ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಪ್ಪು.. ಇನ್ನು ಬರೀ ನೆನಪು! - ಅನಂತ ಕುಣಿಗಲ್

01. ಅಂಗಳದಾಗ ಆಟ ಕಲಿತು ಆಡುತ್ತಿದ್ದ ಬಯಲಿನಾಗ ಬೇಸರ ತರಿಸಿ, ಆಟವ ನಿಲ್ಲಿಸಿ ಉಳಿದ ಎಲ್ಲರ ಮನದಾಗ 02. ಅಪ್ಪನ ಹಾಗೆ ಹಾಡು, ಕುಣಿತ, ನಗೆಯ ಪಾಠ ಒಪ್ಪಿಗೆ ಇಲ್ಲದೆ ಅಪ್ಪುವ ಅವಕಾಶ ತಪ್ಪಿಹೋಯಿತಾ.. 03. ಅಂಬರದಾಗ ಮನೆಯ ಹುಡುಕಿ ಕೈಲಾಸ ಸೇರಿದನು ಭುವಿಯೊಳು ನೆನಪಿನ ಬುಗ್ಗೆ ಎಬ್ಬಿಸಿ ಮಾಯವಾದನು 04. ಲೋಹಿತನೆಂಬ ಅಶ್ವ ಓಡಿ ಓಡಿಯೂ ಪುನೀತನಾಗದೆ ಲೋಹಿತಾಶ್ವನೇ ಆದ ಕೊನೆಯ ಚರಣವ ಹಾಡಿ ಮುಗಿಸದೆ ಉಸಿರು ನಿಲ್ಲಿಸಿದ 05. ಪ್ರಾರ್ಥನೆಗೂ ಕರುಣೆ ಇಲ್ಲ ಪಾಪಿಗಳ ಲೋಕದಲ್ಲಿ ಪಾಪದವರಿಗಿಲ್ಲ ಜಾಗ ನಲವತ್ತಾರಕ್ಕೆ ತೆರೆಯ ಎಳೆದು ಮೃದು ಹೃದಯಗಳೊಳು ಲೀನವಾದ 06. ಪವರ್ ಪಟ್ಟಕ್ಕೆ ಸ್ಪೋಟಕ ಆಘಾತ ರಾಜನ ಮನೆಗೆ ನೋವಿನ ಸಂತಾಪ 07. ಇನ್ನೆಲ್ಲಿಯ ಭರವಸೆ ಕನಸುಗಳು ಚೂರಾಗಿ ಮನಗಳು ರೆಕ್ಕೆಯ ಮುದುಡಿವೆ ಬರೆಯಲು ಸಾವಿರ ಇದ್ದರೂ.. ಇಂಕು ಮಂಕಾಗಿ ಬರೆಯುವುದನ್ನೇ ಮರೆತಿದೆ! #ಅನಂತ ಕುಣಿಗಲ್

ಅನುಸಂಧಾನ ಕವನ ವಾಚನ ಸ್ಪರ್ಧೆಯ ಫಲಿತಾಂಶ - ಅವ್ವ ಪುಸ್ತಕಾಲಯ

ಹಿರಿಯ ಸಾಹಿತಿಗಳಾದ ರಾಜೇಂದ್ರ ಬಿ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಅವ್ವ ಪುಸ್ತಕಾಲಯ ನಡೆಸಿದ "ಅನುಸಂಧಾನ : ಕವನ ವಾಚನ ಸ್ಪರ್ಧೆ  - ಅಕ್ಟೋಬರ್/2021 ರ ವಿಜೇತರ ಪಟ್ಟಿ" ಅವ್ವ ಪುಸ್ತಕಾಲಯ ಎಲ್ಲರಿಗೂ ಅಭಿನಂದನೆ ತಿಳಿಸಿದೆ. ವಿಜೇತ ಐದು ಜನರು ತಮ್ಮ ಪೂರ್ಣ ಹೆಸರು, ಅಂಚೆ ವಿಳಾಸ ಮತ್ತು ಇತ್ತೀಚಿನ ತಮ್ಮ ಭಾವಚಿತ್ರವನ್ನು 8548948660 ನಂಬರಿಗೆ ವಾಟ್ಸಾಪ್ ಮಾಡಲು ತಿಳಿಸಿದೆ. ಮೆಚ್ಚುಗೆ ಪಡೆದ ಐದು ಜನರಿಗೆ ವಾಟ್ಸಪ್ ಗ್ರೂಪಿನ ಮೂಲಕ ಈ ಪ್ರಮಾಣ ಪತ್ರ ಹಂಚಲಾಗುತ್ತದೆ. ಇನ್ನಷ್ಟು ಸಾಹಿತ್ಯ ಸ್ಪರ್ಧೆಗಳಿಗಾಗಿ ನಮ್ಮ ತಂಡಗಳನ್ನು ಸೇರಿರಿ.. https://www.facebook.com/groups/3344469948953030/?ref=share avvapustakaalaya.blogspot.com https://youtube.com/channel/UCEvSlHKHjYmcVln8QN-MEpw

