ಸತ್ತ ಭಾವನೆಗಳು
ಸತ್ತು ಹೋಗಿವೆ ಎನ್ನ ಭಾವನೆಗಳು
ಶೋಷಣೆಗಾರರ ಕಾಲಡಿಯಲಿ ಸಿಕ್ಕಿ
ಉಕ್ಕುವುದಿನ್ನೆಲ್ಲಿ ಹರ್ಷೋದ್ಘಾರ
ತಪ್ಪುವುದಿನ್ನೆಲ್ಲಿ ದುಃಖದಾಗರ...
ಕಂಡ ಕನಸುಗಳಿಗೆಲ್ಲ ಬೆಂಕಿಬಿದ್ದುದಲ್ಲದೇ
ಬದುಕುವಾಸೆಯೂ ಕಮರಿಹೋಗಿದೆ
ಆವ ಕಲ್ಯಾಣಾರ್ಥವೀ ಜೀವನವೆನಿಸಿದೆ
ಬರಿ ಕಲ್ಪನೆಯಲಿ ಸಾವದು ಕೈಬೀಸಿ ಕರೆಯುತಿದೆ...
ಮನಸದು ಮರುಗಿ ರೋಸಿ ಹೋಗಿದೆ
ಜವರಾಯನ ಆಜ್ಞೆಯದು ಬಾರದೇ
ಜೀವವದು ಪ್ರತಿಕ್ಷಣ ಹಪಹಪಿಸುತಿದೆ
ಯಮರಾಜನ ಆ ಪಾಶ ಕಾಣದೇ...
ದಿಕ್ಕು-ದಿಕ್ಕಲಿ ಕೇಳುತಿದೆ ಅಣಕಿಸಿ ನಗುವ ಹಾಹಾಕಾರ
ಎಲ್ಲೆಲ್ಲೂ ಕವಿದಿದೆ ಗಾಢಾಂಧಕಾರ
ಇಲ್ಲವೆನಗಿನ್ನು ಬದುಕುವಾ ಹುನ್ನಾರ
ಅನಿಸಿದೆ ಸಾವದೊಂದೇ ಎಲ್ಲದಕ್ಕೂ ಪರಿಹಾರ....
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