ಹಸಿವು
ಅದು ಬಡವರ ನೋವು
ಅಲ್ಲ, ರೈತನ ನರಳಾಟದ ಕಾವು
ಅಲ್ಲಲ್ಲಾ, ಕಾಯುವವರ ಗುಟ್ಟಿನ ಬೇವು
ಹೌದು,
ಸರಳವಾಗಿ ಬಾಯಿ ಮುಚ್ಚಬಹುದು
ಬಡವನ ಹಸಿವನ್ನು ಮಣ್ಣಿನಿಂದ
ಆದರೆ,
ಬಾಯಿ ಮುಚ್ಚಿದರೆ ಸಾಕೇ!
ಹೊಟ್ಟೆಯ ಕತೆ ಏನು?
ಬಡವನಿಗೆ ಮೈಯೆಲ್ಲಾ ಬಾಯಿ
ಅಯ್ಯೋ ಪಾಪ;
ಎನ್ನದಿರಿ ಪ್ರಚಾರಕ್ಕಾಗಿ
ಸುಮ್ಮನೆ ಬಳಸಿಕೊಳ್ಳದಿರಿ;
ನಿಮ್ಮುಚ್ಚಾಟದ ನಾಟಕ ನೋಡುವ
ಏನೂ ಗೊತ್ತಿಲ್ಲದ ಪ್ರೇಕ್ಷಕರಾಗಿ
ಅವರಿಲ್ಲದೆ ನೀವಿಲ್ಲ
ನೀವೆಂಬುದು ನೀವೇ ಅಲ್ಲ
ನಿಮ್ಮ ಅಂತರಾತ್ಮದ ಅಣುವಣುವು
ಹಸಿವಿನ ನೋವುಂಡ ಬಡಪಾಯಿಯದು
ತುತ್ತು ತಿನ್ನುವ ಮುನ್ನ
ನೀ ನೆನೆಯೋ ಆತನನ್ನ
ದಿನವೂ.. ಪ್ರತಿದಿನವೂ..
ಮಲಗುವ ಮುಂಚೆ, ಎದ್ದ ನಂತರ
ಹಾಗೂ, ಉಸಿರಿರುವ ತನಕ
ಅನಂತ ಕುಣಿಗಲ್
ಅದು ಬಡವರ ನೋವು
ಅಲ್ಲ, ರೈತನ ನರಳಾಟದ ಕಾವು
ಅಲ್ಲಲ್ಲಾ, ಕಾಯುವವರ ಗುಟ್ಟಿನ ಬೇವು
ಹೌದು,
ಸರಳವಾಗಿ ಬಾಯಿ ಮುಚ್ಚಬಹುದು
ಬಡವನ ಹಸಿವನ್ನು ಮಣ್ಣಿನಿಂದ
ಆದರೆ,
ಬಾಯಿ ಮುಚ್ಚಿದರೆ ಸಾಕೇ!
ಹೊಟ್ಟೆಯ ಕತೆ ಏನು?
ಬಡವನಿಗೆ ಮೈಯೆಲ್ಲಾ ಬಾಯಿ
ಅಯ್ಯೋ ಪಾಪ;
ಎನ್ನದಿರಿ ಪ್ರಚಾರಕ್ಕಾಗಿ
ಸುಮ್ಮನೆ ಬಳಸಿಕೊಳ್ಳದಿರಿ;
ನಿಮ್ಮುಚ್ಚಾಟದ ನಾಟಕ ನೋಡುವ
ಏನೂ ಗೊತ್ತಿಲ್ಲದ ಪ್ರೇಕ್ಷಕರಾಗಿ
ಅವರಿಲ್ಲದೆ ನೀವಿಲ್ಲ
ನೀವೆಂಬುದು ನೀವೇ ಅಲ್ಲ
ನಿಮ್ಮ ಅಂತರಾತ್ಮದ ಅಣುವಣುವು
ಹಸಿವಿನ ನೋವುಂಡ ಬಡಪಾಯಿಯದು
ನಿನ್ನದೆಂಬುದು ಏನೂ ಇಲ್ಲ!