ನಮ್ಮ ರಾಜಕಾರಣಿಗಳು - ಕವಿತೆ - ಬಾಲಕೃಷ್ಣ ಎಸ್ ಬಿ

“ ನಮ್ಮ ರಾಜಕಾರಣಿಗಳು ” ಹಸಿದ ಮಕ್ಕಳೆಡೆ  ತಿನಿಸುಗಳ ಬುತ್ತಿಯ ತೆರೆದಂತೆ ವಿದ್ಯೆಯಿದ್ದೂ ಬದುಕಿನಿಂದ ಹಸಿದವರ ಪಾಲಿಗೆ ಆಶ್ವಾಸನೆಗಳ ತೋರಿ ಗೆಲುವು ಪಡೆದು ಅಸೆಂಬ್ಲಿ ಹೆಬ್ಬಾಗಿಲಲಿ ಮರೆಯಾಗುವರು.! ಓಟುಗಾಗಿ ಓಟೀ, ಐವಡ್ಸ್ ಪ್ಯಾಕೆಟ್ಗಳ  ದಾಸೋಹಿಕರನ್ನ ರಾತ್ರೋರಾತ್ರಿ ಮತ್ತಿಗಿಳಿಸಿ  ಜಯಿಸಿ ಪದವಿ ಗಳಿಸಿ  ಕಣ್ಮರೆಯಾದವರ ದರ್ಶನ  ಮತ್ತೆ ಮುಂದಿನ ಐದುವರ್ಷಕ್ಕೆ.! ಕಿತ್ತು ಗುಣಿ ಬಿದ್ದ ಕಲ್ಲು ದಾರಿ  ಡಾಂಬರ್ ರಸ್ತೆಯಾಗುತ್ತೆ  ಕಾಮಗಾರಿಗೆ ನಿಂತ ಅರ್ದ ಕಾಲಾಮು ಪೂರ್ಣ ಬ್ರಿಡ್ಜ್ ಆಗುತ್ತದೆ ಬಳಲುತ್ತಿರುವವರು ಅಚಾನಕ್ಕಾಗಿ ಪಿಳಿಪಿಳಿ ಎಂದು ಕಣ್ಣಿಗೆ ಬೀಳುತ್ತಾರೆ  ಇಷ್ಟು ಜ್ಞಾನೋದಯ ಇವರಿಗೆ ಅಧಿಕಾರಾವಧಿಯ ಕೊನೆ ವರ್ಷದಲ್ಲಿ ಎಲೆಕ್ಷನ್ ತಂದುಬಿಡುತ್ತದೆ.!  ಅಧಿಕಾರಪಕ್ಷ, ಪ್ರತಿಪಕ್ಷಗಳೆಂದು  ಬಾಹ್ಯವಾಗಿ ತೆಗಳುತ್ತಿದ್ದರೂ,  ಆಂತರಿಕವಾಗಿ ಅನ್ಯೂನ್ಯ ಬೇರುಗಳ ಹೆಣೆದುಕೊಂಡಿರುವರು, ತಮ್ಮ ತಮ್ಮ ಒಳಿತಿಗಾಗಿ ಕಾನೂನು ರೂಪಿಸಿ ಕೈ ಬೀಸಿ ಸಾಮಾನ್ಯರ ಮರಳು ಮಾಡುವರು.! ಅಕ್ಷರ ಜ್ಞಾನವಿಲ್ಲದಿದ್ದರು ಹಣವ್ಯಯದಲ್ಲಿ ಗೆಲುವು ಮೋಕ್ಷ ಸಾಧಿಸಿ  ಪರದೇಶಗಳ ಬ್ಯಾಂಕ್ ಅಕೌಂಟಿನಲ್ಲಿ ಹಣವ ಬ್ಯಾಲೆನ್ಸ್ ಮಾಡುವಷ್ಟು  ಚತುರತೆ ಉಳ್ಳವರು ನಮ್ಮ ರಾಜಕಾರಣಿಗಳು.! # ಬಾಲಕೃಷ್ಣ ಎಸ್ ಬಿ

