ಬೇಗ ಬಾ ಗಾಂಧೀ
ಓ ಅಜ್ಜಾ..
ಶಾಂತಿಧೂತ ಅಹಿಂಸಾವಾದಿಯೇ
ಬಾ ಬೇಗ ಬಾ..
ಉಸಿರು ನಿಲ್ಲುವ ಮುನ್ನ
ನಿನ್ನ ನೋಡುವಾಸೆಯಾಗಿದೆ
ತೊಟ್ಟಿಲಲ್ಲಿನ ಮಗು
ಹಸಿವಿನಿಂದ ಬಳಲುತ್ತಿದೆ
ದೇವರ ಕೋಣೆಯಲ್ಲಿ
ಪಂಚ ನೈವೇದ್ಯಗಳ ಅಲಂಕಾರವಿದೆ
ಇದನ್ನು ನೋಡಿ
ದಯವಿಟ್ಟು ಶಪಿಸಿಕೊಳ್ಳಬೇಡ
ರಸ್ತೆಯೆಲ್ಲಾ ಕಿತ್ತಿವೆ
ಮನೆಗೋಡೆಗಳು ಮಾತ್ರ ಭದ್ರವಾಗಿವೆ
ಹುಂಡಿ ಹಣವೆಲ್ಲಾ ಗುಳುಂ
ಪೆಟ್ರೋಲ್ ದರ ಏರಿದರೂ..
ಬೊಕ್ಕಸ ಮಾತ್ರ ಸದಾ ಖಾಲಿ ಖಾಲಿ
ಏನಾಗುತ್ತಿದೆ ಎಂದು ಯಾರಿಗೂ ಗೊತ್ತಿಲ್ಲ
ನಿನಗೇನಾದರೂ ತಿಳಿದಿದ್ದರೆ
ಬೇಗ ಬಂದು ತಿಳಿಸು.. ನಾ ಕಾಯುತ್ತಿರುವೆ
ಹೆಸರುಗಳು ಬದಲಾಗುತ್ತಿವೆ
ನೋಟುಗಳು ಬದಲಾಗಿವೆ
ಬೆಳವಣಿಗೆ ಮಾತ್ರ ಅಷ್ಟಕ್ಕಷ್ಟೇ..
ನಿನ್ನನ್ನೂ ಯಾವಾಗ ಮರೆಯುವರೋ ಕಾಣೆ
ಬೇಗ ಬಂದು ಒಮ್ಮೆ ಮುಖ ತೋರಿಸು
ನೀನಿಲ್ಲದೆ
ನೀನಿರುವ ನೋಟುಗಳು ಆರ್ಭಟ ನಡೆಸಿವೆ
ನಿನ್ನನ್ನು ಕೊಂದವರಿಗೆ
ನೀನಿರುವ ನೋಟುಗಳನ್ನು ಸುಡಲು ಧೈರ್ಯ ಸಾಲುತ್ತಿಲ್ಲ
ಬೇಗ ಬಂದು ಅವ್ರೆಲ್ಲರಿಗೂ ಧೈರ್ಯ ಕೊಡು
ಸಮಾನತೆ ಸತ್ತುಹೋಗಿದೆ
ಜೈಕಾರಗಳ ಹ್ಞೂಂಕಾರಗಳೇ ತುಂಬಿವೆ
ಕೃಷ್ಣ, ರಾಮ, ಯೇಸು, ಅಲ್ಲಾ ಬುದ್ಧ, ಬಸವ,
ಓ ಅಜ್ಜಾ..
ಶಾಂತಿಧೂತ ಅಹಿಂಸಾವಾದಿಯೇ
ಬಾ ಬೇಗ ಬಾ..
