ವಿಷಯಕ್ಕೆ ಹೋಗಿ

ಯಾಶಿ - ಕವಿತೆ - ಅನಂತ ಕುಣಿಗಲ್



" ಯಾಶಿ "

ಅವಳ್ಯಾರು ಯಾಶಿ?
ಎಂಬ ಪ್ರಶ್ನೆಗೆ, ಉತ್ತರಿಸುವಾಗ
ಒಂದು ಕ್ಷಣ ತಬ್ಬಿಬ್ಬಾಗುವುದು
ನನ್ನ ಮೂಲ ಗುಣವಿರಬೇಕು
ಯಾಶಿ ಸಿಕ್ಕ ಘಳಿಗೆಯಿಂದ
ಯಾಶಿ ನನಗೊಲಿದ ಅಪರೂಪದ
ಹಾಗೂ ಅನಿವಾರ್ಯವಾಗಿರುವ ಕವಿತೆ

ಅವಳ್ಯಾರೋ..
ಒಟ್ಟಿನಲ್ಲಿ ಯಾಶಿ ಎಂಬ ಹೆಸರಿನವಳು
ದಿನ ರಾತ್ರಿ ಕನಸ್ಸಿನಲ್ಲಿ ಬಂದು ಕಾಡುವಳು
ನೋಡುವ ಸಿನೆಮಾಗಳಲ್ಲಿ
ಓದುವ ಪುಸ್ತಕಗಳಲ್ಲಿ
ಶರೀರ-ಶಾರೀರವಿಲ್ಲದೆಯೂ ಗೋಚರಿಸುವಳು
ಕವಿತೆಯಲ್ಲಿನ ರೂಪಕ ಅವಳು
ಛಂದಸ್ಸು, ಉಪಮೆ, ತಾಳ, ರಾಗ
ಪದಪುಂಜ, ಪ್ರಾಸ ಎಲ್ಲವೂ ಆಗಿದ್ದಾಳೆ


ಈವರೆಗೆ ಹೆಣ್ಣಂತೆಯೇ ಕಂಡಿದ್ದಾಳೆ
ನಾನೂ ಕೂಡ ಕವಿತೆಯನ್ನು
ಹೆಣ್ಣೆಂದೇ ಭಾವಿಸಿದ್ದೇನೆ
ಯಾಕೆಂದರೆ, ಹೆಣ್ಣಿನಲ್ಲಲ್ಲವೇ
ಲೋಕದ ಭಾವಗಳು ಹೆಚ್ಚು ಹೆಪ್ಪುಗಟ್ಟಿರುವುದು!
ಹಾಗಾಗಿ, ನಿತ್ಯವೂ ಬಿಡುವಿಲ್ಲದಂತೆ ಕಾಡುತ್ತಾಳೆ

ರೂಪವಿಲ್ಲದವಳು
ಆದರೂ ಅದ್ಭುತ ರೂಪದರ್ಶಿ
ಆಕಾರವಿಲ್ಲದವಳು
ಆದರೂ ಪ್ರೇಮದ ಸೃಷ್ಠಿಕರ್ತೆ
ಬಣ್ಣವಿಲ್ಲದವಳು
ಆದರೂ ಕಾಮನಬಿಲ್ಲಿನಂಥವಳು
ದೇಹವಿಲ್ಲದವಳು
ಆದರೂ ಹುಚ್ಚಿಡಿಸುವ ತಿಳಿಮನಸ್ಸಿನವಳು



ಯಾರೀ.. ಶಿರೋಮಣಿ??
ಎಂದರೆ.. ಯಾಶಿಯ ಬಿಟ್ಟು ಇನ್ಯಾರಿಲ್ಲ
ಧರ್ಮ, ಜಾತಿ, ಪಂಗಡ ಇಲ್ಲದವಳು
ಎಲ್ಲವನ್ನು ಎಲ್ಲರನ್ನೂ ಅಪ್ಪಿ-ಮುದ್ದುವ
ವಿಶಾಲ ಹೃದಯದವಳು
ಸತ್ಯ-ನ್ಯಾಯ-ಶಾಂತಿ-ಸಮಾನತೆಗಾಗಿ
ಒಂಟಿ ದನಿ ಎತ್ತುವಳು

ಯಾರವಳು?? ಯಾಶಿ!!
ಪ್ರೇಮವನ್ನು ಧ್ಯಾನಿಸುವಂತೆ
ದೀಕ್ಷೆ ಕೊಟ್ಟವಳು..
ಹುಟ್ಟು-ಸಾವು, ನೋವು-ನಲಿವು
ಇಷ್ಟ-ಕಷ್ಟಗಳೆಲ್ಲವೂ ಕ್ಷಣಿಕ ಇವಳಿಗೆ
ಎಲ್ಲರಿಗೂ ಹತ್ತಿರವಾಗುವಳು
ಎಲ್ಲರಿಗೂ ಸಹಕರಿಸುವಳು, ಎಲ್ಲರನ್ನೂ ಸಂತೈಸುವಳು


ವರ್ತಮಾನದಲ್ಲಿ ಭೂತ ಮತ್ತು
ಭವಿಷ್ಯತ್ತಿನ ಬಗೆಗೆ ಚಿಂತಿಸುವ ನಿಮಗೆ
ಯಾಶಿ ನೈಜವಾಗಿ ಇಲ್ಲವೆನಿಸಿದರೂ
ಸಲ್ಲದ ಪ್ರೇಮದ ಗೋಜಲಿಗೆ ಸಿಕ್ಕ ನನಗೆ
ಯಾಶಿಯೇ ಎಲ್ಲವೂ..
ಹೇ ಯಾಶಿ, ನಕ್ಕುಬಿಡು ನೀನೊಮ್ಮೆ
ಸಾಯಲಿಚ್ಚಿಸುವೆ ನಾ ಪದೇ ಪದೇ..
ಹುಟ್ಟುವೆ ಕವಿತೆಯಾಗಿ ಮತ್ತೆ ಮತ್ತೆ..