ಭಾವೋದ್ವೇಗ - ಕವಿತೆ - ಅನಂತ ಕುಣಿಗಲ್

ಭಾವೋದ್ವೇಗ ಒಂಟಿ ಮರಕೆ ಬೇಲಿ ಯಾಕೆ ಬಿಟ್ಟು ಹೋದಮೇಲೆ ನೀನು ಕಾಡುವೆ ಏಕೆ ಬಿಟ್ಟುಕೊಡದೆ ಹೀಗೆ ನನ್ನನ್ನು ಕೊಟ್ಟೆ ಕೊಟ್ಟೆ ಎಲ್ಲಾ ಬಿಟ್ಟೆ ಏನು ಉಳಿದಿಲ್ಲ ಇನ್ನು ಇದ್ದರೆ ಹೇಳು ಬಾಕಿ ಕೊಟ್ಟೇನು ದೇವರಲ್ಲಿ ಪ್ರಾರ್ಥಿಸಿ ಊರ ಬಿಡುವೆನು ನಿನಗಾಗಿ.. ದೊಡ್ಡ ಕನಸ ಕಂಡೇನು ಇದ್ದಾಗ ಎಷ್ಟು ಚೆನ್ನ ಇಲ್ಲದೆ ಎಷ್ಟು ಕ್ರೂರ ಸಮಯ ಹೇಳು ಯಾಕೆ ಬದಲಾದೆ ಈಗ, ನಾನೂ ಬದಲಾಗಬೇಕಿದೆ! ಹೊಸ ಜಾಡ ಹಿಡಿದು ಬದುಕು ಸಾಗಬೇಕಿದೆ ತಪ್ಪು ನನ್ನದೇ.. ಕ್ಷಮಿಸು ಒಮ್ಮೆ ಸಿಗಲಾರೆನು ಇನ್ನೆಂದೂ.. ನೀನೇ ಸರಿ ನಿನ್ನದೇ ಮಾನ್ಯ ನಂಬಿ ನಂಬಿ ಹಾಳಾದೆನಾ.. ಪ್ರೀತಿಯ ಜಾತ್ರೆಯಲಿ ಕಳೆದುಕೊಂಡೆನು ನನ್ನನ್ನೇ ನಾ ಸದಾ ಸೋಲುತ್ತಾ.. ಸಹಿಸಿಕೊಂಡೆನು ಎಲ್ಲವನು ಅರ್ಥವೇ ಆಗಲಿಲ್ಲ ನಿನಗೆ ನಾ ಮಂಡಿಯೂರಿ ಕೂತೆನು ಬೇಡಿದೆನು ಪ್ರತಿ ಕ್ಷಣ ಆದರೂ ನೀನೇ ಗೆದ್ದೇ.. ನಾ ಸ್ಪರ್ಧಿಸಲಾಗದೆ ಸೋತೆ ಕೊನೆಗೆ ಸತ್ತೆ! #ಅನಂತ ಕುಣಿಗಲ್

