್ವಯಂ ರಕ್ಷಣೆಗೆ ಮುಂದಾಗಿ.
- ಸ್ವಾತಿ ಶೆಟ್ಟಿ
ಕಾಮ ಎನ್ನುವುದು ಪ್ರಚೋದಿಸಬಹುದಾದ ಜೈವಿಕ ಪ್ರಕ್ರಿಯೆ. ಪ್ರಚೋದನೆ ಇಲ್ಲದ ಕಾಮ ಅಸಾಧ್ಯ. ಅತ್ಯಾಚಾರದ ಬಗ್ಗೆ ಸೊಲ್ಲು ಎತ್ತುವ ಹೆಣ್ಣು ಕುಲ ಸ್ತ್ರೀ ಸ್ವಾತಂತ್ರದ ಹೆಸರಲ್ಲಿ ಮಾಡುತ್ತಿರುವುದರ ಬಗ್ಗೆಯೂ ಮಾತಾಡಬೇಕು. ದುಡ್ಡಿಗಾಗಿ, ಚಲನ ಚಿತ್ರಗಳಲ್ಲಿ, ನೀಲಿ ಚಿತ್ರಗಳಲ್ಲಿ ಅರೆನಗ್ನ ಮತ್ತು ನಗ್ನ ಪ್ರಚೋದನೆ ಕಾರಕಳು ಒಬ್ಬಳು ಹೆಣ್ಣು ಅನ್ನುವುದನ್ನು ಅಲ್ಲಗೆಳೆಯುತ್ತೆರ? ಅಷ್ಟೇ ಏಕೆ ಶೋಕಿಯ ಹೆಸರಲ್ಲಿ ತುಂಡು ಬಟ್ಟೆಗಳ ತೊಟ್ಟು ಮಿಂಚುವ ಇಂದಿನ ಪೀಳಿಗೆ, ಆ ತುಂಡು ಬಟ್ಟೆಯ ಪ್ರಚೋದನೆಯು ಒಂದು ಹೆಣ್ಣು ಅನ್ನುವುದು ಮರೆತಿದ್ದೆರ.
ಪ್ರತ್ಯುತ್ತರಅಳಿಸಿಸ್ತ್ರೀ ಎಲ್ಲದರಲ್ಲೂ ಸಮಾನಳು ಎನ್ನುವುದಾದರೆ, ರಾಕ್ಷಸರ ವಧಿಸಲು ಸ್ತ್ರೀ ದೇವತೆಗಳೆ ಅವತರಿಸಿದ ಮೇಲೆ, ಅವಳೆಕೆ ಅಬಲೆಯಂತೆ ಪ್ರಶ್ನಿಸುವ ಕೆಲಸದಲ್ಲೆ ಮಗ್ನಲಾಗಿದ್ದಾಳೆ.
ಸಮಸ್ಯೆ ಎಲ್ಲರಿಗೂ ತಿಳಿದಿದೆ..ಉತ್ತರ ಅಥವಾ ಪರಿಹಾರ ನೀಡುವ ಕಾರ್ಯ ಬೇಕಾಗಿದೆ. ಗುಲಾಬಿಯಂತ ಸುಂದರ ಹೂ ಬಿಟ್ಟ ಗಿಡ ಜೊತೆಗೇ ಮುಳ್ಳಿನ ಸರಪಳಿ ಹೆಣೆದು ಕಾಯುತ್ತದೆ ಹೊರತು, ನಾನು ಅಬಲಿ, ಯಾರೂ ಕಾಯರು ಎಂದು ಕೊರಗುವುದಿಲ್ಲ ಅಥವಾ ಮರುಗುವುದಿಲ್ಲ. ನಾವು ಪ್ರಕೃತಿಯ ನೋಡಿ ಕಲಿಯಬೇಕಿದೆ. ಹೆಣ್ಣನ್ನು ಭೋಗದ ವಸ್ತುವಾಗಿ ಮತ್ತೊಂದು ಹೆಣ್ಣೇ ಬಂದು ತೋರುವ, ಹೀನ ಸಂಸ್ಕೃತಿ ಕೊನೆಯಾಗದೆ ಇದಕೆ ಮುಕ್ತಿ ಇಲ್ಲ. ನಿಮ್ಮದೇ ಜಾತಿಯ ಎಲ್ಲ ಹೆಣ್ಣಿಗೂ ಇದರ ಅರಿವು ಮೂಡುವ ಕೃತಿಗಳು ಮುಂದೆ ಬರಲಿ ಎಂಬುದು ಆಶಯ.
ಪ್ರತ್ಯುತ್ತರಅಳಿಸಿನಮ್ಮ ಈ ಪ್ರಪಂಚದಲ್ಲಿ ಯಾರೂ. ಹೆಣ್ಣಿಗೆ ಬೆಲೆ ಕೊಡುತ್ತಿಲ್ಲ ಅದರಲ್ಲೂ ನಮ್ಮ ದೇಶದಲ್ಲಿ ಹೆಣ್ಣಿನ ಮೇಲೆ ಹಾಗುವ ದೌರ್ಜನ್ಯ ಮತ್ತು ರೆಪ್. ದಿನೆ ದಿನೆ ಹೆಚ್ಚುತ್ತಿದೆ . ಇದನ್ನು ಮಾಡಿದವರಿಗೆ ಕಠಿಣ ಶಿಕ್ಷೆ ಕೊಡಬೇಕು .. ಇನ್ನೊಮ್ಮೆ ಯಾರನ್ನು ಆ ದೃಷ್ಟಿಯಿಂದ ನೊಡದಂತೆ ಮಾಡಬೇಕು.......plz. Plz. ಹೆಣ್ಣಿಗೆ ಗೌರವ ಕೊಡಿ..........