ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನ್ನಡ ಕಲರವ - ಆನ್ಲೈನ್ ಸಾಹಿತ್ಯ ಕೂಟ - ಪರಿಚಯ ಪತ್ರ

ಯುವ ಸಾಹಿತ್ಯದ ಪ್ರಚುರಕ್ಕಾಗಿ ಹಿಡಿದ ಪಾರದರ್ಶಕ ಕನ್ನಡಿಯೇ "ಕನ್ನಡ ಕಲರವ". ಇಲ್ಲಿ ಸಾಹಿತ್ಯ ಸಂಬಂಧಪಟ್ಟ ಚಟುವಟಿಕೆಗಳ ಪೋಸ್ಟ್ ಗಳು, ಕಥೆ, ಕವನ, ಲೇಖನ ಹಾಗೂ ಸ್ಪರ್ಧೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಶೇರ್ ಮಾಡಬಹುದು ಹಾಗೂ ವಿಮರ್ಶಿಸಬಹುದಾಗಿದೆ. ಫೇಸ್ಭುಕ್ ಗ್ರೂಪ್ https://www.facebook.com/groups/3344469948953030/?ref=share ಯೂಟ್ಯೂಬ್ ಲಿಂಕ್ https://www.youtube.com/channel/UCuoyUnN42UH2iDEmNWwgNaA ಮೇಲಿನ ಲಿಂಕ್ ಬಳಸಿಕೊಂಡು ಈಗಲೇ ಕಲರವ ತಂಡ ಸೇರಿಕೊಳ್ಳಿ ಹಾಗೂ ಇತರ ಸಾಹಿತ್ಯಾಸಕ್ತರಿಗೂ ಕಳುಹಿಸಿಕೊಡಿ. ಶುಭವಾಗಲಿ..💐

ಉದಯೋನ್ಮಖ ಪ್ರತಿಭೆಗಳಿಗೆ ಕನ್ನಡ ಕಲರವ ತಂಡದಿಂದ ಪುಸ್ತಕ ಉಡುಗೊರೆ

ಸಂಕ್ರಾಂತಿ ವಿಶೇಷಕ್ಕಾಗಿ ಕನ್ನಡ ಓದುಗರಿಗೆ ಕನ್ನಡ ಕಲರವ ತಂಡದಿಂದ ಪುಸ್ತಕ ಉಡುಗೊರೆ. ಲಾಕ್ಡೌನ್ ಸಮಯದಲ್ಲಿ ಆರಂಭವಾದ "ಕನ್ನಡ ಕಲರವ - ಆನ್ಲೈನ್ ಸಾಹಿತ್ಯ ಕೂಟ" ಎಂಬ ತಂಡವು ಕನ್ನಡ ಸಾಹಿತ್ಯ ಪ್ರಿಯರನ್ನು ಹೆಚ್ಚಿಸುವ ಸಲುವಾಗಿ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕಥೆ, ಕವನ, ಕಥನ-ಕವನ, ಬರಹ, ಕವನ ವಾಚನ, ಪುಸ್ತಕ ವಿಮರ್ಶೆಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ತಂಡ ರಚನೆಯಾಗಿ ಒಂಬತ್ತು ತಿಂಗಳುಗಳು ಕಳೆದಿದ್ದು.. ಯೂಟ್ಯೂಬ್, ಫೇಸ್ಬುಕ್, ವಾಟ್ಸಪ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಸಾಹಿತ್ಯಾಸಕ್ತರು ನಿರಂತರವಾಗಿ ಕ್ರಿಯಾಶೀಲರಾಗಿದ್ದಾರೆ. ತಂಡದ ಬೆಳವಣಿಗೆಯಲ್ಲಿ ಸಕ್ರೀಯವಾಗಿ ಹಾಗೂ ಸೃಜನಶೀಲವಾಗಿ ತೊಡಗಿಕೊಂಡವರಲ್ಲಿ ಐದು ಜನರನ್ನು ಗುರುತಿಸಿ ಅವರಿಗೆ ಪುಸ್ತಕ ಉಡುಗೊರೆಯನ್ನು ಕೊಡಲಾಗುತ್ತಿದೆ. 2020ನೇ ಸಾಲಿನ ಕನ್ನಡ ಕಲರವ ಪುಸ್ತಕ ಉಡುಗೊರೆಗಾಗಿ ಆಯ್ಕೆಯಾದವರ ಪಟ್ಟಿ ಈ ಕೆಳಗಿನಂತಿದೆ. ಪುಷ್ಪ ಪ್ರಸಾದ್ ಉಡುಪಿ ಮಂಜುನಾಥ್ ಮಂಡ್ಯ ರಂಜಿತ್ ಕುಮಾರ್ ಮಾನಸ ವಿಜಯ್ ಮದನ್ ಕುಮಾರ್ ಈ ಐದು ಜನರಿಗೆ ಈ ವರ್ಷದ ಪುಸ್ತಕ ಉಡುಗೊರೆಯನ್ನು ಕೊಟ್ಟು, ಅಭಿನಂದಿಸಲಾಗುತ್ತಿದೆ ಎಂದು ತಂಡದ ಸಂಸ್ಥಾಪಕ ಅಧ್ಯಕ್ಷರಾದ ಅನಂತ ಅವರು ತಿಳಿಸಿದ್ದಾರೆ. ನಮ್ಮ ತಂಡಗಳನ್ನು ಸೇರಲು ಕೆಳಗಿನ ಲಿಂಕ್ ಗಳ ಮೇಲೆ ಒತ್ತಿ.. ಫೇಸ್ಬುಕ್ :  https://www.facebook.com...