ಅಪ್ಪನ ಸಮಾಧಿಯ ಸುತ್ತ - ಕವಿತೆ - ಅನಂತ ಕುಣಿಗಲ್

ಅಪ್ಪನ ಸಮಾಧಿಯ ಸುತ್ತ ಇತ್ತೀಚಿಗೆ ಅಪ್ಪ ಕನಸಿನಲ್ಲಿ ಬರುವುದನ್ನು ಹೆಚ್ಚು ಮಾಡಿದ್ದಾನೆ ಅದು ಶುಭ ಸೂಚನೆಯೋ.. ಅಥವಾ ಅಮಂಗಳಕರವೋ.. ಎಂದು ಯೋಚಿಸಲು ಕೂಡ ಬಿಡುವು ಕೊಡದೆ ಸದಾ ಕಾಡುತ್ತಾನೆ ಅದೊಂದು ದಿನ ಬೆಳಗಿನ ಜಾವ ಏಳುವ ಮುನ್ನ ಅಪ್ಪಾ ಕನಸಿಗೆ ಬಂದಿದ್ದ ಮಾತನಾಡಿಸುವ ಗೋಜಲು ನನಗಿರಲಿಲ್ಲ ಅಪ್ಪನ ಮುಖವೂ ಬಾಡಲಿಲ್ಲ ಕನಸು ಮುಗಿಯಿತು ಮತ್ತೊಂದು ದಿನ ಅಪ್ಪ ಬಂದ ಅದೇ ಭಂಗಿ, ಅದೇ ಮುಖ ನನ್ನದೂ ಅದೇ ಪ್ರತಿಕ್ರಿಯೆ ಆಗಲೂ ಆತನಿಗೆ ಬೇಸರವಾದಂತೆ ಕಾಣಲಿಲ್ಲ ಇದೇ ಪುನರಾವರ್ತಿಯಾಗಿ ಒಂದಷ್ಟು ದಿನ ಕಳೆಯಿತು ಅದೊಂದು ದಿನ ಅಪ್ಪ ಬಂದು ಹೋಗುವುದರಲ್ಲಿದ್ದ ತಾಳ್ಮೆ ಕಳೆದುಕೊಂಡು ಅಪ್ಪನನ್ನು ತಡೆದೆ 'ಯಾಕೆ ದಿನವೂ ಏನೂ ಮಾತಾಡದೆ ಹೋಗ್ತಿ?' ಎಂದು ಜೋರಿದೆ ಅಪ್ಪ ಸ್ವಲ್ಪ ಬೆದರಿ,  ದಾರಿ ಕಾಣದೆ ಬಾಯ್ಬಿಟ್ಟ 'ಒಮ್ಮೆ ನನ್ನ ಸಮಾಧಿಯ ಬಳಿ ಬಂದು ನೋಡು' ಥಟ್ಟನೆ ಕಣ್ಬಿಟ್ಟೆ, ಅಪ್ಪ ಇರಲಿಲ್ಲ ಸಮಾಧಿಯ ಬಳಿ ಬಂದೆ ಇರುವೆಗಳು ಗೂಡು ಕಟ್ಟಿದ್ದವು ಬತ್ತಿದ ದೀಪವಿತ್ತು, ನಾಲ್ಕು ಸಣ್ಣ ಕಲ್ಲುಗಳು ಮತ್ತೇನು ವಿಶೇಷ ನನಗೆ ಕಾಣಲಿಲ್ಲ ಕನಸಿನಲ್ಲಿ ತುಂಬಾ ಕಾದೆ ಅಪ್ಪ ಬರಲೇ ಇಲ್ಲ ಅದೊಂದು ದಿನ ಬಂದೇ ಬಿಟ್ಟ ನಾನಾಗಲೇ ತಾಳ್ಮೆ ಕಳೆದುಕೊಂಡಿದ್ದೆ 'ನಿನ್ನ ಸಮಾಧಿಯೇನು ಮಹಲ್ ಅಲ್ಲಾ..' ಎಂದು ಕಿರುಚಿದೆ 'ಅದನ್ನು ಕಟ್ಟಿಸಿದವರು ನೀವೇ..' ಎಂದ 'ನೀನು ಅಷ್ಟು ದೊಡ್ಡ ...

