ಅನಂತ ಅವರ ಹೆಚ್ಚಿನ ಕವನಗಳು ಸ್ತ್ರೀ ಕೇಂದ್ರಿತವಾದವು. ಹೆಣ್ಣಿನ ಅಂತರಂಗವನ್ನು ಹೊಕ್ಕು, ಅವಳ ಸೂಕ್ಷ್ಮ, ಸಂಕೀರ್ಣ ಅನುಭವಗಳನ್ನು ತನ್ನದಾಗಿಸಿಕೊಳ್ಳುತ್ತಾ.. ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅಭಿವ್ಯಕ್ತಿಸುವ ರೀತಿಯಲ್ಲಿ ಇಲ್ಲಿಯ ಕವಿತೆಗಳಿವೆ. ಹೆಣ್ಣನ್ನು ಅನೇಕ ಬಗೆಯಲ್ಲಿ ಶೋಷಣೆಗೆ ಗುರಿ ಮಾಡುತ್ತಿರುವ ಪುರುಷ ಪ್ರಧಾನ ಸಮಾಜವನ್ನು ಟೀಕಿಸುವ, ಪ್ರಶ್ನಿಸುವ ಕವಿಯ ಒಳಕುದಿ ಹೆಚ್ಚಿನ ಬಾರಿ ನಿಗಿ ನಿಗಿಸುವ ಕೆಂಡದಂತೆ ಪ್ರಜ್ವಲಿಸಿ ನೇರವಾಗಿಯೇ ಎದೆಯನ್ನು ಸುಡುತ್ತದೆ. ಹೊರಗಿನ ಸಂಗತಿಗಳಿಂದ ವಿಚಲಿತನಾದ ಕವಿ ಬೇಕೆಂದೇ ಈ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವುದನ್ನು ಪರಂಪರೆಯಲ್ಲಿ ಕಾಣುತ್ತಲೇ ಬಂದಿದ್ದೇವೆ. . ಹೊರಗಿನ ಚೆಲ್ಲಾಪಿಲ್ಲಿಯಾದ ಲೋಕದಿಂದಲೇ ಅನಂತ ಅವರ ಕವಿತೆಗಳ ರೂಪಕಗಳು ಹುಟ್ಟಿಕೊಂಡಿವೆ. ಹೆಣ್ಣೊಬ್ಬಳು ಕಲ್ಲು, ಬಂಡಿ, ಹೂವು, ಬುಟ್ಟಿ, ನಳ, ತಂತಿ, ನೇಗಿಲು ಹೀಗೆ ಉಪಯೋಗಕ್ಕೆ ಬರುವ ಭೌತಿಕ ವಸ್ತುಗಳಾಗಿ ಕಾಣುತ್ತಾಳೆ ಎನ್ನುವುದನ್ನು ಮಾರ್ಮಿಕವಾಗಿ ಹೇಳುತ್ತಾರೆ. ಹೆಣ್ಣನ್ನು ಭೋಗದ ವಸ್ತು ಎಂದು ಪರಿಗಣಿಸಿರುವುದನ್ನು 'ಭೋಜನ'ದ ರೂಪಕದ ಮೂಲಕ ಕವಿಯು ಹೇಳುವುದು ವಿಶಿಷ್ಟವಾಗಿದೆ. ಇಡೀ ಕಪ್ಪು ಜನಾಂಗವನ್ನು ವರ್ಣ ರಾಜಕಾರಣಕ್ಕಾಗಿ ಶೋಷಣೆಗೆ ಗುರಿಪಡಿಸಿದ್ದನ್ನು ಹೇಳುವಾಗ ಮಹತ್ವದ ಆಫ್ರಿಕನ್-ಅಮೇರಿಕನ್ ಕವಯತ್ರಿ ಆಲೀಸ್ ವಾಕರ್ ಇಂತಹದ್ದೇ ರೂಪಕಕ್ಕೆ ಮೊರೆ ಹೋಗುವುದನ್ನು ನಾವಿಲ್ಲಿ ನ...
"ಓದುಗರಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸಲು ರೂಪುಗೊಂಡ ಡಿಜಿಟಲ್ ಲೈಬ್ರರಿ"