ಒಮ್ಮೆ ಇಣುಕಿ ನೋಡು!
ಬಣ್ಣ ಬಣ್ಣದ
ತರ-ತರಹದ ಬ್ಯಾಗುಗಳು
ಅಂಗಡಿಯ ಧೂಳಿಡಿದ ತಂತಿಯ ಮೇಲೋ
ಹರೆಯದ ಹುಡುಗಿಯರ ಟ್ಯಾಟೂ ಕೈಯಲ್ಲೋ
ಮೋಹಕ ಕಣ್ಣುಗಳುಳ್ಳ ಆಂಟಿಯ ತೋಳುಗಳಲ್ಲೋ
ಹೆಂಗಸಿನಂತೆ ವರ್ತಿಸುವ ಗಂಡಸರ ಗಾಡಿಗಳಲ್ಲೋ
ಏನೂ ಅರಿಯದ ಎಳೆ ಮನಸ್ಸಿನ ಮಕ್ಕಳ ಕೈಯಲ್ಲಿ ಅಟಿಕೆಗಳಾಗಿಯೋ
ತೂಗಾಡುತ್ತಾ.. ನೋಡಿದವರನ್ನೆಲ್ಲ ತನ್ನೆಡೆಗೆ ಸೆಳೆಯುವ
ವಿಶಿಷ್ಟವಾದ ಬ್ಯಾಗು; ವ್ಯಾನಿಟಿ ಬ್ಯಾಗು
ಲೋಕದೊಳಗೊಂದು ಲೋಕ; ಈ ಬ್ಯಾಗು
ಕೈಯಲ್ಲಿ ಹಿಡಿಯುವಂತೆ, ತೋಳುಗಳಿಗೆ ನೇತಾಕಿಕೊಳ್ಳುವಂತೆ
ಕಾಟನ್, ರಬ್ಬರ್, ನೈಲಾನ್, ಲೆಧರ್ ವಸ್ತುಗಳಿಂದ
ಚಿತ್ರ-ವಿಚಿತ್ರ ಹಾಗೂ ಆಕರ್ಷಣೀಯವಾಗಿ
ಇಂಪೋರ್ಟೆಡ್ ಮಾಡಿಕೊಂಡು
ಹೆಗಲಿಗೇರಿಸಿಕೊಳ್ಳಬಹುದಾದ ಪುಟ್ಟ ಹಾಗೂ ದೊಡ್ಡ ಬ್ಯಾಗು
ಕೈಚೀಲ, ಜೋಳಿಗೆ, ಹ್ಯಾಂಡ್ ಬ್ಯಾಗ್ ಎಂದೆಲ್ಲಾ ಕರೆಯಬಹುದು
ಬಣ್ಣ ಬಣ್ಣದ
ತರ-ತರಹದ ಬ್ಯಾಗುಗಳು
ಅಂಗಡಿಯ ಧೂಳಿಡಿದ ತಂತಿಯ ಮೇಲೋ
ಹರೆಯದ ಹುಡುಗಿಯರ ಟ್ಯಾಟೂ ಕೈಯಲ್ಲೋ
ಮೋಹಕ ಕಣ್ಣುಗಳುಳ್ಳ ಆಂಟಿಯ ತೋಳುಗಳಲ್ಲೋ
ಹೆಂಗಸಿನಂತೆ ವರ್ತಿಸುವ ಗಂಡಸರ ಗಾಡಿಗಳಲ್ಲೋ
ಏನೂ ಅರಿಯದ ಎಳೆ ಮನಸ್ಸಿನ ಮಕ್ಕಳ ಕೈಯಲ್ಲಿ ಅಟಿಕೆಗಳಾಗಿಯೋ
ತೂಗಾಡುತ್ತಾ.. ನೋಡಿದವರನ್ನೆಲ್ಲ ತನ್ನೆಡೆಗೆ ಸೆಳೆಯುವ
ವಿಶಿಷ್ಟವಾದ ಬ್ಯಾಗು; ವ್ಯಾನಿಟಿ ಬ್ಯಾಗು
ಲೋಕದೊಳಗೊಂದು ಲೋಕ; ಈ ಬ್ಯಾಗು
ಕೈಯಲ್ಲಿ ಹಿಡಿಯುವಂತೆ, ತೋಳುಗಳಿಗೆ ನೇತಾಕಿಕೊಳ್ಳುವಂತೆ
ಕಾಟನ್, ರಬ್ಬರ್, ನೈಲಾನ್, ಲೆಧರ್ ವಸ್ತುಗಳಿಂದ
ಚಿತ್ರ-ವಿಚಿತ್ರ ಹಾಗೂ ಆಕರ್ಷಣೀಯವಾಗಿ
ಇಂಪೋರ್ಟೆಡ್ ಮಾಡಿಕೊಂಡು
ಹೆಗಲಿಗೇರಿಸಿಕೊಳ್ಳಬಹುದಾದ ಪುಟ್ಟ ಹಾಗೂ ದೊಡ್ಡ ಬ್ಯಾಗು
ಕೈಚೀಲ, ಜೋಳಿಗೆ, ಹ್ಯಾಂಡ್ ಬ್ಯಾಗ್ ಎಂದೆಲ್ಲಾ ಕರೆಯಬಹುದು
ಆಧಾರ್, ಡ್ರೈವಿಂಗ್ ಲೈಸೆನ್ಸ್, ಎಂಟಿಎಂ ಕಾರ್ಡು
ರಸೀದಿ ಚೀಟಿ ಮತ್ತು ಫೋಟೋಗಳು; ಗುರುತಿಗಾಗಿ