ತಿನ್ನಲು ಪರದಾಡುವವರ ಮುಂದೆ
ತಿಂದು ತೇಗುವಿರಲ್ಲಾ..
ಹೆಚ್ಚಾಗಿ ಬಿಸಾಡುವಿರಲ್ಲಾ..
ಹಸಿವಿಗೂ ಬೆಲೆ ಇದೆ
ಅದನ್ನು ನಿಮ್ಮಿಂದ ಖಂಡಿತ ಭರಿಸಲಾಗದು
ಕಾಯಕಯೋಗಿಯ ಸೋಲಿಸಲಾಗದು
ಹಸಿವು ಅವನ ಶತ್ರು
ಖಡ್ಗ ಮಾಡಿಕೊಳ್ಳದಿರಿ;
ಬೇಗ ಮಣ್ಣಾಗುವಿರಿ
ತಿನ್ನಲು ಪರದಾಡುವವರ ಮುಂದೆ
ತಿಂದು ತೇಗುವಿರಲ್ಲಾ..
ಹೆಚ್ಚಾಗಿ ಬಿಸಾಡುವಿರಲ್ಲಾ..
ಹಸಿವಿಗೂ ಬೆಲೆ ಇದೆ
ಅದನ್ನು ನಿಮ್ಮಿಂದ ಖಂಡಿತ ಭರಿಸಲಾಗದು
ಕಾಯಕಯೋಗಿಯ ಸೋಲಿಸಲಾಗದು
ಹಸಿವು ಅವನ ಶತ್ರು
ಖಡ್ಗ ಮಾಡಿಕೊಳ್ಳದಿರಿ;
ಬೇಗ ಮಣ್ಣಾಗುವಿರಿ
ಬಡವನಿಗೆ ಹೊಟ್ಟೆಯ ಹಸಿವು
ಹಣವಂತನಿಗೆ ನೋಟಿನ ಹಸಿವು
ಕಾಮುಕನಿಗೆ ಹೆಣ್ಣಿನ ಹಸಿವು
ಗುರುವಿಗೆ ಕಲಿಸುವ ಹಸಿವು
ತಾಯಿಗೆ ಉಣಿಸುವ ಹಸಿವು
ನನಗೆ ಗೀಚುವ ಹಸಿವು
ನಿಮಗೆ ಓದುವ ಹಸಿವು
ಯಾರಿಗಿಲ್ಲ ಹಸಿವು?
ತುತ್ತು ತಿನ್ನುವ ಮುನ್ನ
ನೀ ನೆನೆಯೋ ಆತನನ್ನ
ದಿನವೂ.. ಪ್ರತಿದಿನವೂ..
ಮಲಗುವ ಮುಂಚೆ, ಎದ್ದ ನಂತರ
ಹಾಗೂ, ಉಸಿರಿರುವ ತನಕ
ಅನಂತ ಕುಣಿಗಲ್
ಪ್ರತ್ಯುತ್ತರಅಳಿಸಿಅರ್ಥಪೂರ್ಣವಾಗಿದೆ
👌👌👌👌💐💐💐
ಪ್ರತ್ಯುತ್ತರಅಳಿಸಿಸೂಪರ್
ಪ್ರತ್ಯುತ್ತರಅಳಿಸಿ👏👏 Nice poem
ಪ್ರತ್ಯುತ್ತರಅಳಿಸಿಹೌದು ಖಂಡಿತ ಎಲ್ಲರಿಗೂ ಅವರದೇ ಆದ ಹಸಿವು.....
ಪ್ರತ್ಯುತ್ತರಅಳಿಸಿಅದ್ಭುತ, ಅರ್ಥಪೂರ್ಣ ಬರಹ
Thumba
ಪ್ರತ್ಯುತ್ತರಅಳಿಸಿ
ಪ್ರತ್ಯುತ್ತರಅಳಿಸಿಅರ್ಥಪೂರ್ಣ ವಾಗಿದೆ
So meaningful and realistic.
ಪ್ರತ್ಯುತ್ತರಅಳಿಸಿ
ಪ್ರತ್ಯುತ್ತರಅಳಿಸಿಹಸಿವಾಗ ಬೇಕು ಹಸಿವು