ವಿಷಯಕ್ಕೆ ಹೋಗಿ

ಅವ್ವ ಪ್ರಶಸ್ತಿಗಾಗಿ ಹಸ್ತಪ್ರತಿ & ಕೃತಿಗಳ ಆಹ್ವಾನ - ಅವ್ವ ಪುಸ್ತಕಾಲಯ



     ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದ ಶ್ರೀಮಾನ್ ಲೇ. ನರಸಯ್ಯ ಅವರ ಸ್ಮರಣಾರ್ಥ, ಅವ್ವ ಪುಸ್ತಕಾಲಯದಿಂದ ಕೊಡಮಾಡುವ 'ಅವ್ವ ಪ್ರಶಸ್ತಿ - 2021' ಕ್ಕೆ ನಾಡಿನಾದ್ಯಂತ ಲೇಖಕರಿಂದ ಹಸ್ತಪ್ರತಿ ಹಾಗೂ ಕೃತಿಗಳನ್ನು ಆಹ್ವಾನಿಸಲಾಗಿದೆ.


ಅವ್ವ ಯುವ ಸಾಹಿತ್ಯ ಪುರಸ್ಕಾರ 2021 ಕ್ಕೆ ಹಸ್ತಪ್ರತಿಗಳ ಆಹ್ವಾನ :

* ಇದುವರೆಗೂ ಒಂದು ಕೃತಿಯನ್ನೂ ಸ್ವತಂತ್ರವಾಗಿ ಪ್ರಕಟಿಸದಿರುವ 50 ವರ್ಷ ಒಳಗಿನ ಯಾರು ಬೇಕಾದರೂ ಅವ್ವ ಯುವ ಸಾಹಿತ್ಯ ಪುರಸ್ಕಾರಕ್ಕಾಗಿ ಕನ್ನಡದಲ್ಲಿ ಹಸ್ತಪ್ರತಿ ಸಲ್ಲಿಸಬಹುದು.
* 1/8 ಡೆಮಿ ಅಳತೆಯಲ್ಲಿ ಕನಿಷ್ಟ 70 ಪುಟಗಳನ್ನು ಮೀರಿದ ಕಥೆಗಳು (8-10 ಕಥೆಗಳು), ಕವನಗಳು(35-40 ಕವನಗಳು), ಕಾದಂಬರಿ, ಪ್ರವಾಸ ಕಥನ ಮತ್ತು ನಾಟಕ ಪ್ರಕಾರದ ಸಾಹಿತ್ಯವನ್ನು ಮಾತ್ರ ಡಿಟಿಪಿ/ಮೊಬೈಲ್ ನಲ್ಲಿ ಟೈಪ್ ಮಾಡಿ ಪ್ರಿಂಟ್ ತೆಗೆದು ಕಳಿಸಬೇಕು.
* ಹಸ್ತಪ್ರತಿಯ ಜೊತೆ ನಿಮ್ಮ ಎಸ್.ಎಸ್.ಎಲ್.ಸಿ ಅಥವಾ ಆಧಾರ್ ಕಾರ್ಡಿನ ನಕಲು ಪ್ರತಿಯನ್ನು ಕಳುಹಿಸಬೇಕು. ಪ್ರತಿಯ ಮೇಲೆ ಸಂಪರ್ಕಿಸಬೇಕಾದ ಫೋನ್ ನಂಬರನ್ನು ನಮೂದಿಸಿರಬೇಕು.
* ಹಸ್ತ ಪ್ರತಿಯು ಶೀರ್ಷಿಕೆಯನ್ನು ಒಳಗೊಂಡಿರಬೇಕು. ಕೈಬರಹದ ಹಸ್ತಪ್ರತಿಗಳನ್ನು ಪರಿಗಣಿಸುವುದಿಲ್ಲ. ಒಬ್ಬರು ಒಂದು ಹಸ್ತಪ್ರತಿಯನ್ನು ಮಾತ್ರ ಸಲ್ಲಿಸಬಹುದು.
* ಆಯ್ಕೆಯಾದ ಒಂದು ಹಸ್ತಪ್ರತಿಗೆ 2500 ರೂಗಳ ನಗದು ಪ್ರೋತ್ಸಾಹ ಬಹುಮಾನ ಹಾಗೂ ಪ್ರಶಸ್ತಿ ನೀಡಿ ಅಭಿನಂದಿಸಲಾಗುವುದು.



ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ 2021 ಕ್ಕೆ ಕೃತಿಗಳ ಆಹ್ವಾನ :

* 2016 ಜುಲೈ ಇಂದ 2021 ಜುಲೈ ಅಂತ್ಯದವರೆಗೆ ಪ್ರಕಟವಾಗಿರುವ ಕಥಾ ಸಂಕಲನ, ಕವನ ಸಂಕಲನ, ಕಾದಂಬರಿ, ಪ್ರವಾಸ ಕಥನ, ನಾಟಕ ಮತ್ತು ಇತರೆ ಯಾವುದೇ ಪ್ರಕಾರದ ಕನ್ನಡ ಸಾಹಿತ್ಯ ಕೃತಿಗಳನ್ನು ಪ್ರಶಸ್ತಿಗಾಗಿ ಕಳಿಸಬಹುದು.
* ಒಂದು ಕೃತಿಯ ಮೂರು ಪ್ರತಿಗಳು ಮತ್ತು ಎಸ್.ಎಸ್.ಎಲ್.ಸಿ ಅಂಕಪಟ್ಟಿ/ಆಧಾರ್ ಕಾರ್ಡ್ ನಕಲು ಪ್ರತಿಯೊಂದಿಗೆ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಬಹುದು. ಪಿ. ಎಚ್. ಡಿ ಪ್ರಂಬಂಧಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ.
* ಒಬ್ಬ ಲೇಖಕ ತನ್ನ ಇತರೆ ಮೂರು ಕೃತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಆದರೆ ಈ ಹಿಂದೆ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಗೆದ್ದಿರುವ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ.
* ಆಯ್ಕೆಯಾದ ಕೃತಿಗೆ 2500 ರೂ ಮೌಲ್ಯದ ಪುಸ್ತಕ ಬಹುಮಾನ ಹಾಗೂ ಪ್ರಶಸ್ತಿ ನೀಡಿ ಅಭಿನಂದಿಸಲಾಗುವುದು.


* ಹಸ್ತ ಪ್ರತಿ ಹಾಗೂ ಕೃತಿಗಳನ್ನು ದಿನಾಂಕ ಸೆಪ್ಟೆಂಬರ್ 15 - 2021 ರ ಒಳಗೆ ಕೆಳಗೆ ನೀಡಲಾದ ವಿಳಾಸಕ್ಕೆ ರಿಜಿಸ್ಟರ್ ಫೋಸ್ಟ್ ಮಾಡಬೇಕು.
" ಅವ್ವ ಪುಸ್ತಕಾಲಯ
#189, ಕೆಂಚನಹಳ್ಳಿ (ಅಂ)
ಹುಲಿಯೂರುದುರ್ಗ (ಹೋ), ಕುಣಿಗಲ್ (ತಾ॥)
ತುಮಕೂರು (ಜಿ) - 572123
ಮೊ : 8548948660 "

* ಪ್ರಶಸ್ತಿಗಾಗಿ ಕಳಿಸಿದ ಹಸ್ತಪ್ರತಿ ಮತ್ತು ಕೃತಿಗಳನ್ನು ಹಿಂತಿರುಗಿಸುವುದಿಲ್ಲ.

* ಹೆಚ್ಚಿನ ಮಾಹಿತಿಗಾಗಿ avvapustakaalaya@gmail.com ಗೆ ಬರೆಯಬಹುದು.

ಕಾಮೆಂಟ್‌ಗಳು

  1. ಸರ್ ನಮಸ್ಕಾರ,

    2021 ಪುಸ್ತಕ ಪ್ರಶಸ್ತಿಯ ಫಲಿತಾಂಶ ಪ್ರಕಟವಾಗಿದೆಯಾ ದಯವಿಟ್ಟು ತಿಳಿಸಿ

    ಪ್ರತ್ಯುತ್ತರಅಳಿಸಿ
  2. ಸರ್ ಪ್ರಕಟಿತ ಪುಸ್ತಕಗಳನ್ನು ಕಳುಹಿಸಬೇಕಾ ಅಥವಾ ಪ್ರಕಟಿತ ಪುಸ್ತಕದಲ್ಲಿರುವ ಮೂರು ಕೃತಿಗಳನ್ನು ಕಳುಹಿಸಬೇಕಾ ದಯವಿಟ್ಟು ತಿಳಿಸಿ 🙏🙏

    ಪ್ರತ್ಯುತ್ತರಅಳಿಸಿ
  3. ರಾಜೇಶ್ವರಿ ರಾಜರಾಜೇಶ್ವರಿ ನಗರ ಬೆಂಗಳೂರುಆಗಸ್ಟ್ 22, 2022 ರಂದು 05:44 PM ಸಮಯಕ್ಕೆ

    ಸರ್ ಪುಸ್ತಕದ ಪ್ರತಿಗಳೊ ಅಥವಾ ಪ್ರಕಟಿತ ಪುಸ್ತಕದಲ್ಲಿರುವ ಮೂರು ಕೃತಿಗಳನ್ನು ಕಳುಹಿಸಬೇಕಾ ದಯವಿಟ್ಟು ತಿಳಿಸಿ 🙏🙏

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