"ನನ್ನ ಮಿಡಲ್ ಕ್ಲಾಸ್ ಬದುಕಿನುದ್ದಕ್ಕೂ ಜೊತೆಯಾಗಿ ಕಾಡಿ, ಕಾಡಿಸಿಕೊಂಡು, ನೊಂದು, ಅತ್ತು, ನನಗಾಗಿ ಪರದಾಡಿದ ನನ್ನೆಲ್ಲಾ ಜೀವಾತ್ಮಗಳಿಗೆ ಈ ಕವಿತೆ ಧನ್ಯತಾ ಭಾವದಿಂದ ಅರ್ಪಣೆ.
ಎಲ್ಲರಿಗೂ ಗೆಳೆತನ ದಿನದ ಶುಭಾಷಯಗಳು"
ಗೆಳೆಯರು
ಗೆಳೆಯರು
ಜೊತೆಗಿರುವರು
ಕೀಟಲೆಯ ಬಯಸುತ್ತಾ
ಕಾಲೆಳೆಯುವರು
ನೋವಾದರೆ
ಮುಲಾಮಾಗುವರು
ಸದಾ ನಗಿಸುವರು
ಮಲಗಲು ಬಿಡರು
ಮಧ್ಯರಾತ್ರಿ ಹರಟಿಸುವರು
ಉಣ್ಣಲು ಬಿಡರು
ಮಿಕ್ಕಿದ್ದ ಉಣ್ಣಿಸುವರು
ವಾಂತಿಯಾದರೆ ಗಾಬರಿಯಾಗುವರು
ಆಗಲೂ ಮೇಲೆ ಹತ್ತಿ ಕುಣಿವರು
ಗೆಳೆಯರು.. ನನ್ನ ಗೆಳೆಯರು
ಲಿಂಗ, ಜಾತಿ, ಧರ್ಮಗಳ ಅಂತರವಿಲ್ಲದೆ
ಎಲ್ಲರೂ ಸೇರುವರು
ಜೊತೆಗೆ ಸೋಲುವರು
ಗೆಲುವ ಸಂಭ್ರಮಿಸಿ
ಜೀವನ ತೋರುವರು
ಜೀವಕ್ಕೆ ಜೀವವಾಗಿ
ದೇಹಕ್ಕೆ ಆತ್ಮವಾಗಿ
ಬಿಡದಂತೆ ಕಾಡುವರು
ಲೆಕ್ಕಾಚಾರದ ಬದುಕು
ನೋಡು ಒಮ್ಮೆ ಇಣುಕಿ
ಮನದ ಬಯಲಿನಲ್ಲಿ
ಕಣ್ತುಂಬುವುದು ಕೊನೆಗೆ
ಇನ್ನಿಲ್ಲವಾದರೆ ಗೆಳೆಯರು
ನಶ್ವರ ಈ ಭುವಿಯು
ಅಲ್ಲಿಗೆ ಅದುವೇ ಅಂತ್ಯವು
ಬೇಡುವರು ಯಾವಾಗಲೂ
ತುಡಿತಗಳ ಅರ್ಥೈಸಿಕೊಂಡು
ಬೆನ್ನಾಗಿ ಬೆಂಡಾಗಿ ಬಾಡುವರು
ತುಳಿಸಿಕೊಂಡು ದಾರಿಯಾಗುವರು
ಮರೆಯಲು ಬಿಡರು
ಅರಿಯಲು ಬಿಡರು
ಗೆಳೆಯರು.. ನನ್ನ ಗೆಳೆಯರು
ಜೊತೆಗಿರುವರು
ಕೀಟಲೆಯ ಬಯಸುತ್ತಾ
ಕಾಲೆಳೆಯುವರು
ನೋವಾದರೆ
ಮುಲಾಮಾಗುವರು
ಸದಾ ನಗಿಸುವರು
ಮಲಗಲು ಬಿಡರು
ಮಧ್ಯರಾತ್ರಿ ಹರಟಿಸುವರು
ಉಣ್ಣಲು ಬಿಡರು
ಮಿಕ್ಕಿದ್ದ ಉಣ್ಣಿಸುವರು
ವಾಂತಿಯಾದರೆ ಗಾಬರಿಯಾಗುವರು
ಆಗಲೂ ಮೇಲೆ ಹತ್ತಿ ಕುಣಿವರು
ಗೆಳೆಯರು.. ನನ್ನ ಗೆಳೆಯರು
ಲಿಂಗ, ಜಾತಿ, ಧರ್ಮಗಳ ಅಂತರವಿಲ್ಲದೆ
ಎಲ್ಲರೂ ಸೇರುವರು
ಜೊತೆಗೆ ಸೋಲುವರು
ಗೆಲುವ ಸಂಭ್ರಮಿಸಿ
ಜೀವನ ತೋರುವರು
ಜೀವಕ್ಕೆ ಜೀವವಾಗಿ
ದೇಹಕ್ಕೆ ಆತ್ಮವಾಗಿ
ಬಿಡದಂತೆ ಕಾಡುವರು
ಲೆಕ್ಕಾಚಾರದ ಬದುಕು
ನೋಡು ಒಮ್ಮೆ ಇಣುಕಿ
ಮನದ ಬಯಲಿನಲ್ಲಿ
ಕಣ್ತುಂಬುವುದು ಕೊನೆಗೆ
ಇನ್ನಿಲ್ಲವಾದರೆ ಗೆಳೆಯರು
ನಶ್ವರ ಈ ಭುವಿಯು
ಅಲ್ಲಿಗೆ ಅದುವೇ ಅಂತ್ಯವು
ಬೇಡುವರು ಯಾವಾಗಲೂ
ತುಡಿತಗಳ ಅರ್ಥೈಸಿಕೊಂಡು
ಬೆನ್ನಾಗಿ ಬೆಂಡಾಗಿ ಬಾಡುವರು
ತುಳಿಸಿಕೊಂಡು ದಾರಿಯಾಗುವರು
ಮರೆಯಲು ಬಿಡರು
ಅರಿಯಲು ಬಿಡರು
ಗೆಳೆಯರು.. ನನ್ನ ಗೆಳೆಯರು
ಅನಂತ ಕುಣಿಗಲ್
ಯುವ ಬರಹಗಾರ & ರಂಗಕಲಾವಿದ
ಸುಂದರ ಕವನ
ಪ್ರತ್ಯುತ್ತರಅಳಿಸಿ
ಪ್ರತ್ಯುತ್ತರಅಳಿಸಿಅರ್ಥಪೂರ್ಣವಾಗಿದೆ ಸರ್.....ಸ್ನೇಹಿತರ ದಿನದ ಶುಭಾಶಯಗಳು ತಮಗೆ
ಗೆಳೆಯರ ದಿನದ ಶುಭಾಶಯಗಳು 😊
ಪ್ರತ್ಯುತ್ತರಅಳಿಸಿ