ಸಂಕ್ರಾಂತಿ ವಿಶೇಷಕ್ಕಾಗಿ ಕನ್ನಡ ಓದುಗರಿಗೆ ಕನ್ನಡ ಕಲರವ ತಂಡದಿಂದ ಪುಸ್ತಕ ಉಡುಗೊರೆ.
ಲಾಕ್ಡೌನ್ ಸಮಯದಲ್ಲಿ ಆರಂಭವಾದ "ಕನ್ನಡ ಕಲರವ - ಆನ್ಲೈನ್ ಸಾಹಿತ್ಯ ಕೂಟ" ಎಂಬ ತಂಡವು ಕನ್ನಡ ಸಾಹಿತ್ಯ ಪ್ರಿಯರನ್ನು ಹೆಚ್ಚಿಸುವ ಸಲುವಾಗಿ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕಥೆ, ಕವನ, ಕಥನ-ಕವನ, ಬರಹ, ಕವನ ವಾಚನ, ಪುಸ್ತಕ ವಿಮರ್ಶೆಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ತಂಡ ರಚನೆಯಾಗಿ ಒಂಬತ್ತು ತಿಂಗಳುಗಳು ಕಳೆದಿದ್ದು.. ಯೂಟ್ಯೂಬ್, ಫೇಸ್ಬುಕ್, ವಾಟ್ಸಪ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಸಾಹಿತ್ಯಾಸಕ್ತರು ನಿರಂತರವಾಗಿ ಕ್ರಿಯಾಶೀಲರಾಗಿದ್ದಾರೆ. ತಂಡದ ಬೆಳವಣಿಗೆಯಲ್ಲಿ ಸಕ್ರೀಯವಾಗಿ ಹಾಗೂ ಸೃಜನಶೀಲವಾಗಿ ತೊಡಗಿಕೊಂಡವರಲ್ಲಿ ಐದು ಜನರನ್ನು ಗುರುತಿಸಿ ಅವರಿಗೆ ಪುಸ್ತಕ ಉಡುಗೊರೆಯನ್ನು ಕೊಡಲಾಗುತ್ತಿದೆ.
2020ನೇ ಸಾಲಿನ ಕನ್ನಡ ಕಲರವ ಪುಸ್ತಕ ಉಡುಗೊರೆಗಾಗಿ ಆಯ್ಕೆಯಾದವರ ಪಟ್ಟಿ ಈ ಕೆಳಗಿನಂತಿದೆ.
ಪುಷ್ಪ ಪ್ರಸಾದ್ ಉಡುಪಿ
ಮಂಜುನಾಥ್ ಮಂಡ್ಯ
ರಂಜಿತ್ ಕುಮಾರ್
ಮಾನಸ ವಿಜಯ್
ಮದನ್ ಕುಮಾರ್
ಈ ಐದು ಜನರಿಗೆ ಈ ವರ್ಷದ ಪುಸ್ತಕ ಉಡುಗೊರೆಯನ್ನು ಕೊಟ್ಟು, ಅಭಿನಂದಿಸಲಾಗುತ್ತಿದೆ ಎಂದು ತಂಡದ ಸಂಸ್ಥಾಪಕ ಅಧ್ಯಕ್ಷರಾದ ಅನಂತ ಅವರು ತಿಳಿಸಿದ್ದಾರೆ.
ನಮ್ಮ ತಂಡಗಳನ್ನು ಸೇರಲು ಕೆಳಗಿನ ಲಿಂಕ್ ಗಳ ಮೇಲೆ ಒತ್ತಿ..
ಫೇಸ್ಬುಕ್ :
ಯೂಟ್ಯೂಬ್:
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