ನಾನು ಹಣ್ಣಲ್ಲ ಹೆಣ್ಣು!
ಹೇ ಕಾಮಪಿಶಾಚಿಗಳಾ
ನಾನು ಹಣ್ಣಲ್ಲ ಹೆಣ್ಣು ಕಣ್ರೋ
ದೈವ ಸ್ವರೂಪ ಕಾಣಿರೋ,
ಕೂಸುಗಳಿಗೆ ಜನ್ಮವಿತ್ತುವ ತಾಯಿ ಅರಿಯಿರೋ.
ಮೊಗ್ಗುಡೆದು ಹಣ್ಣಾಗುವ
ಮುಂಚೆಯೇ ಹಣ್ಣಿನಂತೆ ಹರಿದು
ಹಂಚಿಕೊಂಡಿರಲ್ಲೋ,
ನಾನಿನ್ನೂ ಬಾಲೆ ಎಂಬುದನ್ನೇ ಮರೆತುಬಿಟ್ಟಿರಲ್ಲೋ.
ಮಾನ ಉಳಿಸಿಕೊಳ್ಳಲು ನರಳಾಡುತ್ತಿದ್ದ
ನರಳಾಟ ನಿಮ್ಮ ಮಾನವೀಯತೆಯ
ಕದ ತಟ್ಟಲಿಲ್ಲವೇ,
ನಿಮ್ಮೆಲ್ಲ ಸ್ತ್ರೀ ಬಂಧುಬಳಗ
ನಿಮ್ಮೆದೆಯ ಭಾವದಲ್ಲಿ ಬರಲಿಲ್ಲವೇ??
ಪರಿಪರಿಯಾಗಿ ಬೇಡಿಕೊಂಡರೂ
ಪರಿತಪಿಸಲಿಲ್ಲ ನಿಮ್ಮ ಮೃಗ ಮನಸುಗಳಲ್ರೋ,
ನನ್ನ ರಕ್ತ ಸ್ರಾವದಲ್ಲಿ ದಾಹ ತೀರಿಸಿಕೊಂಡಿರಲ್ಲೋ,
ಆ ರಕ್ತ ವಿಷವಾಗಿ ನಿಮ್ಮ ಅಂತ್ಯ ಕಾಣಲಿಲ್ಲವಲ್ರೋ,
ಥೂ ಪಾಪಿಗಳ, ಕಾಮಮೃಗೀಗಳಾ,
ಮನಗಾಣಿರೋ ನಾನು ಹಣ್ಣಲ್ಲ ಹೆಣ್ಣು ಕಣ್ರೋ,
ನಾನು ಹಣ್ಣಲ್ಲ ಹೆಣ್ಣು ಕಣ್ರೋ..
ಆನಂದ ಎಂ ಅರಿಕೆರೆ, ಚಿಕ್ಕಬಳ್ಳಾಪುರ
ವಾಸ್ತವ! ಉತ್ತಮ ಪ್ರಯತ್ನ ಶುಭವಾಗಲಿ❤
ಪ್ರತ್ಯುತ್ತರಅಳಿಸಿಧನ್ಯವಾದಗಳು ಗೆಳೆಯ
ಪ್ರತ್ಯುತ್ತರಅಳಿಸಿತುಂಬಾ ಅದ್ಭುತ ಕವನ 👍👍
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿSuper Ananda avare
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏🙏
ಅಳಿಸಿಉತ್ತಮ ಕವನ
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏
ಅಳಿಸಿ