ಉಸಿರು ನಿಲ್ಲುವ ಮುನ್ನ
ನಿನ್ನ ನೋಡುವಾಸೆಯಾಗಿದೆ
ತೊಟ್ಟಿಲಲ್ಲಿನ ಮಗು
ಹಸಿವಿನಿಂದ ಬಳಲುತ್ತಿದೆ
ದೇವರ ಕೋಣೆಯಲ್ಲಿ
ಪಂಚ ನೈವೇದ್ಯಗಳ ಅಲಂಕಾರವಿದೆ
ಇದನ್ನು ನೋಡಿ
ದಯವಿಟ್ಟು ಶಪಿಸಿಕೊಳ್ಳಬೇಡ
ರಸ್ತೆಯೆಲ್ಲಾ ಕಿತ್ತಿವೆ
ಮನೆಗೋಡೆಗಳು ಮಾತ್ರ ಭದ್ರವಾಗಿವೆ
ಹುಂಡಿ ಹಣವೆಲ್ಲಾ ಗುಳುಂ
ಪೆಟ್ರೋಲ್ ದರ ಏರಿದರೂ..
ಬೊಕ್ಕಸ ಮಾತ್ರ ಸದಾ ಖಾಲಿ ಖಾಲಿ
ಏನಾಗುತ್ತಿದೆ ಎಂದು ಯಾರಿಗೂ ಗೊತ್ತಿಲ್ಲ
ನಿನಗೇನಾದರೂ ತಿಳಿದಿದ್ದರೆ
ಬೇಗ ಬಂದು ತಿಳಿಸು.. ನಾ ಕಾಯುತ್ತಿರುವೆ
ಹೆಸರುಗಳು ಬದಲಾಗುತ್ತಿವೆ
ನೋಟುಗಳು ಬದಲಾಗಿವೆ
ಬೆಳವಣಿಗೆ ಮಾತ್ರ ಅಷ್ಟಕ್ಕಷ್ಟೇ..
ನಿನ್ನನ್ನೂ ಯಾವಾಗ ಮರೆಯುವರೋ ಕಾಣೆ
ಬೇಗ ಬಂದು ಒಮ್ಮೆ ಮುಖ ತೋರಿಸು
ನೀನಿಲ್ಲದೆ
ನೀನಿರುವ ನೋಟುಗಳು ಆರ್ಭಟ ನಡೆಸಿವೆ
ನಿನ್ನನ್ನು ಕೊಂದವರಿಗೆ
ನೀನಿರುವ ನೋಟುಗಳನ್ನು ಸುಡಲು ಧೈರ್ಯ ಸಾಲುತ್ತಿಲ್ಲ
ಬೇಗ ಬಂದು ಅವ್ರೆಲ್ಲರಿಗೂ ಧೈರ್ಯ ಕೊಡು
ಸಮಾನತೆ ಸತ್ತುಹೋಗಿದೆ
ಜೈಕಾರಗಳ ಹ್ಞೂಂಕಾರಗಳೇ ತುಂಬಿವೆ
ಕೃಷ್ಣ, ರಾಮ, ಯೇಸು, ಅಲ್ಲಾ ಬುದ್ಧ, ಬಸವ,
ಅಂಬೇಡ್ಕರ್, ಚಾಪ್ಲಿನ್, ವಿವೇಕಾನಂದ, ಕುವೆಂಪು,
ಇನ್ನೂ ಹತ್ತು ಹಲವರ ಜೊತೆಗೆ
ನೀನೂ ಬರಬೇಕಿದೆ
ಮುಂದಾಗುವ ಅನಾಹುತವ ತಡೆಯಲು!!
ಸದೃಢ ಭಾರತವ ಕಟ್ಟಲು..
ಇನ್ನೂ ಹತ್ತು ಹಲವರ ಜೊತೆಗೆ
ನೀನೂ ಬರಬೇಕಿದೆ
ಮುಂದಾಗುವ ಅನಾಹುತವ ತಡೆಯಲು!!
ಸದೃಢ ಭಾರತವ ಕಟ್ಟಲು..
#ಅನಂತ ಕುಣಿಗಲ್
ತುಂಬಾ ಚೆನ್ನಾಗಿದೆ 👌👌👌👌👌 ಸರ್
ಪ್ರತ್ಯುತ್ತರಅಳಿಸಿ👌👌
ಪ್ರತ್ಯುತ್ತರಅಳಿಸಿ