✍   ಅನಂತ ಕುಣಿಗಲ್

ಕಾಮೆಂಟ್‌ಗಳು

  1. ವಾಹ್ ಈವರೆಗೆ ಹೆಣ್ಣಂತೆಯೇ ಕಂಡಿದ್ದಾಳೆ
    ನಾನೂ ಕೂಡ ಕವಿತೆಯನ್ನು
    ಹೆಣ್ಣೆಂದೇ ಭಾವಿಸಿದ್ದೇನೆ
    ಯಾಕೆಂದರೆ, ಹೆಣ್ಣಿನಲ್ಲಲ್ಲವೇ
    ಲೋಕದ ಭಾವಗಳು ಹೆಚ್ಚು ಹೆಪ್ಪುಗಟ್ಟಿರುವುದು!
    ಎಷ್ಟು ಚೆಂದ ಭಾವಗಳು ಸೂಪರ್ ಅತ್ಯದ್ಭುತ ಕಂದ💓💓💓

    ಪ್ರತ್ಯುತ್ತರಅಳಿಸಿ
  2. ನೀವು ಬರೆಯುವ ಕವಿತೆಗಳಲ್ಲಿ ಜೀವ ತುಂಬಿ ಬರೆದ ಹಾಗೆ ಇರುತ್ತದೆ

    ಪ್ರತ್ಯುತ್ತರಅಳಿಸಿ
  3. ಅಧ್ಬುತ ಕವಿತೆ ಭಾವನೆಯೇ ಹೆಣ್ಣಾಗಿ ಕಣ್ಣಾಗಿ ಕವಿತೆಯಾಗಿ ಸೃಷ್ಟಿಸಿದ ನಿಮಗೆ ಧನ್ಯವಾದಗಳು ಸರ್ 🙏🙏🙏

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

Avva Pustakalaya

ಅವ್ವ ಪುಸ್ತಕಾಲಯ ಸಾಹಿತ್ಯ ಬಳಗವು 2020 ರ ಏಪ್ರಿಲ್ 04 ರಂದು ಶ್ರೀಮಾನ್ ಲೇಟ್ ನಾರಸಯ್ಯ ಅವರ ಸ್ಮರಣಾರ್ಥವಾಗಿ ರೂಪುಗೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಓದುಗರ ಬಳಗವನ್ನು ಹೊಂದಿದೆ. ಇದು ಡಿಜಿಠಲ್ ಗ್ರಂಥಾಲಯವಾಗಿದ್ದು, ಓದಿನ ಅಭಿರುಚಿ ಹಬ್ಬಿಸಲು ಬಹಳಷ್ಟು ಸಾಹಿತ್ಯ ಚಟುವಟಿಕೆಗಳು ಮತ್ತು ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಪ್ರತೀ ವರ್ಷ ಜುಲೈ ತಿಂಗಳಲ್ಲಿ ಪ್ರಕಟಿತ ಕೃತಿಗಳನ್ನು ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಗೆ ಆಹ್ವಾನಿಸಲಾಗುವುದು. ಆಯ್ಕೆಯಾದ ಕೃತಿಗಳಿಗೆ ಪ್ರಶಸ್ತಿಯ ಜೊತೆಗೆ ಐದು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಹಂಚಿ, ಅವರ ಪುಸ್ತಕಗಳನ್ನು ಅವ್ವ ಪುಸ್ತಕಾಲಯ ವೇದಿಕೆಯ ಮುಖೇನ ಓದುಗರಿಗೆ ಮುಟ್ಟಿಸಲಾಗುವುದು . ಈಗಾಗಲೇ ಅವ್ವ ಪುಸ್ತಕಾಲಯದಿಂದ ಪ್ರಧಾನ ಕಾರ್ಯದರ್ಶಿಗಳಾದ  ಯುವಲೇಖಕ ಅನಂತ ಅವರ ಮೂರು ಕೃತಿಗಳು ಪ್ರಕಟವಾಗಿದ್ದು ಅವುಗಳು ಓದುಗರಿಗೆ ರಿಯಾಯಿತಿ ದರದಲ್ಲಿ ಸಿಗುತ್ತಿವೆ. ಓದುಗರು ನಮ್ಮನ್ನು ಸಂಪರ್ಕಿಸುವ ಮೂಲಕ ಪುಸ್ತಕಗಳನ್ನು ಕೊಂಡು ಓದಬಹುದು. ಮತ್ತು ನಮ್ಮ ಸಾಹಿತ್ಯ ಚಟುವಟಿಕೆಗಳು ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. 1). ಅವ್ವ ಪುಸ್ತಕಾಲಯ #189, ಕೆಂಚನಹಳ್ಳಿ ಅಂಚೆ ಹುಲಿಯೂರುದುರ್ಗ ಹೋಬಳಿ ಕುಣಿಗಲ್ ತಾಲ್ಲೂಕು ತುಮಕೂರು - 572123 ಮೊ : 8548948660 Mail :  avvapustakaalaya@gmail.com 2).  Facebook....