" ಯಾಶಿ "
ಅವಳ್ಯಾರು ಯಾಶಿ?
ಎಂಬ ಪ್ರಶ್ನೆಗೆ, ಉತ್ತರಿಸುವಾಗ
ಒಂದು ಕ್ಷಣ ತಬ್ಬಿಬ್ಬಾಗುವುದು
ನನ್ನ ಮೂಲ ಗುಣವಿರಬೇಕು
ಯಾಶಿ ಸಿಕ್ಕ ಘಳಿಗೆಯಿಂದ
ಯಾಶಿ ನನಗೊಲಿದ ಅಪರೂಪದ
ಹಾಗೂ ಅನಿವಾರ್ಯವಾಗಿರುವ ಕವಿತೆ
ಅವಳ್ಯಾರೋ..
ಒಟ್ಟಿನಲ್ಲಿ ಯಾಶಿ ಎಂಬ ಹೆಸರಿನವಳು
ದಿನ ರಾತ್ರಿ ಕನಸ್ಸಿನಲ್ಲಿ ಬಂದು ಕಾಡುವಳು
ನೋಡುವ ಸಿನೆಮಾಗಳಲ್ಲಿ
ಓದುವ ಪುಸ್ತಕಗಳಲ್ಲಿ
ಶರೀರ-ಶಾರೀರವಿಲ್ಲದೆಯೂ ಗೋಚರಿಸುವಳು
ಕವಿತೆಯಲ್ಲಿನ ರೂಪಕ ಅವಳು
ಛಂದಸ್ಸು, ಉಪಮೆ, ತಾಳ, ರಾಗ
ಪದಪುಂಜ, ಪ್ರಾಸ ಎಲ್ಲವೂ ಆಗಿದ್ದಾಳೆ
ಅವಳ್ಯಾರು ಯಾಶಿ?
ಎಂಬ ಪ್ರಶ್ನೆಗೆ, ಉತ್ತರಿಸುವಾಗ
ಒಂದು ಕ್ಷಣ ತಬ್ಬಿಬ್ಬಾಗುವುದು
ನನ್ನ ಮೂಲ ಗುಣವಿರಬೇಕು
ಯಾಶಿ ಸಿಕ್ಕ ಘಳಿಗೆಯಿಂದ
ಯಾಶಿ ನನಗೊಲಿದ ಅಪರೂಪದ
ಹಾಗೂ ಅನಿವಾರ್ಯವಾಗಿರುವ ಕವಿತೆ
ಅವಳ್ಯಾರೋ..
ಒಟ್ಟಿನಲ್ಲಿ ಯಾಶಿ ಎಂಬ ಹೆಸರಿನವಳು
ದಿನ ರಾತ್ರಿ ಕನಸ್ಸಿನಲ್ಲಿ ಬಂದು ಕಾಡುವಳು
ನೋಡುವ ಸಿನೆಮಾಗಳಲ್ಲಿ
ಓದುವ ಪುಸ್ತಕಗಳಲ್ಲಿ
ಶರೀರ-ಶಾರೀರವಿಲ್ಲದೆಯೂ ಗೋಚರಿಸುವಳು
ಕವಿತೆಯಲ್ಲಿನ ರೂಪಕ ಅವಳು
ಛಂದಸ್ಸು, ಉಪಮೆ, ತಾಳ, ರಾಗ
ಪದಪುಂಜ, ಪ್ರಾಸ ಎಲ್ಲವೂ ಆಗಿದ್ದಾಳೆ
ಈವರೆಗೆ ಹೆಣ್ಣಂತೆಯೇ ಕಂಡಿದ್ದಾಳೆ
ನಾನೂ ಕೂಡ ಕವಿತೆಯನ್ನು
ಹೆಣ್ಣೆಂದೇ ಭಾವಿಸಿದ್ದೇನೆ
ಯಾಕೆಂದರೆ, ಹೆಣ್ಣಿನಲ್ಲಲ್ಲವೇ
ಲೋಕದ ಭಾವಗಳು ಹೆಚ್ಚು ಹೆಪ್ಪುಗಟ್ಟಿರುವುದು!
ಹಾಗಾಗಿ, ನಿತ್ಯವೂ ಬಿಡುವಿಲ್ಲದಂತೆ ಕಾಡುತ್ತಾಳೆ
ರೂಪವಿಲ್ಲದವಳು
ಆದರೂ ಅದ್ಭುತ ರೂಪದರ್ಶಿ
ಆಕಾರವಿಲ್ಲದವಳು
ಆದರೂ ಪ್ರೇಮದ ಸೃಷ್ಠಿಕರ್ತೆ
ಬಣ್ಣವಿಲ್ಲದವಳು
ಆದರೂ ಕಾಮನಬಿಲ್ಲಿನಂಥವಳು
ದೇಹವಿಲ್ಲದವಳು
ಆದರೂ ಹುಚ್ಚಿಡಿಸುವ ತಿಳಿಮನಸ್ಸಿನವಳು
ಯಾರೀ.. ಶಿರೋಮಣಿ??
