(ಚಿತ್ರ : ಕಾರ್ತಿಕ್ ಎಸ್ ಕಾರ್ಗಲ್ಲು) ಅವ್ವ ಪುಸ್ತಕಾಲಯ ಸಾಹಿತ್ಯ ಬಳಗ ಆಯೋಜಿಸಿದ್ದ "ಮಾನವೀಯತೆ" ವಿಷಯಧಾರಿತ ಹನಿಗವನ ಸ್ಪರ್ಧೆ 2023ರ ವಿಜೇತ ಕವನಗಳನ್ನು ಓದುಗರಿಗಾಗಿ ಪ್ರಕಟಿಸಲಾಗಿದೆ. 01. ಮಾನವೀಯತೆ ಸಂಜೆ ಮನೆಯ ಪ್ರಾಂಗಣದಲ್ಲಿ ಮ್ಯಾರೇಜ್ ಎನ್ವರ್ಸರಿಯ ಹಬ್ಬ! ಗಂಡ ಹೆಂಡತಿ ಸ್ನೕಹಿತರೆಲ್ಲ ಕೇಕ್ ಕತ್ತರಿಸಿ, ಬಣ್ಣದಂತೆ ಬಳಿದುಕೊಂಡಿದ್ದಾರೆ ಮುಖಕೆ! ಎಲ್ಲರ ಕೈಯಲ್ಲಿ ಬೀಯರ್ ಬಾಟಲಿಗಳು, ಚಲ್ಲಾಪಿಲ್ಲಿಯಾಗಿ ಬಿದ್ದ ಮೃಷ್ಟಾನ್ನ! ಅತ್ತ ಮನೆಯ ಮೂಲೆಯೊಂದರಲ್ಲಿ ಮಾನವೀಯತೆಯ ವೃದ್ಧ ಮಡಿಲುಗಳೆರಡು ಹಲುಬುತ್ತಿರುವ ಸದ್ದು! ಕೇಳುವವರಾರು!? - ಸುರೇಶ ಮುದ್ದಾರ 02. ಗಾಂಧಿ ಪಾರ್ಕಿನ ಗಾಂಧಿ ನಕ್ಕಿದ್ದ.. ಜಾತಿ - ಧರ್ಮಗಳೆಂದು ಬಡಿದಾಡುವವರ ಮಸೀದಿ - ಮಂದಿರಗಳಿಗಾಗಿ ಕಿತ್ತಾಡುವವರ ಹೊಟ್ಟೆ ಹೊರೆಯದ ಭಗವದ್ಗೀತೆ, ಕುರಾನಿಗಾಗಿ ನಡುರಸ್ತೆಯಲ್ಲಿ ರಕ್ತ ಹರಿಸುವವರ ಕಂಡು ಗಾಂಧಿ ಪಾರ್ಕಿನ ಗಾಂಧಿ ನಕ್ಕಿದ್ದ.. ಹಸಿದ ಭಿಕ್ಷುಕರ ಖಾಲಿ ಹೊಟ್ಟೆ ಕಾಣದ ದಾರಿಯಲ್ಲಿನ ಅನಾಥ ಮಗುವಿನೆಡೆ ಕಣ್ಣೆತ್ತಿ ನೋಡದ ತನ್ನ ಹುಟ್ಟಿಸಿದವರನ್ನೇ ಮನೆ ಬಿಟ್ಟು ಅಟ್ಟಿದ ಪತ್ರಿಕೆಯಲ್ಲಿನ ಸಮಾಜ ಸೇವಕರ ಸೇವೆಯ ಕಂಡು ಗಾಂಧಿ ಪಾರ್ಕಿನ ಗಾಂಧಿ ನಕ್ಕಿದ್ದ.. ಜಾತಿ - ಧರ್ಮಗಳ ಬೇಲಿ ದಾಟಿ ಬದುಕಿ ಎಂದವರನ್ನೆ ಧರ...
"ಓದುಗರಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸಲು ರೂಪುಗೊಂಡ ಡಿಜಿಟಲ್ ಲೈಬ್ರರಿ"