ಅನುಷ್ ಎ. ಶೆಟ್ಟಿಗೆ 2020ರ ಸೃಜನಶೀಲ ಸಾಹಿತಿ ಪ್ರಶಸ್ತಿ
Date: 01-01-2021
Location: ಕುಣಿಗಲ್
ಅವ್ವ ಪುಸ್ತಕಾಲಯದಿಂದ ಆಯೋಜಿಸಿದ್ದ '2020ರ ಸೃಜನಶೀಲ ಸಾಹಿತಿ ಪ್ರಶಸ್ತಿ'ಗೆ ಅನುಷ್ ಎ. ಶೆಟ್ಟಿ ‘ನೀನು ನಿನ್ನೊಳಗೆ ಖೈದಿ’ ಕೃತಿ ಆಯ್ಕೆಯಾಗಿದೆ. ಪ್ರಶಸ್ತಿಯು 2500 ರೂಗಳ ಪುಸ್ತಕ ಬಹುಮಾನ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದೆ. ಸುಧಾ ಆಡುಕಳ ಅವರ ‘ಬಕುಲದ ಬಾಗಿಲಿನಿಂದ’ ಹಾಗೂ ವಿ. ಗೋಪಕುಮಾರ್ ಅವರ ‘ವಿಜಯೀಭವ’ ಕೃತಿಗಳು ಕ್ರಮವಾಗಿ ದ್ವಿತೀಯ & ತೃತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದು ಬಹುಮಾನವು 500 ರೂಗಳ ಪುಸ್ತಕ ಬಹುಮಾನವನ್ನು ಒಳಗೊಂಡಿದೆ.
ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಕಾರರ ಹೆಸರು ಹಾಗೂ ಪುಸ್ತಕಗಳು ಈ ಕೆಳಗಿನಂತಿವೆ.
ಬೆಳಕ ಹನಿ - ಜ್ಯೋತಿ ನಾಯ್ಕ
ನಂದಾದೀಪ - ಅನಘಾ ಶಿವರಾಮ್
ದಿಕ್ಸೂಚಿ - ಸಂತೋಷ್ ರಾವ್ ಪೆರ್ಮುಡ ಎಂ
ಒಂದು ಖಾಲಿ ಕುರ್ಚಿ - ವಿಜಯ್ ಕುಮಾರ್ ಹೂಗಾರ
ನಲಿವಿನ ನಾಲಗೆ - ಸುಮಾ ಹೆಚ್. ಪಿ.
ಸಮಾಧಾನಕರ ಬಹುಮಾನ ಪಡೆದವರು
ಬೆಂಕಿ ಸಮುದ್ರದ ತಂಪು ಮೀನು - ಭರಮಣ್ಣ ಗುರಿಕಾರ್
ಶರಣೆಯರ ಚರಿತೆ - ಶ್ರೀಧರ ಗಂಗನ ಗೌಡರ
ಒಡಲಾಳದ ಧ್ವನಿ - ಉತ್ತಮ
ಪ್ರೇಮವಿರಾಗಿಯ ನಡುಗತ್ತಲ ಕವಿತೆ - ಕೃಷ್ಣಮೂರ್ತಿ ಜಿ. ಇಂಡ್ಲವಾಡಿ
ಹಾಣಾದಿ - ಕಪಿಲ ಪಿ. ಹುಮನಾಬಾದೆ
ಕನಸುಗಳ ಹೊತ್ತವರು - ಹುಲಿಯೂರುದುರ್ಗ ಲಕ್ಷ್ಮೀನಾರಾಯಣ
ಮಾವಿನಕೆರೆ - ಎಂ. ನರಸಿಂಹಲು ವಡವಾಟಿ
ಮೆಚ್ಚುಗೆಯ ಹಾಗೂ ಸಮಾಧಾನಕರ ಪಡೆದವರಿಗೆ ಪುಸ್ತಕ ಬಹುಮಾನ ಹಾಗೂ ಇ-ಪ್ರಮಾಣ ಪತ್ರ ನೀಡಲಾಗುವುದು ಎಂದು ಅವ್ವ ಪುಸ್ತಕಾಲಯದ ಅಧ್ಯಕ್ಷರಾದ ನಾರಾಯಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೇಲೆ ತಿಳಿಸಿರುವ ಪಟ್ಟಿಯಲ್ಲಿನ ಸದಸ್ಯರು ಈ ಕೂಡಲೆ ನಿಮ್ಮ ಇತ್ತೀಚಿನ ಭಾವಚಿತ್ರ, ಪೂರ್ಣ ಹೆಸರು ಹಾಗೂ ಮಿಂಚಂಚೆಯನ್ನು ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಲು ತಿಳಿಸಿದೆ.
avvapustakaalaya@gmail.com
ಕನ್ನಡ ಕಲರವ ತಂಡ ಸೇರಲು ಇಲ್ಲಿ ಕ್ಲಿಕ್ ಮಾಡಿ
https://www.facebook.com/groups/3344469948953030/?ref=share
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