ಅದೆಷ್ಟೋ ಮಕ್ಕಳ ಪಾಲಿಗೆ ಅಪ್ಪ ಎಂಬುವವನು ಇಂದಿಗೂ ರಾಕ್ಷಸನಾಗಿ ಉಳಿದಿದ್ದಾನೆ. ನಮಗೆ ಒಳ್ಳೆಯ ಅಪ್ಪನಿರಬಹುದು ಆದರೆ ಇತರರಿಗೆ? ಸಂತಸದ ಉಯ್ಯಾಲೆಯಲ್ಲಿ ಜೀಕುತ್ತಿರುವ ನಾವುಗಳು ಎಲ್ಲರ ಮನೆಯ ಅಪ್ಪನ ನಿಜ ಸ್ವರೂಪ ತಿಳಿಯೋಣವೇ? ಕಥೆ ಗೆಳೆಯನದು ಕವಿತೆಯ ರೂಪ ಕೊಟ್ಟವನು ನಾನು.
ಅಪ್ಪಂದಿರ ದಿನದ ಶುಭಾಶಯಗಳು
ಮದ್ಯದಂಗಡಿಯ ಖಾಯಂ
ಗಿರಾಕಿ ನನ್ನಪ್ಪ!
ಮನೆಯಾಚೆಗಿನ ಪಡಸಾಲೆಯಲ್ಲಿ
ಕೂತು ಕೆಮ್ಮಿ ಕ್ಯಾಕರಿಸಿ ಕಾರಿಕೊಳ್ಳು
-ವವನು ನನ್ನಪ್ಪ! ಅವನಿಗೆ
"ಅಪ್ಪಂದಿರ ದಿನದ ಶುಭಾಶಯಗಳು"
ಹೆಂಗಸರ ಖಯಾಲಿಗೆ ಬಿದ್ದು
ನನ್ನವ್ವನನ್ನು ಪಶುವಿನಂತೆ
ಹಿಂಸಿಸಿದ ಲೋಲುಪ ನನ್ನಪ್ಪ!
ಸಮಾಜಕ್ಕೆ ಅಂಜಿ ಬದುಕ
ನೇರ್ಪುಗೊಳಿಸುತ್ತಿದ್ದ ನನ್ನವ್ವನಿಗೆ
ಸೂಳೆಯ ಪಟ್ಟ ಕಟ್ಟಿದವನು ನನ್ನಪ್ಪ! ಅವನಿಗೆ
"ಅಪ್ಪಂದಿರ ದಿನದ ಶುಭಾಶಯಗಳು"
ಮಕ್ಕಳೆಂಬ ಕಬರಿಲ್ಲದೆ ವಾಚಾಮಗೋಚರ
ಬೈದು ಸದಾ ಬಡಿಯುತ್ತಿದ್ದವನು ನನ್ನಪ್ಪ!
ಅವ್ವನ ದುಪ್ಪಟದೊಳಗೆ ಕೈ ಹಾಕಿ ಹಣ
ಒಯ್ಯುತ್ತಿದ್ದವನು ನನ್ನಪ್ಪ! ಅವನಿಗೆ
"ಅಪ್ಪಂದಿರ ದಿನದ ಶುಭಾಶಯಗಳು"
ಅವನಲ್ಲಿ ವಾತ್ಸಲ್ಯವೆಂಬುದು ಎಂದೋ
ಸತ್ತು ಹೋಗಿತ್ತು, ಕೋಟಿ ವಂಚನೆಗಳ
ಕಲ್ಪನಾ ಲೋಕದಲ್ಲಿ ಸಿಲುಕಿಕೊಂಡಿದ್ದ!
ಅವನ ಕೊಳಕು ದಿರಿಸು ನೋಡಿದರೆ
ಗಂಟಲುಬ್ಬಿ ಬರುತ್ತಿತ್ತು. ನನ್ನ ಹುಟ್ಟಿಗೆ
ಕಾರಣನಾದನಲ್ಲ? ಅದಕ್ಕಾಗಿ ಅವನಿಗೆ
"ಅಪ್ಪಂದಿರ ದಿನದ ಶುಭಾಶಯಗಳು"
ಕೊನೆ ಘಳಿಗೆಯವರೆಗೂ "ಮಗ ಇತ್ತ ಬಾ"
ಎಂದು ಕರೆದು ತಲೆ ನೇವರಿಸಿದವನಲ್ಲ
ನನ್ನಪ್ಪ! ಬೀಡಿ ಹೊಗೆಯಿಂದಲೇ ಉಸಿರುಗಟ್ಟಿಸುತ್ತಿದ್ದವನು ನನ್ನಪ್ಪ!
ಬಡತನದ ಚಾದರ ಹೊದ್ದ ನನ್ನವ್ವನಿಗೆ
ಸವತಿಯ ತಂದವನು ನನ್ನಪ್ಪ! ಅವನಿಗೆ
"ಅಪ್ಪಂದಿರ ದಿನದ ಶುಭಾಶಯಗಳು"
ದೀಕ್ಷಿತ್ ನಾಯರ್ ಮಂಡ್ಯ
ಯುವ ಬರಹಗಾರ & ವಾಗ್ಮಿ
ಅಪ್ಪಂದಿರ ದಿನದ ಶುಭಾಶಯಗಳು
ಮದ್ಯದಂಗಡಿಯ ಖಾಯಂ
ಗಿರಾಕಿ ನನ್ನಪ್ಪ!
