" ಬೆವರು "
ಬೆವರು
ಅದು ವಾಸನೆ
ಅಲ್ಲಾ, ನೀರು
ಅಲ್ಲಲ್ಲಾ, ದುಡಿಮೆಯ ಫಲ
ಪಾರ್ಕಿನೊಂದು ಸೈಡಿನಲ್ಲಿ
ಸಿಕ್ಸ್ ಪ್ಯಾಕಿಗಾಗಿ
ಜಿಗಿಯುತ್ತಿದ್ದ ಯುವತಿಯೊಬ್ಬಳ
ಮೈಮ್ಯಾಲಿನ ಬಟ್ಟೆಯೋ..
ಬರೀ ನೀರು ನೀರು
ಮಳೆಯಲ್ಲಿ ನೆನೆಯುವ ಚಾಳಿ ಅಂದುಕೊಂಡಿದ್ದೆ
ಅಲ್ಲಾ, ಅದು ಬೆವರು!
ಅಲ್ಲೊಬ್ಬ ಪೋರ
ಪಕ್ಕದ ಮನೆಯಲ್ಲಿ
ಮೊಸರು ಕೇಳಲು ಹೊಸದಾಗಿ ಹೋಗಿದ್ದ
ನೋಡು ನೋಡುತ್ತಿದ್ದಂತೆಯೇ
ಉಸಿರುಕಟ್ಟಿ ಓಡಿ ಬರುತ್ತಿದ್ದ
ಆಂಟಿಯನ್ನು ರೇಗಿಸಿರಬೇಕೆಂದುಕೊಂಡೆ
ಅಲ್ಲಾ, ಅವನ ಹಿಂದೆ ಒಂದು ಡಾಬರ್ ಇತ್ತು
ಅದೂ ಕೂಡ ಬೆವರುವಂತೆಯೇ ಓಡುತ್ತಿತ್ತು
ನಡುರಾತ್ರಿಯಲ್ಲಿ ಯಾರಿರದ ಬೀದಿಯಲ್ಲಿ
ವೈಯ್ಯಾರದಿ ಸೆರಗು ಸರಿಸಿಕೊಂಡು ನಿಂತಿದ್ದ
ಲೈಂಗಿಕ ಕಾರ್ಯಕರ್ತೆಯೊಬ್ಬಳು
ತನಗೆ ಗ್ರಾಹಕ ಸಿಕ್ಕ ನಂತರವೇ
ನಾಲ್ಕು ದಿನಗಳ ಸ್ನಾನ ಒಟ್ಟಿಗೇ ಮಾಡಿದ್ದಳು
ಇಲ್ಲಾ, ತುಂಬಾ ಬೆವತ್ತಿದ್ದಳು
ಎಸಿಯ ಕೆಳಗೆ ಚಿನ್ನದ ಮಂಚದ ಮೇಲೆ ಕೂತಿದ್ದ
ಮುದಿ ರಾಜಕಾರಣಿಯೊಬ್ಬ
ನೋಟಿನ ಮೇಲೆ ನೋಟು ಎಣಿಸುತ್ತಿದ್ದ
ಎಸಿಯ ಗಾಳಿಗೆ ತರಗೆಲೆಯಂತಿದ್ದ ನೋಟುಗಳು
ಒದ್ದೆಯಾದ ಒಳಉಡುಪುಗಳಾಗಿದ್ದವು
ಇಲ್ಲಾ, ನೋಟುಗಳೂ ಬೆವತ್ತಿದ್ದವು
ಕೈಯಿಂದ ಕೈಯಿಗೆ ಓಡಾಡಿ!
ಸೂರ್ಯ ನೆತ್ತಿಗೆ ಬಂದರೂ
ಚಿಂತಿಸದೆ ನೆಲ ಅಗೆಯುತ್ತಿದ್ದ ರೈತ
ಒಲೆ ಊದುತ್ತಿದ್ದ ಗೃಹಿಣಿ
ತಡರಾತ್ರಿ ಓದುತ್ತಿದ್ದ ವಿದ್ಯಾರ್ಥಿಗಳು
ಬೆವರು
ಅದು ವಾಸನೆ
ಅಲ್ಲಾ, ನೀರು
ಅಲ್ಲಲ್ಲಾ, ದುಡಿಮೆಯ ಫಲ
ಪಾರ್ಕಿನೊಂದು ಸೈಡಿನಲ್ಲಿ
ಸಿಕ್ಸ್ ಪ್ಯಾಕಿಗಾಗಿ
ಜಿಗಿಯುತ್ತಿದ್ದ ಯುವತಿಯೊಬ್ಬಳ
ಮೈಮ್ಯಾಲಿನ ಬಟ್ಟೆಯೋ..
ಬರೀ ನೀರು ನೀರು
ಮಳೆಯಲ್ಲಿ ನೆನೆಯುವ ಚಾಳಿ ಅಂದುಕೊಂಡಿದ್ದೆ
ಅಲ್ಲಾ, ಅದು ಬೆವರು!
