(ಚಿತ್ರ : ಅಂತರ್ಜಾಲ ಕೃಪೆ)
ಆ ಹೊತ್ತು
ಭವಿಷ್ಯ ಹೇಳುವ ಕನಸ
ಬರೆದಿಡುವ ಹೊತ್ತದು
ನಿದ್ದೆ ಹತ್ತದ ಹೊತ್ತು
ಏನನ್ನೋ ಕಾದಿರಿಸಿ
ಕಾಡುವ ಹೊತ್ತು
ಬರೆಯುತ್ತಾಹೋದೆ
ಬದುಕಿದ ದಿನಗಳ
ಬದುಕಬಹುದಾದ ಕ್ಷಣಗಳ
ನನ್ನದೇ ನಿರೂಪಣೆಯಲ್ಲಿ
ಕೆತ್ತುತ್ತಾಹೋದೆ ಹಾಳೆಗಳ ಮೇಲೆ
ಗೀಚಿದಂತೆ ಕಾಣಿಸಿದರೆ
ಅದು ನನ್ನದೇ ತಪ್ಪು!
ಆಕಾಶ, ಭೂಮಿ, ನಕ್ಷತ್ರ
ಯಾವೂ ಇರಲಿಲ್ಲ ಅಲ್ಲಿ
ಗುಡುಗಿನ ಸದ್ದಾದರೂ
ಮಳೆಯಿರಲಿಲ್ಲ ಅಲ್ಲಿ
ಗಾಳಿಯ ಸ್ಪರ್ಶವಿರಲಿಲ್ಲ
ಹಸಿರಸಿರಿಯ ಬಯಲು ಕಾಣಲೇ ಇಲ್ಲ
ಅದೇನು ಮಾಯೆಯೋ..
ಬಿಟ್ಟೆನೆಂದರೂ ಬಿಡದು
ಕೈಕಾಲುಗಳಿಗೆ ಕಟ್ಟು ಇರಲಿಲ್ಲ
ದೇಹವನ್ನು ಬರಸಿಳೆದಂತಿತ್ತು
ಉಸಿರು ಸರಾಗವಾಗಿತ್ತು
ಹಾರುವ ಹದ್ದುಗಳಿಗೆ
ನನ್ನ ಹಿಡಿಯಲಾಗಲಿಲ್ಲ
ಬಲಿಷ್ಠನಾಗಿದ್ದೆ ನನ್ನದೇ ಪ್ರಪಂಚದಲ್ಲಿ
ಚಿನ್ನದ ಪದಕ ಪೋಷಾಕು
ನೆತ್ತಿಗೆ ಕಿರೀಟ ಧಾರಣೆ
ರೆಡ್ ಕಾರ್ಪೆಟ್ಟಿನ ಮೇಲೆ
ಯುದ್ಧ ಗೆದ್ದು ಬಂದ ಆಚರಣೆ
ಭಕ್ಷ್ಯ ಭೋಜನಗಳ ಮೆಲ್ಲುತ್ತಾ
ಹದಿಹರೆಯ ಯುವತಿಯರ ಒಡೆಯನಾಗಿದ್ದೆ
ನನ್ನನ್ನೇ ಹೋಲುವ ಕನ್ನಡಿಯೊಳಗೆ
ಬಂಧಿಯಾಗಿ ಬಹಳ ಹೊತ್ತು ಕಳೆದಿದ್ದೆ
ಆ ಹೊತ್ತು
ಹೆತ್ತವ್ವ ನೆನಪಾಗಲಿಲ್ಲ
ಗುರುಗಳು ವೈರಿಗಳಂತೆ
ಗೆಳೆಯರು ಕಾರ್ಕೋಟಕದಂತೆ
ನನ್ನೂರು ನನ್ನನ್ನೇ ತಿನ್ನುವಂತೆ
ಎಲ್ಲವನ್ನೂ ಹಿಡಿಮುಷ್ಠಿಯಲ್ಲೇ ನಿಗ್ರಹಿಸಿದ್ದೆ
ಹೆಜ್ಜೆ ಇಟ್ಟಲ್ಲಿ ದಾರಿಯಾಗುತ್ತಿತ್ತು
ಮಾತುಗಳೇ ವೇದವಾಕ್ಯ
ಇದಕ್ಕಿಂತ ಸ್ವರ್ಗ ಬೇಕೇನು?
ತೇಲುತ್ತಿದ್ದೆ ಬಹು ಎತ್ತರದಲ್ಲಿ
ಹಿಮಾಲಯವನ್ನೂ ಮೀರಿಸುವಂತೆ
ನಿಲ್ಲಿಸದೆ ಬರೆಯುತ್ತಾಹೋದೆ
ಪುಟಪುಟಗಳೂ ಸಂದೇಹಪಡುವಂತೆ
ಕನಸು ಎಷ್ಟು ಚೆಂದ ಅಲಾ?!
ಇನ್ನೂ ಸ್ವಲ್ಪ ಬರೆಯಬೇಕಿತ್ತು!!
