ಬಣ್ಣಗಳು
ನನ್ನ ದಾರಿ
ಎಷ್ಟೊಂದು ವಿಶಾಲವಾಗಿತ್ತು
ಚಪ್ಪಲಿಗಳಿಲ್ಲದೆಯೂ
ಮುಳ್ಳು ಚುಚ್ಚುತ್ತಿರಲಿಲ್ಲ
ಎಷ್ಟು ನಡೆದಾಡಿದರೂ
ಬರಿಗಾಲಿನಲ್ಲಿ ಚಿಕ್ಕವನಿದ್ದಾಗ!
ಈಗ ದಾರಿ ದೀರ್ಘವಾಗಿದೆ
ಚಪ್ಪಲಿ ಇದ್ದೂ
ಹೆಜ್ಜೆ ಹೆಜ್ಜೆಗೆ ಮುಳ್ಳು ಸಿಗುತ್ತವೆ
ಒಂದನ್ನು ಬಿಡಿಸುವಷ್ಟರಲ್ಲಿ
ಮತ್ತೊಂದು ಸಿಗುತ್ತದೆ
ದಿನಪೂರ್ತಿ ತಿಂದುಹಾಕುತ್ತದೆ
ನನ್ನ ದಾರಿಯಲ್ಲೀಗ
ಬರೀ ಮುಳ್ಳುಗಳಿಲ್ಲ
ಮುಳ್ಳುಗಳ ರೂಪದಲ್ಲಿ
ಬಣ್ಣಗಳ ಅವಶೇಷಗಳಿವೆ
ವೈಷಮ್ಯ ಮೆರೆದು
ಒಬ್ಬರನ್ನೊಬ್ಬರು ಮುಗಿಸಿದ ಕತೆಗಳಿವೆ
ಆಫ್ರಿಕಾದಲ್ಲಿ
ಬಿಳಿಯರು ಕರಿಯರನ್ನು ತಿನ್ನುತ್ತಿದ್ದರಂತೆ
ಇಲ್ಲಿ ಬಣ್ಣಗಳೇ ಮನುಷ್ಯನನ್ನು ತಿನ್ನುತ್ತಿವೆ
ಬಹುಶಃ ಬಣ್ಣಗಳ ಹಾವಳಿಯಿಂದ
ಮನುಷ್ಯನೂ ಅವಶೇಷವಾಗಬಹುದು!
ನನ್ನ ದಾರಿ
ಎಷ್ಟೊಂದು ವಿಶಾಲವಾಗಿತ್ತು
ಚಪ್ಪಲಿಗಳಿಲ್ಲದೆಯೂ
ಮುಳ್ಳು ಚುಚ್ಚುತ್ತಿರಲಿಲ್ಲ
ಎಷ್ಟು ನಡೆದಾಡಿದರೂ
ಬರಿಗಾಲಿನಲ್ಲಿ ಚಿಕ್ಕವನಿದ್ದಾಗ!
ಈಗ ದಾರಿ ದೀರ್ಘವಾಗಿದೆ
ಚಪ್ಪಲಿ ಇದ್ದೂ
ಹೆಜ್ಜೆ ಹೆಜ್ಜೆಗೆ ಮುಳ್ಳು ಸಿಗುತ್ತವೆ
ಒಂದನ್ನು ಬಿಡಿಸುವಷ್ಟರಲ್ಲಿ
ಮತ್ತೊಂದು ಸಿಗುತ್ತದೆ
ದಿನಪೂರ್ತಿ ತಿಂದುಹಾಕುತ್ತದೆ
ನನ್ನ ದಾರಿಯಲ್ಲೀಗ
ಬರೀ ಮುಳ್ಳುಗಳಿಲ್ಲ
ಮುಳ್ಳುಗಳ ರೂಪದಲ್ಲಿ
ಬಣ್ಣಗಳ ಅವಶೇಷಗಳಿವೆ
ವೈಷಮ್ಯ ಮೆರೆದು
ಒಬ್ಬರನ್ನೊಬ್ಬರು ಮುಗಿಸಿದ ಕತೆಗಳಿವೆ
ಆಫ್ರಿಕಾದಲ್ಲಿ
ಬಿಳಿಯರು ಕರಿಯರನ್ನು ತಿನ್ನುತ್ತಿದ್ದರಂತೆ
ಇಲ್ಲಿ ಬಣ್ಣಗಳೇ ಮನುಷ್ಯನನ್ನು ತಿನ್ನುತ್ತಿವೆ
ಬಹುಶಃ ಬಣ್ಣಗಳ ಹಾವಳಿಯಿಂದ
ಮನುಷ್ಯನೂ ಅವಶೇಷವಾಗಬಹುದು!
ಧರ್ಮವನ್ನು ಅಳೆಯುವ
ಸಾಧನಗಳಾಗಿವೆ!
ಸಾಧನೆಗೈದವರಿಗೆ
ಧರ್ಮೋದ್ಧಾರಕರೆಂಬ
ಪಟ್ಟವಿಲ್ಲಿ ಬಿಟ್ಟಿ ಬಿದ್ದಿದೆ!
ಚಪ್ಪಲಿಗೆ ಸಿಗುತ್ತಿದ್ದ ಮುಳ್ಳಿಗೂ
ಬಟ್ಟೆಗೆ ಅಂಟಿದ ಬಣ್ಣಕ್ಕೂ
ಯಾವ ವ್ಯತ್ಯಾಸವೂ ಇಲ್ಲ!
