ಹಸಿವು
ತುತ್ತನ್ನ ನೀಡೆನಗೆ ತಾಯೇ
ಹಸಿದು ಬಂದಿರುವೆ ನಾನು
ದಿನಗಳುರುಳಿತು ಹೊತ್ತನ್ನ ಉಂಡು
ಮುನ್ನಡೆಯದ ಹಾಗೆ ಹಿಡಿದಿರಿಸಿದೆ ಹಸಿವೆಂಬ ಮಾಯೆ
ತಿರುಗಿ ನೋಡುವ ಬಲವಿಲ್ಲ ನನ್ನ ಛಾಯೆ
ತುತ್ತನ್ನ ನೀಡೆನಗೆ ತಾಯೇ
ಹಸಿದು ಬಂದಿರುವೆ ನಾನು!
ಗಂಗೆಯಿಡಿದಿಟ್ಟಿರುವಳು ಉಸಿರ ಘಳಿಗೆ
ಬೆಂಬಿಡದೆ ಹಿಂಡುತ್ತಿದೆ ಹಸಿವೆಂಬ ಕ್ರಿಯೆ
ದಿನಕಳೆದರೆ ಮಾಡಲಿದೆ ಜೀವದ ಸುಲಿಗೆ
ತುತ್ತನ್ನ ನೀಡೆನಗೆ ತಾಯೇ
ಹಸಿದು ಬಂದಿರುವೆ ನಾನು!
ಹಸಿವ್ಯಾರೆಂದು ತಿಳಿಯೇ
ಬಯಸಿದ ವರ್ಣವಿಲ್ಲ,ಬೇಡಿದ ವರ್ಗವಲ್ಲ
ಹಸಿವು ಜೀವಕುಲದ ರೋಗವಂತೆ
ತುತ್ತನ್ನ ನೀಡೆನಗೆ ತಾಯೇ
ಹಸಿದು ಬಂದಿರುವೆ ನಾನು!
ದೊಡ್ಡವರೆಂದಿಲ್ಲ,ಚಿಕ್ಕವರೆಂದಿಲ್ಲ
ದಾರಿದ್ರ್ಯನೆ ಬೇಕಿಲ್ಲ,ಧನವಂತನೆಂದಿಲ್ಲ
ಯಾರನ್ನೂ ಕಡೆಗಣಿಸಿಯಾಳು ಹಸಿವು ಮಾತೆ
ತುತ್ತನ್ನ ನೀಡೆನಗೆ ತಾಯೇ
ಹಸಿದು ಬಂದಿರುವೆ ನಾನು!
ತಪ್ಪು ತಿಳಯಬೇಡ ತಾಯಿ
ತುತ್ತನ್ನ ಬಯಸಿದ ಭಿಕ್ಷಾರ್ಥಿ ನಾನು
ಜಗಜೀವಕುಲದ ಏಕೈಕ ದೈವ ಹಸಿವಂತೆ
ತುತ್ತನ್ನ ಕರುಣಿಸೇ ತಾಯಿ
ಹಸಿದು ಬಂದ ಭಿಕ್ಷಾರ್ಥಿ ನಾನು!
- ಚನ್ನೇಗೌಡ ಡಿ ಸಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