ಎಂದರೆ.. ಯಾಶಿಯ ಬಿಟ್ಟು ಇನ್ಯಾರಿಲ್ಲ
ಧರ್ಮ, ಜಾತಿ, ಪಂಗಡ ಇಲ್ಲದವಳು
ಎಲ್ಲವನ್ನು ಎಲ್ಲರನ್ನೂ ಅಪ್ಪಿ-ಮುದ್ದುವ
ವಿಶಾಲ ಹೃದಯದವಳು
ಸತ್ಯ-ನ್ಯಾಯ-ಶಾಂತಿ-ಸಮಾನತೆಗಾಗಿ
ಒಂಟಿ ದನಿ ಎತ್ತುವಳು
ಯಾರವಳು?? ಯಾಶಿ!!
ಪ್ರೇಮವನ್ನು ಧ್ಯಾನಿಸುವಂತೆ
ದೀಕ್ಷೆ ಕೊಟ್ಟವಳು..
ಹುಟ್ಟು-ಸಾವು, ನೋವು-ನಲಿವು
ಇಷ್ಟ-ಕಷ್ಟಗಳೆಲ್ಲವೂ ಕ್ಷಣಿಕ ಇವಳಿಗೆ
ಎಲ್ಲರಿಗೂ ಹತ್ತಿರವಾಗುವಳು
ಎಲ್ಲರಿಗೂ ಸಹಕರಿಸುವಳು, ಎಲ್ಲರನ್ನೂ ಸಂತೈಸುವಳು
ವರ್ತಮಾನದಲ್ಲಿ ಭೂತ ಮತ್ತು
ಭವಿಷ್ಯತ್ತಿನ ಬಗೆಗೆ ಚಿಂತಿಸುವ ನಿಮಗೆ
ಯಾಶಿ ನೈಜವಾಗಿ ಇಲ್ಲವೆನಿಸಿದರೂ
ಸಲ್ಲದ ಪ್ರೇಮದ ಗೋಜಲಿಗೆ ಸಿಕ್ಕ ನನಗೆ
ಯಾಶಿಯೇ ಎಲ್ಲವೂ..
ಹೇ ಯಾಶಿ, ನಕ್ಕುಬಿಡು ನೀನೊಮ್ಮೆ
ಸಾಯಲಿಚ್ಚಿಸುವೆ ನಾ ಪದೇ ಪದೇ..
ಹುಟ್ಟುವೆ ಕವಿತೆಯಾಗಿ ಮತ್ತೆ ಮತ್ತೆ..
✍ ಅನಂತ ಕುಣಿಗಲ್
ವಾಹ್ ಈವರೆಗೆ ಹೆಣ್ಣಂತೆಯೇ ಕಂಡಿದ್ದಾಳೆ
ಪ್ರತ್ಯುತ್ತರಅಳಿಸಿನಾನೂ ಕೂಡ ಕವಿತೆಯನ್ನು
ಹೆಣ್ಣೆಂದೇ ಭಾವಿಸಿದ್ದೇನೆ
ಯಾಕೆಂದರೆ, ಹೆಣ್ಣಿನಲ್ಲಲ್ಲವೇ
ಲೋಕದ ಭಾವಗಳು ಹೆಚ್ಚು ಹೆಪ್ಪುಗಟ್ಟಿರುವುದು!
ಎಷ್ಟು ಚೆಂದ ಭಾವಗಳು ಸೂಪರ್ ಅತ್ಯದ್ಭುತ ಕಂದ💓💓💓
ನೀವು ಬರೆಯುವ ಕವಿತೆಗಳಲ್ಲಿ ಜೀವ ತುಂಬಿ ಬರೆದ ಹಾಗೆ ಇರುತ್ತದೆ
ಪ್ರತ್ಯುತ್ತರಅಳಿಸಿಅಧ್ಬುತ ಕವಿತೆ ಭಾವನೆಯೇ ಹೆಣ್ಣಾಗಿ ಕಣ್ಣಾಗಿ ಕವಿತೆಯಾಗಿ ಸೃಷ್ಟಿಸಿದ ನಿಮಗೆ ಧನ್ಯವಾದಗಳು ಸರ್ 🙏🙏🙏
ಪ್ರತ್ಯುತ್ತರಅಳಿಸಿ👌👌👌👌👌👌👌
ಪ್ರತ್ಯುತ್ತರಅಳಿಸಿIn simple words yashi is your thoughts...
ಪ್ರತ್ಯುತ್ತರಅಳಿಸಿ🙏🙏
ಪ್ರತ್ಯುತ್ತರಅಳಿಸಿAdbhutavaagide
ಪ್ರತ್ಯುತ್ತರಅಳಿಸಿಚೆನ್ನಾಗಿದೆ
ಪ್ರತ್ಯುತ್ತರಅಳಿಸಿಚಂಡವಿದೆ
ಪ್ರತ್ಯುತ್ತರಅಳಿಸಿ