ಸೃಜನಶೀಲ ಸಾಹಿತಿ ಪ್ರಶಸ್ತಿ 2020 ರ ಕಿರುಪಟ್ಟಿ ಪ್ರಕಟ

ಅನುಷ್ ಎ. ಶೆಟ್ಟಿಗೆ 2020ರ ಸೃಜನಶೀಲ ಸಾಹಿತಿ ಪ್ರಶಸ್ತಿ Date:  01 -01-2021 Location:  ಕುಣಿಗಲ್ ಅವ್ವ ಪುಸ್ತಕಾಲಯದಿಂದ ಆಯೋಜಿಸಿದ್ದ '2020ರ ಸೃಜನಶೀಲ ಸಾಹಿತಿ ಪ್ರಶಸ್ತಿ'ಗೆ ಅನುಷ್ ಎ. ಶೆಟ್ಟಿ ‘ನೀನು ನಿನ್ನೊಳಗೆ ಖೈದಿ’ ಕೃತಿ ಆಯ್ಕೆಯಾಗಿದೆ. ಪ್ರಶಸ್ತಿಯು 2500 ರೂಗಳ ಪುಸ್ತಕ ಬಹುಮಾನ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದೆ. ಸುಧಾ ಆಡುಕಳ ಅವರ ‘ಬಕುಲದ ಬಾಗಿಲಿನಿಂದ’ ಹಾಗೂ ವಿ. ಗೋಪಕುಮಾರ್ ಅವರ ‘ವಿಜಯೀಭವ’ ಕೃತಿಗಳು ಕ್ರಮವಾಗಿ ದ್ವಿತೀಯ & ತೃತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದು ಬಹುಮಾನವು 500 ರೂಗಳ ಪುಸ್ತಕ ಬಹುಮಾನವನ್ನು ಒಳಗೊಂಡಿದೆ. ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಕಾರರ ಹೆಸರು ಹಾಗೂ ಪುಸ್ತಕಗಳು ಈ ಕೆಳಗಿನಂತಿವೆ. ಬೆಳಕ ಹನಿ - ಜ್ಯೋತಿ ನಾಯ್ಕ ನಂದಾದೀಪ - ಅನಘಾ ಶಿವರಾಮ್ ದಿಕ್ಸೂಚಿ - ಸಂತೋಷ್ ರಾವ್ ಪೆರ್ಮುಡ ಎಂ ಒಂದು ಖಾಲಿ ಕುರ್ಚಿ - ವಿಜಯ್ ಕುಮಾರ್ ಹೂಗಾರ ನಲಿವಿನ ನಾಲಗೆ - ಸುಮಾ ಹೆಚ್. ಪಿ. ಸಮಾಧಾನಕರ ಬಹುಮಾನ ಪಡೆದವರು ಬೆಂಕಿ ಸಮುದ್ರದ ತಂಪು ಮೀನು - ಭರಮಣ್ಣ ಗುರಿಕಾರ್ ಶರಣೆಯರ ಚರಿತೆ - ಶ್ರೀಧರ ಗಂಗನ ಗೌಡರ ಒಡಲಾಳದ ಧ್ವನಿ - ಉತ್ತಮ ಪ್ರೇಮವಿರಾಗಿಯ ನಡುಗತ್ತಲ ಕವಿತೆ - ಕೃಷ್ಣಮೂರ್ತಿ ಜಿ. ಇಂಡ್ಲವಾಡಿ ಹಾಣಾದಿ - ಕಪಿಲ ಪಿ. ಹುಮನಾಬಾದೆ ಕನಸುಗಳ ಹೊತ್ತವರು - ಹುಲಿಯೂರುದುರ್ಗ ಲಕ್ಷ್ಮೀನಾರಾಯಣ ಮಾವಿನಕೆರೆ - ಎಂ. ನರಸಿಂಹಲು ವಡವಾಟಿ ಮೆಚ್ಚುಗೆಯ ಹಾಗೂ ಸಮಾಧಾನಕರ ...