ನನಗಿಂತ ದೊಡ್ಡದಾಗಿಬಿಟ್ಟೆಯಲ್ಲಾ!!
ಪ್ರತಿ ದಿನ ಸಾವಿನ ಸುದ್ಧಿ ಕೇಳಿ
ಭಯವಾಗುತ್ತಿತ್ತು
ನನಗ್ಯಾರು ಮಕ್ಕಳಿಲ್ಲವೆಂದು
ಏಕಾಂತ ಕಾಡುತ್ತಿತ್ತು
ಅದಕ್ಕಾಗಿ ತುಂಬಾ ಹುಡುಕಾಡಿದೆ
ನನ್ನೊಂದಿಗಿರಲು ಯಾರೂ ಒಪ್ಪಲಿಲ್ಲ
ನಾಲ್ಕು ಪುಟ್ಟ ಗಿಡಗಳು ಸಿಕ್ಕವು
ಹೊಂದಾಣಿಕೆ ಇಲ್ಲದೆಯೂ ಬಾಳಲು
ಅಷ್ಟು ದಿನ ಒಂಟಿಯಾಗಿ ಕಳೆದಿದ್ದರಿಂದ
ನನ್ನ ಮೇಲೆ ನನಗೆ ಅಸಹ್ಯ ಅನಿಸಿತ್ತು
ಆದರೆ ಯಾರ ಬಳಿ ಹೇಳಬೇಕಿತ್ತು?
ನನಗೂ ಬಿಡುವಿಲ್ಲದೆ,
ದುಡಿಮೆಯಲ್ಲಿ ನಿರಂತರವಾಗಿ ಓಡಿದ್ದೆ
ಈಗ ನಡೆಯಲೂ ಶಕ್ತಿ ಇಲ್ಲ
ಎಲ್ಲದರ ನಡುವೆ ನಾನೇ ಊತು ಹೋಗಿದ್ದೆ
ಯಾವುದರ ಪರಿವೆಯಿಲ್ಲದೆ
ಈಗ ಬಾಲ್ಯ ಬೇಕೆನಿಸುತ್ತಿದೆ
ಸಾವು ಹತ್ತಿರವಾಗುತ್ತಿದೆಯಲ್ಲಾ..
ನನ್ನ ಅಸಹಾಯಕ ಸ್ಥಿತಿಯನ್ನು
ಯಾರೂ ಗುರುತಿಸಲಿಲ್ಲ
ಹೆಚ್ಚಾಗಿ ನಾನು ಬೆರೆಯಲೇ ಇಲ್ಲ ಬಿಡಿ
ಗಳಿಸಿದ್ದೆಲ್ಲವನ್ನೂ ಬಿಟ್ಟು ಬಂದೆ
ಈಗ ಪರವಾಗಿಲ್ಲ,
ಉಸಿರಾಡುತ್ತಿದ್ದೇನೆ
ನನಗೆ ಸಿಕ್ಕ ಗಿಡಗಳಿಂದ
ಅದೆಷ್ಟು ಬೇಗನೆ ಬೆಳೆದುಬಿಟ್ಟವು
ನನಗೆ ಕನಸಲ್ಲಿಯೂ ತಿಳಿಸಿರಲಿಲ್ಲ
ನಾನೇ ಚಿಕ್ಕವನೆಂಬಂತೆ ಕಾಣುತ್ತಿದ್ದೇನೆ
ನಾನೇ ನೆಟ್ಟು, ನೀರುಣಿಸಿದ ಮರಗಳ ಕೆಳಗೆ
ಈಗ ಆವ ಚಿಂತೆಯೂ ಇಲ್ಲದೆ
ಸಾಯುವ ಯೋಜನೆಯನ್ನು
ಮುಂದೂಡಲಾಗಿದೆ
ಸಂತಸದ ಹಬ್ಬ ನಡೆದಿದೆ ಪ್ರತಿದಿನವೂ
ಹಸಿರು, ನೆರಳು, ಗಾಳಿ, ತಂಪು, ಮಧುರ
ಹಕ್ಕಿಗಳ ಕಲರವ, ಮೊರೆತ, ಹಣ್ಣು-ಬೇರು
ಎಲ್ಲವೂ ನನ್ನದಾಗಿವೆ;
ನನಗೆ ಸಿಕ್ಕ ನಾಲ್ಕು ಪುಟ್ಟ ಗಿಡಗಳಿಂದ
ಈಗ ನಾನೇ ಶ್ರೀಮಂತ
ಆದರೂ ಒಂದು ಹಿಂಜರಿಕೆಯಿದೆ
ನಾನೇ ನೆಟ್ಟ ಮರಗಳ ಕೆಳಗೆ
ನಾನೀಗ ಚಿಕ್ಕವನಾಗಿದ್ದೇನೆ;
ದೊಡ್ಡವರಾಗಲು ಎಷ್ಟು ಉದಾರಿಗಳಾಗಬೇಕಲ್ಲವೇ??