ಅವಳು ಬಂದಿದ್ದಾಳೆ - ಕವಿತೆ - ದೀಕ್ಷಿತ್ ನಾಯರ್

ಅವಳು ಬಂದಿದ್ದಾಳೆ..! ಅವಳಿಗೋ ನನ್ನೆಡೆಗೆ ತುಸುವೂ ಅಕ್ಕಸವಿಲ್ಲ;  ತಿಂಗಳಾಗುವುದೇ ತಡ ಬಗೆ ಬಗೆಯ ಠರಾವುಗಳೊಂದಿಗೆ ಲಗ್ಗೆ ಹಾಕಿ ಬಿಡುತ್ತಾಳೆ; ಜೊತೆಯಲ್ಲಿ ಸಾವಿನ ಪ್ರಲಾಪದ ಬೆರಗಿನಂತಹ ವಿಪರೀತ ಬೇನೆಯನ್ನೂ ತಂದಿರುತ್ತಾಳೆ ಅವಳೋ ಜನ ಜಾಗಗಳಿಗೆ ಹೆದರುವವಳಲ್ಲ ಬುಳ ಬುಳನೆ ಹರಿದು ಬಿಡುತ್ತಾಳೆ ಎವೆಯಿಕ್ಕದೆ ಕಾಲಿನ ಸಂಧಿಗಳಲ್ಲಿ; ಒಳ ಉಡುಪಿನ ಆಕಾರವೇ ಬದಲಾಗಿ ಹೋಗಬೇಕು ಅಷ್ಟು ಒದ್ದೆ ಮಾಡುತ್ತಾಳೆ; ನೀಲಿ,ಕಪ್ಪು,ಹಳದಿ ಏನೇ ಇರಲಿ ಅವಳ ಹಾವಳಿಗೆ ಅದು ಸಂಪೂರ್ಣವಾಗಿ ಕೆಂಪಗಾಗಿರುತ್ತದೆ ಅಬ್ಬಾ! ಅವಳು ಏಳು ದಿನವಾದರೂ ಸುಮ್ಮನಾಗದ ಮಹಾಕಾಳಿ; ಇಟ್ಟ ಕಣ್ಣೀರ ಹನಿಗಳೆಲ್ಲವೂ ವರ್ಜ್ಯ ಅವಳ ಮುಂದೆ ಒಂದೇ ಸಮನೆ ಮೊರೆಯುತ್ತಾಳೆ ಘಂಟೆಯಂತೆ; ಕ್ಷಣ ಕ್ಷಣವೂ ಹಾಸಿಗೆಯ ಮಗ್ಗಲು ಬದಲಿಸುವಂತೆ ಮಾಡುತ್ತಾಳೆ ನಾಭಿಯಾಳದಲ್ಲಿ ಚಳುಕುಗಳೊಂದಿಗೆ ಗಿರಕಿಯೂ ಹೊಡೆಯುತ್ತಾಳೆ; ಛೀ.. ಬಿಡಿ ಅವಳು ನನ್ನಂಥಲ್ಲವಲ್ಲ? ಅದಕ್ಕೆ ನನ್ನೆಡೆಗೆ ಒಲವಿಲ್ಲ ಮೂಗಿನ ಹೊಳ್ಳೆಗಳೆರಡನ್ನು ಹೊಲಿದು ಹಾಕಿದರೂ ವ್ಯರ್ಥವೇ ಅಷ್ಟು ನಾರುತ್ತಾಳೆ; ನನ್ನಲ್ಲಿಯೇ ಹೇವರಿಕೆ ಹುಟ್ಟಬೇಕು ಹಾಗೆ ಮಾಡುತ್ತಾಳೆ ಕೆಲವೊಮ್ಮೆಯಂತೂ ನನ್ನ ಮರ್ಯಾದೆಗೆ ತಿಲಾಂಜಲಿ ಬಿಡುತ್ತಾಳೆ; ತರ್ಕ ಹೀನ ಜಗತ್ತಿನಲ್ಲಿ ತಲೆ ತಗ್ಗಿಸುವಂತೆ ಮಾಡುತ್ತಾಳೆ ಮೈಯ್ಯ ಸತುವನ್ನೆಲ್ಲಾ ನಿಷ್ಕ್ರಿಯಗೊಳಿಸಿ,ನನ್ನ ನಾಲಿಗೆಯನ್ನೂ ಅಟ್ಟೆಯಾಗಿಸಿ ಗಹಗಹಿಸಿ ನಗುತ್ತಾಳೆ ಅವಳ ಘೀಳಾಟಗಳನ್ನು ಸೈರಿಸದ ನಾನೋ ಹೇಳಿ...

