ಕಣ್ಣ ಕನಸಿನ ಕವಿತೆ
ಎತ್ತಲೋ ಸವಾರಿ
ಇನ್ನೆತ್ತಲೋ ಸಾಗಿದೆ..
ದಿಕ್ಕು ತಪ್ಪಿಸಿದಂತೆ..
ಹೊತ್ತು ಕಳೆಯುತ್ತಿದ್ದರೂ
ಇರುಳ ದಾರಿ ಕಾಣದು
ಹಗಲಲಿ ಓಣಿ ದಾಟದು..
ಕಣ್ಣ ಕನಸುಗಳ ನಡುವೆ
ಮಣ್ಣ ಕಣದ ವಾಸನೆ
ಎದೆಯ ಕನಸು ಕರಗಿ
ತಣಿದ ಆವಿಯ ಹನಿಗಳೆರೆಡು
ಮೊಳೆಯಿಸುವ ಕಥೆ
ಉಂಡ ಎದೆಗಳ ಸೊಕ್ಕಿನಲಿ
ಹಂಗಿನ ಬದುಕಾದ ವ್ಯಥೆ
ಕೊನೆಗೊಳ್ಳತ್ತಿದೆ ನೆತ್ತರ ಪಸೆ.
ಅದೇ ಹಳೆಯ ಬಿಳಿ ಬಣ್ಣದಲ್ಲಿ
ಒಳಗೊಳಗಿನ ರಂಗು,ಎದ್ದು ಕಾಣದು ..
ಸಮಯ ಸಾಧಕರ
ಸತ್ಯ ಶೋಧಕ ಜಾತ್ರೆ
ನಿತ್ಯ ಜನರ ಯಾತ್ರೆ..
ಹುಸಿ ತಿರುಳ ನಂಬಿಕೆಯ ಬೀಜ
ಬಿತ್ತಿ ಬೆಳೆಯಲು ಹೊರಟವರು
ನೆರಳಾದರೂ ನಮಗೇ ಇರಲೆಂದವರು
ಸುತ್ತಲಿರುವವರು..
ಅಂಗಲಾಚಿದರೂ..
ಹಲುಬುವ ಮನವಲ್ಲ
ಅನುಭೂತಿಯ ಕಾಲವಲ್ಲ
ಕದ್ದು ಹೂಳುತ,
ಮೆದ್ದು ಹೊದ್ದು ಮಲಗುವ ಬುದ್ದಿ..
ಬದಲಾಗುವ ಕಾಲ ಎಂದೋ..??
ಮೈಕೊಡವಿ ಏಳುವ ಕಾಲವೆಂದೋ..???
ಕನಸು ಕಂಗಳ ತುಂಬಿತು
ಎದೆಯ ಬಯಕೆಯು ಬಳಲಿತು
ಪ್ರಬುದ್ದತೆಯ ಪುಣ್ಯ ಕಾಲ.,
ಬುದ್ದನ ಹಿಂದೆಯೇ ಸರಿಯಿತು..
- ಸಿದ್ದು ಮೂರ್ತಿ, ತುಮಕೂರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