"ಸಾಣೇಹಳ್ಳಿಯ ಪಂಡಿತಾರಾಧ್ಯ ಗುರುಗಳಿಂದ ಅನಂತ ಅವರ ಮೂರನೆಯವಳು ಕೃತಿ ಲೋಕಾರ್ಪಣೆ"
26-03-2021 ರ ಶುಕ್ರವಾರದಂದು ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿಯ ವೇದಿಕೆ ಕಾರ್ಯಕ್ರಮದಲ್ಲಿ ಯುವಕವಿ ಅನಂತ ಅವರ ಎರಡನೆ ಕೃತಿ "ಮೂರನೆಯವಳು" ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳಿಂದ ಲೋಕಾರ್ಪಣೆಗೊಂಡಿದೆ. ಶ್ರೀಗಳು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿಕ್ಷಕರಾದ ದ್ಯಾಮೇಶ್ ಅವರು ಕೃತಿಯನ್ನು ಕುರಿತು ಮಾತನಾಡಿದರು. ರಂಗಶಾಲೆಯ ಪ್ರಾಚಾರ್ಯರಾದ ಜಗದೀಶ್(NSD) ಅವರು ಕಾರ್ಯಕ್ರಮದ ನಿರ್ವಹಣೆ ಹಾಗೂ ನಿರೂಪಣೆಯನ್ನು ನಡೆಸಿಕೊಟ್ಟರು.
ಅನಂತ ಎಂಬ ಕಾವ್ಯನಾಮವುಳ್ಳ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಯುವ ಪ್ರತಿಭೆ ಬೋರೇಗೌಡ ಅವರ ಎರಡನೆ ಕೃತಿ ಇದಾಗಿದ್ದು, ನಾಡಿನ ಹೆಣ್ಣುಮಕ್ಕಳಿಗೆ ಕೃತಿಯನ್ನು ಅರ್ಪಣೆ ಮಾಡಿದ್ದಾರೆ. 'ನನ್ನ ತಾಯಿಯ ಬಡತನವೇ ಸಂಕಲನದಲ್ಲಿನ ಎಲ್ಲ ಕವಿತೆಗಳ ಹುಟ್ಟಿಗೆ ಕಾರಣ' ಹಾಗೇ 'ನಾನು ಓದಿದ ಶಾಲೆಯ ಪರವಾಗಿ, ಕಲಿಸಿದ ಗುರುಗಳಿಂದ ಹಾಗೂ ಈ ಹಿಂದೆ ಅನೇಕ ನಾಟಕಗಳ ಪ್ರದರ್ಶನ ಕೊಟ್ಟಿದ್ದ ವೇದಿಕೆಯ ಮೇಲೆಯೇ ಪುಸ್ತಕ ಬಿಡುಗಡೆಯಾಗುತ್ತಿರುವುದು ನನ್ನ ಭಾಗ್ಯ' ಎಂದು ಸಭೆಯನ್ನು ಕುರಿತು ತಿಳಿಸಿದರು.
ಹೆಣ್ಣಿನ ಅಂತರಾಳ ಕುರಿತ ಕವನಗಳಿರುವ ಈ ಕೃತಿಗೆ ಕಲಾವಿದರಾದ ಹೆಚ್ ಕೆ ಶರತ್ ಅವರ ಒಳಪುಟ ವಿನ್ಯಾಸವಿದ್ದು, ಮಮತಾ ಸರೂರು ಅವರು ಮುಖಪುಟ ವಿನ್ಯಾಸ ಮಾಡಿದ್ದಾರೆ. ಹಿರಿಯ ಕವಯಿತ್ರಿ ಎಂ ಆರ್ ಕಮಲ ಅವರ ಬೆನ್ನುಡಿ ಹಾಗೂ ಕವಿಗಳಾದ ವಾಸುದೇವ್ ನಾಡಿಗ್ ಅವರ ಮುನ್ನುಡಿ ಇದೆ. ಸಂಕಲನವನ್ನು ಐದು ಭಾಗಗಳಾಗಿ ವಿಂಗಡಿಸಿ ತಾಯಿ, ಹೆಣ್ಣು, ಅಕ್ಕ-ತಂಗಿ, ಮಡದಿ ಹಾಗೂ ಪ್ರೇಯಸಿಯ ಕುರಿತ ಕವನಗಳಿವೆ. ಅವ್ವ ಪುಸ್ತಕಾಲಯದಿಂದ ಹೊರಬಂದಿರುವ ಈ ಕೃತಿಯನ್ನು ಕೆಳಗಿನ ನಂಬರನ್ನು ಸಂಪರ್ಕಿಸುವ ಮೂಲಕ ಓದುಗರು ಕೊಂಡು ಓದಿ, ಅಭಿಪ್ರಾಯ ತಿಳಿಸಬಹುದಾಗಿದೆ.
ಅವ್ವ ಪುಸ್ತಕಾಲಯ : 9742029908
avvapustakaalaya@gmail.com
ಅಭಿನಂದನೆ
ಪ್ರತ್ಯುತ್ತರಅಳಿಸಿ