ಬೇಗ ಬಾ ಗಾಂಧೀ - ಕವಿತೆ - ಅನಂತ ಕುಣಿಗಲ್

ಬೇಗ ಬಾ ಗಾಂಧೀ ಓ ಅಜ್ಜಾ.. ಶಾಂತಿಧೂತ ಅಹಿಂಸಾವಾದಿಯೇ ಬಾ ಬೇಗ ಬಾ.. ಉಸಿರು ನಿಲ್ಲುವ ಮುನ್ನ ನಿನ್ನ ನೋಡುವಾಸೆಯಾಗಿದೆ ತೊಟ್ಟಿಲಲ್ಲಿನ ಮಗು ಹಸಿವಿನಿಂದ ಬಳಲುತ್ತಿದೆ ದೇವರ ಕೋಣೆಯಲ್ಲಿ ಪಂಚ ನೈವೇದ್ಯಗಳ ಅಲಂಕಾರವಿದೆ ಇದನ್ನು ನೋಡಿ ದಯವಿಟ್ಟು ಶಪಿಸಿಕೊಳ್ಳಬೇಡ ರಸ್ತೆಯೆಲ್ಲಾ ಕಿತ್ತಿವೆ ಮನೆಗೋಡೆಗಳು ಮಾತ್ರ ಭದ್ರವಾಗಿವೆ ಹುಂಡಿ ಹಣವೆಲ್ಲಾ ಗುಳುಂ ಪೆಟ್ರೋಲ್ ದರ ಏರಿದರೂ.. ಬೊಕ್ಕಸ ಮಾತ್ರ ಸದಾ ಖಾಲಿ ಖಾಲಿ ಏನಾಗುತ್ತಿದೆ ಎಂದು ಯಾರಿಗೂ ಗೊತ್ತಿಲ್ಲ ನಿನಗೇನಾದರೂ ತಿಳಿದಿದ್ದರೆ ಬೇಗ ಬಂದು ತಿಳಿಸು.. ನಾ ಕಾಯುತ್ತಿರುವೆ ಹೆಸರುಗಳು ಬದಲಾಗುತ್ತಿವೆ ನೋಟುಗಳು ಬದಲಾಗಿವೆ ಬೆಳವಣಿಗೆ ಮಾತ್ರ ಅಷ್ಟಕ್ಕಷ್ಟೇ.. ನಿನ್ನನ್ನೂ ಯಾವಾಗ ಮರೆಯುವರೋ ಕಾಣೆ ಬೇಗ ಬಂದು ಒಮ್ಮೆ ಮುಖ ತೋರಿಸು ನೀನಿಲ್ಲದೆ ನೀನಿರುವ ನೋಟುಗಳು ಆರ್ಭಟ ನಡೆಸಿವೆ ನಿನ್ನನ್ನು ಕೊಂದವರಿಗೆ ನೀನಿರುವ ನೋಟುಗಳನ್ನು ಸುಡಲು ಧೈರ್ಯ ಸಾಲುತ್ತಿಲ್ಲ ಬೇಗ ಬಂದು ಅವ್ರೆಲ್ಲರಿಗೂ ಧೈರ್ಯ ಕೊಡು ಸಮಾನತೆ ಸತ್ತುಹೋಗಿದೆ ಜೈಕಾರಗಳ ಹ್ಞೂಂಕಾರಗಳೇ ತುಂಬಿವೆ ಕೃಷ್ಣ, ರಾಮ, ಯೇಸು, ಅಲ್ಲಾ  ಬುದ್ಧ, ಬಸವ, ಅಂಬೇಡ್ಕರ್, ಚಾಪ್ಲಿನ್,  ವಿವೇಕಾನಂದ, ಕುವೆಂಪು, ಇನ್ನೂ ಹತ್ತು ಹಲವರ ಜೊತೆಗೆ ನೀನೂ ಬರಬೇಕಿದೆ ಮುಂದಾಗುವ ಅನಾಹುತವ ತಡೆಯಲು!! ಸದೃಢ ಭಾರತವ ಕಟ್ಟಲು..               ...

ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು - ಲೇಖನ - ಪುನೀತ್ ಕುಮಾರ್

ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು ಒಬ್ಬ ವ್ಯಕ್ತಿ ಒಂದು ಶಕ್ತಿಯಾಗಿ ಪರಿಣಮಿಸುವ ಪರಿ ಸದಾ ನನಗೆ ಬೆರಗು ಮೂಡಿಸುವಂಥದ್ದು. ನಮ್ಮ ನಡುವೆಯೇ ಹುಟ್ಟಿ, ನಮ್ಮಂತೆಯೇ ಬೆಳೆದು, ತಮ್ಮ ಬದುಕಿನ ಬಂಡಿಯನ್ನು ಏರಿ ಸಾಗುವ ಅವರು, ಯಾವುದೋ ಒಂದು ಸ್ತರದಲ್ಲಿ ಇದ್ದಕ್ಕಿದ್ದಂತೆ ಏಕೆ ವಿಶಿಷ್ಟವೆನಿಸುತ್ತಾರೆ? ಮಾನ್ಯರಾಗುತ್ತಾರೆ? ಮುಖ್ಯವಾಗುತ್ತಾರೆ? ಸಾಮಾನ್ಯರ ನಡುವೆ ಅಸಾಮಾನ್ಯರಾಗಿ ನಿಲ್ಲಲು ಕಾರಣವೇನು? ಉತ್ತರ ಸ್ಪಷ್ಟ- ಅವರ ವ್ಯಕ್ತಿತ್ವ, ವಿಚಾರಗಳು ಹಾಗೂ ಅವರ ಕೆಲಸಗಳು ಅವರನ್ನು ಅಂಥ ಗೌರವ ಸ್ಥಾನಕ್ಕೆ ತಂದು ನಿಲ್ಲಿಸಿರುತ್ತದೆ. ಹಾಗಂತ ಅವರು ಈ ಸ್ಥಾನಮಾನ, ಯಶಸ್ಸು, ಕೀರ್ತಿ, ಜನಪ್ರಿಯತೆಯ ಹಿಂದೆ ಬಿದ್ದವರಲ್ಲ, ಅವುಗಳಿಗಾಗಿ ಹವಣಿಸುವರಲ್ಲ. ಕೇವಲ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿರುತ್ತಾರೆ; ಅವರ ಮನಸ್ಸು ಸದಾ ಸಮಾಜಕ್ಕಾಗಿ ತುಡಿಯುತ್ತಿರುತ್ತದೆ.  ಅವರ ಪ್ರಾಶಸ್ತ್ಯ- ಜ್ಞಾನಕ್ಕೆ; ನಿಸ್ವಾರ್ಥತೆ ಅವರ ಬಲ; ಮಾನವೀಯತೆ ಅವರ ಮೊದಲ ಆದ್ಯತೆ; ಎಷ್ಟೇ ಕಷ್ಟ ಬಂದರೂ ಸತ್ಯದ ವಿನಾ ಅನ್ಯಮಾರ್ಗವನ್ನು ಅವರು ಅನುಸರಿಸಲೊಲ್ಲರು. ಹಾಗಾಗಿಯೇ ಜಗತ್ತು ಅವರನ್ನು ಅಪ್ಪಿ ಒಪ್ಪುವುದು. ಅವರ ವಿಚಾರಗಳಿಗೆ, ಕೆಲಸಗಳಿಗೆ ತಲೆಬಾಗುವುದು. ಅವರ ವ್ಯಕ್ತಿತ್ವಕ್ಕೆ ಮಾರುಹೋಗುವುದು. ಮಹಾನಾಯಕನೆಂದು ಪ್ರೀತಿಸಿ, ಗೌರವಿಸುವುದು. ಇಂಥ ಮಹಾತ್ಮರಿಗೆ ಯಾವುದೇ ಪ್ರಾದೇಶಿಕ ಗಡಿಗಳಿರುವುದಿಲ್ಲ. ತಮ್ಮ ನಡೆ-ನುಡಿಗಳ ಮೂಲಕ ಅವರು ಇ...