ಅಲ್ಲೊಬ್ಬ ಪೋರ
ಪಕ್ಕದ ಮನೆಯಲ್ಲಿ
ಮೊಸರು ಕೇಳಲು ಹೊಸದಾಗಿ ಹೋಗಿದ್ದ
ನೋಡು ನೋಡುತ್ತಿದ್ದಂತೆಯೇ
ಉಸಿರುಕಟ್ಟಿ ಓಡಿ ಬರುತ್ತಿದ್ದ
ಆಂಟಿಯನ್ನು ರೇಗಿಸಿರಬೇಕೆಂದುಕೊಂಡೆ
ಅಲ್ಲಾ, ಅವನ ಹಿಂದೆ ಒಂದು ಡಾಬರ್ ಇತ್ತು
ಅದೂ ಕೂಡ ಬೆವರುವಂತೆಯೇ ಓಡುತ್ತಿತ್ತು
ನಡುರಾತ್ರಿಯಲ್ಲಿ ಯಾರಿರದ ಬೀದಿಯಲ್ಲಿ
ವೈಯ್ಯಾರದಿ ಸೆರಗು ಸರಿಸಿಕೊಂಡು ನಿಂತಿದ್ದ
ಲೈಂಗಿಕ ಕಾರ್ಯಕರ್ತೆಯೊಬ್ಬಳು
ತನಗೆ ಗ್ರಾಹಕ ಸಿಕ್ಕ ನಂತರವೇ
ನಾಲ್ಕು ದಿನಗಳ ಸ್ನಾನ ಒಟ್ಟಿಗೇ ಮಾಡಿದ್ದಳು
ಇಲ್ಲಾ, ತುಂಬಾ ಬೆವತ್ತಿದ್ದಳು
ಎಸಿಯ ಕೆಳಗೆ ಚಿನ್ನದ ಮಂಚದ ಮೇಲೆ ಕೂತಿದ್ದ
ಮುದಿ ರಾಜಕಾರಣಿಯೊಬ್ಬ
ನೋಟಿನ ಮೇಲೆ ನೋಟು ಎಣಿಸುತ್ತಿದ್ದ
ಎಸಿಯ ಗಾಳಿಗೆ ತರಗೆಲೆಯಂತಿದ್ದ ನೋಟುಗಳು
ಒದ್ದೆಯಾದ ಒಳಉಡುಪುಗಳಾಗಿದ್ದವು
ಇಲ್ಲಾ, ನೋಟುಗಳೂ ಬೆವತ್ತಿದ್ದವು
ಕೈಯಿಂದ ಕೈಯಿಗೆ ಓಡಾಡಿ!
ಸೂರ್ಯ ನೆತ್ತಿಗೆ ಬಂದರೂ
ಚಿಂತಿಸದೆ ನೆಲ ಅಗೆಯುತ್ತಿದ್ದ ರೈತ
ಒಲೆ ಊದುತ್ತಿದ್ದ ಗೃಹಿಣಿ
ತಡರಾತ್ರಿ ಓದುತ್ತಿದ್ದ ವಿದ್ಯಾರ್ಥಿಗಳು
ಲ್ಯಾಪ್‌ಟಾಪಿನ ಪರದೆ ನೋಡುತ್ತಿದ್ದ ಲೆಕ್ಚರರ್
ಎಟಿಎಂ ದರೋಡೆ ಮಾಡುತ್ತಿದ್ದ ಕಳ್ಳ
ಅಂಗಳದಲ್ಲಿ ಆಡುತ್ತಿದ್ದ ಮಕ್ಕಳು
ತರಕಾರಿ ಮಾರುತ್ತಿದ್ದ ವ್ಯಾಪಾರಿ
ಬಟ್ಟೆ ಹೊಲಿಯುತ್ತಿದ್ದ ಟೀಚರಮ್ಮ
ಸಂಶೋಧನೆ ನಡೆಸುತ್ತಿದ್ದ ಕನ್ನಡಕದ ಹುಡುಗ
ಬರೆದು ಬರೆದು ತಿದ್ದಿಕೊಳ್ಳುವ ನಾನು
ಓದಿ ಓದಿ ಸುಸ್ತಾಗುವ ನೀವು
ಹೀಗೆ, ಎಲ್ಲರೂ ಅಳುತ್ತಿದ್ದರು
ಇಲ್ಲಾ, ಆ ಕ್ಷಣಕ್ಕೆ ದುಡಿಯುತ್ತಿದ್ದರು
ಅದಕ್ಕೆ ಬೆವತ್ತಿದ್ದರು...
- ಅನಂತ ಕುಣಿಗಲ್
ಎಟಿಎಂ ದರೋಡೆ ಮಾಡುತ್ತಿದ್ದ ಕಳ್ಳ
ಅಂಗಳದಲ್ಲಿ ಆಡುತ್ತಿದ್ದ ಮಕ್ಕಳು
ತರಕಾರಿ ಮಾರುತ್ತಿದ್ದ ವ್ಯಾಪಾರಿ
ಬಟ್ಟೆ ಹೊಲಿಯುತ್ತಿದ್ದ ಟೀಚರಮ್ಮ
ಸಂಶೋಧನೆ ನಡೆಸುತ್ತಿದ್ದ ಕನ್ನಡಕದ ಹುಡುಗ
ಬರೆದು ಬರೆದು ತಿದ್ದಿಕೊಳ್ಳುವ ನಾನು
ಓದಿ ಓದಿ ಸುಸ್ತಾಗುವ ನೀವು
ಹೀಗೆ, ಎಲ್ಲರೂ ಅಳುತ್ತಿದ್ದರು
ಇಲ್ಲಾ, ಆ ಕ್ಷಣಕ್ಕೆ ದುಡಿಯುತ್ತಿದ್ದರು
ಅದಕ್ಕೆ ಬೆವತ್ತಿದ್ದರು...
- ಅನಂತ ಕುಣಿಗಲ್
ವ್ಹಾರೇವಾ 👌👌👌👌👌👌👌👌
ಪ್ರತ್ಯುತ್ತರಅಳಿಸಿ