ತುಮಕೂರು ಜಿಲ್ಲೆಯ ಯುವ ಪ್ರತಿಭೆಗೆ ರಾಜ್ಯ ಯುವ ರತ್ನ ಪ್ರಶಸ್ತಿ
ಶ್ರೀನಿವಾಸ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕೊಡಲಾಗುವ "ರಾಜ್ಯ ಯುವರತ್ನ ಪ್ರಶಸ್ತಿ 2021" ಕ್ಕೆ ಕಲಾವಿದರಾದ ಅನಂತ್ ಕುಣಿಗಲ್ ಅವರು ಆಯ್ಕೆಯಾಗಿದ್ದಾರೆ.
ಶ್ರೀನಿವಾಸ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕೊಡಲಾಗುವ "ರಾಜ್ಯ ಯುವರತ್ನ ಪ್ರಶಸ್ತಿ 2021" ಕ್ಕೆ ಕಲಾವಿದರಾದ ಅನಂತ್ ಕುಣಿಗಲ್ ಅವರು ಆಯ್ಕೆಯಾಗಿದ್ದಾರೆ.
ಅನಂತ ಅವರ ಕನ್ನಡ ಸಾಹಿತ್ಯ ಸೇವೆ ಮತ್ತು ರಂಗಭೂಮಿ ಕೆಲಸಗಳನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗಿದೆ. ಫೆ. 1 ಕ್ಕೆ ಯಲಹಂಕ ಶೇಷಾದ್ರಿಪುರಂ ಕಾಲೇಜಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ನ ಪ್ರದಾನ ಕಾರ್ಯದರ್ಶಿಗಳಾದ ನವೀನ್ ಕುಮಾರ್ ಕೆ ಎಸ್ ಅವರು ತಿಳಿಸಿದ್ದಾರೆ.
ಅನಂತ ಅವರು ಬಿ.ಎಸ್ಸಿ ಹಾಗೂ ಡ್ರಾಮಾ ಡಿಪ್ಲೊಮಾ ಪದವೀಧರರು. ಸಾಹಿತ್ಯ, ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರಗಳೆಂದರೆ ಅಚ್ಚುಮೆಚ್ಚು. ಈವರೆಗೆ ನಾಟಕಗಳಲ್ಲಿ ಅಭಿನಯಿಸುವುದರೊಂದಿಗೆ ಕಿರು ನಾಟಕಗಳನ್ನು ಬರೆದು ಶಾಲಾಕಾಲೇಜು ಮಕ್ಕಳಿಗೆ ನಿರ್ದೇಶನ ಮಾಡಿರುತ್ತಾರೆ. ಅವರ ಮೊದಲ ಕೃತಿ 'ಋಣಭಾರ' ಕಥಾಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರದ ಯುವಬರಹಗಾರರ ಚೊಚ್ಚಲ ಕೃತಿ ಪುರಸ್ಕಾರ ಹಾಗೂ ಹೆಬ್ಬಗೋಡಿ ಗೋಪಾಲ್ ದತ್ತಿ ಪುಸ್ತಕ ಬಹುಮಾನ ದೊರೆತಿವೆ. ಸಧ್ಯ ಕನ್ನಡ ಚಲನಚಿತ್ರಗಳ ನಿರ್ದೇಶನ ತಂಡಗಳಲ್ಲಿ ಕೆಲಸ ಮಾಡುತ್ತಿದ್ದು, ಅವರ ಕಿರುಚಿತ್ರಗಳಿಗೆ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಋಣಭಾರ ಕಥಾಸಂಕಲನ ಕೊಳ್ಳಲು ಸಂಪರ್ಕಿಸಿ
ಅನಂತ : 9742029908
ನಲುಮೆಯ ಹಾರೈಕೆಗಳು👏
ಪ್ರತ್ಯುತ್ತರಅಳಿಸಿ