ಭವಿಷ್ಯ ಹೇಳುವ ಕನಸ
ಬರೆದಿಡುವ ಹೊತ್ತದು
ನಿದ್ದೆ ಹತ್ತದ ಹೊತ್ತು
ಏನನ್ನೋ ಕಾದಿರಿಸಿ
ಕಾಡುವ ಹೊತ್ತು
ಬರೆಯುತ್ತಾಹೋದೆ
ಬದುಕಿದ ದಿನಗಳ
ಬದುಕಬಹುದಾದ ಕ್ಷಣಗಳ
ನನ್ನದೇ ನಿರೂಪಣೆಯಲ್ಲಿ
ಕೆತ್ತುತ್ತಾಹೋದೆ ಹಾಳೆಗಳ ಮೇಲೆ
ಗೀಚಿದಂತೆ ಕಾಣಿಸಿದರೆ
ಅದು ನನ್ನದೇ ತಪ್ಪು!
ಆಕಾಶ, ಭೂಮಿ, ನಕ್ಷತ್ರ
ಯಾವೂ ಇರಲಿಲ್ಲ ಅಲ್ಲಿ
ಗುಡುಗಿನ ಸದ್ದಾದರೂ
ಮಳೆಯಿರಲಿಲ್ಲ ಅಲ್ಲಿ
ಗಾಳಿಯ ಸ್ಪರ್ಶವಿರಲಿಲ್ಲ
ಹಸಿರಸಿರಿಯ ಬಯಲು ಕಾಣಲೇ ಇಲ್ಲ
ಅದೇನು ಮಾಯೆಯೋ..
ಬಿಟ್ಟೆನೆಂದರೂ ಬಿಡದು
ಕೈಕಾಲುಗಳಿಗೆ ಕಟ್ಟು ಇರಲಿಲ್ಲ
ದೇಹವನ್ನು ಬರಸಿಳೆದಂತಿತ್ತು
ಉಸಿರು ಸರಾಗವಾಗಿತ್ತು
ಹಾರುವ ಹದ್ದುಗಳಿಗೆ
ನನ್ನ ಹಿಡಿಯಲಾಗಲಿಲ್ಲ
ಬಲಿಷ್ಠನಾಗಿದ್ದೆ ನನ್ನದೇ ಪ್ರಪಂಚದಲ್ಲಿ
ಚಿನ್ನದ ಪದಕ ಪೋಷಾಕು
ನೆತ್ತಿಗೆ ಕಿರೀಟ ಧಾರಣೆ
ರೆಡ್ ಕಾರ್ಪೆಟ್ಟಿನ ಮೇಲೆ
ಯುದ್ಧ ಗೆದ್ದು ಬಂದ ಆಚರಣೆ
ಭಕ್ಷ್ಯ ಭೋಜನಗಳ ಮೆಲ್ಲುತ್ತಾ
ಹದಿಹರೆಯ ಯುವತಿಯರ ಒಡೆಯನಾಗಿದ್ದೆ
ನನ್ನನ್ನೇ ಹೋಲುವ ಕನ್ನಡಿಯೊಳಗೆ
ಬಂಧಿಯಾಗಿ ಬಹಳ ಹೊತ್ತು ಕಳೆದಿದ್ದೆ
ಆ ಹೊತ್ತು
ಹೆತ್ತವ್ವ ನೆನಪಾಗಲಿಲ್ಲ
ಗುರುಗಳು ವೈರಿಗಳಂತೆ
ಗೆಳೆಯರು ಕಾರ್ಕೋಟಕದಂತೆ
ನನ್ನೂರು ನನ್ನನ್ನೇ ತಿನ್ನುವಂತೆ
ಎಲ್ಲವನ್ನೂ ಹಿಡಿಮುಷ್ಠಿಯಲ್ಲೇ ನಿಗ್ರಹಿಸಿದ್ದೆ
ಹೆಜ್ಜೆ ಇಟ್ಟಲ್ಲಿ ದಾರಿಯಾಗುತ್ತಿತ್ತು
ಮಾತುಗಳೇ ವೇದವಾಕ್ಯ
ಇದಕ್ಕಿಂತ ಸ್ವರ್ಗ ಬೇಕೇನು?
ತೇಲುತ್ತಿದ್ದೆ ಬಹು ಎತ್ತರದಲ್ಲಿ
ಹಿಮಾಲಯವನ್ನೂ ಮೀರಿಸುವಂತೆ
ನಿಲ್ಲಿಸದೆ ಬರೆಯುತ್ತಾಹೋದೆ
ಪುಟಪುಟಗಳೂ ಸಂದೇಹಪಡುವಂತೆ
ಕನಸು ಎಷ್ಟು ಚೆಂದ ಅಲಾ?!
ಇನ್ನೂ ಸ್ವಲ್ಪ ಬರೆಯಬೇಕಿತ್ತು!!
- ಅನಂತ ಕುಣಿಗಲ್
👌👌👌
ಪ್ರತ್ಯುತ್ತರಅಳಿಸಿ👌👌👌
ಪ್ರತ್ಯುತ್ತರಅಳಿಸಿ👌🏻
ಪ್ರತ್ಯುತ್ತರಅಳಿಸಿಮಸ್ತ್
ಪ್ರತ್ಯುತ್ತರಅಳಿಸಿಸುಂದರ ಬರಹ👌👌👌👏🏻
ಪ್ರತ್ಯುತ್ತರಅಳಿಸಿಸೊಗಸಾಗಿದೆ ✍️
ಪ್ರತ್ಯುತ್ತರಅಳಿಸಿ