ಲಿಪ್ಸ್ಟಿಕ್, ಕಾಜಲ್, ಬಾಚಣಿಕೆ
ನೇಲ್ ಕಟರ್, ಹಣೆಬೊಟ್ಟು; ಶೃಂಗಾರಕ್ಕಾಗಿ
ಹೊಸದಾಗಿ ಕರೀದಿಸಿದ ಒಳ ಉಡುಪುಗಳು
ಪ್ಯಾಡ್, ಕಾಂಡೋಮ್, ಗ್ಲೂಕೋಸ್; ಆರೋಗ್ಯಕ್ಕಾಗಿ
ನೀರಿನ ಬಾಟಲಿ, ಟಿಫನ್ ಬಾಕ್ಸ್, ಮೊಬೈಲ್
ಆಫೀಸ್ ಫೈಲ್ಸ್, ಚಿಲ್ಲರೆ ಕಾಸು; ಕೆಲಸಕ್ಕಾಗಿ
ಓಲೆ, ಜುಮುಕಿ, ಮೂಗುತಿ, ಕಾಲುಂಗುರ
ಕಾಲ್ಗೆಜ್ಜೆ, ಪ್ರೇಮಿಯೊಬ್ಬನ ಒಲವಿನ ಪತ್ರ; ನೆನಪಿಗಾಗಿ
ಜೀವವನ್ನೇ ಸುಟ್ಟ ನೆನಪುಗಳು; ಬದುಕಿಗಾಗಿ
ಎಲ್ಲವನ್ನೂ ಕಾಣಬಹುದು ಒಮ್ಮೆ ನೊಡಿ ಇಣುಕಿ
ಕಳ್ಳರಿಂದ ಹಲ್ಲೆಗಳಿಗೊಳಗಾಗಿ
ನಾಯಿಗಳ ಕಣ್ಣಿಗೆ ಗುರಿಯಾಗಿ
ಚಿಕ್ಕ ಮಕ್ಕಳ ತುಂಟಾಟದ ಪ್ರಮಾದದಿಂದ
ಕೈಜಾರಿ ಬಿದ್ದ ವ್ಯಾನಿಟಿ ಬ್ಯಾಗು
ಜೀವನವೇ ಕುಸಿದು ಬಿದ್ದಂತಾಗಿಸುತ್ತದೆ
ಬಗಲಿನಲ್ಲಿ ದಿನವೂ ನೇತಾಡದಿದ್ದರೆ
ಏನನ್ನೋ ಕಳೆದುಕೊಂಡ ಭಯ
ಸಂಗಾತನೇ ದೂರವಾದಂತೆ!
ಬೇಕಾದಷ್ಟು ಸುಖ-ದುಃಖಗಳನ್ನು
ಯಾರಿಗೂ ಕಾಣದಂತೆ, ಈ ರಹಸ್ಯ ಲೋಕದೊಳಗೆ
ಬೆಚ್ಚನೆ ಅದ್ದಿಡಬಹುದು ನೋಡಿ
ಒಮ್ಮೆ ಇಣುಕಿ ನೋಡಿ!
ನಾವು ಹೋದಲ್ಲೆಲ್ಲಾ..
ಬಿಸಿಲು-ಮಳೆ-ಚಳಿಗೆ ಸೊರಗದೆ
ಚೂರೂ ಸವೆಯದೆ, ಸೋಲದೆ ಸುತ್ತುವ
ವ್ಯಾನಿಟಿಬ್ಯಾಗುಗಳಿಗೊಂದು ಸಲಾಮ್
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿ
ಪ್ರತ್ಯುತ್ತರಅಳಿಸಿವ್ಯಾನಿಟಿ ಬ್ಲಾಗ್ ಬಗೆಗೂ ಇಷ್ಟು ಅದ್ಭುತವಾಗಿ ಬರೆಯಬಹುದೆಂಬ ಸಣ್ಣ ಅರಿವು ನನಗಿರಲಿಲ್ಲ.... ನಮಗೆ ಎಷ್ಟೋ ವಿಷಯಗಳು ತಿಳಿದಿದ್ದರೂ ಸಣ್ಣಪುಟ್ಟದೆಂದು ಸುಮ್ಮನಾಗುತ್ತೇವೆ..ಆದರೆ ಇಲ್ಲಿ ನಿಮ್ಮ ವಾಸ್ತವದ ಆಲೋಚನೆಗೊಂದು ಸಲಾಂ..ಬಹಳ ಅದ್ಭುತವಾಗಿದೆ ಸರ್.
ಧನ್ಯವಾದಗಳು
ಅಳಿಸಿಅಬ್ಬಾ, ಬ್ಯಾಗ್ ಬಗ್ಗೆ ಕೂಡಾ ಈ ರೇಂಜ್ಗೆ ಬರಿಬೊದ,
ಪ್ರತ್ಯುತ್ತರಅಳಿಸಿವಾವ್, ಸೂಪರ್ ಅನಂತ್ ...🥰❤️
ಆಲ್ ಸರ್ ಒಂದು ಬ್ಯಾಗ್ ಬಗ್ಗೆ ಒಷ್ಟು ಚಂದವಾಗಿ ಬರೀಬೋದ ನೈಸ್ 😍😍😍
ಪ್ರತ್ಯುತ್ತರಅಳಿಸಿ