ಈ ಮರಗಿಡಗಳ ಥರ!
ಅನಂತ ಕುಣಿಗಲ್
ಪ್ರತಿ ದಿನ ಸಾವಿನ ಸುದ್ಧಿ ಕೇಳಿ
ಭಯವಾಗುತ್ತಿತ್ತು
ನನಗ್ಯಾರು ಮಕ್ಕಳಿಲ್ಲವೆಂದು
ಏಕಾಂತ ಕಾಡುತ್ತಿತ್ತು
ಅದಕ್ಕಾಗಿ ತುಂಬಾ ಹುಡುಕಾಡಿದೆ
ನನ್ನೊಂದಿಗಿರಲು ಯಾರೂ ಒಪ್ಪಲಿಲ್ಲ
ನಾಲ್ಕು ಪುಟ್ಟ ಗಿಡಗಳು ಸಿಕ್ಕವು
ಹೊಂದಾಣಿಕೆ ಇಲ್ಲದೆಯೂ ಬಾಳಲು
ಅಷ್ಟು ದಿನ ಒಂಟಿಯಾಗಿ ಕಳೆದಿದ್ದರಿಂದ
ನನ್ನ ಮೇಲೆ ನನಗೆ ಅಸಹ್ಯ ಅನಿಸಿತ್ತು
ಆದರೆ ಯಾರ ಬಳಿ ಹೇಳಬೇಕಿತ್ತು?
ನನಗೂ ಬಿಡುವಿಲ್ಲದೆ,
ದುಡಿಮೆಯಲ್ಲಿ ನಿರಂತರವಾಗಿ ಓಡಿದ್ದೆ
ಈಗ ನಡೆಯಲೂ ಶಕ್ತಿ ಇಲ್ಲ
ಎಲ್ಲದರ ನಡುವೆ ನಾನೇ ಊತು ಹೋಗಿದ್ದೆ
ಯಾವುದರ ಪರಿವೆಯಿಲ್ಲದೆ
ಈಗ ಬಾಲ್ಯ ಬೇಕೆನಿಸುತ್ತಿದೆ
ಸಾವು ಹತ್ತಿರವಾಗುತ್ತಿದೆಯಲ್ಲಾ..