ಒಂದು ಚುಚ್ಚುತ್ತದೆ
ಇನ್ನೊಂದು ಸುಡುತ್ತದೆ!
ಬಣ್ಣಗಳೆಂದರೆ
ಕೈತುಂಬಾ ಬಳಿದುಕೊಳ್ಳುತ್ತಿದ್ದ ದಿನಗಳಿದ್ದವು
ಈಗ ಬಣ್ಣಗಳೆಂದರೆ
ಮನುಷ್ಯತ್ವವಿಲ್ಲದ ಬಾಯಿಗೆ ವಸ್ತುಗಳು
ಬಣ್ಣಕ್ಕೂ ಮನುಷ್ಯತ್ವಕ್ಕೂ ನಂಟಿರಬೇಕಿತ್ತು
ಒಂದನ್ನೊಂದು ಬಿಟ್ಟುಕೊಡದೆ
ಮನುಷ್ಯನಿಗೆ ಧರ್ಮದ ಪಾಠ ಹೇಳುತ್ತಿದ್ದವು
ಈಗ ಕಾಲ ಸರಿಯುತ್ತಿದೆ
ಬಣ್ಣವೇ ಧರ್ಮದ ವ್ಯಾಖ್ಯಾನ ಹೇಳುತ್ತಿದೆ
ಮನುಷ್ಯತ್ವ ಬಣ್ಣ ಕಳೆದುಕೊಂಡು
ಬೀದಿ ಬೀದಿಗಳಲ್ಲಿ ಒದ್ದಾಡುತ್ತಿದೆ!
# ಅನಂತ ಕುಣಿಗಲ್
facebook.anantha kunigal
ಸಾಧನಗಳಾಗಿವೆ!
ಸಾಧನೆಗೈದವರಿಗೆ
ಧರ್ಮೋದ್ಧಾರಕರೆಂಬ
ಪಟ್ಟವಿಲ್ಲಿ ಬಿಟ್ಟಿ ಬಿದ್ದಿದೆ!
ಚಪ್ಪಲಿಗೆ ಸಿಗುತ್ತಿದ್ದ ಮುಳ್ಳಿಗೂ
ಬಟ್ಟೆಗೆ ಅಂಟಿದ ಬಣ್ಣಕ್ಕೂ
ಯಾವ ವ್ಯತ್ಯಾಸವೂ ಇಲ್ಲ!
ಒಂದು ಚುಚ್ಚುತ್ತದೆ
ಇನ್ನೊಂದು ಸುಡುತ್ತದೆ!
ಬಣ್ಣಗಳೆಂದರೆ
ಕೈತುಂಬಾ ಬಳಿದುಕೊಳ್ಳುತ್ತಿದ್ದ ದಿನಗಳಿದ್ದವು
ಈಗ ಬಣ್ಣಗಳೆಂದರೆ
ಮನುಷ್ಯತ್ವವಿಲ್ಲದ ಬಾಯಿಗೆ ವಸ್ತುಗಳು
ಬಣ್ಣಕ್ಕೂ ಮನುಷ್ಯತ್ವಕ್ಕೂ ನಂಟಿರಬೇಕಿತ್ತು
ಒಂದನ್ನೊಂದು ಬಿಟ್ಟುಕೊಡದೆ
ಮನುಷ್ಯನಿಗೆ ಧರ್ಮದ ಪಾಠ ಹೇಳುತ್ತಿದ್ದವು
ಈಗ ಕಾಲ ಸರಿಯುತ್ತಿದೆ
ಬಣ್ಣವೇ ಧರ್ಮದ ವ್ಯಾಖ್ಯಾನ ಹೇಳುತ್ತಿದೆ
ಮನುಷ್ಯತ್ವ ಬಣ್ಣ ಕಳೆದುಕೊಂಡು
ಬೀದಿ ಬೀದಿಗಳಲ್ಲಿ ಒದ್ದಾಡುತ್ತಿದೆ!
# ಅನಂತ ಕುಣಿಗಲ್
facebook.anantha kunigal
ತುಂಬಾ ಚೆನ್ನಾಗಿದೆ ಸರ್
ಪ್ರತ್ಯುತ್ತರಅಳಿಸಿಬಣ್ಣ ಬಣ್ಣದ ಮನುಷ್ಯರು, ಬಣ್ಣ ಬಣ್ಣದ ಮಾತುಗಳು, ಘಳಿಗೆಗೊಮ್ಮೆ, ಮಾತಿಗೊಮ್ಮೆ ಬಣ್ಣ ಬದಲಿಸುತ್ತಾ, ಧರ್ಮದ ಹೆಸರಿನ ಸೋಗಲಾಡಿ ಜೀವನ ನಡೆಸುತ್ತಿರುವ, ಭಾವೈಕ್ಯತೆ ಮರೆತು ಬೀದಿ ನಾಯಿಗಳ ರೀತಿ ಕಿತ್ತಾಡುವ, ಮನುಷ್ಯತ್ವ ಮರೆತವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಬಣ್ಣಗಳ ಅಲಂಕಾರದೊಂದಿಗೆ ಮನುಷ್ಯನ ನಿಜ ಬಣ್ಣದ ಅನಾವರಣ ವಾಸ್ತವತೆಗೆ ಹತ್ತಿರವಿದೆ ಈ ನಿಮ್ಮ ಕವಿತೆಯಲ್ಲಿ.
ಪ್ರತ್ಯುತ್ತರಅಳಿಸಿಅರ್ಥಪೂರ್ಣ ಕವನ
ಪ್ರತ್ಯುತ್ತರಅಳಿಸಿ