ಮನೆಯಾಚೆಗಿನ ಪಡಸಾಲೆಯಲ್ಲಿ
ಕೂತು ಕೆಮ್ಮಿ ಕ್ಯಾಕರಿಸಿ ಕಾರಿಕೊಳ್ಳು
-ವವನು ನನ್ನಪ್ಪ! ಅವನಿಗೆ
"ಅಪ್ಪಂದಿರ ದಿನದ ಶುಭಾಶಯಗಳು"
ಹೆಂಗಸರ ಖಯಾಲಿಗೆ ಬಿದ್ದು
ನನ್ನವ್ವನನ್ನು ಪಶುವಿನಂತೆ
ಹಿಂಸಿಸಿದ ಲೋಲುಪ ನನ್ನಪ್ಪ!
ಸಮಾಜಕ್ಕೆ ಅಂಜಿ ಬದುಕ
ನೇರ್ಪುಗೊಳಿಸುತ್ತಿದ್ದ ನನ್ನವ್ವನಿಗೆ
ಸೂಳೆಯ ಪಟ್ಟ ಕಟ್ಟಿದವನು ನನ್ನಪ್ಪ! ಅವನಿಗೆ
"ಅಪ್ಪಂದಿರ ದಿನದ ಶುಭಾಶಯಗಳು"
ಮಕ್ಕಳೆಂಬ ಕಬರಿಲ್ಲದೆ ವಾಚಾಮಗೋಚರ
ಬೈದು ಸದಾ ಬಡಿಯುತ್ತಿದ್ದವನು ನನ್ನಪ್ಪ!
ಅವ್ವನ ದುಪ್ಪಟದೊಳಗೆ ಕೈ ಹಾಕಿ ಹಣ
ಒಯ್ಯುತ್ತಿದ್ದವನು ನನ್ನಪ್ಪ! ಅವನಿಗೆ
"ಅಪ್ಪಂದಿರ ದಿನದ ಶುಭಾಶಯಗಳು"
ಅವನಲ್ಲಿ ವಾತ್ಸಲ್ಯವೆಂಬುದು ಎಂದೋ
ಸತ್ತು ಹೋಗಿತ್ತು, ಕೋಟಿ ವಂಚನೆಗಳ
ಕಲ್ಪನಾ ಲೋಕದಲ್ಲಿ ಸಿಲುಕಿಕೊಂಡಿದ್ದ!
ಅವನ ಕೊಳಕು ದಿರಿಸು ನೋಡಿದರೆ
ಗಂಟಲುಬ್ಬಿ ಬರುತ್ತಿತ್ತು. ನನ್ನ ಹುಟ್ಟಿಗೆ
ಕಾರಣನಾದನಲ್ಲ? ಅದಕ್ಕಾಗಿ ಅವನಿಗೆ
"ಅಪ್ಪಂದಿರ ದಿನದ ಶುಭಾಶಯಗಳು"
ಕೊನೆ ಘಳಿಗೆಯವರೆಗೂ "ಮಗ ಇತ್ತ ಬಾ"
ಎಂದು ಕರೆದು ತಲೆ ನೇವರಿಸಿದವನಲ್ಲ
ನನ್ನಪ್ಪ! ಬೀಡಿ ಹೊಗೆಯಿಂದಲೇ ಉಸಿರುಗಟ್ಟಿಸುತ್ತಿದ್ದವನು ನನ್ನಪ್ಪ!
ಬಡತನದ ಚಾದರ ಹೊದ್ದ ನನ್ನವ್ವನಿಗೆ
ಸವತಿಯ ತಂದವನು ನನ್ನಪ್ಪ! ಅವನಿಗೆ
"ಅಪ್ಪಂದಿರ ದಿನದ ಶುಭಾಶಯಗಳು"
ದೀಕ್ಷಿತ್ ನಾಯರ್ ಮಂಡ್ಯ
ಯುವ ಬರಹಗಾರ & ವಾಗ್ಮಿ
ನಿಜ ದೀಕ್ಷಿತ್ ಇಂಥಾ ಅಪ್ಪಂದಿರು ನಮ್ಮ ಸುತ್ತ ಮುತ್ತ ಬೇಕಾದಷ್ಟು ಅಪ್ಪಂದಿರಿದ್ದಾರೆ. ಹುಟ್ಟಿಸಿದಕ್ಕಾಗಿಯಾದರೂ ಅಪ್ಪ ಅಂತ ಕರೆಯಬೇಕಾದ ಅನಿವಾರ್ಯತೆ ಇರುವ ಮಕ್ಕಳ ನೋವಿಗೆ ದನಿಯಾದ ನಿಮ್ಮ ಕವಿತೆ ಗೊಂದು ನಮನ
ಪ್ರತ್ಯುತ್ತರಅಳಿಸಿ