ನನ್ನ ಅಸಹಾಯಕ ಸ್ಥಿತಿಯನ್ನು
ಯಾರೂ ಗುರುತಿಸಲಿಲ್ಲ
ಹೆಚ್ಚಾಗಿ ನಾನು ಬೆರೆಯಲೇ ಇಲ್ಲ ಬಿಡಿ
ಗಳಿಸಿದ್ದೆಲ್ಲವನ್ನೂ ಬಿಟ್ಟು ಬಂದೆ
ಈಗ ಪರವಾಗಿಲ್ಲ,
ಉಸಿರಾಡುತ್ತಿದ್ದೇನೆ
ನನಗೆ ಸಿಕ್ಕ ಗಿಡಗಳಿಂದ
ಅದೆಷ್ಟು ಬೇಗನೆ ಬೆಳೆದುಬಿಟ್ಟವು
ನನಗೆ ಕನಸಲ್ಲಿಯೂ ತಿಳಿಸಿರಲಿಲ್ಲ
ನಾನೇ ಚಿಕ್ಕವನೆಂಬಂತೆ ಕಾಣುತ್ತಿದ್ದೇನೆ
ನಾನೇ ನೆಟ್ಟು, ನೀರುಣಿಸಿದ ಮರಗಳ ಕೆಳಗೆ
ಈಗ ಆವ ಚಿಂತೆಯೂ ಇಲ್ಲದೆ
ಸಾಯುವ ಯೋಜನೆಯನ್ನು
ಮುಂದೂಡಲಾಗಿದೆ
ಸಂತಸದ ಹಬ್ಬ ನಡೆದಿದೆ ಪ್ರತಿದಿನವೂ
ಹಸಿರು, ನೆರಳು, ಗಾಳಿ, ತಂಪು, ಮಧುರ
ಹಕ್ಕಿಗಳ ಕಲರವ, ಮೊರೆತ, ಹಣ್ಣು-ಬೇರು
ಎಲ್ಲವೂ ನನ್ನದಾಗಿವೆ;
ನನಗೆ ಸಿಕ್ಕ ನಾಲ್ಕು ಪುಟ್ಟ ಗಿಡಗಳಿಂದ
ಈಗ ನಾನೇ ಶ್ರೀಮಂತ
ಆದರೂ ಒಂದು ಹಿಂಜರಿಕೆಯಿದೆ
ನಾನೇ ನೆಟ್ಟ ಮರಗಳ ಕೆಳಗೆ
ನಾನೀಗ ಚಿಕ್ಕವನಾಗಿದ್ದೇನೆ;
ದೊಡ್ಡವರಾಗಲು ಎಷ್ಟು ಉದಾರಿಗಳಾಗಬೇಕಲ್ಲವೇ??
ಈ ಮರಗಿಡಗಳ ಥರ!
ಅನಂತ ಕುಣಿಗಲ್
ಪ್ರತ್ಯುತ್ತರಅಳಿಸಿಪ್ರಕೃತಿಯ ಹಿರಿಮೆಯೇ ಅಂಥದ್ದು....ಹಸಿರು ಉಸಿರಾಗಿ ಮಾನಸಿಕ ನೆಮ್ಮದಿಗೆ ಸೂಕ್ತ ಸ್ಥಳವೇ ಪ್ರಕೃತಿ....ಬಹಳ ಮಾರ್ಮಿಕವಾಗಿದೆ ಸರ್....ಇಷ್ಟ ಆಯಿತು.
ದೊಡ್ದದಾದ ಮರಗಳ ದೊಡ್ಡತನ ಅರಿವ ಮನಸ್ಸು ಎಲ್ಲಿದೆ, ಈ ದಡ್ಡ ಸಮಾಜಕೆ.
ಪ್ರತ್ಯುತ್ತರಅಳಿಸಿನಾ ನೆಟ್ಟ ನಾಲ್ಕು ಮರ ನನ್ನ ಹಿಂದೆಯೇ ಸತ್ತು ಬಂದವೇ!
ಮೊದಲನೆಯದ್ದು ಚಟ್ಟಕ್ಕೆ, ಎರದನೆಯದ್ದು ಎನ್ನ ಸುಡುವುದಕೆ
ಉಳಿದೆರಡು ನನ್ನ ಸಮಾಧಿಯ ತೋರುಗಂಬಕ್ಕೆ.
ತಮ್ಮದೇ ಬೇರ ಕಿತ್ತ, ಕಂದಕದಲ್ಲಿ ತೊಳಲಾಟದಿ ಮಲಗುವಂತೆ,,
ಅಲ್ಲ ಮಲಗದಂತೆ ಮಾಡಿಹವಲ್ಲಾ..
ಭವಿಷ್ಯದ ದಡ್ಡತನಕ್ಕೆ, ಈ ಭೂತದ ಮನಸಿನ ಅರಿವು ಇರಬಾರದಿತ್ತೆ???
ಅರ್ಥಗರ್ಭಿತವಾದ ಸಾಲುಗಳಿಂದ ಕೂಡಿದ ಗದ್ಯ
ಪ್ರತ್ಯುತ್ತರಅಳಿಸಿ